ಅಜ್ಮೇರ್ ಶರೀಫ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೋಯಿನುದ್ದೀನ್ ಚಿಶ್ತಿಯ ಪುಣ್ಯಕ್ಷೇತ್ರವು ಭಾರತದ ಅತಿ ಮುಖ್ಯ ಸೂಫಿ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ

ಅಜ್ಮೇರ್ ಶರೀಫ್ ದರ್ಗಾ, ಅಜ್ಮೇರ್ ದರ್ಗಾ, ಅಜ್ಮೇರ್ ಷರೀಫ್ ಅಥವಾ ದರ್ಗಾ ಷರೀಫ್[೧] ಪೂಜ್ಯ ಸೂಫಿ ಸಂತ ಮೊಯಿನುದ್ದೀನ್ ಚಿಶ್ತಿಯ ಸೂಫಿ ದೇಗುಲವಾಗಿದೆ (ದರ್ಗಾ). ಇದು ಭಾರತದ ರಾಜಸ್ಥಾನದ ಅಜ್ಮೇರ್‌‌ನಲ್ಲಿದೆ. ಈ ಪವಿತ್ರಕ್ಷೇತ್ರದಲ್ಲಿ ಚಿಶ್ತಿಯ ಗೋರಿ (ಮಕ್ಬರಾ) ಇದೆ.[೨]

ಮಾರ್ಚ್ 1236 ರಲ್ಲಿ ಈ ಬೋಧಕನ ಮರಣದ ನಂತರದ ಶತಮಾನದಲ್ಲಿ ಮುಯಿನ್ ಅಲ್- ದಿನ್‍ನ ಸಮಾಧಿ (ದರ್ಗಾ) ಬಹಳವಾಗಿ ಪೂಜಿಸಲ್ಪಡುವ ಸ್ಥಳವಾಯಿತು. ಎಲ್ಲ ಸಾಮಾಜಿಕ ವರ್ಗಗಳ ಸದಸ್ಯರಿಂದ ಗೌರವಿಸಲ್ಪಟ್ಟ ಈ ಸಮಾಧಿಯನ್ನು ಈ ಯುಗದ ಪ್ರಮುಖ ಸುನ್ನಿ ಆಡಳಿತಗಾರರು ಬಹಳ ಗೌರವದಿಂದ ಕಂಡರು. ದೆಹಲಿಯ ಸುಲ್ತಾನ್ - ಸುಲ್ತಾನ್ ಅಲ್ತಮಷ್ 1332 ರಲ್ಲಿ ಸಂತನ ಸ್ಮರಣಾರ್ಥ ನೆನಪಿಸಿಕೊಳ್ಳೌ ಸಮಾಧಿಗೆ ಪ್ರಸಿದ್ಧ ಭೇಟಿ ನೀಡಿದನು. ಇದೇ ರೀತಿಯಲ್ಲಿ, ನಂತರದ ಮೊಘಲ್ ಸಾಮ್ರಾಟ ಅಕ್ಬರ್ (ಮರಣ: 1605) ತನ್ನ ಆಳ್ವಿಕೆಯಲ್ಲಿ ಹದಿನಾಲ್ಕು ಬಾರಿ ಈ ಪುಣ್ಯಕ್ಷೇತ್ರಕ್ಕೆ ಭೇಟಿನೀಡಿದನು. ಅವನು 1579 ರಲ್ಲಿ ಗೋರಿ (ದರ್ಗಾ) ಯ ಮುಖ್ಯಕೋಣೆಯನ್ನು ಪುನರ್ನಿರ್ಮಿಸಿದನು. ಜಹಾಂಗೀರ್, ಷಹಜಹಾನ್ ಮತ್ತು ಜಹಾನಾರಾ ನಂತರ ರಚನೆಯನ್ನು ನವೀಕರಿಸಿದರು.

ಛಾಯಾಂಕಣ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Barack Obama offers 'chadar' at Ajmer Dargah Sharif for Chishty's 803rd Urs". DNA India. 19 April 2015.
  2. "797th Urs of Khawaja Moinuddin Chisty begins in Ajmer". Sify. Archived from the original on 1 October 2012. Retrieved 18 February 2012.

ಗ್ರಂಥಸೂಚಿ[ಬದಲಾಯಿಸಿ]

ಹೆಚ್ಚಿನ ಓದಿಗೆ[ಬದಲಾಯಿಸಿ]

ಹೊರಗಿನ ಕೊಂಡಿಗಳು[ಬದಲಾಯಿಸಿ]