ವಿಷಯಕ್ಕೆ ಹೋಗು

ಅಧಿಕಾರಹಂಚಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಂದು ರಾಜ್ಯ ತನ್ನ ಅಧಿಕಾರಸೂತ್ರಗಳನ್ನು ಕೇಂದ್ರೀಕರಿಸಿಕೊಂಡಿರಬಹುದು ಅಥವಾ ಪ್ರಾಂತಗಳ ನಡುವೆ ವಿಭಜನೆ ಮಾಡಿಕೊಂಡಿರಬಹುದು. ಇಂಥ ಕ್ರಮಬದ್ಧವಾದ ವಿಭಜನಾ ವ್ಯವಸ್ಥೆಯೇ ಅಧಿಕಾರ ಹಂಚಿಕೆ (ಡಿಸ್ಟ್ರಿಬ್ಯೂಷನ್ ಆಫ್ ಪವರ್ಸ್). ಈ ಅಧಿಕಾರ ವಿಭಜನೆ ಆ ರಾಜ್ಯ ವ್ಯವಸ್ಥೆಯ ತಳಹದಿಯ ಮೇಲೆ ನಿಂತಿದೆ. ಅಧಿಕಾರವಿಭಜನೆ ನಡೆದ ಮೇಲೆ ಅದನ್ನು ಸುಲಭವಾಗಿಯೂ ಸಂಯುಕ್ತರಾಜ್ಯದ ಅಂಗಗಳ ಒಮ್ಮತವಿಲ್ಲದೆಯೂ ಬದಲಾಯಿಸಲು ಸಾಧ್ಯವಿರುವುದಿಲ್ಲ.

ಅಧಿಕಾರವಿಭಜನ

[ಬದಲಾಯಿಸಿ]

ರಾಜ್ಯವ್ಯವಸ್ಥೆ ಮೂರು ವಿಧಗಳಲ್ಲಿ ಅಧಿಕಾರವಿಭಜನೆ ಮಾಡಿಕೊಂಡಿರುವುದನ್ನು ನೋಡಬಹುದು. ಉದಾಹರಣೆಗೆ,

  • ೧. ಅಮೆರಿಕದ ರಾಜ್ಯದ ವ್ಯವಸ್ಥೆಯಲ್ಲಿ ಸಂಯುಕ್ತ ಸರ್ಕಾರಕ್ಕೆ ನಿರ್ದಿಷ್ಟವಾದ ಅಧಿಕಾರಗಳನ್ನು ನಿರ್ದೇಶಿಸಿದೆ; ಉಳಿದ ಅಧಿಕಾರಗಳೆಲ್ಲವನ್ನೂ ಪ್ರಾಂತಸರ್ಕಾರಗಳಿಗೆ ಬಿಟ್ಟಿದೆ.
  • ೨. ಕೆನಡ ಸಂಯುಕ್ತಸರ್ಕಾರದಲ್ಲಿ ಇದಕ್ಕೆ ವಿರುದ್ಧವಾದ ರಚನೆಯಿದೆ. ಅಂದರೆ, ನಿರ್ದಿಷ್ಟವಾದ ಅಧಿಕಾರಗಳನ್ನು ಪ್ರಾಂತಗಳಿಗೆ ಕೊಟ್ಟು ಮಿಕ್ಕ ಅಧಿಕಾರಗಳನ್ನು ಸಂಯುಕ್ತಸರಕಾರಕ್ಕೆ ಕೊಟ್ಟಿದೆ.
  • ೩. ಭಾರತದಲ್ಲಿ ಈ ರಚನೆಯೇ ಬೇರೆಯಾಗಿದೆ. ಇಲ್ಲಿ ಅಧಿಕಾರವನ್ನು ಮೂರು ವಿಧದಲ್ಲಿ ವಿಭಜನೆ ಮಾಡಲಾಗಿದೆ. ಯೂನಿಯನ್ ಲಿಸ್ಟ್: ಇಲ್ಲಿ ಸಂಯುಕ್ತ ಸಾಮ್ರಾಜ್ಯಕ್ಕೆ ನಿರ್ದಿಷ್ಟವಾದ ವಿಷಯಗಳನ್ನು ತಿಳಿಸಿದೆ. ಸ್ಟೇಟ್ ಲಿಸ್ಟ್: ಇಲ್ಲಿ ರಾಜ್ಯಗಳಿಗೆ ನಿರ್ದೇಶಿಸಿದ ವಿಷಯಗಳನ್ನು ನಮೂದಿಸಿದೆ. ಕನ್‍ಕರೆಂಟ್ ಲಿಸ್ಟ್: ಇಲ್ಲಿ ಒಕ್ಕೂಟ ಮತ್ತು ರಾಜ್ಯಗಳೆರಡಕ್ಕೂ ಸಂಬಂಧಪಟ್ಟ ವಿಷಯಗಳನ್ನು ನಮೂದಿಸಿದೆ.

ಎಲ್ಲ ರಾಜ್ಯವ್ಯವಸ್ಥೆಯಲ್ಲೂ ಕೇಂದ್ರ ಮತ್ತು ಅಂಗಗಳ ಮಧ್ಯೆ ಸಂಭವಿಸಬಹುದಾದ ವಿವಾದಗಳನ್ನು ಅಂತಿಮವಾಗಿ ಬಗೆಹರಿಸಲು ಒಂದು ನ್ಯಾಯಾಸ್ಥಾನವಿರುತ್ತದೆ