ಅಗ್ರಿಪ
ಗೋಚರ
ಮಾರ್ಕಸ್ ವಿಸ್ಪಾನಿಯಸ್ ಅಗ್ರಿಪ | |||||||||||
---|---|---|---|---|---|---|---|---|---|---|---|
Born | c. 63 BC | ||||||||||
Died | 12 BC (aged 50–51) | ||||||||||
Resting place | Mausoleum of Augustus | ||||||||||
Nationality | Roman | ||||||||||
Occupation(s) | Military commander, politician | ||||||||||
Notable work | Pantheon (original) | ||||||||||
Office | Consul (37, 28–27 BC) | ||||||||||
Spouses | |||||||||||
Children | |||||||||||
Family | gens Vipsania | ||||||||||
|
ಅಗ್ರಿಪ(ಸು. ಕ್ರಿ.ಪೂ. ೬೩-೧೨) ರೋಮನ್ ಸೇನಾಪತಿ ಮತ್ತು ಸಮರ್ಥ ರಾಜ್ಯ ನೀತಿನಿಪುಣನಾದ ಇವನು ಆಕ್ಟೇವಿಯಸ್ (ಅಗಸ್ಟಸ್) ರೋಮನ್ ಚಕ್ರವರ್ತಿಯಾಗಲು ಸಹಾಯ ಮಾಡಿದ. ಗಾಲ್‍ನಲ್ಲಿ (ಈಗಿನ ಫ್ರಾನ್ಸ್) ಸೇನಾಪತಿಯಾಗಿದ್ದ. ಶತ್ರುಗಳ ಹಾವಳಿಯನ್ನು ಅಡಗಿಸಿ ಅನಂತರ ಕ್ರಿ.ಪೂ. ೩೭ರಲ್ಲಿ ಕಾನ್ಸಲ್ ಪದವಿಗೇರಿದ. ರೋಮನ್ ಚಕ್ರಾಧಿಪತ್ಯದ ನೌಕಾಬಲವನ್ನು ಬೆಳೆಸಿದ. ಮೈಲೆ ಮತ್ತು ನೌಲೋಕಸ್ ನೌಕಾಕದನಗಳಲ್ಲಿ (ಕ್ರಿ.ಪೂ. ೩೬) ಸಮರ್ಥನಾದ ಸೆಕ್ಸ್‍ಟಸ್ ಪಾಂಪೇಯಸ್ ಸೋತದ್ದು ಇವನ ಮುನ್ನೆಚ್ಚರಿಕೆಯ ಪರಿಣಾಮವಾಗಿ. ಕ್ರಿ.ಪೂ. ೩೧ರಲ್ಲಿ ಮಾರ್ಕ್ ಆಂಟೋನಿ ನಿರ್ಣಾಯಕ ಆಕ್ಟಿಯಂ ನೌಕಾಕದನದಲ್ಲಿ ಸೋತದ್ದೂ ಇವನು ಆಕ್ಟೇವಿಯಸ್‍ಗೆ ನೀಡಿದ ನೆರವಿನಿಂದ. ಅಗಸ್ಟಸ್ ಎಂಬ ಹೆಸರಿನಿಂದ ಆಕ್ಟೇವಿಯಸ್ ಚಕ್ರವರ್ತಿಯಾದ ಮೇಲೆ ಸಾಮ್ರಾಜ್ಯದ ನಾನಾಕಡೆಗಳಲ್ಲಿ ತಿರುಗಿ ಅಗ್ರಿಪ ವಿರೋಧಿಗಳನ್ನು ಅಡಗಿಸಿದ. ಇವನು ವಾಸ್ತುಶಿಲ್ಪದಲ್ಲೂ ನಿಪುಣ. ಪ್ಯಾಂಥಿಯಾನ್ ಎಂಬ ಭವ್ಯವಾದ ದೇವಾಲಯವನ್ನು ಕಟ್ಟಿಸಿದವನು ಈತನೇ.
ಉಲ್ಲೇಖಗಳು
[ಬದಲಾಯಿಸಿ]