ಅಕೇಯನ್ನರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಕೇಯನ್ನರು[ಬದಲಾಯಿಸಿ]

ಪ್ರಾಚೀನ ಗ್ರೀಸ್ ದೇಶದ ಜನ. ಹೊರದೇಶಗಳಿಂದ ವಲಸೆ ಬಂದು ನೆಲೆಸಿದವರೋ ಮೂಲನಿವಾಸಿಗಳೋ ಎಂಬ ವಿಷಯದಲ್ಲಿ ಭಿನ್ನಾಭಿಪ್ರಾಯವಿದೆ. ಪ್ರ.ಶ.ಪು.13ನೆಯ ಶತಮಾನದಲ್ಲೇ ಅವರು ಗ್ರೀಸಿನ ದಕ್ಷಿಣ ಭಾಗವಾದ ಪೆಲೆಪೊನೀಸಸ್ನಲ್ಲಿ ನೆಲೆಸಿದ್ದರು. ಹಿಂದೆ ಮೈಸಿನೀ ನಾಗರಿಕತೆ ಹರಡಿದ್ದ ಪ್ರಾಂತವನ್ನೆಲ್ಲ ಅವರು ಸ್ವಾಧೀನಪಡಿಸಿಕೊಂಡಿದ್ದರು. ಪ್ರ.ಶ.ಪು. ಸು. 10ನೆಯ ಶತಮಾನದಲ್ಲಿ ಡೋರಿಯನ್ನರೆಂಬ ಹೊಸ ಜನ ಬಂದುದರ ಪರಿಣಾಮವಾಗಿ ಅಕೇಯನ್ನರಲ್ಲಿ ಕೆಲವರು ಪೆಲೊಪೊನೀಸಸ್ನ ಉತ್ತರ ಭಾಗದಲ್ಲಿ ನೆಲೆಸಿದರು; ಮಿಕ್ಕವರು ಏಷ್ಯ ಮೈನರ್ಗೆ ಮತ್ತು ದಕ್ಷಿಣ ಇಟಲಿಗೆ ವಲಸೆ ಹೋದರು. ಇವರು ರೋಮಿನೊಂದಿಗೆ ನಿರ್ನಾಮವಾಗುವವರೆಗೂ ಹೊಡೆದಾಡಿದರು.