ಅದೃಶ್ಯವಾಗುವ ಬಿಟ್ಟಿ ಸವಾರರು (ವ್ಯಾನಿಶಿಂಗ್ ಹಿಚ್‌ಹೈಕರ್)
This article may require a complete rewrite to comply with Wikipedia's quality standards. (July 2010) |
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (May 2010) |
ಅದೃಶ್ಯವಾಗುವ ಬಿಟ್ಟಿ ಸವಾರರು (ಅಥವಾ ಫ್ಯಾಂಟಮ್ ಹಿಚ್‌ಹೈಕರ್ ) ಕತೆಯು ಒಂದು ನಗರ ಕಟ್ಟುಕತೆ ಎಂದು ಹೇಳಬಹುದು. ಕತೆಯ ಪ್ರಕಾರ ವಾಹನಗಳಲ್ಲಿ ಪ್ರಯಾಣಿಸುತ್ತಿರುವವರಿಗೆ ಮಾರ್ಗಮಧ್ಯೆ ಒಬ್ಬರು ಬಿಟ್ಟಿ ಸವಾರ (ಹಿಚ್‌ಹೈಕರ್) ತಮ್ಮನ್ನು ಹತ್ತಿಸಿಕೊಂಡು ಹೋಗುವಂತೆ ಕೋರಿ, ವಾಹನವನ್ನು ಏರಿ, ನಂತರ ಚಲಿಸುತ್ತಿರುವ ವಾಹನದಿಂದಲೇ ಏನೂ ಹೇಳದೇ ಅದೃಶ್ಯವಾಗುತ್ತಾರೆ. ಅದೃಶ್ಯವಾಗುವ ಬಿಟ್ಟಿ ಸವಾರರ ಕುರಿತು ಶತಮಾನಗಳಿಂದ ಹಲವಾರು ಕತೆಗಳಿವೆ. ವಿಶ್ವಾದ್ಯಂತ ಭಿನ್ನ ಆವೃತ್ತಿಯಲ್ಲಿ ಈ ಕತೆ ಕಂಡುಬರುತ್ತದೆ. ಈ ಕಟ್ಟುಕತೆಯ ಜನಪ್ರಿಯತೆ ಮತ್ತು ಬಹುಕಾಲದಿಂದ ಇರುವುದು ಸೇರಿ ಸಮಕಾಲೀನ ಜನಪ್ರಿಯ ಸಂಸ್ಕೃತಿಯಲ್ಲಿಯೂ ಇದು ಹರಡಲು ಸಾಧ್ಯವಾಗಿದೆ. ಜಾನ್ ಹೆರಾಲ್ಡ್ ಬ್ರೂನ್‌ವಂಡ್ ಅವರ ದಿ ವ್ಯಾನಿಶಿಂಗ್ ಹಿಚ್‌ಹೈಕರ್(ಅದೃಶ್ಯವಾಗುವ ಬಿಟ್ಟಿ ಸವಾರ) ಕೃತಿಯು ೧೯೮೧ರಲ್ಲಿ ಪ್ರಕಟವಾದ ನಂತರ ಈ ಪದದ ಕುರಿತು ಜನರ ತಿಳಿವಳಿಕೆಯು ಅಪಾರವಾಗಿ ಹೆಚ್ಚಿತು ಮತ್ತು ಇದು ನಂತರದಲ್ಲಿ ನಗರದ ಕಟ್ಟುಕತೆಗಳಲ್ಲಿ ಜನರ ಜಾಗೃತಿಯನ್ನು ಹೆಚ್ಚಿಸಲು ಸಹಾಯ ಮಾಡಿತು.
ಮೂಲ ಸ್ವರೂಪ
[ಬದಲಾಯಿಸಿ]ಆಧುನಿಕ ಅದೃಶ್ಯವಾಗುವ ಬಿಟ್ಟಿ ಸವಾರರ ಮೂಲಮಾದರಿ ಹೀಗಿದೆ: ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿರುವಾಗ, ಕಾರಿನ ಹೆಡ್‌ಲೈಟ್ ಬೆಳಕಿನಲ್ಲಿ ವ್ಯಕ್ತಿಯೊಂದು ನಿಂತಿರುವುದು ಕಾಣುತ್ತದೆ. ಹಾಗೆ ನಿಂತ ವ್ಯಕ್ತಿ ಯಾವುದೋ ಸ್ಥಳಕ್ಕೆ ಡ್ರಾಪ್ ಕೇಳುವಂತೆ ತೋರುವ ಬಿಟ್ಟಿ ಸವಾರನಂತೆ ಕಾಣುತ್ತದೆ. ವಾಹನದಲ್ಲಿರುವ ವ್ಯಕ್ತಿ ನಿಂತು, ಕೆಳಗೆ ಕಂಡ ವ್ಯಕ್ತಿಗೆ ಅವರು ಹೋಗಬೇಕಾದಲ್ಲಿಗೆ ಬಿಡುವುದಾಗಿ ಹೇಳಿದಾಗ, ಕೆಳಗೆ ನಿಂತಿದ್ದ ವ್ಯಕ್ತಿ ವಾಹನವನ್ನು ಏರುತ್ತಾರೆ. ಪ್ರಯಾಣ ಮುಂದುವರೆಯುತ್ತದೆ. ಕೆಲವೊಮ್ಮೆ ಸಂಪೂರ್ಣ ಮೌನವಾಗಿಯೇ ಪ್ರಯಾಣ ಸಾಗುತ್ತದೆ. ಸ್ವಲ್ಪ ಹೊತ್ತಿನ ನಂತರ ವಾಹನ ಚಲಿಸುತ್ತಿರುವಾಗಲೇ ಆ ವ್ಯಕ್ತಿ ಅದೃಶ್ಯವಾಗಿರುತ್ತಾರೆ. ಅನೇಕ ಸಂದರ್ಭಗಳಲ್ಲಿ, ವಾಹನವು ಬಿಟ್ಟಿ ಸವಾರರು ಹೋಗಬೇಕಿರುವ ಸ್ಥಳ ತಲುಪಿದಾಗ ಅದೃಶ್ಯವಾಗಿರುತ್ತಾರೆ.
ಭಿನ್ನ ಆವೃತ್ತಿಗಳು
[ಬದಲಾಯಿಸಿ]ಈ ಕತೆಯ ಒಂದು ಸಾಮಾನ್ಯ ಆವೃತ್ತಿಯಲ್ಲಿ ಅದೃಶ್ಯವಾಗುವ ಬಿಟ್ಟಿ ಸವಾರರು ಸಹಜ ಪ್ರಯಾಣಿಕರಂತೆಯೇ ತಾವು ತಲುಪಬೇಕಿರುವ ಸ್ಥಳ ಬಂದಾಗ ಇಳಿದು ಹೋಗುತ್ತಾರೆ. ಆದರೆ ಕಾರಿನಲ್ಲಿ ಏನೋ ವಸ್ತುವನ್ನು ಬಿಟ್ಟುಹೋಗುತ್ತಾರೆ ಅಥವಾ ಚಳಿ ಗಾಳಿಯಿಂದ ರಕ್ಷಿಸಿಕೊಳ್ಳಲು ವಾಹನ ಚಾಲಕರಿಂದ ಏನಾದರೂ ವಸ್ತ್ರವನ್ನು ಕೇಳಿ ಇಸಿದುಕೊಳ್ಳುತ್ತಾರೆ (ಆಗಿನ ಹವಾಮಾನ ಈ ಹೇಳಿಕೆಯನ್ನು ಪ್ರತಿಫಲಿಸದೇ ಇರಬಹುದು). ಜೊತೆಗೆ ಹೀಗೆ ಅದೃಶ್ಯವಾಗುವ ಬಿಟ್ಟಿ ಸವಾರರು ತಮ್ಮ ಕುರಿತು ಏನಾದರೂ ಮಾಹಿತಿಯನ್ನು ಹೇಳಿರುತ್ತಾರೆ. ಇದರಿಂದ ಪ್ರೋತ್ಸಾಹಿತರಾದ ವಾಹನ ಚಾಲಕ ನಂತರ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಾರೆ. ಇಂತಹ ಕಥನಗಳಲ್ಲಿ, ಹಾಗೆ ಇಸಿದುಕೊಂಡ ವಸ್ತ್ರವು ನಂತರದಲ್ಲಿ ಹತ್ತಿರದ ಶ್ಮಶಾನದಲ್ಲಿ ಗೋರಿಯೊಂದರ ಬಳಿ ಕಾಣಿಸುತ್ತದೆ. ಈ ಕತೆಯ ಆವೃತ್ತಿಯಲ್ಲಿ ಮತ್ತು 'ಏನೋ ಮಾಹಿತಿ ನೀಡಿದ' ಕತೆಯ ಆವೃತ್ತಿಯಲ್ಲಿ, ವಾಹನ ಚಾಲಕರು ಅದೃಶ್ಯವಾದ ವ್ಯಕ್ತಿಯ ಕುಟುಂಬದವರನ್ನು ಸಂಪರ್ಕಿಸಿದಾಗ ಅವರ ಮನೆಯಲ್ಲಿ ಒಬ್ಬರು ಸತ್ತಿರುವುದು ತಿಳಿಯುತ್ತದೆ ಮತ್ತು ತಾವು ವಾಹನದಲ್ಲಿ ಕರೆದುಕೊಂಡ ಬಂದ ವ್ಯಕ್ತಿಗೂ ಮತ್ತು ಸತ್ತಿರುವ ವ್ಯಕ್ತಿಗೂ ಹೋಲಿಕೆಯಿದೆ ಎಂಬುದನ್ನು ಅರಿಯುತ್ತಾರೆ. ಹೆಚ್ಚಿನವೇಳೆ ಆ ವ್ಯಕ್ತಿ ಆಕಸ್ಮಿಕವಾಗಿ ಮರಣ ಹೊಂದಿರುತ್ತಾರೆ (ಬಹುತೇಕ ವೇಳೆ ಕಾರು ಅಪಘಾತ) ಮತ್ತು ಅದೃಶ್ಯವಾಗುವ ಬಿಟ್ಟಿ ಸವಾರನನ್ನು ಈ ಚಾಲಕ ಭೇಟಿಯಾಗಿದ್ದು ಆ ವ್ಯಕ್ತಿಯ ಪುಣ್ಯತಿಥಿಯಂದು ಆಗಿರುತ್ತದೆ. ಎಲ್ಲ ಬಗೆಯ ಅದೃಶ್ಯವಾಗುವ ಬಿಟ್ಟಿ ಸವಾರರು ಪುನಾರವರ್ತನೆಯಾಗುತ್ತವೆ ಎನ್ನಲಾದ ಪ್ರೇತಗಳನ್ನು ಒಳಗೊಂಡಿರುವುದಿಲ್ಲ. ಹವಾಯ್‌ನಲ್ಲಿ ಈ ಕತೆಯ ಒಂದು ಜನಪ್ರಿಯ ಆವೃತ್ತಿಯಲ್ಲಿ ದೇವತೆ ಪೇಲೆಯು ಅಜ್ಞಾತವೇಷದಲ್ಲಿ ರಸ್ತೆಗಳಲ್ಲಿ ತಿರುಗುತ್ತಿರುತ್ತಾಳೆ ಮತ್ತು ಒಳ್ಳೆಯ ಪ್ರಯಾಣಿಕರನ್ನು ಪುರಸ್ಕರಿಸುತ್ತಾಳೆ ಎಂಬ ನಂಬಿಕೆ ಇದೆ. ಈ ಕತೆಯ ಇನ್ನಿತರ ಆವೃತ್ತಿಗಳಲ್ಲಿ ಬಿಟ್ಟಿಸವಾರರು ಹಾಗೆ ಅದೃಶ್ಯವಾಗುವ ಮೊದಲು ಭವಿಷ್ಯವಾಣಿಯನ್ನು (ಹೆಚ್ಚಾಗಿ ಬಾಕಿ ಇರುವ ವಿನಾಶ ಅಥವಾ ಇನ್ನಿತರ ಬಗೆಯ ಕೇಡು) ಉಸುರುತ್ತವೆ.
ವರ್ಗೀಕರಣಗಳು
[ಬದಲಾಯಿಸಿ]ಅದೃಶ್ಯವಾಗುವ ಬಿಟ್ಟಿ ಸವಾರರ ಕತೆಯ ಕುರಿತು ಮೊದಲ ಸಮರ್ಪಕವಾದ ಅಧ್ಯಯನವನ್ನು ಅಮೆರಿಕದ ಜನಪದ ತಜ್ಞರಾದ ರಿಚರ್ಡ್ ಬಿಯರ್ಡ್‌ಸ್ಲೆ ಮತ್ತು ರೊಸಲೀ ಹ್ಯಾಂಕಿ ೧೯೪೨-೩ರಲ್ಲಿ ಕೈಗೊಂಡರು. ಅವರು ತಮಗೆ ಸಾದ್ಯವಿದ್ದಷ್ಟು ಈ ಬಗೆಯ ಕತೆಯನ್ನು ಸಂಗ್ರಹಿಸಿದರು ಮತ್ತು ಅವುಗಳನ್ನು ವಿಶ್ಲೇಷಿಸಲು ಪ್ರಯತ್ನಿಸಿದರು. ಬಿಯರ್ಡ್‌ಸ್ಲೆ - ಹ್ಯಾಂಕಿ ಸಮೀಕ್ಷೆಯು ಅದೃಶ್ಯವಾಗುವ ಬಿಟ್ಟಿ ಸವಾರರ ಕುರಿತು ಅಮೆರಿಕಾದೆಲ್ಲೆಡೆಯಲ್ಲಿ ತಮ್ಮ ಅನುಭವಗಳನ್ನು ಬರೆದಿದ್ದ ೭೯ ಬರಹಗಳನ್ನು ಸಂಗ್ರಹಿಸಿದರು. "ನಾಲ್ಕು ತೀವ್ರ ಭಿನ್ನ ಆವೃತ್ತಿಗಳು ಇವೆ, ಈ ಕತೆಗಳ ನಿರೂಪಣೆಯಲ್ಲಿ ಮತ್ತು ಅವರುಗಳ ಸಾರಾಂಶದಲ್ಲಿ ಎದ್ದುಕಾಣುವ ವ್ಯತ್ಯಾಸಗಳಿರುವುದರಿಂದ ಅವನ್ನು ಪ್ರತ್ಯೇಕಿಸಬಹುದು" ಎಂಬುದನ್ನು ಅವರು ಕಂಡುಕೊಂಡರು. ಈ ವ್ಯತ್ಯಾಸಗಳನ್ನು ಹೀಗೆ ವಿವರಿಸಲಾಗಿದೆ:
- ಎ. ಬಿಟ್ಟಿ ಸವಾರ [ಇತಿ ಲಿಖಿತ ] ವಾಹನ ಚಾಲಕರಿಗೆ ಒಂದು ವಿಳಾಸನ್ನು ನೀಡುತ್ತಾರೆ ಮತ್ತು ಅದರ ಮೂಲಕ ಚಾಲಕನಿಗೆ ತಾನು ಪ್ರೇತವೊಂದನ್ನು ಕರೆದುಕೊಂಡು ಹೋಗುತ್ತಿರುವೆ ಎಂಬುದು ತಿಳಿಯುತ್ತದೆ.
- ಬಿಯರ್ಡ್‌ಸ್ಲೆ - ಹ್ಯಾಂಕಿಯವರು ಅಮೆರಿಕದ ೧೬ ರಾಜ್ಯಗಳಿಂದ ತೆಗೆದುಕೊಂಡ ಪ್ರತಿಕ್ರಿಯೆಗಳ ಸಮೀಕ್ಷೆಯಲ್ಲಿ ೪೯ ಮಾದರಿಗಳು ಈ ವರ್ಗಕ್ಕೆ ಸೇರಿದ್ದವು.
- ಬಿ. ಬಿಟ್ಟಿ ಸವಾರ ಒಬ್ಬಳು ವಯಸ್ಸಾದ ಹೆಂಗಸಾಗಿದ್ದು, ಏನಾದರೂ ಕೇಡನ್ನು ಅಥವಾ ಅಂತ್ಯದ ಕುರಿತು ಭವಿಷ್ಯವಾಣಿ ನುಡಿಯುತ್ತಾಳೆ; ನಂತರ ಆಕೆಯ ಕುರಿತು ಚಾಲಕ ವಿಚಾರಿಸಿದಾಗ ಆಕೆ ಸತ್ತಿರುವುದಾಗಿ ತಿಳಿದುಬರುತ್ತದೆ.
- ಒಂಬತ್ತು ಮಾದರಿಗಳು ಈ ವಿವರಣೆಗೆ ಸರಿಹೊಂದುತ್ತಿದ್ದವು ಮತ್ತು ಇವುಗಳಲ್ಲಿ ಎಂಟು ಚಿಕಾಗೋ ಆಸುಪಾಸಿನಲ್ಲಿ ಸಿಕ್ಕಿದ್ದವು. ಬಿಯರ್ಡ್‌ಸ್ಲೆ ಮತ್ತು ಹ್ಯಾಂಕಿ ಇದಕ್ಕೆ ಒಂದು ಸ್ಥಳೀಯ ಮೂಲವಿರುವುದನ್ನು ಸೂಚಿಸುತ್ತದೆ ಎಂದು ಭಾವಿಸಿದರು, ಅದು ಸುಮಾರು ೧೯೩೩ರ ಸುಮಾರಿಗೆ ಜರುಗಿದ್ದಾಗಿತ್ತು: ಈ ಮಾದರಿಗಳು ಬಿಟ್ಟಿ ಸವಾರರ ಕುರಿತ ಬಿ ಆವೃತ್ತಿಯ ಎರಡು ವರದಿಗಳು ಪ್ರಗತಿಯ ಶತಮಾನದ ಭಾಷ್ಯದಲ್ಲಿ ಕೇಡು ಸಂಭವಿಸುತ್ತದೆ ಎಂದು ಭವಿಷ್ಯ ನುಡಿದಿದ್ದವು ಮತ್ತು ಇನ್ನೊಂದು ವರ್ಲ್ಡ್'ಸ್ ಫೇರ್ (ವಿಶ್ವ ಉತ್ಸವ)ದಲ್ಲಿ ವಿಕೋಪ ಸಂಭವಿಸುತ್ತದೆ ಎಂಬುದನ್ನು ಮುನ್ಸೂಚನೆ ನುಡಿದಿತ್ತು. ಎಂದಿಗೂ ನಿಜವಾಗದ ಈ ಭವಿಷ್ಯವಾಣಿಗಳ ಪ್ರಾಸಂಗಿಕತೆಯು ಬಿಟ್ಟಿ ಸವಾರರ 'ಬಿ' ಆವೃತ್ತಿಯ ಮುಂದುವರೆದ ಭಾಗವು ಕಾಣಿಸಿಕೊಳ್ಳುವುದಕ್ಕೆ ಅಡ್ಡಿಯೇನೂ ಆಗಲಿಲ್ಲ. ಇದರಲ್ಲಿ ಒಂದು ಉತ್ತರದ ದ್ವೀಪವಾದ ಮಿಚಿಗನ್ ಸದ್ಯದಲ್ಲಿಯೇ ಮುಳುಗಲಿದೆ ಎಂದು ಹೇಳಿತ್ತು (ಇದು ಸಂಭವಿಸಲೇ ಇಲ್ಲ).
- ಸಿ. ಮನರಂಜನೆ ನಡೆಯುವ ಸ್ಥಳವೊಂದರಲ್ಲಿ ಹುಡುಗಿಯೊಬ್ಬಳು ಸಿಗುತ್ತಾಳೆ, ಉದಾ: , ರಸ್ತೆಯ ಬದಲಿಗೆ ನೃತ್ಯ ಕಾರ್ಯಕ್ರಮ, ಅವಳು ಚಾಲಕನೊಂದಿಗೆ ತೆರಳಿದ ನಂತರ (ಹೆಚ್ಚಿನ ವೇಳೆ ಚಾಲಕನಿಂದ ಪಡೆದ ಓವರ್‌ಕೋಟ್) ವಸ್ತುವೊಂದನ್ನು ದಾರಿಯನ್ನು ಮತ್ತು ಗುರುತನ್ನು ತಿಳಿಸುವಂತೆ ತನ್ನ ಗೋರಿಯ ಮೇಲೆ ಇಟ್ಟು ಹೋಗಿರುತ್ತಾಳೆ.
- ಈ ಭಿನ್ನ ಆವೃತ್ತಿಯ ಪ್ರತ್ಯೇಕ ನಿರೂಪಣೆಗಳಲ್ಲಿದ್ದ ಏಕರೂಪತೆಯನ್ನು ಗಮನಿಸಿದ ಬಿಯರ್ಡ್‌ಸ್ಲೆ ಮತ್ತು ಹ್ಯಾಂಕಿ ಇದರ ಜಾನಪದ ಅಧಿಕೃತತೆ ಕುರಿತು ಗಾಢವಾದ ಅನುಮಾನಗಳನ್ನು ವ್ಯಕ್ತಪಡಿಸುತ್ತಾರೆ.
- ಡಿ. ಬಿಟ್ಟಿ ಸವಾರರು ನಂತರ ಸ್ಥಳೀಯ ದೈವವೆಂದು ಗುರುತಿಸಲಾದ ಕತೆಗಳು.
ಬಿಯರ್ಡ್‌ಸ್ಲೆ ಮತ್ತು ಹ್ಯಾಂಕಿ ಒಂದು ಘಟನೆಯ ಕುರಿತು ವಿಶೇಷವಾಗಿ ಕುತೂಹಲ ತಾಳಿದರು (ಅದೆಂದರೆ ನ್ಯೂಯಾರ್ಕ್‌ನ ಕಿಂಗ್ಸ್‌ಟನ್‌ನಲ್ಲಿ ೧೯೪೧ರಲ್ಲಿ ನಡೆದಿದ್ದು), ಈ ಕತೆಯಲ್ಲಿ ಅದೃಶ್ಯವಾಗುವ ಬಿಟ್ಟಿ ಸವಾರರು ಸ್ಥಳೀಯ ಸೇಕ್ರೆಡ್ ಹಾರ್ಟ್ ಆರ್ಫನೇಜ್ ಎಂಬ ಅನಾಥಾಲಯವನ್ನು ಸ್ಥಾಪಿಸಿದ್ದ ದಿವಂಗತ ಮದರ್ ಕ್ಯಾಬ್ರಿನಿ ಎಂದು ಗುರುತಿಸಲಾಗಿತ್ತು, ಅವಳ ಕೆಲಸಗಳಿಂದಾಗಿ ಅವಳಿಗೆ ಜನರು ಪರಮಪದವನ್ನು ಅರ್ಪಿಸಿದ್ದರು. ಇದು 'ಬಿ' ಆವೃತ್ತಿಯ ಒಂದು ಉದಾಹರಣೆಯಾಗಿದ್ದು, ಅದು 'ಡಿ' ಆವೃತ್ತಿಯಾಗಿ ರೂಪಾಂತರಗೊಂಡಿದೆ ಎಂದು ಲೇಖಕರು ಭಾವಿಸಿದರು. ಬಿಯರ್ಡ್‌ಸ್ಲೆ ಮತ್ತು ಹ್ಯಾಂಕಿ 'ಎ' ಆವೃತ್ತಿಯು ದಂತಕೆತಯ ಎಲ್ಲ ಅಗತ್ಯ ಅಂಶಗಳನ್ನು ಒಳಗೊಂಡಿದ್ದು, ಕತೆಯ ಮೂಲರೂಪಕ್ಕೆ ಅತ್ಯಂತ ಹತ್ತಿರವಿದೆ ಎಂದು ನಿರ್ಣಯಿಸಿದರು. 'ಬಿ' ಮತ್ತು 'ಡಿ' ಆವೃತ್ತಿಗಳು ಸ್ಥಳೀಯವಾಗಿ ರೂಪಾಂತರಗೊಂಡ ಆವೃತ್ತಿಗಳು, 'ಸಿ' ಆವೃತ್ತಿಯು ಪ್ರೇತದ ಒಂದು ಪ್ರತ್ಯೇಕ ಕತೆಯಾಗಿ ಬೆಳೆದಿದೆ, ನಂತರದ ಯಾವುದೋ ಘಟ್ಟದಲ್ಲಿ ಅದು ಅದೃಶ್ಯವಾಗುವ ಬಿಟ್ಟಿ ಸವಾರರ ಮೂಲ ಕತೆಯೊಂದಿಗೆ ('ಎ' ಆವೃತ್ತಿ) ಸೇರಿಕೊಂಡಿದೆ ಎಂದು ಅವರಿಬ್ಬರೂ ಭಾವಿಸಿದರು. ಅವರ ನಿರ್ಣಯಗಳಲ್ಲಿ ಒಂದು ಅದೃಶ್ಯವಾಗುವ ಬಿಟ್ಟಿ ಸವಾರರ ಕತೆಗಳ ಮುಂದುವರಿಕೆಯಲ್ಲಿ ನಿಶ್ಚಿತವಾಗಿಯೂ ಕಂಡುಬರುತ್ತದೆ, ಅದೆಂದರೆ: ಬಹುತೇಕ ಪ್ರಕರಣಗಳಲ್ಲಿ, ಹಾಗೆ ಕರೆದುಕೊಂಡು ಹೋಗಲು ಕೋರುವ ಬಿಟ್ಟಿ ಸವಾರಿಗರು ಹೆಂಗಸಾಗಿರುತ್ತಾರೆ ಮತ್ತು ವಾಹನ ಚಲಾಯಿಸುವವರು ಗಂಡಸಾಗಿರುತ್ತಾರೆ. ಬಿಯರ್ಡ್‌ಸ್ಲೆ ಮತ್ತು ಹ್ಯಾಂಕಿ ಸಮೀಕ್ಷೆಯ ಮಾದರಿಗಳಲ್ಲಿ ಸುಮಾರು ೪೭ ಯುವತಿಯರ ದೆವ್ವಗಳು, ೧೪ ವಯಸ್ಸಾದ ಅಜ್ಜಿಯರ ದೆವ್ವಗಳು ಮತ್ತು ೧೪ ಸುಮಾರು ಮಧ್ಯವಯಸ್ಸಿನ ದೆವ್ವಗಳು ಆಗಿದ್ದವು. ಅರ್ನೆಸ್ಟ್ ಡಬ್ಲ್ಯು ಬಾಗ್‌ಮನ್ ಅವರ ಟೈಪ್-ಆಂಡ್ ಮೋಟಿಫ್-ಇಂಡೆಕ್ಸ್ ಆಫ್ ದಿ ಫೋಕ್‌ಟೇಲ್ಸ್ ಆಫ್ ಇಂಗ್ಲೆಂಡ್ ಆಂಡ್ ನಾರ್ತ್ ಅಮೆರಿಕಾ) (೧೯೬೬) ಮೂಲ ಅದೃಶ್ಯವಾಗುವ ಬಿಟ್ಟಿ ಸವಾರರನ್ನು ಹೀಗೆ ಚಿತ್ರಿಸಿದೆ:
- "ಯುವತಿಯ ಪ್ರೇತವೊಂದು ವಾಹನದಲ್ಲಿ ತಾನೂ ಬರುವುದಾಗಿ ಕೇಳಿಕೊಳ್ಳುತ್ತದೆ. ವಾಹನ ಹತ್ತಿ, ತಾನು ಹೋಗಬೇಕಿರುವ ವಿಳಾಸವನ್ನು ಹೇಳಿದ ನಂತರ, ವಾಹನ ಚಾಲಕನ ಗಮನಕ್ಕೇ ಬಾರದಂತೆ, ಚಲಿಸುತ್ತಿರುವ, ಮುಚ್ಚಿದ್ದ ವಾಹನದಿಂದ ಅದೃಶ್ಯವಾಗುತ್ತದೆ. ನಂತರ ಚಾಲಕ ಆ ವಿಳಾಸಕ್ಕೆ ಹೋಗಿ, ಆ ವ್ಯಕ್ತಿಯ ಕುರಿತು ಕೇಳಿದಾಗ, ಆಕೆ ಕೆಲವು ದಿನಗಳ ಹಿಂದೆ ತೀರಿಕೊಂಡಿದ್ದು ತಿಳಿದುಬರುತ್ತದೆ. (ಹೆಚ್ಚಿನವೇಳೆ ವಾಹನ ಅಪಘಾತದಲ್ಲಿ ಸತ್ತು ವರ್ಷದ ನಂತರ, ಇದೇ ರೀತಿಯಾಗಿ ಮರಳಿ ಕಾಣಿಸಿಕೊಳ್ಳುವ ಪ್ರಯತ್ನವನ್ನು ಆ ಪ್ರೇತ ಮಾಡಿರುವುದು ಚಾಲಕನಿಗೆ ತಿಳಿಯುತ್ತದೆ. ಅಲ್ಲದೇ ಬಹುತೇಕ ಸಂದರ್ಭಗಳಲ್ಲಿ, ಪ್ರೇತವು ಸ್ಕಾರ್ಫ್ ಅಥವಾ ಕೈಚೀಲವನ್ನು ಕಾರಿನಲ್ಲಿ ಬಿಟ್ಟುಹೋಗಿರುತ್ತದೆ.)"
ಬಾಗ್‌ಮನ್ ಅವರ ವರ್ಗೀಕರಣ ಪದ್ಧತಿಯಲ್ಲಿ ಈ ಮೂಲ ಕತೆಯನ್ನು ಸಂಕೇತ ಇ೩೩೨.೩.೩.೧ ಎಂದು ಗುರುತಿಸಿದ್ದಾರೆ. ಉಪವಿಭಾಗಗಳು ಹೀಗಿವೆ:
- ಇ೩೩೨.೩.೩.೧(ಎ) - ಪುಣ್ಯತಿಥಿಯಂದು ಪುನಾ ಕಾಣಿಸಿಕೊಳ್ಳುವ ಅದೃಶ್ಯವಾಗುವ ಬಿಟ್ಟಿ ಸವಾರರು;
- ಇ೩೩೨.೩.೩.೧(ಬಿ)- ವಾಹನದಲ್ಲಿ ಏನಾದರೂ ವಸ್ತುವನ್ನು ಬಿಟ್ಟುಹೋಗುವ ಅದೃಶ್ಯವಾಗುವ ಬಿಟ್ಟಿ ಸವಾರರು, ನೀರಿಗೆ ಸಂಬಂಧಿಸಿದ ವಸ್ತುವನ್ನು ಬಿಟ್ಟುಹೋಗಿದ್ದರೆ ಅದು ಇ೩೩೨.೩.೩.೧(ಸಿ);
- ಇ೩೩೨.೩.೩.೧(ಡಿ) - ಅಶುಭಸೂಚಕ ವಯಸ್ಸಾದ ಹೆಂಗಸರು, ಅವರು ಕೇಡಿನ ಕುರಿತು ಭವಿಷ್ಯ ಹೇಳಿರುತ್ತಾರೆ;
- ಇ೩೩೨.೩.೩.೧(ಇ) - ಪ್ರಯಾಣದ ಅವಧಿಯಲ್ಲಿ ತಿನ್ನುವುದು ಅಥವಾ ಕುಡಿಯುವುದು ಇಂತಹ ಚಟುವಟಿಕೆಗಳಲ್ಲಿ ತೊಡಗಿರುವ ಪ್ರೇತಗಳ ವಿವರಣೆ;
- ಇ೩೩೨.೩.೩.೧(ಎಫ್)- ತಮ್ಮ ಸಾಯುತ್ತಿರುವ ಮಗನ ಹಾಸಿಗೆ ಬಳಿ ಹೋಗಲು ಬಯಸುವ ಪೋಷಕರ ಪ್ರೇತಗಳು;
- ಇ೩೩೨.೩.೩.೧(ಜಿ) ಸರಳವಾಗಿ ತಮ್ಮ ಮನೆಗೆ ಕರೆದುಕೊಂಡು ಹೋಗಿ ಬಿಡಿ ಎಂದು ಕೇಳಿಕೊಳ್ಳುವ ಬಿಟ್ಟಿಸವಾರರು;
- ಇ೩೩೨.೩.೩.೧(ಎಚ್-ಜೆ)ಅದೃಶ್ಯವಾಗುವ ಕ್ರೈಸ್ತ ಸನ್ಯಾಸಿನಿಯರ ವಿಶೇಷ ವರ್ಗ (ಇದು ಅಚ್ಚರಿಯೆನ್ನಿಸುವಷ್ಟು ಸಾಮಾನವಾಗಿ ಕಂಡುಬರುವ ಆವೃತ್ತಿ), ಇವರಲ್ಲಿ ಕೆಲವರು ಭವಿಷ್ಯವನ್ನು ಮುನ್ನುಡಿಯುತ್ತಾರೆ.
ಇಲ್ಲಿ ಕೆಲವು ವಿದ್ಯಮಾನಗಳು ಧಾರ್ಮಿಕ ವಿವರಣೆಗಳೊಂದಿಗೆ ಮಿಶ್ರವಾಗಿವೆ, ಇದರಲ್ಲಿ ಇ೩೩೨.೩.೩.೨ ವರ್ಗೀಕರಣದ ಅದೃಶ್ಯವಾಗುವ ಬಿಟ್ಟಿಸವಾರರು ರಸ್ತೆಗೆ ಇಳಿದ ದೈವಗಳಾಗಿರುತ್ತವೆ. ಸಂತ ಕ್ರಿಸ್ಟೋಫರ್‌ನ ದಂತಕತೆಯು ಇದರಲ್ಲಿ ಒಂದೆಂದು ಪರಿಗಣಿತವಾಗಿದೆ. ಜೊತೆಗೆ ದೇವರು ರಸ್ತೆಯಲ್ಲಿ ಇಥಿಯೋಪಿಯನ್ (ಕಾಯಿದೆಗಳು ೮:೨೬-೩೯) ಅನ್ನು ಮುಖಾಮುಖಿಯಾದ ಫಿಲಿಪ್ ದಿ ಅಪೋಸ್ಟಲ್ ಕತೆಯನ್ನೂ ಕೆಲವೊಮ್ಮೆ ಹೀಗೆಯೇ ಅರ್ಥೈಸಲಾಗುತ್ತದೆ.[೧]
೧೯೭೦ರ ಭವಿಷ್ಯಸೂಚಕ ಬಿಟ್ಟಿಸವಾರರು
[ಬದಲಾಯಿಸಿ]ಅದೃಶ್ಯವಾಗುವ ಬಿಟ್ಟಿ ಸವಾರರ ವಿದ್ಯಮಾನವು ೧೯೭೦ರ ಮತ್ತು ೧೯೮೦ರ ಆರಂಭದಲ್ಲಿ ದೈವಿಕತೆಗೆ ಏರಿಸುವ ವಿದ್ಯಮಾನಗಳ ರೀತಿಯಲ್ಲಿ ಆರಂಭಗೊಂಡಿತು.
- ೧೯೭೫ರಲ್ಲಿ ಆಸ್ಟ್ರಿಯಾ-ಜರ್ಮನಿ ಗಡಿಭಾಗದಲ್ಲಿ ಹೀಗೆ ವಾಹನದಲ್ಲಿ ಕರೆದುಕೊಂಡು ಹೋಗಲು ಹೇಳಿದ ನಂತರ, ಭವಿಷ್ಯಹೇಳಿ, ಕಾರಿನಿಂದ ಅದೃಶ್ಯವಾದ ಕ್ರೈಸ್ತ ಸನ್ಯಾಸಿನಿಯರ ಹಲವಾರು ಕತೆಗಳು ವರದಿಯಾದವು. ಆ ವರ್ಷದ ಏಪ್ರಿಲ್ ೧೩ರಂದು, ೪೩-ವರ್ಷದ ಒಬ್ಬ ವ್ಯಾಪಾರಿಯು ತನ್ನ ಕಾರಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ಹೀಗೆ ಅದೃಶ್ಯವಾಗಿದ್ದನ್ನು ಗಮನಿಸಿ, ರಸ್ತೆಯ ತುದಿಗೆ ಕಾರನ್ನು ಚಲಾಯಿಸಿದ್ದರು. ಆಗ ಆಸ್ಟ್ರಿಯಾದ ಪೊಲೀಸರು ಈ ಬಗೆಯ ಕತೆಯನ್ನು ಬೇರೆ ಯಾರಾದರೂ ಮತ್ತೆ ವರದಿ ಮಾಡಿದರೆ ೨೦೦ ಡಾಲರ್ (೧೯೭೫ರ ಬೆಲೆ) ದಂಡ ವಿಧಿಸುವುದಾಗಿ ಹೆದರಿಸಿದ್ದರು.
- ೧೯೭೭ರ ಆರಂಭದಲ್ಲಿ, ಮಿಲಾನ್ ಸುತ್ತಲಿನ ಸುಮಾರು ಹತ್ತು ಹನ್ನೆರಡು ವಾಹನ ಚಾಲಕರು ಹೀಗೆ ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಲು, ಹೇಳಿ ಹತ್ತಿಕೊಂಡ ಕ್ರೈಸ್ತ ಸನ್ಯಾಸಿನಿಯೊಬ್ಬರು ಅದೃಶ್ಯವಾಗಿದ್ದನ್ನು ಹೇಳಿದ್ದರು. (ಆಕೆ ಅದೃಶ್ಯವಾಗುವ ಮೊದಲು) ಫೆಬ್ರವರಿ ೨೭ರಂದು ಮಿಲಾನ್‌ನಲ್ಲಿ ಭೂಕಂಪದಿಂದ ವಿನಾಶವಾಗುತ್ತದೆ ಎಂದು ಮುನ್ಸೂಚನೆ ನೀಡಿದ್ದರು. (ಆದರೆ ಭೂಕಂಪ ಸಂಭವಿಸಲೇ ಇಲ್ಲ) (ಲಾ ಸ್ಟಂಪಾ , ೨೫ ಮತ್ತು ೨೬ ಫೆಬ್ರವರಿ, ೧ ಮಾರ್ಚ್ ೧೯೭೭; ಡಲ್ಲಾಸ್ ಮಾರ್ನಿಂಗ್ ನ್ಯೂಸ್ ೨೫ ಫೆಬ್ರವರಿ ೧೯೭೭).
- ೧೯೭೯ರಲ್ಲಿ, ಅರ್ಕಾನ್ಸಸ್‌ನ ಲಿಟಲ್ ರಾಕ್ ಎಂಬಲ್ಲಿ, 'ಉತ್ತಮ ಉಡುಪು ತೊಟ್ಟಿದ್ದ ಮತ್ತು ಚಂದವಿದ್ದ ಯುವಕ'ನೊಬ್ಬ ಇಂತಹ ಚಟುವಟಿಕೆಗಳ ವಿರುದ್ಧ ಕಾನೂನು ಇದ್ದರೂ ವಾಹನಗಳಲ್ಲಿ ತನ್ನನ್ನು ಕರೆದುಕೊಂಡು ಹೋಗಬೇಕೆಂದು ಕೋರುತ್ತಿದ್ದ. ಸುರಕ್ಷಿತವಾಗಿ ಹತ್ತಿಸಿಕೊಂಡ ನಂತರ, ತನ್ನನ್ನು ಹತ್ತಿಸಿಕೊಂಡ ವ್ಯಕ್ತಿಗೆ ನಿಧಾನವಾಗಿ ಕ್ರಿಸ್ತ ಎರಡನೇ ಬಾರಿಗೆ ಬರಲಿದ್ದಾನೆ ಎಂಬ ವಿವರಗಳನ್ನು ಹೇಳುತ್ತಿದ್ದ. ಹೀಗೆ ಹೇಳಿದ ನಂತರ, ಆತ ಚಲಿಸುತ್ತಿರುವ ಕಾರಿನಿಂದಲೇ ಅದೃಶ್ಯನಾಗುತ್ತಿದ್ದ. 'ನೋಡಲು ಚಂದವಿದ್ದ ಯುವಕ' ಸುಮಾರು ಒಂದು ವರ್ಷದ ವರೆಗೆ ಹೀಗೆಯೇ ಮಾಡುತ್ತಿದ್ದ. ಆತನನ್ನು ಕೊನೆಯದಾಗಿ ಕಂಡಿದ್ದೆ ಎಂದು ವರದಿಯಾಗಿದ್ದು ೧೯೮೦ರ ಜುಲೈ ೬ರಂದು, ಅದೃಶ್ಯವಾಗುವ ಬಿಟ್ಟಿ ಸವಾರರು ಹೇಳುತ್ತಿದ್ದ ಭವಿಷ್ಯವಾಣಿಗಳು ಒಂದು ರೀತಿಯಲ್ಲಿ ಗೊಂದಲಮಯವಾದ ಹವಾಮಾನ ವರದಿಗಳಂತೆ ಇರುತ್ತಿತ್ತು. ತನ್ನ ಮಾತು ಕೇಳಿ ಚಿಂತಿತರಾಗುತ್ತಿದ್ದ ಚಾಲಕರಿಗೆ ಆತ (ಮತ್ತು ಪ್ರಯಾಣಿಕರಿಗೆ, ಇದು ಬಹಳ ಜನರಿಗೆ ಕಾಣುವಂತೆ ಮಾಡಿ) 'ಮತ್ತೆ ಎಂದಿಗೂ ಮಳೆಯಾಗದು' ಹೇಳಿ ಒಂದೆರಡು ಕ್ಷಣದ ನಂತರ ವೇಗವಾಗಿ ಹೋಗುವ ಕಾರಿನಿಂದಲೇ ಅದೃಶ್ಯನಾಗುತ್ತಿದ್ದ. ಒಬ್ಬರು ಹೆಸರಾಂತ ಅರ್ಕಾನ್ಸಸ್ ಸ್ಟೇಟ್ ಟ್ರೂಪರ್ - ರಾಬರ್ಟ್ ರಾಟೆನ್ ಎನ್ನುವವರು ನಂತರ ಪತ್ರಿಕೆಗೆ (ಇಂಡಿಯಾನ ಸ್ಟಾರ್ ೧೯೮೦ರ ಜುಲೈ ೨೬) ತಾವು ಈ ರೀತಿಯ ಎರಡು ವರದಿಗಳನ್ನು ದಾಖಲಿಸಿಕೊಂಡಿದ್ದಾಗಿ, ಆದರೆ ಅನಧಿಕೃತವಾಗಿ ಇನ್ನೂ ಹಲವಾರು ಇವೆ ಎಂಬುದು ತಮಗೆ ಗೊತ್ತಿದೆ ಎಂದು ಹೇಳಿದರು.
- ಈ ಮೇಲಿನ ಭವಿಷ್ಯಸೂಚಕ ಬಿಟ್ಟಿ ಸವಾರನ ವರದಿಯಾದ ಸಮಯದಲ್ಲಿಯೇ, ಟಕೋಮ, ವಾಷಿಂಗ್ಟನ್ ಮತ್ತು ಯೂಜೀನ್, ಒರೆಗಾನ್ ಇಂಟರ್‌ಸ್ಟೇಟ್ ೫ರ ಸುತ್ತಮುತ್ತ ಕಾರುಗಳಿಂದ ಅದೃಶ್ಯವಾಗುತ್ತಿದ್ದ ಎರಡನೇ ಸಂಚಾರೀ ಭವಿಷ್ಯವಾದಿಯ ಕುರಿತು ವರದಿಯಾಗಿತ್ತು. ೫೦ರಿಂದ ೬೦ ವರ್ಷದ ಮಹಿಳೆ, ಕೆಲವೊಮ್ಮೆ ಕ್ರೈಸ್ತ ಸನ್ಯಾಸಿನಿಯ ವೇಷದಲ್ಲಿ, ಕಾಣಿಸಿಕೊಂಡು, ವಾಹನದಲ್ಲಿ ಕರೆದುಕೊಂಡು ಹೋಗುವಂತೆ ಕೋರುತ್ತಿದ್ದರು ಮತ್ತು ದೇವರು, ಮುಕ್ತಿಯ ಕುರಿತು ತಾನು ಕಾರಿನಿಂದ ಅದೃಶ್ಯವಾಗುವ ಮೊದಲು ವಿವರಿಸುತ್ತಿದ್ದಳು. ಇಂತಹ ಇನ್ನೊಂದು ಪ್ರಕರಣದಲ್ಲಿ ವಾಹನ ಚಾಲಕನು ತನ್ನ (ಅನಿರ್ದಿಷ್ಟ) ಪಾಪಗಳ ಕುರಿತು ಪಶ್ಚಾತ್ತಾಪಡಬೇಕೆಂದು, ಇಲ್ಲವಾದಲ್ಲಿ ಆತ ರಸ್ತೆ ಅಪಘಾತದಲ್ಲಿ ಎಚ್ಚರಿಸಿದ್ದಳು. ೧೯೮೦ರ ಕೊನೆಯಲ್ಲಿ, ಈ ಅದೃಶ್ಯವಾಗುವ ಬಿಟ್ಟಿ ಸವಾರರು ಮೌಂಟ್ ಸೇಂಟ್ ಹೆಲೆನ್ಸ್ ಕುರಿತು ಅತೀವ ಆಸಕ್ತಿ ವಹಿಸಲಾರಂಭಿಸಿದರು. ಆಕೆಯು ವಾಹನ ಚಾಲಕರಿಗೆ ೧೯೮೦ರ ಮೇನಲ್ಲಿ ಜ್ವಾಲಾಮುಖಿ ಸ್ಫೋಟಗೊಳ್ಳಲಿದ್ದು, ಅದು ವಾಯವ್ಯ ಪ್ರದೇಶಕ್ಕೆ ದೇವರ ಒಂದು ಎಚ್ಚರಿಕೆಯನ್ನು ಸೂಚಿಸುತ್ತದೆ ಮತ್ತು ಯಾರು ಮರಳುವುದಿಲ್ಲವೋ ಅವರು ಕೆಲವೇ ದಿನಗಳಲ್ಲಿ ಜ್ವಾಲಾಮುಖಿಯಿಂದ ವಿನಾಶವಾಗುತ್ತಾರೆ ಎಂದು ನಿರೀಕ್ಷಿಸಬಹುದು ಎಂದು ಹೇಳಿದ್ದಳು ಎನ್ನಲಾಗಿದೆ. (ಸರಿಯಾಗಿ ಹೇಳಬೇಕೆಂದರೆ,೧೮ ಮೇ). ಟಕೋಮ ಪೊಲೀಸರಿಗೆ ಈ ಅಶುಭಸೂಚಕ ವ್ಯಕ್ತಿಯನ್ನು ತಾನು ಭೇಟಿಯಾಗಿದ್ದೇನೆ ಎಂದು ಹೇಳಿ ಸುಮಾರು ೨೦ ಜನರು ಕರೆ ಮಾಡಿದ್ದರು. ನಂತರ, ಆ ಮಹಿಳೆಯು ಬೇರೆ ವೇಷವನ್ನು ಧರಿಸಿದಳು (ಅಥವಾ ಅದೃಶ್ಯವಾಗುವ ಬಿಟ್ಟಿ ಸವಾರರ ಹೊಸ ವೇಷದಲ್ಲಿ ತನ್ನ ಕರ್ತವ್ಯ ಮಾಡತೊಡಗಿದಳು) ಮತ್ತು ರಸ್ತೆಗಳಲ್ಲಿ ಮತ್ತೆ ಮೊದಲಿನಂತೆ ಏನೋ ಕೇಡು ಬರಲಿದೆ ಎಂಬ ಮುನ್ಸೂಚನೆ ನೀಡಿ, ಅದೃಶ್ಯಳಾಗುತ್ತಿದ್ದಳು (ಈ ಬಾರಿ ಅಕ್ಟೋಬರ್ ೧೨ರಂದು ಎಂದು ಹೇಳಿದ್ದಳು). ಮಿಡ್‌ನೈಟ್ ಗ್ಲೋಬ್ (ಆಗಸ್ಟ್ ೫, ೧೯೮೦) ಪತ್ರಿಕೆಯು ಆಘಾತಗೊಂಡ ಇಬ್ಬರು ವಾಹನ ಚಾಲಕರೊಂದಿಗೆ ವ್ಯವಹರಿಸಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿತ್ತು ಮತ್ತು ಹೀಗೆ ಅದೃಶ್ಯವಾದ ಮಹಿಳೆಯನ್ನು ತಾನು ಕಂಡಿರುವುದಾಗಿ ಒಬ್ಬ ಚಾಲಕ ಹೇಳಿದ್ದರು.
ಸಾಂಸ್ಕೃತಿಕ ಉಲ್ಲೇಖಗಳು
[ಬದಲಾಯಿಸಿ]- ಅದೃಶ್ಯವಾಗುವ ಬಿಟ್ಟಿ ಸವಾರರ ಕುರಿತ ಉಲ್ಲೇಖಗಳು ಡಿಕ್ಕಿ ಲೀಗೆ ೪೫ ಆರ್‌ಪಿಎಂ ಸಿಂಗಲ್‌ನಲ್ಲಿ (ಟಿಸಿಎಫ್-೧೦೨) "ಲೌರಿ" ಹಾಡಿನಲ್ಲಿ "ಸ್ಟ್ರೇಂಜ್ ಥಿಂಗ್ಸ್ ಹ್ಯಾಪನ್" ಎಂಬ ಉಪಶೀರ್ಷಿಕೆಯಲ್ಲಿ ಹಾಡೊಂದನ್ನು ಧ್ವನಿಮುದ್ರಿಸಲು ಸ್ಫೂರ್ತಿಯಾಗಿತ್ತು. ಕಂಟ್ರೊ ಜೋ ಮೆಕ್‌ಡೊನಾಲ್ಡ್ ಮತ್ತು ಅದೃಶ್ಯವಾಗುವ ಬಿಟ್ಟಿ ಸವಾರರ ಕುರಿತು ಹಾಡೊಂದನ್ನು ಹಾಡಿದ್ದರು, ಅದು "ಹೋಲ್ಡ್ ಆನ್ ಇಟ್ಸ್ ಕಮಿಂಗ್" ಎಂಬ ಹಾಡು, ನಂತರ ಅದನ್ನು ನ್ಯೂ ರೈಡರ್ಸ್ ಆಪ್ ದಿ ಪರ್ಪಲ್ ಸೇಜ್ ಎಂದು ಹಾಡಿದ್ದರು. ಬೇರೆ ಆಧುನಿಕ ಹಾಡುಗಳಾದ ಬ್ಲಾಕ್‌ಮೋರ್ಸ್ ನೈಟ್‌ನ ವಿಲೇಜ್ ಲ್ಯಾಂಟರ್ನ್ ನಲ್ಲಿದ್ದ "ಐ ಗೆಸ್ ಡಸ್‌ನಾಟ್ ಮ್ಯಾಟರ್ ಅನಿಮೋರ್" ಮತ್ತು ಕಂಟ್ರಿ ಜಂಟಲ್‌ಮನ್ ಅವರ ಸ್ಟಾರ್‌ಡೇ ಸಬ್ಸಿಡರಿ, ನ್ಯಾಶ್‌ವಿಲ್ಲೆ ರೆಕಾರ್ಡ್ಸ್ ೪೫ ಆರ್‌ಪಿಎಂ # ೨೦೧೮, ೧೯೬೪, ಈ ಕತೆಯನ್ನು ಒಳಗೊಂಡಿದ್ದವು.
- ಡೇವಿಡ್ ಅಲಾನ್ ಕೋ ಅವರ "ದಿ ರೈಡ್" ಮತ್ತು ರೆಡ್ ಸೊವಿನ್ ಅವರ "ಪ್ಯಾಂಥಮ್ ೩೦೯" ಅದೃಶ್ಯವಾಗುವ ಬಿಟ್ಟಿ ಸವಾರರು ದೃಶ್ಯವನ್ನು ತಿರುಗುಮುರುಗಾಗಿ ಹೊಂದಿದ್ದವು. "ದಿ ರೈಡ್"ನಲ್ಲಿ, ಕೋ ಅವರು ಪಾದಚಾರಿಯಾಗಿದ್ದು, ಹ್ಯಾಂಕ್ ವಿಲಿಯಮ್ಸ್ ಚಲಾಯಿಸುತ್ತಿದ್ದ ಕ್ಯಾಡಿಲಾಕ್ನಲ್ಲಿ ಅಲಬಾಮಾದ ಮಾಂಟ್‌ಗೊಮೆರಿಯಿಂದ (ವಿಲಿಯಮ್ಸ್‌ನ ಊರು) ಟೆನ್ನೆಸಿಯ ನಶ್‌ವಿಲ್ಲೆಗೆ ಪ್ರಯಾಣಿಸಲು ತನ್ನನ್ನು ಕರೆದುಕೊಂಡು ಹೋಗುವಂತೆ ಕೇಳುತ್ತಾನೆ. ಪ್ರಯಾಣದ ಕೊನೆಯಲ್ಲಿ, ವಿಲಿಯಮ್ಸ್ ಕಾರನ್ನು ತಿರುಗಿಸಿ ನಿಲ್ಲಿಸಿದಾಗ, ಕೋ ಕೆಳಗೆ ಇಳಿಯುತ್ತ, "ನೀನು ಇಲ್ಲಿಯೇ ಇಳಿಯಬೇಕು, ಏಕೆಂದರೆ ನಾನು ಅಲಬಾಮಕ್ಕೆ ಮರಳಿ ಹೋಗುತ್ತೇನೆ ಎನ್ನುತ್ತಾನೆ.
- ಕೀತ್ ಬ್ರಿಯಂಟ್‌ನ "ದಿ ರೈಡ್"ನಲ್ಲಿ ಒಬ್ಬ ಹವ್ಯಾಸಿ ನಸ್‌ಕಾರ್ ಚಾಲಕ ಡೇಟೋನ ಇಂಟರ್‌ನ್ಯಾಶನಲ್ ಸ್ಪೀಡ್‌ವೇ ನಿಂದ ಡೇಲ್ ಎರ್ನ್‌ಹಾರ್ಡ್‌ಟ್‌ಗೆ ಪ್ರಯಾಣಿಸುವಾಗಮ ಒಬ್ಬ ಪ್ರಯಾಣಿಕ ಸಿಗುತ್ತಾನೆ ಎಂಬ ಕುರಿತು ಇದೆ.
- "ಫ್ಯಾಂಟಮ್ ೩೦೯"ನಲ್ಲಿ ರೆಡ್ ಸೊವಿನ್, ಟ್ರಕ್ ಚಾಲಕನೊಂದಿಗೆ ಪ್ರಯಾಣಿಸಲು ಹೆಬ್ಬೆಟ್ಟು ಎತ್ತಿ ಸಂಜ್ಞೆ ಮಾಡುವ ಚಿತ್ರಣವಿದೆ. ಚಾಲಕ ಸೋವಿನ್‌ಗೆ ಹತ್ತಿರದ ಟ್ರಕ್ ನಿಲ್ದಾಣದಲ್ಲಿ ಇಳಿಸಿದಾಗ, ಆತ ತನ್ನನ್ನು ಯಾರು ಕಳುಹಿಸಿದ್ದೆಂದು ಟ್ರಕ್ ನಿಲ್ದಾಣದಲ್ಲಿರುವ ಜನರಿಗೆ ಹೇಳುವಂತೆ ಹೇಳುತ್ತಾನೆ. ಟ್ರಕ್ ನಿಲ್ಲುವ ಮೊದಲು ಮೌನ ಆವರಿಸುತ್ತದೆ, ಆಗ ಸೊವಿನ್ ಒಬ್ಬ ಶ್ರೀಮಂತ ಆಶ್ರಯದಾತರಿಗೆ ಚಾಲಕನ ಕತೆ ಹೇಳುತ್ತಾನೆ. ಆತ ಬೆಟ್ಟವೊಂದನ್ನು ಏರಿದ ನಂತರ ನಿಲ್ಲಿಸುವ ಸಮಯದಲ್ಲಿ ಯುವಕರ ಗುಂಪನ್ನು ಗಮನಿಸದೇ ತನ್ನ ವಾಹನವನ್ನು ಅವರ ಮೇಲೆ ಚಲಾಯಿಸಿರುತ್ತಾನೆ. "ಬ್ರಿಂಗಿಂಗ್ ಮೇರಿ ಹೋಂ" ಎಂಬ ಹಾಡನ್ನೂ ಸೋವಿನ್ ಧ್ವನಿಮುದ್ರಿಸಿದ್ದು, ಇದರಲ್ಲಿ ಬಿರುಗಾಳಿಯ ಒಂದು ರಾತ್ರಿ ರಸ್ತೆಯಲ್ಲಿ ನಿಂತಿದ್ದ ಯುವತಿಯೊಬ್ಬಳನ್ನು ಹತ್ತಿಸಿಕೊಳ್ಳುತ್ತಾನೆ. ಅವಳು ಇವನಿಗೆ ನೀಡಿದ್ದ ವಿಳಾಸವನ್ನು ತಲುಪುವ ಮೊದಲೇ ಆಕೆ ಅದೃಶ್ಯಳಾಗಿರುತ್ತಾಳೆ. ಅವಳ ಪಾಲಕರು ಬಾಗಿಲಿನಲ್ಲಿಯೇ ನಿಂತು, ಮೇರಿಯನ್ನು ಹಾಗೆ ಕರೆತಂದ ಯುವಕರಲ್ಲಿ ಇವನು ಹದಿಮೂರನೆಯವನು ಎಂದು ಹೇಳುತ್ತಾರೆ.
- ಹಿಲ್ಟನ್ ಎಡ್ವರ್ಡ್ ೧೯೫೧ರಲ್ಲಿ ರಿಟರ್ನ್ ಟು ಗ್ಲೆನ್ನಸ್ಕೌಲ್ ಎಂಬ ಸಿನಿಮಾ ನಿರ್ದೇಶಿಸಿದ್ದು, ಅದರಲ್ಲಿ ಒರ್ಸನ್ ವೆಲ್ಸ್ ನಟಿಸಿದ್ದಾನೆ ಮತ್ತು ಈ ಸಿನಿಮಾ ಅದೃಶ್ಯವಾಗುವ ಬಿಟ್ಟಿ ಸವಾರನೊಬ್ಬನ ಘಟನೆಯ ಸುತ್ತ ಕೇಂದ್ರಿತಾಗಿದೆ.
- ಅಷ್ಟೇನೂ ಖ್ಯಾತಿ ಪಡೆಯದ ದಿ ವೇಲ್ ಟಿವಿ ಸರಣಿಯ ಗರ್ಲ್ ಆನ್ ದಿ ರೋಡ್ ಕಂತಿನಲ್ಲಿ ಬೋರಿಸ್ ಕಾರ್ಲಾಫ್ ನಟಿಸಿದ್ದು, ಇದರಲ್ಲಿ ವಾಹನ ಚಾಲಕನೊಬ್ಬ ಹೆದ್ದಾರಿಯಲ್ಲಿ ಅಲೆಯುತ್ತಿದ್ದ ಹುಡುಗಿಯೊಬ್ಬಳಿಗೆ ಸಹಾಯ ಮಾಡುತ್ತಾನೆ. ಅವಳು ಅದೃಶ್ಯಳಾದ ನಂತರ, ಆತ ಅವಳನ್ನು ಹುಡುಕುತ್ತಾನೆ. ನಂತರ ಆತ ಭೇಟಿಯಾದ ಆ ರಸ್ತೆಯಲ್ಲಿ ಅಪಘಾತವೊಂದರಲ್ಲಿ ಅವಳು ದುರ್ಮರಣಕ್ಕೀಡಾಗಿದ್ದಾಳೆ ಎಂಬುದು ತಿಳಿಯುತ್ತದೆ.
- ೧೯೬೦ರಲ್ಲಿ ಬಿಡುಗಡೆಯಾದ ಬ್ರಿಟಿಶ್ ಭಯಾನಕ ಸಿನಿಮಾ ದಿ ಸಿಟಿ ಆಫ್ ದಿ ಡೆಡ್ (ಹಾರರ್ ಹೋಟೆಲ್ )ನಲ್ಲಿ ನಟ ವ್ಯಾಲಂಟಿನ್ ಡೈಲ್ ಶತಮಾನಗಳ ಹಿಂದಿನ ಯೋಧನಾಗಿ ನಟಿಸಿದ್ದು, ಸಿನಿಮಾದಲ್ಲಿ ಎರಡು ಭಿನ್ನ ಪಾತ್ರಗಳಲ್ಲಿ ಆತ ವಾಹನ ಚಾಲಕರಿಗೆ ತನ್ನನ್ನು ಸ್ಥಳವೊಂದಕ್ಕೆ ಬಿಡುವಂತೆ ಕೇಳುತ್ತಿರುತ್ತಾನೆ. ಕಾರು ನ್ಯೂ ಇಂಗ್ಲೆಂಡ್‌ನ ಪುರಾತನ ಮಾಟಗಾತಿಯ ಹಳ್ಳಿಗೆ ತಲುಪಿದ ತಕ್ಷಣ ಆತ ಅದೃಶ್ಯನಾಗುತ್ತಾನೆ.
- ದಿ ಸ್ವಿರ್ಲಿಂಗ್ ಎಡ್ಡೀಸ್ ತಮ್ಮಔಟ್‌ಡೋರ್ ಎಲ್ವಿಸ್ ಎಂಬ "ಅರ್ಬನ್ ಲೆಜೆಂಡ್ಸ್" ಆಲ್ಬಂನಲ್ಲಿ ಈ ಕುರಿತ ಹಾಡೊಂದನ್ನು ಹಾಡಿದ್ದಾರೆ. ಈ ಗೀತೆಯಲ್ಲಿ, ನಿರೂಪಕ ನಗರ ದಂತಕತೆಗಳ ಮೌಢ್ಯವನ್ನು ಟೀಕಿಸುತ್ತಾನೆ, ಆಗ ಜೊತೆಯಲ್ಲಿದ್ದ ಅದೃಶ್ಯವಾಗುವ ಬಿಟ್ಟಿ ಸವಾರ ಕಾರು ಚಾಲಕನಿಗೆ "ಸುಳ್ಳು ಹೇಳೋದನ್ನು ನಿಲ್ಲಿಸು" ಎಂದು ಹೇಳಿ ಅದೃಶ್ಯನಾಗುತ್ತಾನೆ.
- ೧೯೯೩ರಲ್ಲಿ ರಿಚರ್ಡ್ ಸ್ಟ್ಯಾನ್ಲಿ ನಿರ್ದೇಶಿಸಿದ ಆಚರಣಾ ಪದ್ಧತಿಗಳ ಸಿನಿಮಾ, ಡಸ್ಟ್ ಡೆವಿಲ್ ದಕ್ಷಿಣ ಆಫ್ರಿಕಾದಲ್ಲಿ ನಡೆಯುವಂತೆ ಇದೆ. ಇದರ ಡಿವಿಡಿ ವಿವರಣೆಯ ಪ್ರಕಾರ, ಅದೃಶ್ಯವಾಗುವ ಬಿಟ್ಟಿ ಸವಾರರ ಕುರಿತು ಈ ನಿರ್ದೇಶಕರು ಯುವಕನಾಗಿದ್ದಾಗ ಕೇಳಿದ ನೆನಪಿನಿಂದ ಸ್ಫೂರ್ತಿ ಪಡೆದಿದೆ.
- ಪೀ-ವೀ'ಸ್ ಬಿಗ್ ಅಡ್ವೆಂಚರ್ ಎಂಬ ೧೯೮೫ರ ಸಿನಿಮಾ "ಫ್ಯಾಂಟಮ್ ೩೦೯"ನ ಭಿನ್ನ ಸನ್ನಿವೇಶವೊಂದನ್ನು ಒಳಗೊಂಡಿದೆ. ಆತ ಯಾರೋ ಕದ್ದೊಯ್ದ ತನ್ನ ಸೈಕಲ್ ಹುಡುಕುತ್ತ, ಹೀಗೆ ಬಿಟ್ಟಿ ಸವಾರಿ ಕೇಳುತ್ತ ಅಲೆಯುತ್ತಿರುವಾಗ, ಪೀ ವೀ (ಪಾಲ್ ರುಬೆನ್ಸ್ ) ಟ್ರಕ್ ಚಲಾಯಿಸುತ್ತಿದ್ದ ಮಹಿಳೆಯೊಬ್ಬಳಿಗೆ ಹೆಬ್ಬೆರಳು ಎತ್ತಿ ತನ್ನನ್ನು ಕರೆದೊಯ್ಯುವಂತೆ ಕೇಳುತ್ತಾನೆ. ಆಕೆಯ ಹೆಸರು "ಲಾರ್ಜ್ ಮಾರ್ಗ್", "ನಾನು ನೋಡಿದ ಅತಿ ಕೆಟ್ಟ ಅಪಘಾತ" ಎಂದು ಆ ಕತೆಯನ್ನು ಅವಳು ಅವನಿಗೆ ಸಂಬಂಧವಿದೆ ಹೇಳುತ್ತಾಳೆ. ಲಾರ್ಜ್ ಮಾರ್ಗ್ ಕಳುಹಿಸಿದ ಟ್ರಕ್ ನಿಲ್ದಾಣದಲ್ಲಿ ಪೀ ವೀ ಇಳಿದಾಗ, ಅಲ್ಲಿದ್ದ ಗ್ರಾಹಕನೊಬ್ಬ ಅಂದು ಆ ಅಪಘಾತ ನಡೆದ ವರ್ಷಾಚರಣೆ ಎಂದು ಹೇಳುತ್ತಾನೆ. ಲಾರ್ಜ್ ಮಾರ್ಗ್‌ಳಿಗೇ ಆ ಅಪಘಾತ ಆಗಿತ್ತು ಎಂದು ಅವರು ವಿವರಿಸುತ್ತಾರೆ.
- ಮರ್ಸಿಡಿಸ್ ಲ್ಯಾಕಿ ಮತ್ತು ಲೆಸ್ಲೀ ಫಿಶ್ ಅವರ ಸಮಕಾಲೀನ, ಜಾನಪದ ಶೈಲಿಯ ಹಾಡು, "ಫೆರ್ರಿಮ್ಯಾನ್" ತಿರುವು ಮುರುವು ಆದ ಈ ಕತೆಯ ಇನ್ನೊಂದು ಆವೃತ್ತಿಯನ್ನು ಬಿಚ್ಚಿಡುತ್ತದೆ. ಇಲ್ಲಿ ಒಬ್ಬಳು ಯುವತಿಯು ಜೋರಾಗಿ ಬೀಸುತ್ತಿದ್ದ ಬಿರುಗಾಳಿಯಲ್ಲಿ ನದಿಯೊಂದನ್ನು ದಾಟಲು ಪ್ರಯತ್ನಿಸುತ್ತಿರುತ್ತಾಳೆ ಮತ್ತು ಅಂಬಿಗನೊಬ್ಬ ಅವಳಿಂದ ದುಡ್ಡು ತೆಗೆದುಕೊಳ್ಳದೆಯೇ ನದಿ ದಾಟಿಸಲು ಒಪ್ಪುತ್ತಾನೆ. ಅವನ ಧ್ವನಿಯಲ್ಲಿ ಸ್ವಲ್ಪ ಆಧ್ಯಾತ್ಮಿಕ ಲಕ್ಷಣವಿದ್ದಂತೆ ಹುಡುಗಿಗೆ ಅನ್ನಿಸುತ್ತದೆ, ಕೊನೆಯಲ್ಲಿ ಅಂಬಿಗ ತನ್ನ ದೆವ್ವದ ರೂಪವನ್ನು ಪ್ರಕಟಿಸುತ್ತಾನೆ. ಈ ಆವೃತ್ತಿಯಲ್ಲಿ ಒಂದು ವಸ್ತ್ರವೂ ಸೇರಿದೆ, ಅದೆಂದರೆ ಆ ಹುಡುಗಿಯ ಶಾಲು, ಅದನ್ನು ಅವಳು ದೋಣಿಯ ಅಂಚಿನಲ್ಲಿ ಗುರುತಿಗಾಗಿ ಇಟ್ಟಿದ್ದು, ಅದು ಮರುದಿನ ಬೆಳಗ್ಗೆ ಆ ಅಂಬಿಗನ ಗೋರಿಯ ಮೇಲೆ ಕಾಣಿಸುತ್ತದೆ.
- ೧೯೬೦ರ ಜನಪ್ರಿಯ ಬಾಲಿವುಡ್ ಭಯಾನಕ ಸಿನಿಮಾ , ಬೀಸ್ ಸಾಲ್ ಬಾದ್ ನಲ್ಲಿ ನಾಯಕ ಒಬ್ಬಳು ಸುಂದರ ಯುವತಿಗೆ ಬಿರುಗಾಳಿ ಮಳೆಯ ರಾತ್ರಿ ಲಿಫ್ಟ್ ಕೊಡುತ್ತಾನೆ. ಅವಳ ವರ್ತನೆಯು ತುಂಬ ನಿಗೂಢವಾಗಿರುತ್ತದೆ ಮತ್ತು ಪ್ರಶ್ನೆಗಳಿಗೆ ಗೊಂದಲಮಯವಾಗಿ ಉತ್ತರಿಸುತ್ತಾಳೆ. ಒಂದು ಗೇಟ್ ಬಳಿ ಬಿಡುವಂತೆ ಅವಳು ಹೇಳುತ್ತಾಳೆ. "ಆದರೆ ಅದೊಂದು ಶ್ಮಶಾನವಲ್ಲವೇ!" ಎಂದು ಅವನು
ಹೇಳುತ್ತಾನೆ. ಅವಳು ಅವನತ್ತ ನೋಡುತ್ತಾಳೆ, ನಿಗೂಢವಾಗಿ ನಗುತ್ತಾಳೆ ಮತ್ತು ಕಾರಿನಿಂದಿಳಿದು ಶ್ಮಶಾನದತ್ತ ನಡೆದುಹೋಗುತ್ತಾಳೆ. ಹತ್ತಿರ ಬರುತ್ತಿರುವಂತೆ ಗೇಟು ಅವಳಿಗೆ ತಾನಾಗಿಯೇ ತೆರೆದುಕೊಳ್ಳುತ್ತದೆ.
- ೧೯೪೨ರಲ್ಲಿ, ರೇಡಿಯೋ ನಾಟಕ ಕಾರ್ಯಕ್ರಮ ಸಸ್ಪೆನ್ಸ್ ನಲ್ಲಿ ಲ್ಯುಸಿಲ್ಲೆ ಫ್ಲೆಚರ್ನ ನಾಟಕ ದಿ ಹಿಚ್ ಹೈಕರ್ ಪ್ರಸಾರವಾಯಿತು, ಅದರಲ್ಲಿ ಓರ್ಸನ್ ವೆಲ್ಸ್ ಧ್ವನಿ ನೀಡಿದ್ದ. Tಈ ನಾಟಕದಲ್ಲಿ ಚಾಲಕ ದೆವ್ವವಿರುತ್ತಾನೆ ಮತ್ತು ಒಬ್ಬ ಬಿಟ್ಟಿ ಸಾವರಿಗ (ಶೀರ್ಷಿಕೆ ಪಾತ್ರವಲ್ಲ) ಬದುಕಿರುತ್ತಾನೆ ಎಂಬ ಕಟ್ಟುಕತೆಯ ಇನ್ನೊಂದು ಆವೃತ್ತಿಯನ್ನು ಒಳಗೊಂಡಿತ್ತು. ಒಬ್ಬ ಮನುಷ್ಯ (ಅಥವಾ ಬೇರೆ ಆವೃತ್ತಿಗಳಲ್ಲಿ ಮಹಿಳೆ) ಕಾರು ಅಪಘಾತವೊಂದರಲ್ಲಿ ಭಾಗಿಯಾಗಿರುತ್ತಾರೆ. ಅದು ಮೊದಲು ಟೈರ್ ಪಂಕ್ಚರ್ ಆದ ಹಾಗೆ ಕಂಡಿರುತ್ತದೆ. ದಿ ಟ್ವಿಲೈಟ್ ಜೋನ್ ನ "ದಿ ಹಿಚ್ ಹೈಕರ್ " ಎಂಬ ಧಾರಾವಾಹಿ ಸೂಪರ್‌ನ್ಯಾಚುರಲ್ ಟಿವಿ ಸರಣಿಯ "ರೋಡ್‌ಕಿಲ್" ಧಾರಾವಾಹಿ, ಈ ಎರಡೂ ಈ ಭಿನ್ನ ಆವೃತ್ತಿಯ ಕತೆಯನ್ನು ಹೊಂದಿದ್ದ ಗಮನಾರ್ಹ ಟಿವಿ ಅವತರಣಿಕೆಗಳಾಗಿದ್ದವು.
ಇವನ್ನೂ ಗಮನಿಸಿ
[ಬದಲಾಯಿಸಿ]- ಹಾಂಟೆಡ್ ರೋಡ್
- ಬೆಲ್ಚನ್ ಟನ್ನೆಲ್ (ಬೆಲ್ಚನ್ ಟನ್ನೆಲ್‌ನ "ವೈಟ್ ವುಮನ್", ಸ್ವಿಟ್ಜರ್‌ಲ್ಯಾಂಡ್ )
- ಮೇರಿಯ ಪುನರುತ್ಥಾನ
- ಜಾನ್ ಕೀಲ್
- ಹೈವೇ ಹಿಪ್ನಾಸಿಸ್ (ಹೆದ್ದಾರಿಯಲ್ಲಿ ವಶೀಕರಣ)
- ಶಾಪ (ಕರ್ಸ್)
- ಮಿಡ್‌ನೈಟ್ ಬ್ಯೂಟಿ
- ದಿ ಹಿಚರ್ (೧೯೮೬ ರ ಸಿನಿಮಾ)
- ದಿ ಹಿಚ್‌ಹೈಕರ್ (೧೯೫೩ರ ಸಿನಿಮಾ)
- ಶಿಪ್ಲೆ ಹ್ಯಾಲೋ ರೋಡ್
ಉಲ್ಲೇಖಗಳು
[ಬದಲಾಯಿಸಿ]- ↑ ವೆಚ್ನರ್, ಬರ್ನ್ಡ್ "ಹಿಚ್-ಹೈಕಿಂಗ್ ಇನ್ ದಿ ಬೈಬಲ್ ". ೧೨-೩೦ರಂದು ಮರುಸಂಪಾದಿಸಲಾಗಿದೆ.
ಪುಸ್ತಕಗಳು
[ಬದಲಾಯಿಸಿ]- ಬೀಲ್ಸ್ಕಿ, ಉರ್ಸುಲಾ, (೧೯೯೭) "ರೋಡ್ ಟ್ರಿಪ್ಪಿಂಗ್" ಚಿಕಾಗೋ ಹಾಂಟ್ಸ್: ಘೋಸ್ಟ್‌ಲೋರ್ ಆಫ್ ದಿ ವಿಂಡಿ ಸಿಟಿ ಯಿಂದ, (ಚಿಕಾಗೋ : ಲೇಕ್ ಕ್ಲೇರ್‌ಮಾಂಟ್ ಪ್ರೆಸ್, ೧೯೯೭).
- ಬ್ರುನ್‌ವಾಂಡ್, ಜಾನ್ ಹೆರಾಲ್ಡ್, (೧೯೮೧), ದಿ ವ್ಯಾನಿಶಿಂಗ್ ಹಿಚ್‌ಹೈಕರ್ (ಐಎಸ್‌ಬಿಎನ್ ೦-೩೯೩-೯೫೧೬೯-೩)
- ಗಾಸ್, ಮೈಕೇಲ್ (೧೯೮೪), ದಿ ಎವಿಡೆನ್ಸ್ ಫಾರ್ ಫ್ಯಾಂಟಮ್ ಹಿಚ್‌ಹೈಕರ್ಸ್ (ಐಎಸ್‌ಬಿಎನ್ ೦-೮೫೦೩೦-೩೭೬-೧)