ಅಟ್ಟೋ ಸ್ಟರ‍್ನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಟ್ಟೋ ಸ್ಟರ‍್ನ್
ಅಟ್ಟೋ ಸ್ಟರ‍್ನ್
ಜನನ
ಅಟ್ಟೋ ಸ್ಟರ‍್ನ್

೧೭ ಫೆಬ್ರವರಿ ೧೮೮೮
ಜರ್ಮನಿ
ರಾಷ್ಟ್ರೀಯತೆಜರ್ಮನಿ

ಜರ್ಮನಿಯಲ್ಲಿ ಹುಟ್ಟಿದ ಮತ್ತು ಅಮೇರಿಕದ ಭೌತವಿಜ್ಞಾನಿಯಾಗಿದ್ದ ಅಟ್ಟೋ ಸ್ಟರ‍್ನ್‌ರವರು ೧೮೮೮ರ ಫೆಬ್ರವರಿ ೧೭ರಂದು ಅಪ್ಪರ್ ಸಿಲೇಸಿಯಾದ ಸೊಹ್ರಾದಲ್ಲಿ (ಈಗ ಪೋಲೆಂಡಿನ ಝೋರಿಯಲ್ಲಿ) ಜನಿಸಿದರು. ಲೂಯಿ ಡುನೋಯರ್‌ರವರು (೧೮೮೦-೧೯೬೩) ೧೯೧೧ರಲ್ಲಿ ‘ಆಣ್ವಿಕ ಧೂಲ ವಿಧಾನ’ವನ್ನೂ (molecular beam method), ಅದಕ್ಕೆ ಸಂಬಂಧಿಸಿದ ಸಾಧನವನ್ನೂ ಕಂಡುಹಿಡಿದಿದ್ದರು. ಆ ಸಾಧನವನ್ನು ಉಪಯೋಗಿಸಿಕೊಂಡ ಸ್ಟರ‍್ನ್‌ರವರು ಡುನೋಯರ್‌ರವರ ಆಣ್ವಿಕ ಧೂಲ ವಿಧಾನವನ್ನು ಪರಿಷ್ಕರಿಸಿದರು. ಅದರ ತಂತ್ರವನ್ನು ಉಪಯೋಗಿಸಿಕೊಂಡ ಸ್ಟರ‍್ನ್‌ರವರಿಗೆ ಧೂಲದಲ್ಲಿರುವ ಕಣಗಳ ತರಂಗ ಸ್ವಭಾವಗಳನ್ನು ಗುರುತಿಸಲು ಅವರಿಗೆ ಸಾಧ್ಯವಾಯಿತು.[೧] ಲೋಹದ ಪರಮಾಣುಗಳ ಕಾಂತ ಮಹತ್ವವನ್ನು (magnetic moment) ಅಳೆಯುವ ಪ್ರಕ್ರಿಯೆಯನ್ನು ಸ್ಟರ‍್ನ್‌ರವರು ಆರಂಭಿಸಿದರು. ಬೆಳ್ಳಿಯ ಪರಮಾಣುವಿನ ಕಾಂತ ಮಹತ್ವವನ್ನು ಕಂಡುಹಿಡಿಯಲು ಅವರು ಸಮೀಕರಣವೊಂದನ್ನು ರೂಪಿಸಿದರು. ಮುಂದೆ ಅವರು ಪ್ರೋಟಾನ್ ಮತ್ತು ಡ್ಯೂಟೆರಾನ್‌ಗಳ ಕಾಂತ ಮಹತ್ವವನ್ನು ೧೯೩೩ರಲ್ಲಿ ಕಂಡುಹಿಡಿದರು. ಸ್ಟರ‍್ನ್‌ರವರು ೧೯೬೯ರ ಆಗಸ್ಟ್ ೧೭ರಂದು ಬಕ್ಲೀಯಲ್ಲಿ ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]