ಅಟ್ಟೋ ಡೀಲ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಟ್ಟೋ ಡೀಲ್ಸ್
ಅಟ್ಟೋ ಡೀಲ್ಸ್
Born
ಅಟ್ಟೋ ಡೀಲ್ಸ್

೨೩ ಜನವರಿ ೧೮೭೬
ಜರ್ಮನಿ
Nationalityಜರ್ಮನಿ

ಜರ್ಮನಿಯ ಜೈವಿಕ ರಸಾಯನವಿಜ್ಞಾನಿಯಾಗಿದ್ದ ಅಟ್ಟೋ ಡೀಲ್ಸ್‌ರವರು ೧೮೭೬ರ ಜನವರಿ ೨೩ರಂದು ಹಾಮ್‌ಬರ್ಗ್‌ನಲ್ಲಿ ಜನಿಸಿದರು.[೧] ಡೀಲ್ಸ್‌ರವರು ಕಾರ್ಬನ್ ಸಬಾಕ್ಸೈಡ್‌ನನ್ನು (carbon suboxide) ೧೯೦೬ರಲ್ಲಿ ಕಂಡುಹಿಡಿದರು. ೧೯೦೭ರಲ್ಲಿ ಜೈವಿಕ ರಸಾಯನವಿಜ್ಞಾನದ ಮೇಲೆ ಪುಸ್ತಕವನ್ನು ಬರೆದರು. ಅವರು ಪಿತ್ರಾಶ್ಮರಿಗಳಿಂದ (gall-stones) ಕೊಲೆಸ್ಟರಾಲ್ ಸಂಯುಕ್ತವಸ್ತುವನ್ನು ಬೇರ್ಪಡಿಸಿದರು. ನಂತರ ಆ ಸಂಯುಕ್ತವಸ್ತುವಿನಿಂದ ‘ಡೀಲ್ಸ್ ಆಮ್ಲ’ವನ್ನು (Diels acid) ಕಂಡುಹಿಡಿದರು. ಕೊಲೆಸ್ಟರಾಲ್‌ನನ್ನು ನಿರ್-ಹೈಡ್ರೋಜನೀಕರಣದ ಪ್ರಕ್ರಿಯೆಗೆ ಒಳಪಡಿಸಿದ ಡೀಲ್ಸ್‌ರವರು ‘ಡೀಲ್ಸ್ ಹೈಡ್ರೋಕಾರ್ಬನ್’ (C18H16) ಉತ್ಪಾದಿಸಿದರು. ೧೯೨೮ರಲ್ಲಿ ಡೀಲ್ಸ್‌ರವರು ತಮ್ಮ ಸಹಾಯಕ ಕುರ್ಟ್ ಅಲ್ಡರ್ರವರ (೧೯೦೨-೧೯೫೮) ಜೊತೆ ಸೇರಿ, ಕಾರ್ಬನ್ ಪರಮಾಣುಗಳ ನಡುವೆ ಎರಡು ಬಂಧಗಳನ್ನೊಳಗೊಂಡ ರಚನೆಯನ್ನೊಳಗೊಂಡ ಜೈವಿಕ ಸಂಯುಕ್ತದ ಸಂಶ್ಲೇಷಣೆಯನ್ನು (diene synthesis) ೧೯೨೮ರಲ್ಲಿ ಯಶಸ್ವಿಯಾಗಿ ನಡೆಸಿದರು. ಅದಕ್ಕೆ ‘ಡೀಲ್ಸ್-ಅಲ್ಡರ್ ಸಂಶ್ಲೇಷಣೆ’ ಎಂಬುದಾಗಿ ಕರೆಯಲಾಗಿದೆ.[೨] ಅವರುಗಳ ಆ ಸಂಶೋಧನೆಗೆ ೧೯೫೦ರ ರಸಾಯನವಿಜ್ಞಾನಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ಜಂಟಿಯಾಗಿ ಇಬ್ಬರಿಗೂ ನೀಡಲಾಯಿತು.[೩] ಡೀಲ್ಸ್‌ರವರು ೧೯೫೪ರ ಮಾರ್ಚ್ ೭ರಂದು ಕೀಲ್‌ನಲ್ಲಿ ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]