ಅಗ್ನಿ ಕ್ಷಿಪಣಿ
ಈ ಲೇಖನವನ್ನು ವಿಕಿಪೀಡಿಯದ ಗುಣಮಟ್ಟ ಮಾನದಂಡಗಳಿಗೆ ಸರಿಹೊಂದುವಂತೆ ಚೊಕ್ಕಗೊಳಿಸಬೇಕಿದೆ. ಇದರಲ್ಲಿನ ನಿರ್ದಿಷ್ಟ ದೋಷ ಇಂತಿದೆ: ಭಾಷೆ ಸರಿಪಡಿಸಬೇಕು, ಕೊಂಡಿಗಳನ್ನು ಸರಿಪಡಿಸಬೇಕು, ವಿಕೀಕರಣ ಸರಿಪಡಿಸಬೇಕು. |
ಅಗ್ನಿ ಕ್ಷಿಪಣಿಗಳು ಭಾರತದ ಬ್ಯಾಲಿಸ್ಟಿಕ್ ಕ್ಷಿಪಣಿಗಳು.ಇವು ಧೀರ್ಘ ವ್ಯಾಪ್ತಿಯ ಪರಮಾಣು ಕ್ಷಿಪಣಿ.
ಅಗ್ನಿ-೧ ಕ್ಷಿಪಣಿ ಅಗ್ನಿಕ್ಷಿಪಣಿಗಳ ಸರಣಿಯಲ್ಲಿ ಮೊದಲೆನೆಯದು.ಅಗ್ನಿ-೧ ಎರಡು ಹಂತಗಳಲ್ಲಿ ಹಾರುತ್ತದೆ.ಇದು ಘನ ಇಂಧನವನ್ನು ಬಳಸುತ್ತದೆ. ಇದು ಒಂದು ಸಾವಿರಾ ಕೆ.ಜೆ ತೂಕದ ಪರಮಾಣು ಶಸ್ತ್ರವನ್ನು ಸಾಗಿಸುವಾ ಸಾಮರ್ಥ್ಯವಿದೆ.ಅಗ್ನಿ-೧ಕ್ಕೆ ಒಟ್ಟು ೭೦೦ ಕಿ.ಮೀ ದೂರ ಹಾರುವಾ ಸಾಮರ್ಥ್ಯವಿದೆ.ಅಗ್ನಿ-೧ಕ್ಷಿಪಣಿ ಜನವರಿ ೨೦೦೨ರಲ್ಲಿ ಪ್ರಯೋಗ ಮಾಡಲಾಯಿತು. ಅಗ್ನಿ-೧ ೧೨ ಟನ್ ತೂಕವಿದೆ. ಇದು ೧೫ ಮೀಟರ್ ಉದ್ದವಿದೆ.ಅಗ್ನಿ-೧ ನ್ನು ಭಾರತೀಯ ಸೇನೆ ಪಡೆ ಬಳಸುತ್ತದೆ.
ಅಗ್ನಿ-೨
[ಬದಲಾಯಿಸಿ]ಅಗ್ನಿ-೨ ಕ್ಷಿಪಣಿ ಅಗ್ನಿ ಕ್ಷಿಪಣಿಗಳ ಸರಣಿಯಲ್ಲಿ ಎರಡನೆಯದು.ಇದು ೨೦೦೦-೨೫೦೦ ಕಿ.ಮೀ ಹಾರುತ್ತದೆ.ಇದು ೨೦ ಮೀಟರ್ ಉದ್ದವಾಗಿದೆ.ಇದರ ವ್ಯಾಸ ೧ ಮೀಟರ್ ಹಾಗು ಇದು ೧೮ ಟನ್ ತೂಕವಿದೆ.ಅಗ್ನಿ-೨ ಎರಡು ಹಂತಗಳಲ್ಲಿ ಹಾರುತ್ತದೆ.ಇದು ಘನ ಇಂಧನವನ್ನು ಬಳಸುತ್ತದೆ.ಇದು ಪರಮಾಣು ಶಸ್ತ್ರವನ್ನು ಹಿಡಿದು ೨೦೦೦ ಕಿ.ಮೀ ದೂರ ಹಾರುವಾ ಸಾಮರ್ಥ್ಯವಿದೆ.ಭಾರತ ದೇಶ ಅಗ್ನಿ-೨ ರನ್ನು ೯ ಆಗಸ್ಟ್ ೨೦೧೨ ಟೆಸ್ಟ್ ಮಾಡಲಾಯಿತು.ಇದು ಒಡಿಶಾ ಪರೀಕ್ಷಾ ನೆಲದ ವ್ಯಾಪ್ತಿಯಲ್ಲಿ ಪರೀಕ್ಷಿಸಲಾಯಿತು.
ಅಗ್ನಿ-೩
[ಬದಲಾಯಿಸಿ]ಅಗ್ನಿ-೩ಕ್ಷಿಪಣಿ ಅಗ್ನಿ ಕ್ಷಿಪಣಿಗಳ ಸರಣಿಯಲ್ಲಿ ಮೂರನೆಯದು .ಅಗ್ನಿ-೩ ಎರಡು ಹಂತಗಳಲ್ಲಿ ಹಾರುತ್ತದೆ.ಇದು ಘನ ಇಂಧನವನ್ನು ಬಳಸುತ್ತದೆ.ಇದು ೯ ಜುಲೈ ೨೦೦೬ ರಲ್ಲಿ ವೀಲರ್ ದ್ವಿಪದಲ್ಲಿ ಪರೀಕ್ಷಿಸಲಾಯಿತು.ಮೊದಲನೆ ಸಾರಿ ಟೆಸ್ಟ್ ಮಾಡಿದಾಗ ಅದು ಸರಿಯಾದ ರೀತಿಯಲ್ಲಿ ಎರಡನೆಯ ಹಂತದಲ್ಲಿ ಪ್ರತ್ಯೇಕವಾಗದೆ ವಿಫಲವಾಯಿತು.ಅದರೆ ೧೨ ಏಪ್ರಿಲ್ ೨೦೦೭ ರಲ್ಲಿ ವೀಲರ್ ದ್ವಿಪದಲ್ಲಿ ಮತ್ತೆ ಟೆಸ್ಟ್ ಮಾಡಿದಾಗ ಪರಿಪೂರ್ಣವಾಗಿ ಯಶಸ್ವಿಯಯಿತು.ಅಗ್ನಿ-೩ ಒಟ್ಟು ೨೫೦೦ಕಿ.ಮೀ ಹಾರುವಾ ಸಾಮರ್ಥ್ಯವಿದೆ. ಅಗ್ನಿ-೩ ಕ್ಕೆ ೧.೫ ಟನ್(೧೫೦೦ ಕೆ ಜಿ) ಶಸ್ತ್ರವನ್ನು ಸಾಗಿಸುವ ಸಾಮರ್ಥ್ಯವಿದೆ.ಅಗ್ನಿ-೩ ರ ದೋಷ ಸಂಭಾವ್ಯ ಪರಿಧಿ ಬರೀ ೪೦ ಮೀಟರ್ .ಈ ಕಾರಣದಿಂದಾಗಿ ಅಗ್ನಿ-೩ರನ್ನು ಅತ್ಯಂತ ನಿಖರವಾದ ಕ್ಷಿಪಣಿ ಎನ್ನಬಹುದು.ಈ ಕಾರಣದಿಂದಾಗಿ ಅಗ್ನಿ-೩ ರಲ್ಲಿ ಸ್ವಲ್ಪ ಪರಮಾಣು ವಸ್ತುವನ್ನು ಬಳಕೆ ಮಾಡಬಹುದು.
ಅಗ್ನಿ-೪
[ಬದಲಾಯಿಸಿ]ಅಗ್ನಿ-೪ ಕ್ಷಿಪಣಿ ಅಗ್ನಿಕ್ಷಿಪಣಿಗಳ ಸರಣಿಯಲ್ಲಿ ನಾಲ್ಕನೇಯದು. ಇದು 'ಅಗ್ನಿ-೨ ಪ್ರೈಂ' ಯೆಂದು ಕರಿಯಾಲಗಿತ್ತು. ಇದರ ಒಟ್ಟು ವ್ಯಾಪ್ತಿ ೪೦೦೦ ಕಿ.ಮೀ .ಇದು ೧೯ ಸೆಪ್ಟೆಂಬರ್ ೨೦೧೨ ರಂದು ವೀಲರ್ ದ್ವೀಪದಲ್ಲಿ ಟೆಸ್ಟ್ ಮಾಡಾಲಾಯಿತು.ಅಗ್ನಿ-೪ ಗೆ ೩೦೦೦ ಸೆಲ್ಸಿಯಸ್ ತಾಪಮಾನ ತಡೆಯ ಬಲ್ಲದು. ಅಗ್ನಿ-೪ ಗೆ ೧ ಟನ್ ಶಸ್ತ್ರವನ್ನು ಸಾಗಿಸುವ ಸಾಮರ್ಥ್ಯವಿದೆ.ಇದಕ್ಕೆ ಭಾರತದಲ್ಲೆ ತಯಾರಿಸಿದ ಲೆಸರ್ ಗೈರೊ ಮತ್ತು ಕ್ಷಿಪಣಿ ಮೊಟಾರ್ ಬಳಸಲಾಗಿದೆ.ಇದು ೨೦ ಮೀಟರ್ ಉದ್ದವಿದೆ ಮತ್ತು ೧೭ ಟನ್ ತೂಕವಿದೆ.
ಅಗ್ನಿ-೫
[ಬದಲಾಯಿಸಿ]ಅಗ್ನಿ-೫ ಕ್ಷಿಪಣಿ ಅಗ್ನಿ ಕ್ಷಿಪಣಿಗಲ ಸರಣಿಯಲ್ಲಿ ಐದನೆಯದು .ಇದು ಖಂಡಾಂತರ ಶಿಪಣಿ ಇದು ಡಿ ಆರ್ ಡಿ ಓ ಅಭಿವೃದ್ಧಿಗೊಳಿಸಿದ್ದು .ಇದರ ಸರಿಯಾದ ವ್ಯಾಪ್ತಿ ವರ್ಗೀಕರಿಸಲಾಗಿಲ್ಲ .ಅದರೆ ಭಾರತ ಸರ್ಕಾರ ಇದರ ವ್ಯಾಪ್ತಿ ೫೦೦೦-೫೮೦೦ ಕಿ.ಮೀ ಯೆಂದು ಘೋಷಿಸಲಾಗಿದೆ.