ವಿಷಯಕ್ಕೆ ಹೋಗು

ಅಂದಾನಿ, ವಿ.ಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಂದಾನಿ, ವಿ.ಜಿ(೧೯೪೭) ಹೆಸರಾಂತ ಚಿತ್ರಕಲಾವಿದ.

ಬಾಲ್ಯ ಮತ್ತು ವಿದ್ಯಾಭ್ಯಾಸ

[ಬದಲಾಯಿಸಿ]

ಗುಲ್ಬರ್ಗಾ ಜಿಲ್ಲೆ ಕೀರಣಗಿ ಗ್ರಾಮದಲ್ಲಿ ಜನಿಸಿದರು (೧೯೪೭). ಗುಲ್ಬರ್ಗಾದ ಆದರ್ಶ ಕಲಾಮಂದಿರದಿಂದ ಚಿತ್ರಕಲೆಯಲ್ಲಿ ಡಿಪ್ಲೊಮಾ ಶಿಕ್ಷಣ ಪಡೆದರು (೧೯೬೯). ಬನಸ್ಥಲಿ ವಿದ್ಯಾಪೀಠದಲ್ಲಿ ಬಿತ್ತಿಚಿತ್ರ ರಚನೆಯ ಕುರಿತು ಅಧ್ಯಯನ ನಡೆಸಿದರು (೧೯೭೦). ಗುಲ್ಬರ್ಗಾದ ಐಡಿಯಲ್ ಕಾಲೇಜ್ ಆಫ್ ವಿಷುಯಲ್ ಅರ್ಟ್ಸ್ ನ ಸ್ನಾತಕೋತ್ತರ ಕೇಂದ್ರದ ಪ್ರಾಚಾರ್ಯರಾಗಿ ಸೇವೆಸಲ್ಲಿಸಿದ್ದರು.[][]

ಕಲಾ ಪ್ರದರ್ಶನ

[ಬದಲಾಯಿಸಿ]

ಭಾರತದ ಪ್ರಮುಖ ನಗರಗಳಲ್ಲಿ ಹಾಗೂ ವಿದೇಶಗಳಲ್ಲಿ ಇವರು ಕಲಾಪ್ರದರ್ಶನ ನಡೆಸಿದ್ದಾರೆ. ರಾಷ್ಟ್ರಮಟ್ಟದ ಹಾಗೂ ರಾಜ್ಯಮಟ್ಟದ ಅನೇಕ ಕಲಾಶಿಬಿರಗಳಲ್ಲಿ ಪಾಲ್ಗೊಂಡಿದ್ದರು.

ಪ್ರಶಸ್ತಿ ಮತ್ತು ಗೌರವಗಳು

[ಬದಲಾಯಿಸಿ]

ಇವರಿಗೆ ಅನೇಕ ಪ್ರಶಸ್ತಿ, ಗೌರವಗಳು ಸಂದಿವೆ. ಅವುಗಳಲ್ಲಿ ಮುಖ್ಯವಾದವು: ಇಲಸ್ಟ್ರೇಟೆಡ್ ವೀಕ್ಲಿ ಪ್ರದರ್ಶನ ಪ್ರಶಸ್ತಿ (೧೯೬೩), ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಖಿಲ ಭಾರತ ಪ್ರದರ್ಶನ ಬಹುಮಾನ (೧೯೬೯), ಕರ್ನಾಟಕ ವಿಶ್ವವಿದ್ಯಾಲಯದ ಪ್ರದರ್ಶನ ಪ್ರಶಸ್ತಿ (೧೯೭೧), ಕರ್ನಾಟಕ ಲಲಿತಕಲಾ ಅಕಾಡೆಮಿಯ ಪ್ರದರ್ಶನ ಬಹುಮಾನ (೧೯೯೨), ಹೈದರಾಬಾದ್ ಆರ್ಟ್ ಸೊಸೈಟಿ ಪ್ರಶಸ್ತಿ (೧೯೮೫), ಕೇಂದ್ರ ಸರ್ಕಾರದ ಫೆಲೋಶಿಪ್ (೧೯೮೯), ರಾಷ್ಟ್ರೀಯ ಪ್ರಶಸ್ತಿ (೧೯೯೧), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೯೨), ಲಲಿತ ಕಲಾ ಅಕಾಡೆಮಿ ಪ್ರಶಸ್ತಿ (೧೯೯೩).

ಸಾರ್ವಜನಿಕ ಜೀವನ

[ಬದಲಾಯಿಸಿ]

ಕಲೆಗೆ ಸಂಬಂದಿಸಿದ ಅನೇಕ ಸಮಿತಿಗಳಲ್ಲಿ ಸದಸ್ಯರಾಗಿಯೂ ಇವರು ಸೇವೆಸಲ್ಲಿಸಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯರಾಗಿ,ಅನಂತರ ಅದರ ಅಧ್ಯಕ್ಷರಾಗಿ (೧೯೯೮-೨೦೦೧) ಸೇವೆಸಲ್ಲಿಸಿದ್ದಾರೆ. ಕೇಂದ್ರ ಲಲಿತ ಕಲಾ ಅಕಾಡಮಿಯ ಸದಸ್ಯರೂ ತೀರ್ಪುಗಾರರೂ ಆಗಿದ್ದರು (೧೯೮೮-೯೨). ಸರ್ಕಾರದ ಹಾಗೂ ವಿಶ್ವವಿದ್ಯಾಲಯಗಳ ಅನೇಕ ಕಲಾ ಶೈಕ್ಷಣಿಕ ಮಂಡಳಿಗಳಲ್ಲಿಯೂ ಸದಸ್ಯರಾಗಿ, ಕಾರ್ಯದರ್ಶಿಗಳಾಗಿ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಕಲಾಕೃತಿಗಳು ಭಾರತದ ಅನೇಕ ಪ್ರದರ್ಶನ ಭವನಗಳಲ್ಲಿ, ಸರ್ಕಾರಿ ಹಾಗೂ ಅರೆ ಸರ್ಕಾರಿ ಕಚೇರಿಗಳಲ್ಲಿ, ಕಲಾ ಪ್ರೇಮಿಗಳ ಮನೆಗಳಲ್ಲಿ ಮತ್ತು ವಿದೇಶಗಳಲ್ಲಿ ಸಂಗ್ರಹಗೊಂಡಿವೆ.

ಉಲ್ಲೇಖಗಳು

[ಬದಲಾಯಿಸಿ]
  1. "ವಿ.ಜಿ. ಅಂದಾನಿ". kanaja.in. Retrieved 2 May 2020.
  2. "ಹಳ್ಳಿಗಳೇ ಲಕಲಜೀವನಕ್ಕೆ ಸ್ಪೂರ್ತಿ". www.prajavani.net. Retrieved 2 May 2020.