ವಿಷಯಕ್ಕೆ ಹೋಗು

ಅಕ್ರುಯಲ್(ಸಂಚಯ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲೆಕ್ಕ ಪರಿಶೋದನೆ ಎಂದರೆ : ಮೊಂಟಗೊಮರಿ ಅವರ ಪ್ರಕಾರ "ಯಾವುದೊಂದು ವ್ಯವಹಾರಿ ಸಂಸ್ಧೆ ಯು ಅಥವಾ ಇತರ ಸಂಸ್ಥೆ ಯ ಹಣಹಾಸಿನ ವ್ಯವಹಾರಗಳನ್ನು ಮತ್ತು ಅವುಗಳಿಂದ ಪರಿಣಾಮವನ್ನು ಕಂಡು ಹಿಡಿದು ಅವುಗಳ ಬಗ್ಗೆ ವರದಿ ಸಲ್ಲಿಸಲು ಆ ಸಂಸ್ಥೆ ಯ ಲೆಕ್ಕದ ಪತ್ರಗಳನ್ನು ಮತ್ತು ದಾಖಲೆ ಪತ್ರಗಳನ್ನು ಸುವ್ಯ ವಸ್ಥಿತವಾಗಿ ಪರಿಶೀಲುವುದೇ ಲೆಕ್ಕ ಪರಿಶೋದನೆಯಾಗಿದೆ. ಆಯವ್ಯಯಶಾಸ್ತ್ರದಲ್ಲಿ (ಖರ್ಚು-ವೆಚ್ಚದ ಅಂದಾಜು ಪಟ್ಟಿಯಲ್ಲಿ)ಅಕ್ರುಯಲ್ (ಸಂಚಯ)(ಶೇಖರಣೆ )ಎಂದರೆ ಬಡ್ಡಿಹಣವನ್ನು ಒಟ್ಟಾಗಿ ಸೇರಿಸುವುದು ಅಥವಾ ಕಾಲಾನುಕ್ರಮದಲ್ಲಿ ಮಾಡಲಾಗುವ ವಿವಿಧ ಬಂಡವಾಳ ಹೂಡಿಕೆಗಳು.(ವ್ಯವಾರದಲ್ಲಿ ಮುಂಬರುವ ಆದಾಯ-ವೆಚ್ಚದ ಸಂಚಿತ ಪ್ರಮಾಣವನ್ನು ಸಂಬಂಧಪಟ್ಟ ಖಾತೆಗಳಲ್ಲಿ ನಮೂದಿಸುವುದು.) ಇದು(ಲೆಕ್ಕ ಪರಿಶೋಧನಾ )ಶಾಸ್ತ್ರ ಕರಣಿಕಶಾಸ್ತ್ರದಲ್ಲಿ ಒಂದು ನಿರ್ದಿಷ್ಟ ಅರ್ಥವನ್ನು ಹೊಂದಿದೆ, ಇದು ಜಮಾಖರ್ಚುಪಟ್ಟಿಯಲ್ಲಿ ಉಂಟಾಗುವ ಲೆಕ್ಕಕ್ಕೆ ಸೂಚಿತವಾಗಿದೆ. ಇದು ಸಂಚಯವನ್ನು ಆಧರಿಸಿದ ಲೆಕ್ಕಶಾಸ್ತ್ರದಲ್ಲಿ ಬಳಕೆಯಾಗುವ ಹಣಕಾಸು ಹಾಗು ಹಣಕಾಸನ್ನು ಆಧರಿಸಿದ ಸಂಪತ್ತನ್ನು ಸೂಚಿಸುತ್ತದೆ. ಈ ಮಾದರಿಯ ಲೆಕ್ಕಾಚಾರದಲ್ಲಿ ಒಳಗೊಳ್ಳುವ ಇತರ ಅಂಶಗಳೆಂದರೆ ಹಣಕಾಸಿನ ಸಂದಾಯ, ಹಣಕಾಸಿನ ಸ್ವೀಕೃತಿ, ವ್ಯಾಪಾರದ ಹಕ್ಕು, ಮುಂದೂಡಲಾದ ತೆರಿಗೆ, ಹಣಕಾಸಿನ ಪಾವತಿ ಹಾಗು ಭವಿಷ್ಯದಲ್ಲಿ ಬರುವ ಬಡ್ಡಿಯ ಖರ್ಚು.[] ಉದಾಹರಣೆಗೆ, ಒಂದು ವ್ಯಾಪಾರ ಸಂಸ್ಥೆಯು ಒಬ್ಬ ಗ್ರಾಹಕನಿಗೆ ಉತ್ಪನ್ನವನ್ನು ಮಾರಾಟ ಮಾಡಿದಾಗ ಆತ ಅದಕ್ಕೆ ಮುಂಬರುವ ಹಣಕಾಸಿನ ವರ್ಷದಲ್ಲಿ 30 ದಿನಗಳ ನಂತರ ಹಣಸಂದಾಯ ಮಾಡುತ್ತಾನೆ. ಈ ಹಣಕಾಸಿನ ವರ್ಷವು ಉತ್ಪನ್ನವು ಬಿಕರಿಯಾದ ಒಂದು ವಾರದ ನಂತರ ಆರಂಭವಾಗುತ್ತದೆ. ಆದಾಗ್ಯೂ ವ್ಯಾಪಾರ ಸಂಸ್ಥೆಯು ಉತ್ಪನ್ನವನ್ನು ಆ ಅವಧಿಯ ಹಣಕಾಸಿನ ವರ್ಷದಲ್ಲಿ ಬಿಕರಿ ಮಾಡಿದ್ದು, ಅದರ ಮುಂದಿನ ಲೆಕ್ಕಪತ್ರದ ಅವಧಿಯಲ್ಲಿ ಇದಕ್ಕೆ ಹಣದ ರೂಪದಲ್ಲಿ ಸಂದಾಯವನ್ನು ಪಡೆದುಕೊಂಡರೂ ಸಹ ಅದರಿಂದ ಬರಬೇಕಾದ ಹಣವನ್ನು ತನ್ನ ಪ್ರಸಕ್ತ ಆದಾಯದ ಲೆಕ್ಕಪಟ್ಟಿಯಲ್ಲಿ ವರಮಾನವೆಂದು ಗುರುತಿಸುತ್ತದೆ.[] ಉತ್ಪನ್ನವು ವಿತರಣೆಯಾಗುವ ಹಣಕಾಸಿನ ವರ್ಷ ಜಮಾಖರ್ಚಿನ ಪಟ್ಟಿಯಲ್ಲಿ ಆದಾಯವು ಮುಂದೂಡಲಾದ ಆದಾಯವೂ(ಆಸ್ತಿಪಾಸ್ತಿ) ಸಹ ಆಗಿರುತ್ತದೆ, ಆದರೆ ಹಣ ಸ್ವೀಕರಿಸಲಾಗುವ ಅದರ ಮುಂದಿನ ಹಣಕಾಸು ವರ್ಷಕ್ಕೆ ಪರಿಗಣಿತವಾಗುವುದಿಲ್ಲ. ಇದೇ ರೀತಿಯಾಗಿ, ಒಂದು ಉತ್ಪನ್ನವನ್ನು ಮಾರಾಟ ಮಾಡುವ ಒಬ್ಬ ಮಾರಾಟ ಪ್ರತಿನಿಧಿಯು, ಉತ್ಪನ್ನವು ಬಿಕರಿಯಾಗುವ (ಅಥವಾ ವಿತರಣೆ)ಸಂದರ್ಭದಲ್ಲಿ ತನಗೆ ಸೇರಬೇಕಾದ ಶೇಕಡಾವಾರು ಹಣವನ್ನು ಗಳಿಸುತ್ತಾನೆ. ಆದಾಗ್ಯೂ,ಆಕೆ/ಆತ ವಾಸ್ತವವಾಗಿ ಮುಂದಿನ ಲೆಕ್ಕಪತ್ರದ ಅವಧಿಯಲ್ಲಿ ಬರುವ ವಾರದ ಕೊನೆಯಲ್ಲಿ ಹಣವನ್ನು ಪಡೆದಿದ್ದರೂ ಸಹ, ವ್ಯಾಪಾರ ಸಂಸ್ಥೆಯು ತನ್ನ ಪ್ರಸಕ್ತ ಆದಾಯ ಪಟ್ಟಿಯಲ್ಲಿ ಶೇಕಡಾವಾರು ಹಣವನ್ನು ಖರ್ಚುವೆಚ್ಚವೆಂದು ಗುರುತಿಸುತ್ತದೆ. ವಿತರಣಾ ಅವಧಿಯಲ್ಲಿ ಶೇಕಡಾವಾರು ಹಣವು ಮುಂದೂಡಲಾದ ಖರ್ಚುವೆಚ್ಚವೆಂದು (ಹಣಕಾಸಿನ ಪಾವತಿ) ಜಮಾಖರ್ಚಿನ ಪಟ್ಟಿಯಲ್ಲಿ ತೋರಿಸಲಾಗುತ್ತದೆ, ಆದರೆ ಶೇಕಡಾವಾರು ಹಣವನ್ನು ಮುಂದಿನ ಅವಧಿಯಲ್ಲಿ ಆಕೆಗೆ/ಆತನಿಗೆ ಸಂದಾಯ ಮಾಡಲಾಗುತ್ತದೆ ದುರದೃಷ್ಟವಶಾತ್, ಸಂಚಯ ಎಂಬ ಪದವನ್ನು ಸಾಮಾನ್ಯವಾಗಿ ಸಂಚಿತ ಖರ್ಚುವೆಚ್ಚ ಹಾಗು ಸಂಚಿತ ಆದಾಯ ಎಂಬ ಪದಗಳ ಸಂಕ್ಷಿಪ್ತ ರೂಪವಾಗಿಯೂ ಸಹ ಬಳಸಲಾಗುತ್ತದೆ, ಏಕೆಂದರೆ ಇವೆರಡೂ ಪದಗಳು ಸಮಾನವಾದ ಹೆಸರಿನ ಪದವನ್ನು ಹೊಂದಿರುತ್ತವೆ, ಆದರೆ ಇವು ಅರ್ಥಶಾಸ್ತ್ರದ/ಕರಣಿಕಶಾಸ್ತ್ರದ ವಿರುದ್ಧ ಲಕ್ಷಣಗಳನ್ನು ಹೊಂದಿದೆ.

  • ಸಂಚಿತ ಆದಾಯ: ಹಣ ಸ್ವೀಕೃತಿಗೆ ಮೊದಲೇ ಆದಾಯವನ್ನು ಗುರುತಿಸಲಾಗುತ್ತದೆ.
  • ಸಂಚಿತ ಖರ್ಚುವೆಚ್ಚ: ಹಣಸಂದಾಯಕ್ಕೆ ಮೊದಲೇ ಖರ್ಚುವೆಚ್ಚವನ್ನು ಗುರುತಿಸಲಾಗುತ್ತದೆ.

ಸಂಚಿತ ಆದಾಯ ವು (ಅಥವಾ ಸಂಚಿತ ಸಂಪತ್ತು )ಒಂದು ಮಾದರಿಯ ಸಂಪತ್ತೆನಿಸಿದೆ, ಉದಾಹರಣೆಗೆ ಸರಕುಗಳು ಅಥವಾ ಸೇವೆಗಳ ವಿತರಣೆಯಿಂದ ಬರಬೇಕಾದ ಸಂದಾಯವಾಗದ ಹಣ, ಇಂತಹ ಆದಾಯವು ಗಳಿಕೆಯಾದಾಗ ಹಾಗು ಇದಕ್ಕೆ ಸಂಬಂಧಿಸಿದಂತೆ ಆದಾಯದ ಅಂಶವನ್ನು ಗುರುತಿಸಲಾಗುತ್ತದೆ, ಆದರೆ ಹಣವನ್ನು ಸಂಚಿತ ಆದಾಯಗಳಿಂದ ಕಳೆದು ನಂತರದ ಅವಧಿಯಲ್ಲಿ ಸ್ವೀಕರಿಸಲಾಗುತ್ತದೆ. ಒಂದು ಗೇಣಿ ಉದ್ಯಮದಲ್ಲಿ, ತಿಂಗಳ ಕೊನೆಯಲ್ಲಿ ಪರಿಮಿತಿಯನ್ನು ಮೀರುವ ಗೇಣಿ ಆದಾಯಕ್ಕೆ ವಿಶೇಷವಾದ ಆದಾಯ ಸಂಚಯಗಳು ಇರುತ್ತವೆ. ಇವುಗಳನ್ನು ಸಾಧಾರಣವಾಗಿ ಗೇಣಿ ಸಂಸ್ಥೆಗಳು ಬಳಸಿಕೊಂಡು ಉಳಿಕೆಯಲ್ಲಿ ವಾರ್ಷಿಕ ಒಪ್ಪಂದದ ದಿನಾಂಕವನ್ನು ಆಧರಿಸಿ ಲೆಕ್ಕಕ್ಕೆ ಸೇರಿಸಿಕೊಳ್ಳುತ್ತವೆ. ಉದಾಹರಣೆಗೆ, ಜನವರಿ 15ರಂದು ಆರಂಭವಾದ ಒಂದು ಗೇಣಿ ಒಪ್ಪಂದವನ್ನು ತಿಂಗಳ ಆಧಾರದ ಮೇಲೆ ಪುನರಾವರ್ತಕವಾಗಿ ಸರಕುಪಟ್ಟಿ ಮಾಡಲಾಗಿರುತ್ತದೆ. ಸಂಸ್ಥೆಯು ಫೆಬ್ರವರಿ 14ರವರೆಗೆ ತನ್ನ ಮೊದಲ ಸರಕುಪಟ್ಟಿಯನ್ನು ತಯಾರಿಸುವುದಿಲ್ಲ. ಹೀಗಾಗಿ ಜನವರಿ ತಿಂಗಳಿನ ಹಣಕಾಸಿನ ಅವಧಿಯ ಕೊನೆಯೊಳಗೆ, ತಿಂಗಳ ವೆಚ್ಚಕ್ಕೆ ಸರಿಹೊಂದುವಂತೆ 16 ದಿವಸಗಳಿಗಾಗಿ ಒಂದು ಸಂಚಯವನ್ನು ತಯಾರಿಸಬೇಕು. ಇದು ಕೇವಲ ಪ್ರಮಾಣಾನುಗುಣವನ್ನು ಆಧರಿಸಿರಬಹುದು; (ಉದಾಹರಣೆಗೆ ತಿಂಗಳ ವೆಚ್ಚವು 16/31 ದಿವಸಕ್ಕೆ ತಯಾರಾಗಿರಬಹುದು.) ಅಥವಾ ಕೇವಲ ವಾರದ ದಿವಸಗಳನ್ನು ಪರಿಗಣಿಸಿದರೆ ಇದು ಹೆಚ್ಚು ಸಂಕೀರ್ಣವಾಗಿರಬಹುದು; ಅಥವಾ ಒಂದು ಪ್ರಮಾಣಕ ತಿಂಗಳನ್ನು ಬಳಕೆ ಮಾಡಬಹುದು. (ಉದಾಹರಣೆಗೆ 28 ದಿವಸಗಳು, 30 ದಿವಸಗಳು ಮುಂತಾದವು). ಇದಕ್ಕೆ ಭಿನ್ನವಾಗಿ ಸಂಚಿತ ಖರ್ಚುವೆಚ್ಚ ವೆಂದರೆ, ಒಂದು ಅನಿರ್ದಿಷ್ಟ ಅವಧಿ ಅಥವಾ ಮೊತ್ತವನ್ನು ಹೊಂದಿರುವ ಹಣಕಾಸಿನ ಪಾವತಿ, ಆದರೆ ಇದರಲ್ಲಿ ಅನಿರ್ದಿಷ್ಟತೆಯನ್ನು ಒಂದು ಷರತ್ತಾಗಿ ಸೀಮಿತಗೊಳಿಸುವಷ್ಟು ಮಹತ್ವವಾಗಿಲ್ಲ. ಉದಾಹರಣೆಗೆ, ಒಬ್ಬ ವ್ಯಕ್ತಿಯಿಂದ ಸ್ವೀಕರಿಸಿದ ಸರಕು ಹಾಗು ಸೇವೆಗಳಿಗೆ ಹಣ ಸಂದಾಯ ಮಾಡಬೇಕಾದ ಜವಾಬ್ದಾರಿ, ಈ ನಡುವೆ ಹಣವನ್ನು ಸಂಚಿತ ಖರ್ಚುವೆಚ್ಚ ದಿಂದ ಕಳೆದು ನಂತರ ಲೆಕ್ಕಪತ್ರದ ಅವಧಿಯಲ್ಲಿ ಸಂದಾಯ ಮಾಡಲಾಗುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ, ಇದನ್ನು IAS 37 ಉತ್ತಮವಾಗಿ ಸಂಕ್ಷೇಪಗೊಳಿಸಿದೆ, ಇದು ನಿರೂಪಿಸುವಂತೆ: "11 ಷರತ್ತುಗಳನ್ನು ಇತರ ಹಣಕಾಸಿನ ಪಾವತಿಗಳಿಂದ ಪ್ರತ್ಯೇಕಿಸಬಹುದು; ಉದಾಹರಣೆಗೆ ವ್ಯಾಪಾರ ಸಂದಾಯಗಳು ಹಾಗು ಸಂಚಯಗಳು ಏಕೆಂದರೆ ಪಾವತಿಗೆ ಅಗತ್ಯವಾದ ಭವಿಷ್ಯದ ಖರ್ಚುವೆಚ್ಚಗಳ ಹಣ ಹಾಗು ಅವಧಿಯು ಅನಿರ್ದಿಷ್ಟವಾಗಿರುತ್ತದೆ. ಭಿನ್ನವಾಗಿ: "(a)ವ್ಯಾಪಾರದಲ್ಲಿನ ಹಣಸಂದಾಯವೆಂದರೆ ಸರಕುಗಳು ಹಾಗು ಸೇವೆಗಳಿಂದ ಸ್ವೀಕೃತವಾದ ಅಥವಾ ಒದಗಿಸಲಾದ ಸಂದಾಯಮಾಡಬೇಕಾದ ಹಣಕಾಸು. ಇದನ್ನು ಸರಕುಪಟ್ಟಿ ಮಾಡಲಾಗಿರುತ್ತದೆ ಅಥವಾ ವಿಧ್ಯುಕ್ತವಾಗಿ ಸರಬರಾಜುದಾರನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿರುತ್ತದೆ; ಹಾಗು "(b)ಸಂಚಯಗಳೆಂದರೆ ಸರಕು ಅಥವಾ ಸೇವೆಗಳನ್ನು ಸ್ವೀಕಾರ ಮಾಡಿದ್ದಕ್ಕೆ ಅಥವಾ ಸರಬರಾಜು ಮಾಡಿದ್ದಕ್ಕೆ ಸಂದಾಯಮಾಡಬೇಕಾದ ಹಣ, ಆದರೆ ಇದರಲ್ಲಿ ಹಣ ಸಂದಾಯವಾಗಿರುವುದಿಲ್ಲ, ಇದನ್ನು ಸರಕುಪಟ್ಟಿ ಮಾಡಿ ಅಥವಾ ಸರಬರಾಜುದಾರನೊಂದಿಗೆ ವಿಧ್ಯುಕ್ತವಾಗಿ ಒಪ್ಪಂದ ಮಾಡಿಕೊಳ್ಳಲಾಗಿರುತ್ತದೆ, ಇದರಲ್ಲಿ ನೌಕರರಿಗೆ ಕೊಡಬೇಕಾದ ಬಾಕಿ ಹಣವೂ ಸಹ ಸೇರಿರುತ್ತದೆ (ಉದಾಹರಣೆಗೆ, ವಿಹಾರಕ್ಕಾಗಿ ನೀಡಲಾಗುವ ಸಂಚಿತ ಹಣದ ಮೊತ್ತವು ಇದಕ್ಕೆ ಸಂಬಂಧಿಸಿರುತ್ತದೆ). ಆದಾಗ್ಯೂ, ಕೆಲವೊಂದು ಬಾರಿ ಸಂಚಿತ ಮೊತ್ತ ಅಥವಾ ಅವಧಿಯನ್ನು ಅಂದಾಜಿಸುವ ಅಗತ್ಯವಿರುತ್ತದೆ, ಇದು ಸಾಧಾರಣವಾಗಿ ಅನಿರ್ದಿಷ್ಟತೆಯು ಸರಬರಾಜಿಗಿಂತ ಕಡಿಮೆಯಿರುತ್ತದೆ. "ಸಂಚಯಗಳನ್ನು ಸಾಮಾನ್ಯವಾಗಿ ವ್ಯಾಪಾರ ಹಾಗು ಇತರ ಹಣಸಂದಾಯಗಳ ಭಾಗವೆಂದು ವರದಿ ಮಾಡಲಾಗಿದೆ, ಆದರೆ ಸರಬರಾಜುಗಳನ್ನು ಪ್ರತ್ಯೇಕವಾಗಿ ವರದಿ ಮಾಡಲಾಗಿದೆ." ಈ ಗೊಂದಲಕ್ಕೆ ಪುಷ್ಟಿ ನೀಡುವಂತೆ, ಕೆಲವು ನಿಯಮಬದ್ದ ಲೆಕ್ಕಶಾಸ್ತ್ರ ವಿಧಾನಗಳು, ವ್ಯವಸ್ಥೆಗಳು “’ಸಂಚಿತ ಆದಾಯ”’ ಹಾಗು “’ಸಂಚಿತ ಖರ್ಚುವೆಚ್ಚ”’ ಒಂದು ಸರಳ ದೃಷ್ಟಿಕೋನವನ್ನು ಹೊಂದಿದವೆ, ಇದು ವಿಧ್ಯುಕ್ತವಾಗಿ ಸರಕುಪಟ್ಟಿ ಮಾಡಿಲ್ಲದ ಆದಾಯ/ಖರ್ಚುವೆಚ್ಚವನ್ನು ನಿರೂಪಿಸುತ್ತದೆ. ಇದು ಪ್ರಾಥಮಿಕವಾಗಿ ಆದಾಯ ತೆರಿಗೆ ಪರಿಗಣನೆಯ ಕಾರಣದಿಂದಾಗಿದೆ, ಏಕೆಂದರೆ ಕೆಲವು ರಾಷ್ಟ್ರಗಳಲ್ಲಿ ಸರಕುಪಟ್ಟಿಯ ವಿತರಣೆಯು ಗ್ರಾಹಕನು ಅಂತಿಮವಾಗಿ ಹಣಸಂದಾಯವನ್ನು ಮಾಡಿದ್ದರೆ ಹಾಗು ಅದಕ್ಕೆ ಸಂಬಂಧಿಸಿದ ಸ್ವೀಕೃತಿಗಳನ್ನು ಸಂಗ್ರಹಿಸಲು ಸಾಧ್ಯವಾಗದಿದ್ದಾಗ ಆದಾಯ ತೆರಿಗೆ ವರಮಾನವನ್ನು ಸೃಷ್ಟಿಸುತ್ತದೆ.

ವೇತನದಾರರ ಪಟ್ಟಿಯಲ್ಲಿ ಸಂಚಯಗಳು

[ಬದಲಾಯಿಸಿ]

ವೇತನದಾರರ ಪಟ್ಟಿಯಲ್ಲಿ, ಸಂಸ್ಥೆಯ ಮುಖ್ಯಸ್ಥ (ಉದ್ಯೋಗದಾತ ತನ್ನ ನೌಕರನಿಗೆ ನೀಡುವ ಒಂದು ಸಾಮಾನ್ಯ ಅನುಕೂಲವೆಂದರೆ ರಜೆ ಅಥವಾ ಆಪತ್ತಿನ ಸಂಚಯ . ಇದರರ್ಥ ಕಾಲಾನುಕ್ರಮದಲ್ಲಿ, ಒಬ್ಬ ನೌಕರನು ಆಪತ್ತಿನ ಅಥವಾ ರಜೆಯ ಹೆಚ್ಚುವರಿ ಅವಧಿಯನ್ನು ಶೇಖರಿಸಿಕೊಳ್ಳುತ್ತಾನೆ. ಅಲ್ಲದೇ ಈ ಅವಧಿಯಲ್ಲಿ ಉಳಿಸಿಕೊಂಡ ರಜೆಯು ಅವನ ಖಾತೆ ಯಲ್ಲಿ ಸಂಗ್ರಹವಾಗುತ್ತದೆ.(ಸಂಚಯವಾಗುತ್ತದೆ) ಒಂದೊಮ್ಮೆ ಹಣವು ಸಂಗ್ರಹವಾದ ಕೂಡಲೇ, ಮುಖ್ಯಸ್ಥ ಅಥವಾ ಮುಖ್ಯಸ್ಥನಿಗೆ ವೇತನದಾರರ ಪಟ್ಟಿಯನ್ನು ಒದಗಿಸುವವನು ಕಾಯಿಲೆಗೆ ಅಥವಾ ರಜೆಗೆ ಎಷ್ಟು ಅವಧಿಯು ಕಳೆದಿದೆ ಎಂಬುದನ್ನು ಗುರುತಿಸುತ್ತಾನೆ.

ಸೇವೆಯ ಅವಧಿ

[ಬದಲಾಯಿಸಿ]

ಸಂಸ್ಥೆಯನ್ನು ನಡೆಸುವ ಹೆಚ್ಚಿನ ಮುಖ್ಯಸ್ಥರಿಗೆ, ವಿರಾಮದ ನಿಯಮವು ಪ್ರಕಟವಾಗಿರುವುದರ ಜೊತೆಗೆ ಸಂಚಯದ ಪ್ರಯೋಜನದ ದೃಷ್ಟಿಯಿಂದ ಅದನ್ನು ಅನುಸರಿಸಲಾಗುತ್ತದೆ. ಈ ಮಾರ್ಗಸೂಚಿಗಳು ಎಲ್ಲ ನೌಕರರಿಗೆ ಅನುಕೂಲವಾಗುವಂತೆ ಆಪತ್ತಿನ ಹಾಗು ವಿರಾಮದ ಅವಧಿಯನ್ನು ಸಮಾನ ರೀತಿಯಲ್ಲಿ ಹಂಚಿಕೆ ಮಾಡಲಾಗಿರುತ್ತದೆ. ಈ ಮಾರ್ಗಸೂಚಿಗಳೊಂದಿಗೆ, ನೌಕರರು ವಿರಾಮದ ಅಥವಾ ಕಾಯಿಲೆಗೆ ನೀಡಲಾದ ರಜೆಯಲ್ಲಿ ಅವರು ಬಳಸಿಕೊಂಡ ಪ್ರಮಾಣವನ್ನು ಸಾಮಾನ್ಯವಾಗಿ ಅವರ ಸೇವಾ ಅವಧಿಯ ಮೇಲೆ ನಿರ್ಧರಿಸಲಾಗುತ್ತದೆ. (ಸಂಸ್ಥೆಯಲ್ಲಿ ನೌಕರನು ಕೆಲಸ ಮಾಡಿದ ಅವಧಿ).

ಪರೀಕ್ಷಾ ಅವಧಿ

[ಬದಲಾಯಿಸಿ]

ಹಲವು ಸಂದರ್ಭಗಳಲ್ಲಿ, ನೌಕರನಿಗೆ ಪರೀಕ್ಷಾ ಅವಧಿಯನ್ನು ನೀಡಲಾಗುತ್ತದೆಂದು ಈ ಮಾರ್ಗಸೂಚಿಗಳು ಸೂಚಿಸುತ್ತವೆ. (ಸಾಮಾನ್ಯವಾಗಿ 30 ರಿಂದ 60 ದಿನಗಳು). ನೌಕರಿಗೆ ಸೇರಿದ ತಕ್ಷಣವೇ ಕಾಯಿಲೆಯಿಂದ ಬಳಲಿದರೆ ರಜೆಯನ್ನು ತೆಗೆದುಕೊಳ್ಳಲು ಇದರಲ್ಲಿ ಅವಕಾಶವಿದೆ, ಆದರೆ ಈ ಅವಧಿಯಲ್ಲಿ ನೌಕರನಿಗೆ ವೇತನ ದೊರೆಯುವುದಿಲ್ಲ. ಆದಾಗ್ಯೂ, ಉದಾಹರಣೆಗೆ ಕೆಲಸಕ್ಕೆ ಸೇರಿದ ಎರಡನೇ ವಾರದಲ್ಲಿ ರಜೆಯ ಮೇಲೆ ನೌಕರನು ತೆರಳಬೇಕಾದರೆ ಇದು ಅನ್ವಯಕ್ಕೆ ಬರುವುದಿಲ್ಲ. ಈ ಪರೀಕ್ಷಾ ಅವಧಿಯ ನಂತರ, ರಜೆಯ ಅವಕಾಶವು ಆರಂಭವಾಗಬಹುದು ಅಥವಾ ಇದು ನೌಕರಿಗೆ ಸೇರಿದಂದಿನಿಂದ ಪೂರ್ವಾನ್ವಯ ಹೊಂದಿರಬಹುದು.

ಕಾಲವಿಸ್ತರಣೆ/ಮುಂದೂಡಿಕೆ

[ಬದಲಾಯಿಸಿ]

ಕೆಲವು ಸಂಚಯ ನಿಯಮಗಳು ಕಾಲವಿಸ್ತರಣೆಯ ಅಥವಾ ಕೆಲವು ರಜೆಯನ್ನು ಮುಂದೂಡುವ ಅಥವಾ ಬಳಕೆಯಾಗದ ಎಲ್ಲ ಅವಧಿಯನ್ನು ಮುಂದಿನ ವರ್ಷಕ್ಕೆ ವಿಸ್ತರಿಸಿಕೊಳ್ಳುವ ಅನುಕೂಲವನ್ನು ಮಾಡಿಕೊಟ್ಟಿರುತ್ತವೆ. ಸಂಚಯ ನಿಯಮವು ಯಾವುದೇ ರೀತಿಯ ಕಾಲವಿಸ್ತರಣೆಯ ನಿಯಮವನ್ನು ಹೊಂದಿರದಿದ್ದರೆ, ಖಾತೆಯಲ್ಲಿರುವ ಯಾವುದೇ ಸಂಚಿತ ಅವಧಿಯು ಸಂಸ್ಥೆಯ ಕ್ಯಾಲೆಂಡರ್ ವರ್ಷದಲ್ಲಿ ಸಾಮಾನ್ಯವಾಗಿ ಕಳೆದುಹೋಗುತ್ತದೆ.

ಇವನ್ನೂ ವೀಕ್ಷಿಸಿ

[ಬದಲಾಯಿಸಿ]
  • ಸಂಚಿತ ಆದಾಯ
  • ಸಂಚಿತ ಬಡ್ಡಿ
  • ಸಂಚಿತ ಆಡಳಿತ ವ್ಯಾಪ್ತಿ
  • ಸಂಚಿತ ಹಣಕಾಸಿನ ಜವಾಬ್ದಾರಿಗಳು
  • ಆದಾಯ ಮಾನ್ಯತೆ
  • ಸಮನಾದ ತತ್ತ್ವ
  • ಸಂಚಯವನ್ನು ಆಧರಿಸಿದ ಲೆಕ್ಕಶಾಸ್ತ್ರ
  • ಕರಣಿಕ ಶಾಸ್ತ್ರದಲ್ಲಿ ಬರುವ ಡೆಫರಲ್ ಗಳು

ಉಲ್ಲೇಖಗಳು

[ಬದಲಾಯಿಸಿ]
  1. "Accruals". Investopedia.com. Retrieved 6 January 2010.
  2. "Accrual Accounting". Investopedia.com. Retrieved 6 January 2010.


ಬಾಹ್ಯ ಕೊಂಡಿಗಳು

[ಬದಲಾಯಿಸಿ]

[http://www.investopedia.com/terms/a/accrualaccounting.asp ಅಕ್ರುಯಲ್ ಅಕೌಂಟಿಂಗ್ ]Investopedia.comನಲ್ಲಿ