ಅಡಾಲ್ಫ್ ಫ್ರೈಡ್‌ರಿಕ್ ಯೋಹಾನ್ ಬುಟೆನಾಂಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಡಾಲ್ಫ್ ಫ್ರೈಡ್‌ರಿಕ್ ಯೋಹಾನ್ ಬುಟೆನಾಂಟ್
ಅಡಾಲ್ಫ್ ಫ್ರೈಡ್‌ರಿಕ್ ಯೋಹಾನ್ ಬುಟೆನಾಂಟ್
ಜನನ
ಅಡಾಲ್ಫ್ ಫ್ರೈಡ್‌ರಿಕ್

೨೪ ಮಾರ್ಚ್ ೧೯೦೩
ಜರ್ಮನಿ
ರಾಷ್ಟ್ರೀಯತೆಜರ್ಮನಿ

ಜರ್ಮನಿಯ ಜೀವವಿಜ್ಞಾನಿಯಾಗಿದ್ದ ಅಡಾಲ್ಫ್ ಫ್ರೈಡ್‌ರಿಕ್ ಯೋಹಾನ್ ಬುಟೆನಾಂಟ್‌ರವರು ೧೯೦೩ರ ಮಾರ್ಚ್ ೨೪ರಂದು ಬ್ರೆಮೆರ್‌ಹಾವನ್‌ನಲ್ಲಿ ಜನಿಸಿದರು.[೧] ಬುಟೆನಾಂಟ್‌ರವರು ಸ್ತ್ರೀಯರ ಸಾವಿರಾರು ಲೀಟರ್‌ಗಳಷ್ಟು ಮೂತ್ರದಿಂದ ಲೈಂಗಿಕ ಹಾರ್ಮೋನ್‌ಗಳನ್ನು (sex harmones) ಬೇರ್ಪಡಿಸಿ ಅವುಗಳ ಅಧ್ಯಯನ ನಡೆಸಿದರು. ಅವರು ೧೯೨೯ರಲ್ಲಿ ’ಈಸ್ಟ್ರೋನ್’ (oestrone), ೧೯೩೧ರಲ್ಲಿ ’ಆಂಡ್ರೋಸ್ಟಿರಾನ್’ (androsterone) ಮತ್ತು ೧೯೩೪ರಲ್ಲಿ ’ಪ್ರಾಜಿಸ್ಟಿರಾನ್’ (progesterone) ಮತ್ತು ’ಟೆಸ್ಟೋsಸ್ಟಿರಾನ್’ (testosterone) ಲೈಂಗಿಕ ಹಾರ್ಮೋನ್‌ಗಳನ್ನು ಬೇರ್ಪಡಿಸಿ, ಅವುಗಳಿಗೂ ಸ್ಟೀರಾಯ್ಡ್‌ಗಳಿಗೂ (steroids) ನಡುವಿನ ಸಂಬಂಧವನ್ನು ಗುರುತಿಸಿದರು. ಅವರ ಲೈಂಗಿಕ ಹಾರ್ಮೋನ್‌ಗಳ ಸಂಶೋಧನೆಗಳಿಗೆ ಪೂರಕವಾಗಿ ೧೯೩೯ರ ರಸಾಯನವಿಜ್ಞಾನಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು[೨] (ಯುಗೋಸ್ಲಾವಿಯಾ-ಸ್ವಿಟ್ಝರ್‌ಲೆಂಡಿನ ವಿಜ್ಞಾನಿ ಲಿಯೋಪಾಲ್ಡ್ ರುಜಿಕರವರ ಜೊತೆ) ನೀಡಲಾಯಿತು. ಆದರೆ ಆಗಿನ ಜರ್ಮನಿಯ ರಾಜಕೀಯ ನೀತಿಯ ಪ್ರಕಾರ ಅವರು ಆ ನೊಬೆಲ್ ಪ್ರಶಸ್ತಿಯನ್ನು ತಿರಸ್ಕರಿಸಬೇಕಾಯಿತು. ಆದರೂ ಎರಡನೆಯ ವಿಶ್ವಸಮರ ಮುಗಿದ ನಂತರ ೧೯೪೯ರಲ್ಲಿ ಅವರು ನೊಬೆಲ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಒಂದು ಪ್ರಭೇದದ ರೇಷ್ಮೆ ಹುಳುವಿನ ಮರಿಯನ್ನು (pheromone Bombykol) ಕಂಡುಹಿಡಿದು ಅದಕ್ಕೆ ಹೆಸರಿಟ್ಟ ಹೆಗ್ಗಳಿಕೆಗೂ ಅವರು ಪಾತ್ರವಾಗಿದ್ದಾರೆ. ಬುಟೆನಾಂಟ್‌ರವರು ೧೯೯೫ರ ಜನವರಿ ೧೮ರಂದು ಮ್ಯುನಿಚ್‌ನಲ್ಲಿ ನಿಧನರಾದರು.[೩]

ಉಲ್ಲೇಖಗಳು[ಬದಲಾಯಿಸಿ]