ವಿಷಯಕ್ಕೆ ಹೋಗು

ಅಡವು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಡವು ಎಂದರೆ ಯಾವುದಾದರೂ ಸಾಲಕ್ಕೆ ಅಥವಾ ಬಾಧ್ಯತೆಗೆ ಮರುಪಾವತಿಯನ್ನು ಭದ್ರಪಡಿಸಲು ಸಾಲಪಡೆದವನ ಒಡೆತನದಲ್ಲಿರುವ ಸ್ವತ್ತಿನ ಒಡೆತನದ ಹಕ್ಕನ್ನು ಸಾಲಿಗನಿಗೆ ವರ್ಗಾಯಿಸುವ ಕ್ರಿಯೆ. ಇದು ಎರಡೂ ಪಕ್ಷಗಳ ಪರಸ್ಪರ ಲಾಭಕ್ಕಾಗಿ ಮಾಡಲಾಗುತ್ತದೆ.[][] ಈ ಪದವನ್ನು ಆಧಾರದ ಘಟಕವಾಗಿರುವ ಸ್ವತ್ತನ್ನು ಸೂಚಿಸಲೂ ಬಳಸಲಾಗುತ್ತದೆ. ಅಡವು ಒಂದು ಪ್ರಕಾರದ ಭದ್ರತಾ ಪ್ರಯೋಜನವಾಗಿದೆ.

ಅಡವು ಸಾಮಾನ್ಯವಾಗಿ ಅತ್ಯಂತ ಮೂಲಭೂತ ನ್ಯಾಯವ್ಯವಸ್ಥೆಗಳ ಲಕ್ಷಣವಾಗಿದೆ. ಅಡವು ಗಿರವಿದಾರನ ಸ್ವಾಮ್ಯದಲ್ಲಿರುತ್ತದೆ. ಅಡವು ಪದವು ವೈಯಕ್ತಿಕ ಸ್ವತ್ತು ಮತ್ತು ಸ್ಥಿರಾಸ್ತಿಗೆ ಅನ್ವಯಿಸಬಹುದು.

ಅಡವು ಎರಡೂ ಪಕ್ಷಗಳ ಲಾಭಕ್ಕಾಗಿ ಇರುವ ಕಾರಣ, ಗಿರವಿದಾರನು ಅಡವಿನ ಮೇಲೆ ಕೇವಲ ಸಾಧಾರಣ ಸುಪರ್ದು ಚಲಾಯಿಸಲು ಬದ್ಧವಾಗಿರುತ್ತಾನೆ. ಅಡವಿಡುವವನು ನಿಗದಿತ ಸಮಯಕ್ಕೆ ಪಾವತಿ ಮಾಡಲು ವಿಫಲನಾದರೆ, ಗಿರವಿದಾರನಿಗೆ ಅಡವನ್ನು ಮಾರಾಟಮಾಡುವ ಹಕ್ಕು ಇರುತ್ತದೆ. ಅಡವಿನ ತಪ್ಪು ಮಾರಾಟದಿಂದ ಯಾವುದೇ ಹಕ್ಕು ಸಿಗುವುದಿಲ್ಲ. ಇದಕ್ಕೆ ಒಂದು ಅಪವಾದವೆಂದರೆ ಸ್ವತ್ತನ್ನು ವಿತರಣೆ ಮೂಲಕ ಸಾಗಿಸಿದಾಗ, ಉದಾಹರಣೆಗೆ ಹಣ ಅಥವಾ ವಿನಿಮಯಸಾಧ್ಯ ಭದ್ರತಾ ಪತ್ರಗಳು. ಗಿರವಿದಾರನು ಅಡವನ್ನು ತಪ್ಪಾಗಿ ಮಾರಾಟಮಾಡಿದ ಸಂದರ್ಭದಲ್ಲಿ, ಅಡಿವಿಟ್ಟವನು ಬರಬೇಕಾದ ಮೊತ್ತದ ವಿಧಿಮಾನ್ಯವಿರದೇ ಅಡವಿನ ಮೌಲ್ಯವನ್ನು ಮರಳಿ ಪಡೆಯುವುದು ಸಾಧ್ಯವಿಲ್ಲ.

ಉಲ್ಲೇಖಗಳು

[ಬದಲಾಯಿಸಿ]
  1. Joseph Story, Story on Bailments, 286.
  2. Black, Henry C. (1990). Black's Law Dictionary. St. Paul, Mn.: West Publishing. p. 1153. ISBN 978-0314151995.


"https://kn.wikipedia.org/w/index.php?title=ಅಡವು&oldid=889791" ಇಂದ ಪಡೆಯಲ್ಪಟ್ಟಿದೆ