ಅಗೋಂಡಾ
ಗೋಚರ
ಅಗೋಂಡಾ ದಕ್ಷಿಣ ಗೋವಾ ಜಿಲ್ಲೆಯ ಕ್ಯಾನಕೋನಾದಲ್ಲಿ ಸ್ಥಿತವಾಗಿರುವ ಒಂದು ದೊಡ್ಡ ಹಳ್ಳಿಯಾಗಿದೆ. ಅಗೋಂಡಾ ಅದರ ಬೀಚ್‍ಗೆ ಪ್ರಸಿದ್ಧವಾಗಿದೆ. ಇದು ಕರಾವಳಿ ನಿಯಂತ್ರಣ ವಲಯ ೨೦೧೧ರ ಅಧಿಸೂಚನೆಯಡಿ ಆಮೆ ಗೂಡುಕಟ್ಟುವಿಕೆ ತಾಣಗಳೆಂದು ಹೆಸರಿಸಲಾದ ನಾಲ್ಕೇ ನಾಲ್ಕು ಬೀಚ್‍ಗಳಲ್ಲಿ ಒಂದು.[೧][೨][೩] ಅಗೋಂಡಾ ಕಡಿಬಂಡೆಯ ಮತ್ತೊಂದೆಡೆ ಕೋಲಾ ಬೀಚ್ ಎಂದು ಕರೆಯಲ್ಪಡುವ ಇನ್ನೊಂದು ಬೀಚ್ ಇದ್ದು ಇದು ಪಕ್ಕದಲ್ಲಿ ಲಗೂನ್‍ನ್ನು ಹೊಂದಿದೆ.
ಅಗೋಂಡಾ ಬೀಚ್
[ಬದಲಾಯಿಸಿ]ಅಗೋಂಡಾ ಬೀಚ್ ಗೋವಾದ ಅಗೋಂಡಾ ಹಳ್ಳಿಯಲ್ಲಿ ಸ್ಥಿತವಾಗಿರುವ ಒಂದು ಸಾರ್ವಜನಿಕ ಬೀಚ್ ಆಗಿದೆ. ಇದು ಪಾಲೊಲೆಮ್ ಬೀಚ್‍ನ ಉತ್ತರಕ್ಕೆ ಸುಮಾರು ೯.೨ ಕಿಲೋಮೀಟರ್ ದೂರದಲ್ಲಿ ಮತ್ತು ಮಡಗಾಂವ್‍ನಿಂದ ಸುಮಾರು ಒಂದು ಗಂಟೆ ದೂರದಲ್ಲಿದೆ.[೪]
ಸೆಪ್ಟೆಂಬರ್ ತಿಂಗಳಿನಲ್ಲಿ, ಈ ಬೀಚ್ ಆಲಿವ್ ರಿಡ್ಲಿ ಕಡಲ ಆಮೆಗಳಿಗೆ ಗೂಡುಕಟ್ಟುವಿಕೆಯ ಸ್ಥಾನವಾಗುತ್ತದೆ.[೫]
ಉಲ್ಲೇಖಗಳು
[ಬದಲಾಯಿಸಿ]- ↑ News. (January 2016). First Olive Ridley turtle arrives for a late season at Morjim beach. Times News Network, The Times of India. Retrieved 4 February 2016.
- ↑ News. (December 2014). Turtles prefer Agonda beach, but poor nesting this season. Times News Network, The Times of India. Retrieved 4 February 2016.
- ↑ News. (June 2015). Agonda, home to turtles a concrete catastrophe. Times News Network, The Times of India. Retrieved 4 February 2016.
- ↑ "Three Indian beaches Agonda, Palolem (Goa) and Radhanagar (Havelock) among Asia's top 10: Survey". The Hindu. 2016-02-28. Retrieved 2016-07-04.
- ↑ "Turtles prefer Agonda beach, but poor nesting this season – Times of India". Timesofindia.indiatimes.com. 2014-12-30. Retrieved 2016-07-04.