ಅಣಶಿ ಜಲಪಾತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಲಪಾತದ ಒಂದು ನೋಟ

ಅಣಶಿ ಜಲಪಾತವು ಅಣಶಿ ರಾಷ್ಟ್ರೀಯ ಉದ್ಯಾನವನದಲ್ಲಿ ಇರುವ ಒಂದು ಜಲಪಾತ. ಈ ಜಲಪಾತವು ಸುಮಾರು ೧೫೦ ಅಡಿಗಳಿಗಿಂತಲೂ ಎತ್ತರದಿಂದ ಧುಮುಕುತ್ತದೆ. ಇದು ಕಾರವಾರ-ದಾಂಡೇಲಿ ಹೆದ್ದಾರಿಯಲ್ಲಿ ಕಾರವಾರದಿಂದ ಸುಮಾರು ೩೨ ಕಿ.ಮೀ ದೂರದಲ್ಲಿ ರಸ್ತೆ ಬದಿಯಲ್ಲಿ ಇದೆ. ಇದು ಒಂದು ಮಳೆಗಾಲದ ಜಲಪಾತವಾಗಿದೆ.ಈ ಜಲಪಾತವು ಪ್ರತಿ ವರ್ಷ ನೋಡಲು ಕಾಣಸಿಗುತ್ತದೆ.ಇದು ಕದ್ರಾ ಅಣೆಕಟ್ಟೆಯಿಂದ ಸುಮಾರು ೮ ಕಿ.ಮೀ. ದೂರದಲ್ಲಿದೆ.