ವಿಷಯಕ್ಕೆ ಹೋಗು

ಅಮೇರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಂಬೇರ್ ಇಂದ ಪುನರ್ನಿರ್ದೇಶಿತ)
ಅಮೇರ್ ಕೋಟೆ , ಜೈಪುರ, c. ೧೮೫೮ರ ಚಿತ್ರ

ಅಮೇರ್ ಅಥವಾ ಅಂಬೇರ್ ರಾಜಸ್ಥಾನ ರಾಜ್ಯದಲ್ಲಿರುವ ಒಂದು ನಗರವಾಗಿತ್ತು. ಈಗ ಇದು ಜೈಪುರ ನಗರದೊಂದಿಗೆ ವಿಲೀನವಾಗಿದೆ.ಸುತ್ತಲೂ ಬಂಡೆಕಲ್ಲುಗಳ ಬೆಟ್ಟ, ನಡುವಿನಲ್ಲಿ ಸರೋವರದಿಂದ ಕೂಡಿದ ಈ ಸ್ಥಳವು ಅತ್ಯಂತ ಸುಂದರವಾಗಿದೆ.ಇಲ್ಲಿರುವ ಅರಮನೆಗಳು ರಜಪೂತ ವಾಸ್ತುಶಿಲ್ಪದ ಉತ್ತಮ ಉದಾಹರಣೆಗಳಾಗಿವೆ. ಕ್ರಿ.ಶ.೯೫೪ ರ ಸುಮಾರಿನ ಶಾಸನಗಳು ಈ ನಗರದ ಅಂದಿನ ಅಸ್ತಿತ್ವವನ್ನು ಸಾಬೀತು ಪಡಿಸುತ್ತವೆ. ಹನ್ನರಡನೆಯ ಶತಮಾನದಲ್ಲಿ ಕಛ್ವಾ ರಜಪೂತರು ಈ ನಗರವನ್ನು ವಶಪಡಿಸಿಕೊಂಡು ಅದನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿದರು.ಇಲ್ಲಿರುವ ಅರಮನೆಯನ್ನು ೧೬೦೦ರ ಸುಮಾರಿಗೆ ಒಂದನೆಯ ರಾಜಾ ಮಾನ್ ಸಿಂಗ್ ನಿರ್ಮಿಸಲು ಪ್ರಾರಂಭಿಸಿದನು.ಈ ಕಟ್ಟಡ ಸುಮಾರು ೨೦೦ ವರ್ಷಗಳಷ್ಟು ದೀರ್ಘಕಾಲ ಕಟ್ಟಲ್ಪಟ್ಟು ಹದಿನೆಂಟನೆಯ ಶತಮಾನದಲ್ಲಿ ಸವಾಯ್ ಜೈ ಸಿಂಗ್ ನ ಕಾಲದಲ್ಲಿ ಸಂಪೂರ್ಣವಾಯಿತು. ಪಕ್ಕದಲ್ಲಿರುವ ಸರೋವರದಲ್ಲಿ ಕಾಣುವ ಈ ಅರಮನೆಯ ಪ್ರತಿಬಿಂಬ ಮತ್ತು ದೃಶ್ಯ ವರ್ಣನಾತೀತವಾಗಿದೆ.

ಶೀಶ್ ಮಹಲ (mirror palace)
ಎಡ:ಗಣೇಶ್ ಪೋಲ್ ನ ಪರದೆಗಳು. ಬಲ: ಗಣೇಶ್ ಪೋಲ್ ನ ದೃಶ್ಯ.
ಮುಂಜಾನೆಯಲ್ಲಿ ಕಾಣುವ ಅಮೇರ್ ಕೋಟೆಯ ದೃಶ್ಯ
ಮುಸ್ಸಂಜೆಯಲ್ಲಿ ಅಂಬೇರ್ ಕೋಟೆಯ ವಿಹಂಗಮ ದೃಶ್ಯ
"https://kn.wikipedia.org/w/index.php?title=ಅಮೇರ್&oldid=608070" ಇಂದ ಪಡೆಯಲ್ಪಟ್ಟಿದೆ