ವಿಷಯಕ್ಕೆ ಹೋಗು

ಅಕಾಡೆಮಿ ಪ್ರಶಸ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಕ್ಯಾಡಮಿ ಪ್ರಶಸ್ತಿ ಇಂದ ಪುನರ್ನಿರ್ದೇಶಿತ)

ಸಿನಿಮಾ ಕ್ಷೇತ್ರಕ್ಕೆ ಕೊಡುಗೆಯಾದ ಆಸ್ಕರ್ ಪುರಸ್ಕಾರ

ಆಸ್ಕರ್ ಪ್ರಶಸ್ತಿಯ ಇತಿಹಾಸ ನೋಡಿದಾಗ ೧೯೨೭ ರಲ್ಲಿ ಸ್ಥಾಪನೆಯಾದ `ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆಟ್ಸ್ ಆÀ್ಯಡ್ ಸೈನ್ಸ್'(AMPAS) ಸಂಸ್ಥೆ ಮೆಟ್ರೋ -ಗೋಲ್ಡ್ವಿನ್-ಮೇಯರ್ ಸ್ಟುಡಿಯೋದ ಮಾಲೀಕ ಲೂಯಿ, ಬಿ. ಮೇಯರನ ಚಿಂತನೆಯ ಫಲವಾಗಿದೆ. ಈ ಸಂಸ್ಥೆಯಿಂದಲೇ ಆಸ್ಕರ್ ಪುರಸ್ಕಾರವನ್ನು ಕೋಡಲಾರಂಭಿಸಿತು. ಚಲನಚಿತ್ರರಂಗದ ಪ್ರತಿಭಾನ್ವಿತ ವ್ಯಕ್ತಿಗಳಿಗೆ ಗೌರವ ಸಮರ್ಪಿಸುವುದು ಈ ಪ್ರಶಸ್ತಿಯ ಪ್ರಮುಖ ಧ್ಯೇಯವಾಗಿದೆ. ಆಸ್ಕರ್ ಪುರಸ್ಕಾರದ ಮೂದಲ ಸಮಾರಂಭವು ಮೇ-೧೬ ೧೯೨೯ರಂದು ಹಾಲಿವುಡ್ ರೂಸ್ವೆಲ್ಟ್ ಹೋಟಲಿನಲ್ಲಿ ೨೭೦ ಪ್ರೇಕ್ಷಕರ ಎದುರು ಜರುಗಿತು. ಆಸ್ಕರ್ ಸಮಯ ಕಳೆದಂತೆ ತನ್ನ ಚಾಪನ್ನು ವಿಶ್ವದೆಲ್ಲಡೆ ಪಸರಿಸುತ್ತಾ, ಅದರೂಟ್ಟಿಗೆ ಪ್ರಶಸ್ತಿಯ ವರ್ಗಗಳನ್ನು ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಪೋಷಕ ನಟ ಮತ್ತು ನಟಿ, ಅತ್ಯತ್ತಮ ಚಿತ್ರಕಥೆ, ಅತ್ಯುತ್ತಮ ಆನಿಮೇಟಿಡ್ ವೈಶಿಷ್ಟ, ಅತ್ಯುತ್ತಮ ಕಿರುಚಿತ್ರ, ಹೀಗೆ ಪ್ರಸ್ತುತ ೨೪ ವಿಭಾಗಗಳಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಆಸ್ಕರ್ ಸಂಕ್ಷೀಪ್ತ ಮಾಹಿತಿ

[ಬದಲಾಯಿಸಿ]

ಇದು ಒಂಬತ್ತು ಅಕಾಡೆಮಿ ಪುರಸ್ಕಾರಗಳಲ್ಲಿ ಒಂದಾಗಿದೆ.ಆಸ್ಕರ್ ಕಿರುಪ್ರತಿಮೆ’ಯನ್ನು `ಅಕ್ಯಾಡೆಮಿ ಅವಾರ್ಡ್ ಆಫ ಮೆರಿಟ್’ ಎಂದು ಕರೆಯಲಾಗಿದೆ.ಪ್ರಪಂಚದಲ್ಲೇ ಅತ್ಯಂತ ಪ್ರತಿಷ್ಠಿತ ಪುರಸ್ಕಾರಗಳಲ್ಲೊಂದಾದ ಆಸ್ಕರ್ ಪುರಸ್ಕಾರ ಪ್ರಧಾನ ಸಮಾರಂಭವನ್ನು ಪ್ರತಿವರ್ಷ ಒಂದು ನೂರು ದೇಶಗಳಲ್ಲಿ ದೂರದರ್ಶನದ ಮೂಲಕ ನೇರಪ್ರಸಾರ ಮಾಡಲಾಗುತ್ತಿದ.ಇದರ ಸಂವಾದಿ ಪುರಸ್ಕಾರಗಳೆಂದರೆ (ಸಂಗೀತಕ್ಕೆ) ಗ್ರ್ಯಾಮಿ ಪುರಸ್ಕಾರ, ‘ಟೆಲಿವಿಷನ್’ಗೆ ಎಮ್ಮಿ ಪುರಸ್ಕಾರ ಮತ್ತು (ರಂಗಕ್ಷೇತ್ರಕ್ಕೆ) ಟೋನಿ ಪುರಸ್ಕಾರ.ಈ ಸಂಸ್ಥೆ ಸಿನಿಮಾ ಉದ್ಯಮದ ಬಗ್ಗೆ ಜನಾಭಿಪ್ರಾಯ ಸುಧಾರಿಸುವಂತೆ ಮಾಡುತ್ತದೆ.ಚಲನಚಿತ್ರ ಕ್ಷೇತ್ರದಲ್ಲಿ ಮಹತ್ತ್ವಪುರ್ಣ ಕೊಡುಗೆ ನೀಡಿದ ಗಣ್ಯರು ಇದರ ಸದಸ್ಯರಾಗಿರುತ್ತಾರೆ. ಇವರು AMPASನ ಆಡಳಿತ ಮಂಡಳಿಯ ಸದಸ್ಯರು.ಅನೇಕ ವರ್ಷಗಳ ಕಾಲ ಸೋಮವಾರ ರಾತ್ರಿ ೯ ಗಂಟೆಗೆ (ಪೂರ್ವ ಪೆಸಿಫಿಕ್ ಕಾಲಮಾನ) ನಡೆಯುತ್ತಿದ್ದ ಸಮಾರಂಭವು ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸಲು, ೧೯೯೯ ರಿಂದ ಈಚೆಗೆ ಭಾನುವಾರದಂದು ರಾತ್ರಿ 8.30 ಗಂಟೆಗೆ ನಡೆಯುತ್ತಿದೆ.

ಅಕಾಡೆಮಿ ಪ್ರಶಸ್ತಿ
87th Academy Awards
ಕೊಡಲ್ಪಡುವ ವಿಷಯಸಿನೆಮಾ ಕ್ಷೇತ್ರದಲ್ಲಿನ ಉತ್ಕೃಷ್ಟತೆಗೆ
ದೇಶಅಮೇರಿಕ ಸಂಯುಕ್ತ ಸಂಸ್ಥಾನ
ಕೊಡಿಸಲ್ಪಡುಅಕ್ಯಾಡೆಮಿ ಮೋಷನ್ ಪಿಕ್ಚರ್ಸ್ ಆಯಂಡ್ ಸೈನ್ಸಸ್
ಪ್ರಧಮವಾಗಿ ಕೊಡಲ್ಪಟ್ಟದ್ದುಮೇ ೧೬, ೧೯೨೯
ಅಧಿಕೃತ ಜಾಲತಾಣoscars.org


೯೦ನೇ ಆವೃತ್ತಿಯ ಆಸ್ಕರ್ ಪುರಸ್ಕಾರ ಸಮಾರಂಭ

೯೦ನೇ ಆವೃತ್ತಿಯ ಆಸ್ಕರ್ ಪುರಸ್ಕಾರವನ್ನು `ದೀ ಶೇಪ್ ಆಫ್ ವಾಟರ್' ಅತ್ಯುತ್ತಮ ಚಲನಚಿತ್ರವಾಗಿ ಹಾಗೂ ಒಟ್ಟು 4 ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಈ ಚಿತ್ರಕ್ಕಾಗಿ ದುಡಿದ `ಗಿಲ್ಲೆರ್ಮೊ ಡೆಲ್ ಟೊರೊ' ಅತ್ಯುತ್ತಮ ನಿರ್ದೇಶಕನಾಗಿ, ಅಲೆಕ್ಸಾಂಡ್ರೆ ಡೆಸ್ವ್ಲಾಟ್ ಶ್ರೇಷ್ಠ ಹಿನ್ನೆಲೆ ಸಂಗೀತ ನಿರ್ದೇಶಕನಾಗಿ ಮತ್ತು ಪಾಲ್ ಬೆರ್ರಿ ಆಸ್ಟೆರ್ ಶ್ರೇಷ್ಠ ನಿರ್ಮಾಣ ವಿನ್ಯಾಸಗಾರನಾಗಿ ಪುರಸ್ಕಾರವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಅತ್ಯುತ್ತಮ ನಟನಾಗಿ ಗಾರಿ ಓಲ್ಟ್‍ಮನ್, ಅತ್ಯುತ್ತಮ ನಟಿಯಾಗಿ ಫ್ರಾನ್ಸೆಸ್ ಮೆಕ್ ಡಾರ್ಮಾಂಡ್, ಅತ್ಯುತ್ತಮ ಪೋಷಕ ನಟಿಯಾಗಿ ಅಲಿಸನ್ ಜನ್ನೆ, ಅತ್ಯುತ್ತಮ ಪೋಷಕ ನಟನಾಗಿ ಸ್ಯಾಮ್ ರಾಕವೆಲ್, ಅತ್ಯುತ್ತಮ ವಿದೇಶಿ ಚಿತ್ರವಾಗಿ ಎ ಫೆಂಟಾಸ್ಟಿಕ್ ವುಮೆನ್, ಅತ್ಯುತ್ತಮ ಆನಿಮೆಟೆಡ್ ಚಿತ್ರವಾಗಿ ಕೊಕೊ, ಅತ್ಯುತ್ತಮ ಡಾಕಿಮೆಂಟ್ರಿಯಾಗಿ ಇಕಾರ್ಸ್, ಅತ್ಯುತ್ತಮ ಗೀತೆಯಾಗಿ ರಿಮೆಂಬರ್ ಮೀ, ಅತ್ಯುತ್ತಮ ಸಂಕಲನ ಮತ್ತು ಅತ್ಯುತ್ತಮ ಸೌಂಡ್ ಮಿಕ್ಸಿಂಗ್ ಡೆನ್‍ಕಿರ್ಕ್, ಹಾಗೂ ಅತ್ಯುತ್ತಮ ಛಾಯಾಗ್ರಹಣಕ್ಕೆ ರೋಜರ್ ಡೀಕೆನ್ಸ ಪ್ರಶಸ್ತಿಗಳನ್ನು ತೆಗೆದುಕೊಂಡರು. ಅದರ ಜೊತೆಗೆ ಆಸ್ಕರ್ ಪುರಸ್ಕಾರ ಸಮಾರಂಭದಲ್ಲಿ ನಿಧನರಾದ ಬಾಲಿವುಡ್ ನಟ ಶಶಿಕಪೂರ್ ಮತ್ತು ನಟಿ ಶ್ರೀದೇವಿನ್ನು ಸ್ಮರಿಸಲಾಯಿತು.

ಭಾರತದಲ್ಲಿ ಆಸ್ಕರ ಸಾಧಕರು

[ಬದಲಾಯಿಸಿ]

ಆಸ್ಕರ್ ಕುರಿತು ಭಾರತದತ್ತ ನೋಡಿದಾಗ ಇದುವರೆಗೂ ೫ ಸಾಧಕರಿಗೆ ಮಾತ್ರ ಈ ಪ್ರಶಸ್ತಿ ಲಭಿಸಿದೆ. ಅದರಲ್ಲಿ ೧೯೮೨ ರಲ್ಲಿ ಅತ್ಯುತ್ತಮ ವಸ್ತ್ರವಿನ್ಯಾಸದಲ್ಲಿ ಭಾನು ಅಥೈಯಾ ಆಸ್ಕರ್ ಪುರಸ್ಕಾರವನ್ನು ಪಡೆದ ಭಾರತದ ಮೊದಲಿಗಳು. ೧೯೯೨ ರಲ್ಲಿ ಜೀವಮಾನ ಸಾಧನೆಯ ಪ್ರಶಸ್ತಿಯನ್ನು ಸತ್ಯಜಿತ್ ರೇ ಪಡೆದುಕೊಂಡರು. ಎ.ಆರ್ ರೆಹಮಾನ್ ಮತ್ತು ಗುಲ್ಜಾರ್ ಅತ್ಯುತ್ತಮ ಮೂಲ ಗೀತೆಯಾದ ಜೈ ಹೋ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಹಾಗೆ ಅತ್ಯತ್ತಮ ಮೂಲ ಅಂಕ ಸಂಗೀತಕ್ಕೆ ಎ.ಆರ್ ರೆಹಮಾನ್ ಮತ್ತೂಮ್ಮೆ ಪ್ರಶಸ್ತಿಯನ್ನು ಪಡೆದುಕೊಂಡರು. ಅತ್ಯುತ್ತಮ ಧ್ವನಿ ಮಿಶ್ರಣಕ್ಕೆ ರಿಸುಲ್ ಪೂಕುಟ್ಟಿಯವರು ಆಸ್ಕರ್ ತೆಗೆದುಕೊಂಡರು.

ಇತರೆ ಮಾಹಿತಿ

[ಬದಲಾಯಿಸಿ]

೮೪ ನೇ ಆವೃತ್ತಿಯ ಆಸ್ಕರ್ ಪುರಸ್ಕಾರ ಸಮಾರಂಭವು ೨೦೧೧ ರಲ್ಲಿ ನಡೆಯಿತು. ೨೦೧೨ ರ ಫೆಬ್ರವರಿ ೨೬ ರಂದು ಹಾಲಿವುಡ್ ಆಯಂಡ್ ಹೈಲ್ಯಾಂಡ್ ಸೆಂಟರ್‍ನಲ್ಲಿ ಆಸ್ಕರ್ ಪುರಸ್ಕಾರ ಸಮಾರಂಭವು ನಡೆಯಿತು. ೨೦೧೨ ರಲ್ಲಿ AMPAS ಸಂಸ್ಥೆಯಲ್ಲಿ ೫೭೮೩ ಜನ ಮತ ಚಲಾಯಿಸುವ ಹಕ್ಕುಗಳ ಸದಸ್ಯರಿದ್ದರು. ರಿಚರ್ಡ್ ಅಟೆನ್‍ಬರೊ ನಿರ್ಮಾಪಕತ್ವದ `ಗಾಂಧಿ’ (೧೯೮೨) ಕ್ರಿಶ್ಚಿಯನ್ ಕಾಲ್ಸನ್ ನಿರ್ಮಾಪಕತ್ವದ `ಸ್ಲಮ್‌ಡಾಗ್ ಮಿಲಿಯನೇರ್]]’ ಚಿತ್ರಗಳೂ ಆಸ್ಕರ್ ಪುರಸ್ಕೃತ ಚಿತ್ರಗಳಾಗಿವೆ.ಜಗದ್ವಿಖ್ಯಾತಿ ಘನತೆ ಪಡೆದಿರುವ ಈ ಪ್ರಶಸ್ತಿಯನ್ನು ಜಗತ್ತಿನಾದ್ಯಂತ ವಿಮರ್ಶಕರು ಅತಿ ಗೌರವದಿಂದ ನೋಡುತ್ತಾರೆ[]

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. .ಪ್ರಜಾವಾಣಿ ಮತ್ತು ಕನ್ನಡಪ್ರಭಾ