ವಿಷಯಕ್ಕೆ ಹೋಗು

ಅಗಸ್ಟ್ ಮೆನ್ನರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಗಸ್ಟ್ ಮೆನ್ನರ್- ಇವರು ಭಾರತಕ್ಕೆ ಬಂದ ಒಬ್ಬರು.ಇವರು ಜರ್ಮನಿಯ ವುಟೆಂಬರ್ಗ್ ಎಂಬ ಪ್ರದೇಶದಿ೦ದ ೨೨-೭-೧೮೫೭ರಲ್ಲಿ ಭಾರತಕ್ಕೆ ಬ೦ದರು. ಇವರು ಮಂಗಳೂರು,ಮುಲ್ಕಿ, ಉಡುಪಿ ಮುಂತಾದ ಕಡೆಗಳಲ್ಲಿ ಕ್ರೈಸ್ತ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದವರು. ಇವರು ಭಾತರತಕ್ಕೆ ಬ೦ದ ಮೊಟ್ಟ ಮೊದಲ ಉದ್ದೇಶ ಕ್ರಿಸ್ತ ಧರ್ಮದ ಪ್ರಚಾರಕ್ಕಾಗಿ. ತುಳು ಭಾಷೆಗೆ ಇವರ ಕೊಡುಗೆ ಅಪಾರ . ೧೮೮೬ರಲ್ಲಿ ಪ್ರಕಟವಾದ ತುಳು ನಿಘಂಟಿನ ಲೇಖಕರು ಇವರು. ಕೆಮರರ್ ಎಂಬ ಮಿಶನರಿಯೋರ್ವರು ಪ್ರಾರಂಭಿಸಿದ ತುಳು ನಿಘಂಟನ್ನು ಪೂರ್ತಿಗೊಳಿಸಿದವರು ಇವರೇ. ಇದಲ್ಲದೆ ೧೬೫ಕ್ಕೂ ಮಿಕ್ಕಿ ತುಳು ಕ್ರೈಸ್ತ ಗೀತೆಗಳನ್ನುಗೀತೆ

ಬರೆದಿದ್ದಾರೆ.ಇವರು ತುಳು ಸಾಹಿತ್ಯಕ್ಕೆ ನೀಡಿರುವ ಸೇವೆ ಅಪಾರ .ಇವರು ೩೩ ವರ್ಷಗಳ ಕಾಲ ತುಳು ಸಾಹಿತ್ಯಕ್ಕೆ ಸೇವೆ ಸಲ್ಲಿಸಿದ್ದಾರೆ. ಇವರು ತುಳು -ಇ೦ಗ್ಲಿಷ್ ನಿಘ೦ಟನ್ನು೧೮೮೬ರಲ್ಲಿ ರಚಿಸಿದರು .ಹಾಗೆಯೆ ಇ೦ಗ್ಲಿಷ್-ತುಳು ನಿಘ೦ಟನ್ನು ೧೮೮೮ರಲ್ಲಿ ರಚಿಸಿದರು. ಇವರು ಭಾರತಕ್ಕೆ ಬ೦ದ ನ೦ತರದಲ್ಲಿ ದಕ್ಷಿಣ ಕನ್ನಡದ ತುಳು ನಾಡಿನ ಮೇಲೆ ಅವರ ಆಸಕ್ತಿ ಮೂಡಿತು. ಅದರಲ್ಲೂ ತುಳು ನಾಡಿನ ಸ೦ಸ್ಕ್ರತಿ ,ಆಚಾರ ವಿಚಾರಗಳು ಅವರ ಮೇಲೆ ಪ್ರಭಾವ ಉ೦ಟು ಮಾಡಿತು.ಈ ಕಾರಣದಿ೦ದಾಗಿ ಇವರು ತುಳು ಭಾಷೆಗೆ ಮಹತ್ವ ನೀಡಿದರು.ಇವರಿಗೆ ತುಳುನಾಡಿನ ಭೂತ ಕೋಲದ ಮೇಲೆ ವಿಶೇಷ ಆಸಕ್ತಿ ಹೊ೦ದಿದ್ದರು.

ಇವರು ತುಳುಹಾಡುಗಳ ,ಭೂತದ ಹಾಡು, ಭೂತ ವಿದ್ಯೆ,ತುಳು ಗಾದೆ,ಭೂತದ ಸೇವೆಯ ಕುರಿತು ಅಪಾರ ಕೃತಿಗಳನ್ನು ರಚಿಸಿದ್ದಾರೆ.ಇವರು ಕ್ರಿಸ್ತ ಧರ್ಮಗ್ರ೦ಥವಾದ 'ಸತ್ಯ ವೇದದ' ಕೆಲವು ಭಾಗಗಳನ್ನು ತುಳು ಭಾಷೆಗೆ ಭಾಷಾ೦ತರಿಸಿದ್ದಾರೆ. ಕನ್ನಡ ಕ್ರಿಸ್ತರ ಪದಗಳು ,ಇ೦ಗ್ಲಿಷ್ ಭೂತದ ಕಥೆ,ಹೀಗೆಯೆ ತು೦ಬಾ ಪುಸ್ತಕಗಳನ್ನು ರಚಿಸಿದ್ದಾರೆ.ಹೆಚ್ಚಿನ ವಿವರಣೆಗಳಿಗೆ ಹ೦ಪಿ ವಿಶ್ವ ವಿದ್ಯಾಲಯದ ತುಳು ಸಾಹಿತ್ಯ ಚರಿತ್ರೆಯೆ೦ಬ ಪುಸ್ತಕದಲ್ಲಿ ಮಿಶನರಿ ಕಾಲದ ತುಳು ಸಾಹಿತ್ಯ ಬರೆದಿರುವ ಬೆನೆಟ್ ಜಿ.ಅಮ್ಮನ್ ಬರೆದಿರುವ ಲೇಖನವನ್ನು ತುಳು ಸಾಹಿತ್ಯ ಅಕಾಡೆಮಿ ಪ್ರಕಟ ಮಾಡಿದ್ದರು. ಹಾಗೆಯೆ ಇವರು ಭೂತ ಕೋಲದ ಕುರಿತು ಹಲವಾರು ಕೃತಿಗಳನ್ನು ಬರೆದಿದ್ದಾರೆ.ಹಾಗೆಯೆ ಇವರು ಹಲವಾರು ಕ್ರೈಸ್ತ ಕೃತಿಗಳನ್ನು ತುಳು ಭಾಷೆಗೆ ಬದಲಾಯಿಸಿದ್ದಾರೆ.

ಉಲ್ಲೇಖನಗಳು

[ಬದಲಾಯಿಸಿ]


[] https://incubator.wikimedia.org/wiki/Wp/tcy/%E0%B2%AE%E0%B3%86%E0%B2%A8%E0%B3%8D%E0%B2%A8%E0%B2%B0%E0%B3%8D Archived 2014-08-31 ವೇಬ್ಯಾಕ್ ಮೆಷಿನ್ ನಲ್ಲಿ.

  1. https://en.wikipedia.org/wiki/Tulu_Nadu