ವಿಷಯಕ್ಕೆ ಹೋಗು

ಅದಲಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅದಲಜ್
અડાલજ
city
ದೇಶ ಭಾರತ
ರಾಜ್ಯಗುಜರಾತ್
ಜಿಲ್ಲೆಗಾಂಧಿನಗರ
Elevation
೬೮ m (೨೨೩ ft)
Population
 (2001)
 • Total೯,೭೭೪
Languages
 • OfficialGujarati, ಹಿಂದಿ
Time zoneUTC+5:30 (IST)
ಅದಲಜ್‍ನ ಮೆಟ್ಟಿಲು ಬಾವಿ
ಅದಲಜ್‍ನ ಮೆಟ್ಟಿಲು ಬಾವಿ -ಮುಖ್ಯ ದ್ವಾರದಿಂದ

ಅದಲಜ್ ಇದು ಗುಜರಾತಿನಲ್ಲಿದ್ದು ಇಲ್ಲಿ ಪ್ರಸಿದ್ಧ ಮೆಟ್ಟಿಲು ಬಾವಿ ಇದೆ.

ಭೌಗೋಳಿಕ

[ಬದಲಾಯಿಸಿ]

ಅದಲಜ್ 23°10′N 72°35′E / 23.17°N 72.58°E / 23.17; 72.58.[] ಅಕ್ಷಾಂಶ,ರೇಖಾಂಶದಲ್ಲಿದ್ದು ಸಮುದ್ರ ಮಟ್ಟದಿಂದ ಸರಾಸರಿ 68 metres (223 feet) ಎತ್ತರದಲ್ಲಿದೆ.

ಮೆಟ್ಟಿಲು ಬಾವಿ

[ಬದಲಾಯಿಸಿ]

ಅದಲಜ್ ಮೆಟ್ಟಿಲು ಬಾವಿ ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದ್ದು, ಗುಜರಾತ್‍ನ ರಾಜಧಾನಿ ಗಾಂಧಿನಗರದಿಂದ ಸುಮಾರು ೧೮ ಕಿ.ಮೀ ದೂರದಲ್ಲಿದೆ.ಇದನ್ನು ೧೪೯೯ರಲ್ಲಿ ರಾಣಿ ರೂಡಾಬಾಯಿ ಕಟ್ಟಿಸಿದಳು.ಇದು ಸುಂದರವಾಗಿ ನಿರ್ಮಿಸಲ್ಪಟ್ಟಿದ್ದು, ನವಿರಾದ ಕೆತ್ತನೆಯಿಂದ ಕೂಡಿ ಹಲವಾರು ಮಹಡಿಗಳನ್ನು ಹೊಂದಿದೆ.ಗೋಡೆ ಮತ್ತು ಕಂಬಗಳಲ್ಲಿ ಎಲೆಗಳು,ಹೂವು,ಹಕ್ಕಿ,ಮೀನು ಮುಂತಾದ ಜೀವಿಗಳ ಹಾಗೂ ಇತರ ಸುಂದರ ಕೆತ್ತನೆಗಳಿವೆ.ಹಿಂದಿನ ಕಾಲದಲ್ಲಿ ಈ ಬಾವಿ ಹಲವಾರು ಯಾತ್ರಿಕರು ಮತ್ತು ವ್ಯಾಪಾರಿಗಳಿಂದ ದಾರಿಗುಂಟ ವಿಶ್ರಾಂತಿ ತಾಣವಾಗಿ ಉಪಯೋಗಿಸಲ್ಪಡುತ್ತಿತ್ತು.ಇದರಲ್ಲಿ ಐದು ಮಾಳಿಗೆಗಳಿದ್ದು, ಮೂರು ದ್ವಾರಗಳಿವೆ.ಮೆಟ್ಟಿಲುಗಳ ಎರಡೂ ಬದಿ ಸುಂದರ ಕೆತ್ತನೆಯ ಬಿಸಿಲು ಮಾಳಿಗೆಗಳಿವೆ.ಆನೆಗಳ ಸಾಲುಗಳು ವಿವಿಧ ಎತ್ತರಗಳನ್ನು ಸೂಚಿಸುತ್ತಿದ್ದು, ಒಟ್ಟು ಅಂದಕ್ಕೆ ವಿಶೇಷ ಮೆರಗನ್ನು ಕೊಟ್ಟಿವೆ.

ಉಲ್ಲೇಖಗಳು

[ಬದಲಾಯಿಸಿ]
"https://kn.wikipedia.org/w/index.php?title=ಅದಲಜ್&oldid=1019382" ಇಂದ ಪಡೆಯಲ್ಪಟ್ಟಿದೆ