ಅಕಿರಾ ಸುಝುಕಿ
| ಅಕಿರಾ ಸುಝುಕಿ | |
|---|---|
| ಜನನ | ೧೨ ಸೆಪ್ಟೆಂಬರ್ ೧೯೩೦ ಮುಕಾವ, ಹೊಕ್ಕೈಡೋ, ಜಪಾನ್ |
| ರಾಷ್ಟ್ರೀಯತೆ | ಜಪಾನ್ |
| ಕಾರ್ಯಕ್ಷೇತ್ರ | ರಸಾಯನಶಾಸ್ತ್ರ |
| ಸಂಸ್ಥೆಗಳು | Hokkaidō University indiana University |
| ಅಭ್ಯಸಿಸಿದ ವಿದ್ಯಾಪೀಠ | ಹೊಕೈಡೋ ವಿಶ್ವವಿದ್ಯಾಲಯ |
| ಪ್ರಸಿದ್ಧಿಗೆ ಕಾರಣ | ಸುಜುಕಿ ರಿಯಾಕ್ಷನ್ |
| ಪ್ರಭಾವಗಳು | ಹರ್ಬರ್ಟ್ ಚಾರ್ಲ್ಸ್ ಬ್ರೌನ್ |
| ಗಮನಾರ್ಹ ಪ್ರಶಸ್ತಿಗಳು | ರಸಾಯನಶಾಸ್ತ್ರದಲ್ಲಿ ನೊಬೆಲ್ ಬಹುಮಾನ (೨೦೧೦) Person of Cultural Merit (2010) Order of Culture (2010) |
ಅಕಿರಾ ಸುಝುಕಿ ೨೦೧೦ರಲ್ಲಿ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದ ಜಪಾನಿನ ರಸಾಯನಶಾಸ್ತ್ರಜ್ಞ.ಅವರ ಮೊದಲ ಪ್ರಬಂಧವು 1979 ರಲ್ಲಿ ಪ್ರಕಟವಾದ ಸುಜುಕಿ ಪ್ರಕ್ರಿಯೆ ಎಂದು ಕರೆಯಲ್ಪಡುವ ಪಲ್ಲಾಡಿಯಮ್ (0) ಸಂಕೀರ್ಣವನ್ನು ಬಳಸಿಕೊಂಡು ಆರಿಲ್ ಅಥವಾ ವಿನೈಲ್ ಬೋರೋನಿಕ್ ಆಮ್ಲ ಮತ್ತು ಆರಿಲ್ ಅಥವಾ ವಿನೈಲ್ ಬೋರೋನಿಕ್ ಹಾಲೈಡ್ ನಡುವಿನ ಸಾವಯವ ಕ್ರಿಯೆಯ ಕುರಿತಾಗಿತ್ತು.[೧][೨][೩][೪]

ಪಲ್ಲಾಡಿಯಮ್-ವೇಗವರ್ಧಿತ ಅಡ್ಡ-ಜೋಡಣೆ ಸಾವಯವ ಸಂಶ್ಲೇಷಣೆಯ ಆವಿಷ್ಕಾರಕ್ಕಾಗಿ ಅವರು 2010 ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ರಿಚರ್ಡ್ ಎಫ್. ಹೆಕ್ ಮತ್ತು ಐಚಿ ನೆಗಿಶಿ ಅವರೊಂದಿಗೆ ಹಂಚಿಕೊಂಡರು .
ಬಾಲ್ಯ ಮತ್ತು ವಿದ್ಯಾಭ್ಯಾಸ
[ಬದಲಾಯಿಸಿ]ಸುಜುಕಿ ಸೆಪ್ಟೆಂಬರ್ 12, 1930 ರಂದು ಹೊಕ್ಕೈಡೋದ ಮುಕಾವಾದಲ್ಲಿ ಜನಿಸಿದರು. ಅವರ ತಂದೆ ಇವರು ಪ್ರೌಢಶಾಲೆಯಲ್ಲಿದ್ದಾಗ ನಿಧನರಾದರು. ಅವರು ಹೊಕ್ಕೈಡೋ ವಿಶ್ವವಿದ್ಯಾಲಯದಲ್ಲಿ (ಹೊಕುಡೈ) ರಸಾಯನಶಾಸ್ತ್ರವನ್ನು ಅಧ್ಯಯನ ಮಾಡಿದರು ಮತ್ತು ಅಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುವಾಗ ಪಿಎಚ್‌ಡಿ ಪಡೆದರು ಬಾಲ್ಯದಲ್ಲಿ ಅವರ ನೆಚ್ಚಿನ ವಿಷಯ ಅಂಕಗಣಿತವಾಗಿರುವುದರಿಂದ ಅವರು ಆರಂಭದಲ್ಲಿ ಗಣಿತದಲ್ಲಿ ಪ್ರಮುಖರಾಗಲು ಬಯಸಿದ್ದರು .ಅವರ ಮೆಚ್ಚಿದ ಎರಡು ಪುಸ್ತಕ, ಒಂದು ಹಾರ್ವರ್ಡ್ ವಿಶ್ವವಿದ್ಯಾಲಯದ ಲೂಯಿಸ್ ಫೈಸರ್ ಬರೆದ ಸಾವಯವ ರಸಾಯನಶಾಸ್ತ್ರದ ಪಠ್ಯಪುಸ್ತಕ ಮತ್ತು ಇನ್ನೊಂದು ಪರ್ಡ್ಯೂ ವಿಶ್ವವಿದ್ಯಾಲಯದ ಹರ್ಬರ್ಟ್ ಸಿ. ಬ್ರೌನ್ ಬರೆದ ಹೈಡ್ರೋಬೊರೇಷನ್,ಗಳ ಮುಖಾಮುಖಿಯಾಗಿದ್ದು, ಇದರಿಂದ ಅವರು ಸಾವಯವ ಸಂಶ್ಲೇಷಣೆಯ ಹಾದಿಯಲ್ಲಿ ಮುನ್ನಡೆಯಲು ಅವಕಾಶವಾಯಿತು .
ಉಲ್ಲೇಖಗಳು
[ಬದಲಾಯಿಸಿ]- ↑ Miyaura, Norio; Yamada, Kinji; Suzuki, Akira (1979). "A new stereospecific cross-coupling by the palladium-catalyzed reaction of 1-alkenylboranes with 1-alkenyl or 1-alkynyl halides". Tetrahedron Letters. 20 (36): 3437–3440. doi:10.1016/S0040-4039(01)95429-2. hdl:2115/44006. S2CID 53532765. Archived from the original on October 21, 2014. Retrieved October 13, 2010.
- ↑ Miyaura, N.; Suzuki, A. Chem. Commun. 1979, 866.
- ↑ Suzuki, A. Pure_Appl._Chem. 1991, 63, 419–422. (Review)
- ↑ Suzuki, A. J. Organometallic Chem. 1999, 576, 147–168. (Review)