ಅಡಾಲ್ಫ್ ವಿಲ್‌ಹೆಲ್ಮ್ ಹೆರ್ಮನ್ ಕೊಲ್ಬೆ

ವಿಕಿಪೀಡಿಯ ಇಂದ
Jump to navigation Jump to search
ಅಡಾಲ್ಫ್ ವಿಲ್‌ಹೆಲ್ಮ್ ಹೆರ್ಮನ್ ಕೊಲ್ಬೆ
Hermann Kolbe2.jpg
ಅಡಾಲ್ಫ್ ವಿಲ್‌ಹೆಲ್ಮ್ ಹೆರ್ಮನ್ ಕೊಲ್ಬೆ
ಹುಟ್ಟು
ಅಡಾಲ್ಫ್ ವಿಲ್‌ಹೆಲ್ಮ್

೨೭ ಸೆಪ್ಟೆಂಬರ್ ೧೮೧೮
ಜರ್ಮನಿ
ರಾಷ್ಟ್ರೀಯತೆಜರ್ಮನಿ

ಜರ್ಮನಿಯ ಜೈವಿಕ ರಸಾಯನವಿಜ್ಞಾನಿಯಾಗಿದ್ದ ಅಡಾಲ್ಫ್ ವಿಲ್‌ಹೆಲ್ಮ್ ಹೆರ್ಮನ್ ಕೊಲ್ಬೆಯವರು ೧೮೧೮ರ ಸೆಪ್ಟೆಂಬರ್ ೨೭ರಂದು ಗೊಟಿಂಗ್‌ಟನ್ ಹತ್ತಿರದ ಎಲ್ಲಿಶೌಸೆನ್ ಪ್ರದೇಶದಲ್ಲಿ ಜನಿಸಿದರು.[೧] ಕೊಲ್ಬೆಯವರು ದ್ವಿತೀಯಕ ಮತ್ತು ತೃತೀಯಕ ಅಲ್ಕೊಹಾಲ್‌ಗಳ ಅಸ್ತಿತ್ವವನ್ನು ಗುರುತಿಸಿದರು. ಮೇದಸ್ಸು-ಆಮ್ಲಗಳ (fatty acids) ವಿದ್ಯುದ್ವಿಭಜನೆ ಮತ್ತು ಫಿನಾಲ್‌ನಿಂದ (phenol) ಸ್ಯಾಲಿಸಿಲಿಕ್ ಆಮ್ಲಗಳ (salicyclic acid) ತಯಾರಿಕೆ ಕೊಲ್ಬೆಯವರ ಪ್ರಮುಖವಾದ ಪ್ರಾಯೋಗಿಕ ಕೆಲಸಗಳಾಗಿವೆ. ಅವರು ಉಪಯೋಗಿಸಿದ ತಂತ್ರಕ್ಕೆ ‘ಕೊಲ್ಬೆ ಪರಿಣಾಮ’ ಎನ್ನಲಾಗಿದೆ. ಅದು ಮುಂದೆ ಜನಪ್ರಿಯ ಔಷಧವಾದ ‘ಆಸ್ಪಿರಿನ್’ ತಯಾರಿಕೆಗೆ ಮತ್ತು ಕೊಲ್ಬೆಯವರು ತಯಾರಿಸಿದ ನೈಟ್ರೊಮೀಥೇನ್‌ಗೆ ನಾಂದಿಯಾಯಿತು.[೨] ನೈಟ್ರೈಲ್‌ಗಳನ್ನು (nitriles) ಮೇದಸ್ಸು-ಆಮ್ಲಗಳಾಗಿ ಪರಿವರ್ತಿಸುವ ಕೆಲಸವನ್ನು ಕೊಲ್ಬೆಯವರು ಮಾಡಿದರು. ಆಲ್‌ಡಿಹೈಡ್‌ಗಳು ಮತ್ತು ಕೆಟೋನ್‌ಗಳ (ketones) ನಡುವಿನ ಸಂಬಂಧವನ್ನು ಕೊಲ್ಬೆಯವರು ವಿವರಿಸಿದರು. ಹಾಗೆಯೇ ‘ಕಾರ್ಬೊನಿಲ್ ಗುಂಪು’ (carbonyl group) ಎಂಬ ಹೊಸ ಗುಂಪಿನ ಪದಾರ್ಥಗಳನ್ನು ಕಂಡುಹಿಡಿದರು. ಕೊಲ್ಬೆಯವರು ೧೮೮೪ರ ನವೆಂಬರ್ ೨೫ರಂದು ಲೀಪ್‌ಝಿಗ್‌ನಲ್ಲಿ ನಿಧನರಾದರು.

ಉಲೇಖಗಳು[ಬದಲಾಯಿಸಿ]