ಅಕ್ರಿಯಾವಾದ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಅಕ್ರಿಯಾವಾದ ಬುದ್ಧನ ಸಮಕಾಲೀನನಾದ ಪುರಣ ಕಸ್ಸಪನೆಂಬುವನ ತತ್ತ್ವ. ನಿಜ ಹೇಳುವುದು, ದಾನ ಮಾಡುವುದು, ಸಂಯಮ-ಇವು ಒಳ್ಳೆಯವೂ ಅಲ್ಲ; ಸುಳ್ಳು ಹೇಳುವುದು, ಕದಿಯುವುದು, ಕೊಲೆ ಮಾಡುವುದು-ಇವು ಕೆಟ್ಟವೂ ಅಲ್ಲ. ಯಾವುದನ್ನೂ ಮಾಡದ ನಿಷ್ಕ್ರಿಯೆಯೇ ಸರಿಯಾದ ಮಾರ್ಗ ಎಂಬುದು ಇವನ ತತ್ತ್ವ.