ಅಂತಿಮಜಯದ ಅನಿಶ್ಚಿತತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಂತಿಮಜಯದ ಅನಿಶ್ಚಿತತೆ[ಬದಲಾಯಿಸಿ]

ಸೈನ್ಯಾಧಿಕಾರಿ ತ್ವರಿತವಾಗಿಯಾಗಲೀ ಮಂದಗತಿಯಲ್ಲಾಗಲೀ ಕಾರ್ಯಕ್ರಮವನ್ನು ಕೈಕೊಳ್ಳಲು ಬಾರದ ಯುದ್ಧ ಪ್ರಸಂಗ (ಫಾ‌ಗ ಆಫ್ ವಾರ್). ಸಾಮಾನ್ಯವಾಗಿ ಯುದ್ಧದಲ್ಲಿ ಜಯಾಪಜಯಗಳು ಅನಿಶ್ಚಿತ. ಆದರೆ ಇಂಥ ವಿಶಿಷ್ಟ ಪ್ರಸಂಗಗಳು ಅನಿರೀಕ್ಷಿತ ಸಂಗತಿ ಅಥವಾ ಘಟನೆಗಳ ಪರಿಣಾಮವಾಗಿ ಉದ್ಭವಿಸುತ್ತವೆ. ಉದಾಹರಣೆಗಾಗಿ ಹೇಳುವುದಾದರೆ ಶತ್ರು ಅಧಿಕ ಪ್ರಮಾಣದಲ್ಲಿ ಅಗ್ನಿಶಕ್ತಿಯನ್ನೊ ಸೈನ್ಯಬಲವನ್ನೊ ಪ್ರಯೋಗಿಸಬಹುದು ಇಲ್ಲವೆ ಯುದ್ಧ ಕಾರ್ಯಾಚರಣೆಯ ಕ್ಷೇತ್ರ ಸೈನ್ಯದ ಚಲನವಲನಕ್ಕೆ ಅಡ್ಡಿ ಆತಂಕಗಳನ್ನು ಉಂಟುಮಾಡುವಂಥದಾಗಿರಬಹುದು. ಇವೇ ಮುಂತಾದ ಸನ್ನಿವೇಶಗಳಲ್ಲಿ ಆತುರದ ನಿರ್ಣಯ ಪ್ರಸಂಗವನ್ನು ಮತ್ತಷ್ಟು ಹದಗೆಡಿಸಬಹುದು. ಆತುರಾತುರವಾಗಿ ನಿರ್ಣಯ ಮಾಡುವುದಾದರೆ ಅನಿರೀಕ್ಷಿತವಾದ ವಿನಾಶಕ್ಕೆ ಎಡೆಗೊಡಬಹುದು.