ಅಕ್ಬರನಾಮ
Jump to navigation
Jump to search
ಅಕ್ಬರನಾಮ ಚಕ್ರವರ್ತಿ ಅಕ್ಬರ್ ನ ಜೀವನವನ್ನು ಚಿತ್ರಿಸುವ ಚಾರಿತ್ರಿಕ ಗ್ರಂಥ. ಅಕ್ಬರನ ಆಸ್ಥಾನದಲ್ಲಿದ್ದ ಅಬುಲ್ ಫಜ಼ಲ್ ಇದನ್ನು ಪರ್ಷಿಯನ್ ಭಾಷೆಯಲ್ಲಿ ರಚಿಸಿದ. ಇದರ ಶೈಲಿ ಪ್ರೌಢವಾಗಿದೆ. ಗ್ರಂಥದಲ್ಲಿ ಎರಡು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ಮೊಗಲ್ ವಂಶಾವಳಿಯನ್ನು ವಿವರಿಸಲಾಗಿದೆ. ಮೊಗಲ ಬಾದಶಹರು ತೈಮೂರನ ವಂಶಕ್ಕೆ ಸೇರಿದವರು. ಅಕ್ಬರನು ತನ್ನ ಹದಿನಾಲ್ಕನೆಯ ವಯಸ್ಸಿನಲ್ಲಿ ಪಟ್ಟಕ್ಕೆ ಬಂದನು. ಮೊದಲಿನ ಹದಿನೇಳು ವರ್ಷದ ಆಳ್ವಿಕೆಯನ್ನು ಈ ಭಾಗದಲ್ಲಿ ವರ್ಣಿಸಲಾಗಿದೆ. ಗ್ರಂಥದ ಎರಡನೆಯ ಭಾಗದಲ್ಲಿ ಅಕ್ಬರನ ಮುಂದಿನ ಇಪ್ಪತ್ತೊಂಬತ್ತು ವರ್ಷಗಳ ಆಳ್ವಿಕೆಯನ್ನು ಬಣ್ಣಿಸಲಾಗಿದೆ.

ಬೇಟೆಯಾಡುತ್ತಿರುವ ಅಕ್ಬರ್

ಮೊಘಲ್ ಸಾಮ್ರಾಟ ಅಕ್ಬರ್ ರಾತ್ರಿ ವೇಳೆ ನದಿ ದಾಟುತ್ತಿರುವುದು.