ವಿಷಯಕ್ಕೆ ಹೋಗು

ಅಚ್ಚನ್ಕಲ್ಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಚ್ಚನ್ಕಲ್ಲು

ಆಡಲು ಬೇಕಾದ ವಸ್ತುಗಳು- 5 ಸಣ್ಣ ಕಲ್ಲುಗಳು

ಆಟದ ವಿವರಣೆ-

ಎರಡು ಹಾಗೂ ಅದಕ್ಕಿಂತ ಹೆಚ್ಚಿನ ಆಟಗಾರರು ಈ ಆಟವಾಡಲು ಬೇಕು.ಎಲ್ಲೆಂದರಲ್ಲಿ ಸಿಗುವ ಕಲ್ಲುಗಳನ್ನುಪಯೋಗಿಸಿ ಆಡುವ ಈ ಆಟ ಮಕ್ಕಳ ಕಣ್ಣು ಹಾಗು ಕೈಯ ಹೊಂದಾಣಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.ಯಾವಾಗಲೂ, ಎಲ್ಲಿ ಬೇಕಾದರೂ, ಎಲ್ಲರೂ ಆಡಬಹುದಾದ ಆಟವಾಗಿದೆ ಅಚ್ಚನ್ಕಲ್ಲು.

ಆಡುವ ವಿಧಾನ-

·        ಆಟಗಾರನು ಮೊದಲು ಐದೂ ಕಲ್ಲುಗಳನ್ನು ನೆಲದಲ್ಲಿ ಉರುಳಿಸಬೇಕು.

·        ನಂತರ ಅದರಿಂದ ಒಂದು ಕಲ್ಲನ್ನು ಆರಿಸಿ, ಮೇಲಕ್ಕೆಸೆದು ನೆಲದ ಮೇಲಿನ ಕಲ್ಲುಗಳನ್ನು ಒಂದೊಂದಾಗಿ ತೆಗೆದುಕೊಂಡು ಮೇಲಕ್ಕೆಸೆದ ಕಲ್ಲನ್ನು ಹಿಡಿಯಬೇಕು.

·        ನಂತರ ಒಂದು ಕಲ್ಲನ್ನೆಸೆದು ಎರಡು,ನಂತರ ಮೂರು,ಹಾಗು 4 ಕಲ್ಲುಗಳನ್ನು ತೆಗೆದು ಮಏಲಕ್ಕೆಸೆದ ಕಲ್ಲನ್ನು ಹಿಡಿಯಬೇಕು.

·        ಹೀಗೆ ಒಬ್ಬರ ನಂತರ ಒಬ್ಬರು ಆಟವನ್ನು ಮುಂದುವರಿಸುತ್ತಾರೆ.

·        ಆಟದ ಮಧ್ಯದಲ್ಲಿ ಮೇಲಕ್ಕೆಸೆದ ಕಲ್ಲು ಕೆಳಗಡೆ ಬಿದ್ದಲ್ಲಿ,ನೆಲದಲ್ಲಿನ ಕಲ್ಲುಗಳನ್ನು ಸರಿಯಾಗಿ ಹೆಕ್ಕದಿದ್ದರೆ ಆಟ ಮುಂದಿನ ಆಟಗಾರನಿಗೆ , ಹಾಗೂ ಮುಂದಿನ ಸುತ್ತಿನಲ್ಲಿ ಆಟಗಾರ ಶುರುವಿನಿಂದ ಆಡಬೇಕಾಗುತ್ತದೆ.

ಮಾಹಿತಿ ಸಂಗ್ರಹಣೆ – ಕುಮಾರ್ ಎಮ್

                      ಆಲಂಬ ಮಾಲೂರು

ಅಚ್ಚನ್ಕಲ್ಲು ಆಟದ ವಿಡಿಯೊ ಯೂ ಟ್ಯೂಬ್ ಕೊಂಡಿ ಈ ಕೆಳಗಿನಂತಿದೆ

https://youtu.be/V70P0ydBCck