ಅಂತರಜಾಲ ಶಿಷ್ಟಾಚಾರ (Internet Protocol)
Internet protocol suite |
---|
Application layer |
Transport layer |
Internet layer |
Link layer |
ಅಂತರಜಾಲ ಶಿಷ್ಟಾಚಾರ (ಐಪಿ (IP) ) ಎಂಬುದು, ಅಂತರಜಾಲ ಶಿಷ್ಟಾಚಾರ ಸಂಪುಟ (Internet Protocol Suite) ಬಳಸಿ ದತ್ತಾಂಶ ಅಥವಾ ಮಾಹಿತಿಯನ್ನು ಅಂತರಜಾಲದ ಮೂಲಕ ಕಂತುಗಳಾಗಿ ರವಾನಿಸುವ ಪ್ರಮುಖ ಸಂವಹನಾ ಶಿಷ್ಟಾಚಾರ. ಜಾಲಗಳ ಸರಹದ್ದುಗಳನ್ನು ದಾಟಿ ಮಾಹಿತಿ ಕಂತುಗಳನ್ನು ರವಾನಿಸುವ ಕಾರಣ, ಇದು ಅಂತರಜಾಲವನ್ನು ಸ್ಥಾಪಿಸುವಲ್ಲಿನ ಪ್ರಾಥಮಿಕ ಶಿಷ್ಟಾಚಾರ. ಅಂತರಜಾಲ ಶಿಷ್ಟಾಚಾರ ಸಂಪುಟದ ಅಂತರಜಾಲ ಪದರದಲ್ಲಿ ಅಂತರಜಾಲ ಶಿಷ್ಟಾಚಾರವು ಪ್ರಮುಖ ವಿಧಾನವಾಗಿದೆ. ಕೇವಲ ಸರಿಪಡಿಸುವ ವಿಳಾಸಗಳನ್ನು ಅವಲಂಬಿಸಿ, ಮಾಹಿತಿ-ಕಂತುಗಳನ್ನು ಮೂಲ ಪ್ರಧಾನ ಕಂಪ್ಯೂಟರ್ (host) ಇಂದ ಉದ್ದಿಷ್ಟ ಪ್ರಧಾನ ಕಂಪ್ಯೂಟರ್‌ಗೆ ರವಾನಿಸುವ ಕಾರ್ಯ ನೆರವೇರಿಸುತ್ತದೆ. ಈ ಉದ್ದೇಶಕ್ಕಾಗಿ, ಅಂತರಜಾಲ ಶಿಷ್ಟಾಚಾರವು ವಿಳಾಸ ಗೊತ್ತುಪಡಿಸಲು ಮತ್ತು ಅಡಕುಗೊಂಡ ಮಾಹಿತಿ ಕಂತುಗಳನ್ನು ಸಂಗ್ರಹಿಸಿ ಕೋಶೀಕರಿಸಲು ಶಿಸ್ತು ಬದ್ದ ವಿಧಾನ ಮತ್ತು ರಚನೆಗಳನ್ನು ವ್ಯಾಖ್ಯಾನಿಸುತ್ತದೆ. ಐತಿಹಾಸಿಕವಾಗಿ, ವಿಂಟ್ ಸರ್ಫ್ ಮತ್ತು ಬಾಬ್ ಕಾಹ್ನ್ ಅವರು 1974ರಲ್ಲಿ ಪರಿಚಯಿಸಿದ ಮೂಲತಃ ರವಾನಾ ನಿಯಂತ್ರಣಾ ಯೋಜನೆ(Transmission Control Program)ಯಲ್ಲಿ, ಅಂತರಜಾಲ ಶಿಷ್ಟಾಚಾರವು ಸಂಪರ್ಕರಹಿತ ದತ್ತಾಂಶ-ಕಂತು ರವಾನಾ ಸೇವೆಯಾಗಿತ್ತು. ಇನ್ನೊಂದು, ಸಂಪರ್ಕ-ಪ್ರಧಾನವಾದ ರವಾನಾ ನಿಯಂತ್ರಣಾ ಶಿಷ್ಟಾಚಾರ ಇಲ್ಲಿ ಕೆಲಸ ಮಾಡುತ್ತದೆ. (Transmission Control Protocol (TCP)). ಆದ್ದರಿಂದ, ಅಂತರಜಾಲ ಶಿಷ್ಟಾಚಾರ ಸಂಪುಟವನ್ನು ಆಗಾಗ್ಗೆ ಟಿಸಿಪಿ/ಐಪಿ (TCP/IP) ಎಂದು ಉಲ್ಲೇಖಿಸಲಾಗುತ್ತದೆ. ಇಂದು 'Internet Protocol Version 4 ((IPv4))(ಅಂತರಜಾಲ ಶಿಷ್ಟಾಚಾರ 4ನೆಯ ಆವೃತ್ತಿ)' ಎನ್ನಲಾದ ಅಂತರಜಾಲ ಶಿಷ್ಟಾಚಾರದ ಮೊಟ್ಟಮೊದಲ ಪ್ರಮುಖ ಆವೃತ್ತಿಯು ಅಂತರಜಾಲದ ಪ್ರಬಲ ಶಿಷ್ಟಾಚಾರವಾಗಿದೆ. ಇತ್ತೀಚೆಗೆ Internet Protocol Version 6 ((IPv6)) ಅಂತರಜಾಲ ಶಿಷ್ಟಾಚಾರದ 6ನೆಯ ಆವೃತ್ತಿಯು ಸಕ್ರಿಯವಾಗಿದ್ದು ವಿಶ್ವದಾದ್ಯಂತ ಸ್ಥಾಪಿಸಲಾಗುತ್ತಿದ್ದರೂ, IPv4 ಬಹಳಷ್ಟು ಕಡೆ ಚಾಲ್ತಿಯಲ್ಲಿದ್ದು, ತನ್ನ ಪ್ರಾಬಲ್ಯ ಮೆರೆಯುತ್ತಿದೆ.
ಐಪಿ ಒದಗಿಸುವ ಸೇವೆಗಳು
[ಬದಲಾಯಿಸಿ]ಒಂದು ಅಥವಾ ಹೆಚ್ಚು ಐಪಿ ಜಾಲಗಳಲ್ಲಿ, ಪ್ರಧಾನ ಕಂಪ್ಯೂಟರ್‌ಗಳ ವಿಷಯ ಸೂಚಿಗಳ ಮುಖಾಮುಖಿಯಾಗಿ ಅವುಗಳ ವಿಳಾಸವನ್ನು ನಿಗದಿಪಡಿಸುವುದು, ಹಾಗೂ, ಮೂಲ ಪ್ರಧಾನ ಕಂಪ್ಯೂಟರ್‌ನಿಂದ ಉದ್ದಿಷ್ಟ ಪ್ರಧಾನ ಕಂಪ್ಯೂಟರ್‌ಗೆ ಮಾಹಿತಿ-ಕಂತುಗಳನ್ನು ರವಾನಿಸುವುದು, ಅಂತರಜಾಲ ಶಿಷ್ಟಾಚಾರದ ಕಾರ್ಯವಾಗಿದೆ. ಈ ಉದ್ದೇಶಕ್ಕಾಗಿ, ಎರಡು ಕಾರ್ಯಗಳುಳ್ಳ ವಿಳಾಸ ಗೊತ್ತುಪಡಿಸುವಿಕೆಯ ವ್ಯವಸ್ಥೆಯನ್ನು ಅಂತರಜಾಲ ಶಿಷ್ಟಾಚಾರವು ವ್ಯಾಖ್ಯಾನಿಸುತ್ತದೆ. ಅಡಚಣೆಗಳುಳ್ಳ ಪ್ರಧಾನ ಕಂಪ್ಯೂಟರ್‌ಗಳನ್ನು ಗುರುತಿಸಿ, ನಿಗದಿತ ತಾರ್ಕಿಕ ಸ್ಥಳ ಸೇವೆ ಒದಗಿಸುತ್ತವೆ. ಉದ್ದಿಷ್ಟ ಪ್ರಧಾನ ಕಂಪ್ಯೂಟರ್‌ಗೆ ತಲುಪಿಸಲು ಬೇಕಾದ ಮಾಹಿತಿ (meta-data) ಹೊಂದಿರುವ ಶಿರೋಲೇಖ(header)ವನ್ನು ಪ್ರತಿಯೊಂದು ಕಂತಿಗೂ ಬದ್ಧಗೊಳಿಸಲಾಗಿರುತ್ತದೆ. ಬದ್ಧಗೊಳಿಸುವ ಈ ವಿಧಾನಕ್ಕೆ 'ಕೋಶೀಕರಣ' ಎನ್ನಲಾಗುತ್ತದೆ. ಐಪಿ ಎಂಬುದು ಯಾವುದೇ ಸಂಪರ್ಕರಹಿತ ಶಿಷ್ಟಾಚಾರ (connectionless protocol)ವಾಗಿದೆ. ರವಾನೆಗೆ ಮುಂಚೆ, ಇದಕ್ಕೆ ಯಾವುದೇ ರೀತಿಯ ಪರಿಧಿಯಲ್ಲಿರುವ ಮಂಡಲದ (circuit) ವ್ಯವಸ್ಥೆಯ ಅಗತ್ಯವಿಲ್ಲ.
ವಿಶ್ವಸನೀಯತೆ
[ಬದಲಾಯಿಸಿ]ಜಾಲದ ಮೂಲಭೂತ ಸೌಕರ್ಯವು ಯಾವುದೇ ಒಂದು ಜಾಲದ ಅಂಶ ಅಥವಾ ರವಾನಾ ಮಾಧ್ಯಮದಲ್ಲಿ ವಿಶ್ವಸನೀಯವಾಗಿರುವುದಿಲ್ಲ; ಕೊಂಡಿಗಳು ಮತ್ತು ಘಟಕಗಳ ಲಭ್ಯತೆಯ ವಿಚಾರದಲ್ಲಿ ಅವು ಕ್ರಿಯಾಸಂಬದ್ಧವಾಗಿರುತ್ತವೆ ಎಂಬುದನ್ನು, ಅಂತರಜಾಲ ಶಿಷ್ಟಾಚಾರಗಳ ವಿನ್ಯಾಸ ತತ್ತ್ವವು ಕಲ್ಪಿಸುತ್ತವೆ. ಜಾಲದಲ್ಲಿ ಮಾಹಿತಿ ಸಂಚಾರ ಮತ್ತು ರವಾನಾ ಕಾರ್ಯಗಳನ್ನು ನಿಯಂತ್ರಿಸಿ ನಿರ್ವಹಿಸುವಂತಹ ಯಾವುದೇ ಕೇಂದ್ರೀಯ ವ್ಯವಸ್ಥಾಪನ ಅಥವಾ ಕ್ರಿಯಾಶೀಲತೆ ಮಾಪನಾ ವ್ಯವಸ್ಥೆಗಳಿಲ್ಲ. ಜಾಲದ ಸಂಕೀರ್ಣತೆಯನ್ನು ಕಡಿಮೆಗೊಳಿಸುವ ಅನುಕೂಲಕ್ಕಾಗಿ, ಪ್ರತಿಯೊಂದು ಮಾಹಿತಿ ರವಾನೆಯಲ್ಲೂ ಸಂಕೇತಮೂಲ(intelligence)ಗಳನ್ನು ತುದಿ-ಘಟಕದಲ್ಲಿ ಸ್ಥಾಪಿಸಲಾಗಿದೆ. end-to-end principle.ಒಂದು ಕೊನೆಯಿಂದ ಇನ್ನೊಂದರ ವರೆಗಿನ ಸಂವಹನದ ಕೊಂಡಿ ಸಂಪರ್ಕ ಸಾಧನವಿದಾಗಿದೆ. ರವಾನಾ ಪಥದಲ್ಲಿರುವ ಮಾರ್ಗಸೂಚಕ (router)ಗಳು, ಉದ್ದಿಷ್ಟ ವಿಳಾಸದ (destination address) ಮಾರ್ಗಸೂಚಿಯ ಮೂಲಾರ್ಧದ (routing prefix) ಮುಂದಿನ ಜ್ಞಾತ ಸ್ಥಳೀಯ ದ್ವಾರಕ್ಕೆ (local gateway) ಕಂತುಗಳನ್ನು ಸರಳವಾಗಿ ಮುಂದೆ ಕಳುಹಿಸುತ್ತದೆ. ಈ ವಿನ್ಯಾಸದ ಫಲವಾಗಿ, ಅಂತರಜಾಲ ಶಿಷ್ಟಾಚಾರವು ಸಾಧ್ಯವಾದಷ್ಟು ಉತ್ತಮ ರವಾನೆ ಪ್ರಯತ್ನಗಳನ್ನು ಒದಗಿಸುತ್ತದೆ, ಹಾಗೂ ಅದರ ಸೇವೆಯನ್ನು ಅವಿಶ್ವಸನೀಯ ಎಂದು ಬಣ್ಣಿಸಬಹುದು. ಜಾಲದ ರಚನಾ ಪರಿಭಾಷೆಯಲ್ಲಿ, ರವಾನೆಯ ಸಂಪರ್ಕ-ಪ್ರಧಾನದ ಮಹತ್ವದ ವಿಧಾನಕ್ಕೆ ತದ್ವಿರುದ್ಧವಾಗಿ, ಇದು ಸಂಪರ್ಕರಹಿತ ಶಿಷ್ಟಾಚಾರ. ವಿಶ್ವಸನೀಯತೆಯ ಕೊರತೆಯ ಪರಿಣಾಮವಾಗಿ, ಕೆಳಕಂಡ ದೋಷಗಳು ಸಂಭವಿಸುತ್ತವೆ:
- ಮಾಹಿತಿ ಹಾಳಾಗುವಿಕೆ
- ಕಳುವಾದ ಮಾಹಿತಿ ಕಂತುಗಳು
- ಎರಡು ಸಲ ಪುನರಾವರ್ತಿಸುವ ಮಾಹಿತಿ
- ತಪ್ಪಾದ ಕ್ರಮದಲ್ಲಿ ಮಾಹಿತಿ ರವಾನೆ; ಉದಾಹರಣೆಗೆ 'A' ಕಂತನ್ನು 'B' ಕಂತಿಗೆ ಮುಂಚೆ ಕಳುಹಿಸಿದ್ದರೂ, 'B' ಕಂತು 'A' ಕಂತಿನ ಮಂಚೆಯೇ ಉದ್ದಿಷ್ಟ ಕಂಪ್ಯೂಟರ್‌ಗೆ ತಲುಪುವುದು. ಮಾರ್ಗ-ನಿರ್ಣಯವು (routing) ಕ್ರಿಯಾಸಂಬದ್ಧವಾಗಿರುವ, ಹಾಗೂ ಮುಂಚೆ ರವಾನೆಯಾದ ಮಾಹಿತಿ-ಕಂತುಗಳ ಪಥ ಕುರಿತು ಯಾವುದೇ ಮಾಹಿತಿ ಲಭ್ಯವಿರದ ಕಾರಣ, ಮಾಹಿತಿಯ ಮೊದಲ ಕಂತು ಇನ್ನಷ್ಟು ಸುತ್ತಿಬಳಸುವ ಮಾರ್ಗದಲ್ಲಿ ಪ್ರಯಾಣಿಸಿ ಉದ್ದಿಷ್ಟ ಕಂಪ್ಯೂಟರ್‌ಗೆ ಸೇರುವ ಸಾಧ್ಯತೆಗಳಿವೆ.
ನಾಲ್ಕನೆಯ ಆವೃತ್ತಿ(IPv4)ಯಲ್ಲಿ ಅಂತರಜಾಲ ಶಿಷ್ಟಾಚಾರವು ಒದಗಿಸುವ ಏಕೈಕ ಸಹಾಯವೆಂದರೆ, ಮಾರ್ಗ-ನಿರ್ಣಯದ ಘಟಕಗಳಲ್ಲಿ ಚೆಕ್‌ಸಮ್ (checksum) ಗಣಿಸುವ ಮೂಲಕ ಐಪಿ ಕಂತು ಶಿರೋಲೇಖವು ದೋಷಮುಕ್ತವಾಗಿದೆ ಎಂದು ಖಾತರಿಪಡಿಸುವುದು. ಈ ಕ್ರಮದ ಮೂಲಕ ಆ ಹಂತದಲ್ಲಿಯೇ ದೋಷಪೂರಿತ ಕಂತುಗಳನ್ನು ಅಲ್ಲಿಯೇ ತೆಗೆದು ತ್ಯಜಿಸಲಾಗುತ್ತದೆ. ಈ ನಿದರ್ಶನದಲ್ಲಿ, ಯಾವುದೇ ತುದಿ-ಘಟಕಕ್ಕೆ ಸೂಚನೆ ರವಾನಿಸುವ ಅಗತ್ಯವಿಲ್ಲ, ಆದರೂ, ಅಂತರಜಾಲ ನಿಯಂತ್ರಣಾ ಸಂದೇಶ ಶಿಷ್ಟಾಚಾರ (Internet Control Message Protocol) (ICMP)ಯಲ್ಲಿ ಈ ರೀತಿಯ ಸೂಚನೆ ರವಾನಿಸಲು ಅವಕಾಶವಿದೆ. ಇನ್ನೊಂದೆಡೆ, IPv6 ಆವೃತ್ತಿಯಲ್ಲಿ, ಜಾಲದಲ್ಲಿ ಮಾರ್ಗನಿರ್ಣಯ ಅಂಶಗಳ ಮೂಲಕ ತ್ವರಿತ ರವಾನೆಯ ಅನುಕೂಲ ಒದಗಿಸಲು, ಐಪಿ ಶಿರೋಲೇಖ ಚೆಕ್‌ಸಮ್ (ಸಮಗ್ರ ದತ್ತಾಂಶಗಳ ಸೇರಿಕೆ)ಬಳಕೆಯನ್ನು ಕೈಬಿಟ್ಟಿದೆ. ಇಂತಹ ವಿಶ್ವಸನೀಯತೆಗೆ ಸಂಬಂಧಿಸಿ ಯಾವುದೇ ತೊಂದರೆಗಳನ್ನು ಸರಿಪಡಿಸುವುದು, ಮೇಲ್ನೋಟದ ಮೇಲ್ಪದರ ಶಿಷ್ಟಾಚಾರ (upper layer protocol)ದ ಕಾರ್ಯವಾಗಿದೆ. ಉದಾಹರಣೆಗೆ, ಮಾಹಿತಿಯ ಕಂತುಗಳು ಸರಿಯಾದ ಕ್ರಮದಲ್ಲಿ ಉದ್ದಿಷ್ಟ ಕಂಪ್ಯೂಟರ್‌ಗೆ ಸೇರಬೇಕಾದಲ್ಲಿ, ಮೇಲ್ಪದರವು ಮಾಹಿತಿಯನ್ನು ಕೆಲಕ್ಷಣ ಕೂಡಿಟ್ಟುಕೊಂಡು ನಂತರ ಅನ್ವಯಿಕೆಗೆ ರವಾನಿಸುವುದು. ವಿಶ್ವಸನೀಯತೆಯ ವಿಚಾರದ ಜೊತೆಗೆ, ಇನ್ನೂ ಹೆಚ್ಚಿಗೆ, ಅಂತರಜಾಲ ಮತ್ತು ಅದರ ಅಂಶಗಳ ವೈವಿಧ್ಯ ಮತ್ತು ಕ್ರಿಯಾಸಂಬದ್ಧ ಸ್ವಭಾವದಿಂದಾಗಿ, ಪಥವೊಂದು ಲಭ್ಯವಾಗುತ್ತದೆ. ಅದಲ್ಲದೇ ವಿಶ್ವಸನೀಯವಾಗಿದ್ದರೂ, ಇಂತಹದ್ದೇ ನಿರ್ದಿಷ್ಟ ಪಥವು ಕೋರಲಾದ ಮಾಹಿತಿ ರವಾನಾ ಕಾರ್ಯಕ್ಕೆ ಸೂಕ್ತ ಅಥವಾ ವಿಶ್ವಸನೀಯ ಮಾರ್ಗ ಎಂದು ಖಾತರಿ ನೀಡದು. ನಿರ್ದಿಷ್ಟ ಕೊಂಡಿಯಲ್ಲಿ ಮಾಹಿತಿ ಕಂತುಗಳ ಗಾತ್ರವು ತಾಂತ್ರಿಕ ನಿರ್ಬಂಧಗಳಿಗೆ ಒಳಗಾಗಿರುತ್ತದೆ. ಅನ್ವಯಿಕೆಯು ಸರಿಯಾದ ರವಾನಾ ಗುಣಗಳನ್ನು ಬಳಸುವುದೆಂಬ ಭರವಸೆ ನೀಡಬೇಕು. ಅನ್ವಯಿಕೆ ಮತ್ತು ಐಪಿ ನಡುವಣ ಮೇಲ್ಪದರ ಶಿಷ್ಟಾಚಾರದಲ್ಲಿಯೂ ಸಹ ಈ ಹೊಣೆಯುಂಟು. IPv6 ಬಳಸುವಾಗ, ಸ್ಥಳೀಯ ಕೊಂಡಿ ಹಾಗೂ ಉದ್ದಿಷ್ಟ ಕಂಪ್ಯೂಟರ್‌ನತ್ತ ಸಾಗುವ ಇಡೀ ಸಂಭಾವ್ಯ ಪಥಕ್ಕಾಗಿ ಗರಿಷ್ಠ ರವಾನಾ ಏಕಾಂಶದ (MTU) ಗಾತ್ರವನ್ನು ಪರಿಶೀಲಿಸಲು ಅನುಕೂಲಗಳಿವೆ. IPv4 ಅಂತರಜಾಲ ಪದರವು ಸ್ವಯಂಚಾಲಿತವಾಗಿ ಮೂಲ ಮಾಹಿತಿಯನ್ನು ಇನ್ನಷ್ಟು ಸಣ್ಣ ಕಂತುಗಳಲ್ಲಿ ವಿಭಜಿಸಿ ಒಡೆದು ರವಾನಿಸುವ ಕ್ಷಮತೆ ಹೊಂದಿದೆ. ಈ ನಿದರ್ಶನದಲ್ಲಿ, ತಪ್ಪಾದ ಕ್ರಮದಲ್ಲಿ ರವಾನೆಯಾದ ಸಣ್ಣ ಕಂತುಗಳನ್ನು ಪುನಃ ಸರಿಯಾದ ಕ್ರಮದಲ್ಲಿ ಜೋಡಿಸಲು ಐಪಿ ನೆರವಾಗುತ್ತದೆ.[೧] ರವಾನಾ ನಿಯಂತ್ರಣಾ ಶಿಷ್ಟಾಚಾರ (Transmission Control Protocol) (TCP) ಎಂಬುದು, ಮಾಹಿತಿ ಕಂತನ್ನು ಎಂಟಿಯುಗಿಂತಲೂ ಕಿರಿದಾದ ಗಾತ್ರಕ್ಕೆ ಹೊಂದಿಸುವ ಶಿಷ್ಟಾಚಾರದ ಒಂದು ಉದಾಹರಣೆಯಾಗಿದೆ. ಬಳಕೆದಾರ ಮಾಹಿತಿ-ಸಂಪುಟ ಶಿಷ್ಟಾಚಾರ (User Datagram Protocol) (UDP) ಮತ್ತು ಅಂತರಜಾಲ ನಿಯಂತ್ರಣಾ ಸಂದೇಶ ಶಿಷ್ಟಾಚಾರ (Internet Control Message Protocol) (ICMP) ಎಂಟಿಯು ಗಾತ್ರವನ್ನು ನಿರ್ಲಕ್ಷಿಸುತ್ತವೆ. ಇದರಿಂದಾಗಿ ಐಪಿ ಅತಿದೊಡ್ಡ ಗಾತ್ರದ ಮಾಹಿತಿ-ಸಂಪುಟಗಳನ್ನು ಒಡೆದು ಸಣ್ಣ ಕಂತುಗಳನ್ನಾಗಿಸುತ್ತದೆ.[೨]
ಐಪಿ ವಿಳಾಸ ನಿರ್ಣಯ ಮತ್ತು ಮಾರ್ಗ ನಿರ್ಣಯ
[ಬದಲಾಯಿಸಿ]ಅಂತರಜಾಲ ಶಿಷ್ಟಾಚಾರದ ಅತಿ ಸಂಕೀರ್ಣ ವಿಚಾರಗಳೆಂದರೆ ದೋಷಗಳ ಸರಿಪಡಿಸುವಿಕೆ,ಅಂತರಜಾಲ ಶಿಷ್ಟಾಚಾರದ ವಿಳಾಸ ನಿರ್ಣಯ (addressing) ಹಾಗೂ ಮಾರ್ಗ ನಿರ್ಣಯ routingವನ್ನೊಳಗೊಂಡಿವೆ. ಜಾಲದ ತುದಿಯಲ್ಲಿರುವ ಪ್ರಧಾನ ಕಂಪ್ಯೂಟರ್‌ಗಳು ಐಪಿ ವಿಳಾಸಗಳನ್ನು ಹೇಗೆ ಹೊಂದುತ್ತವೆ; ಹಾಗೂ, ಐಪಿ ಪ್ರಧಾನ ಕಂಪ್ಯೂಟರ್ ವಿಳಾಸಗಳ ಉಪಜಾಲಗಳು ಯಾವ ರೀತಿಯಲ್ಲಿ ವಿಭಾಗಗಳಾಗಿರುತ್ತವೆ; ಹಾಗೂ ಎಲ್ಲಿ ಒಟ್ಟಿಗೆ ಸೇರಿಸಲಾಗಿರುತ್ತವೆ ಎಂಬುದು ಅಡತಡೆ ನಿವಾರಣಾ ವಿಧಾನದ ವ್ಯಾಪ್ತಿಗೆ ಸೇರಿವೆ. ಎಲ್ಲಾ ಪ್ರಧಾನ ಕಂಪ್ಯೂಟರ್‌ಗಳು, ಅವುಗಳಿಗಿಂತಲೂ ಹೆಚ್ಚಾಗಿ, ಅಂತರಜಾಲ ಮಾರ್ಗಸೂಚಿಗಳು ಐಪಿ ಮಾರ್ಗ ನಿರ್ಣಯ ಕಾರ್ಯ ಮಾಡುತ್ತವೆ. ಐಪಿ ಸಂಪರ್ಕ ಹೊಂದಿರುವ ಜಾಲಗಳುದ್ದಕ್ಕೂ ಐಪಿ ಮಾಹಿತಿ ಸಂಪುಟಗಳ ರವಾನಾ ನಿರ್ಣಯ ಕೈಗೊಳ್ಳಲು, ಈ ಮಾರ್ಗಸೂಚಿಗಳು ಮಾದರಿಯಾಗಿ ಆಂತರಿಕ ದ್ವಾರ ಶಿಷ್ಟಾಚಾರಗಳು (interior gateway protocols) (IGPs) ಅಥವಾ ಬಾಹ್ಯ ದ್ವಾರ ಶಿಷ್ಟಾಚಾರಗಳು (external gateway protocols) (EGPs) ಬಳಸುತ್ತವೆ.
ಆವೃತ್ತಿ ಇತಿಹಾಸ
[ಬದಲಾಯಿಸಿ]ವಿದ್ಯುತ್ ಮತ್ತು ವಿದ್ಯುನ್ಮಾನ ತಂತ್ರವಿಜ್ಞಾನಿಗಳ ಸಂಸ್ಥೆ (Institute of Electrical and Electronic Engineers) (IEEE), ಆಗ 1974ರ ಮೇ ತಿಂಗಳಲ್ಲಿ 'ಎ ಪ್ರೊಟೊಕಾಲ್ ಫಾರ್ ಪ್ಯಾಕೆಟ್ ನೆಟ್ವರ್ಕ್ ಇಂಟರ್ಕನೆಕ್ಷನ್' ಎಂಬ ಪತ್ರಿಕೆ ಪ್ರಕಟಿಸಿತು.[೩] ಈ ಪತ್ರಿಕೆಯನ್ನು ಮಂಡಿಸಿದ ವಿಂಟ್ ಸರ್ಫ್ ಮತ್ತು ಬಾಬ್ ಕಾಹ್ನ್, ಘಟಕಗಳ ನಡುವೆ ಮಾಹಿತಿ-ಕಂತು ಬದಲಾವಣೆ ತಂತ್ರ ಬಳಸಿ ಸಂಪನ್ಮೂಲಗಳನ್ನು ವಿತರಿಸಲು ಅಂತರಜಾಲ ಶಿಷ್ಟಾಚಾರದ (interntworking protocol) ಬಗ್ಗೆ ವಿವರಣೆ ನೀಡಿದ್ದಾರೆ. ಪ್ರಧಾನ ಕಂಪ್ಯೂಟರ್‌ಗಳ ನಡುವೆ ಸಂಪರ್ಕ-ಪ್ರಧಾನವಾದ ಕೊಂಡಿಗಳು ಮತ್ತು ಮಾಹಿತಿ-ಸಂಪುಟ ಸೇವೆಗಳೆರಡನ್ನೂ ಒಳಗೊಂಡಿರುವ ರವಾನಾ ನಿಯಂತ್ರಣಾ ವ್ಯವಸ್ಥೆ (Transmission Control Program) (TCP) ಈ ಮಾದರಿಯ ಕೇಂದ್ರೀಯ ನಿಯಂತ್ರಣಾ ಅಂಶವಾಗಿತ್ತು. ಆನಂತರ, ಒಂದೇ-ಕಡೆ ಸ್ಥಿತವಾಗಿರುವ (monolithic) ರವಾನಾ ನಿಯಂತ್ರಣ ವ್ಯವಸ್ಥೆಯನ್ನು 'ಸ್ವಯಂಪೂರ್ಣ' ಎನ್ನಲಾದ (modular) ರಚನೆಗಳನ್ನಾಗಿ ಭಾಗಿಸಲಾಯಿತು. ಈ ಸ್ವಯಂಪೂರ್ಣ ರಚನೆಗಳಲ್ಲಿ ಸಂಪರ್ಕ-ಪ್ರಧಾನ ಪದರದಲ್ಲಿ (connection-oriented layer) ರವಾನಾ ನಿಯಂತ್ರಣ ಶಿಷ್ಟಾಚಾರ ಹಾಗೂ ಅಂತರಜಾಲ (ಮಾಹಿತಿ-ಸಂಪುಟ) ಪದರದಲ್ಲಿ ಅಂತರಜಾಲ ಶಿಷ್ಟಾಚಾರ ವ್ಯವಸ್ಥೆಗಳಿದ್ದವು. ಈ ಮಾದರಿಯನ್ನು ಅನೌಪಚಾರಿಕವಾಗಿ ಟಿಸಿಪಿ/ಐಪಿ (TCP/IP) ಎನ್ನಲಾಯಿತು. ಆದರೂ, ವಿಧ್ಯುಕ್ತವಾಗಿ, ಇದನ್ನು ಇನ್ನು ಮುಂದೆ ಅಂತರಜಾಲ ಶಿಷ್ಟಾಚಾರ ಸಂಪುಟ (Internet Protocol Suite) ಎಂದು ಉಲ್ಲೇಖಿಸಲಾಯಿತು. ಅಂತರಜಾಲಕ್ಕೆ ವ್ಯಾಖ್ಯಾನ ನೀಡುವ ನಿರ್ಣಯಕಾರಿ ಅಂಶಗಳಲ್ಲಿ ಅಂತರಜಾಲ ಶಿಷ್ಟಾಚಾರವೂ ಸಹ ಒಂದು. ಅಂತರಜಾಲ ಶಿಷ್ಟಾಚಾರ ನಾಲ್ಕನೆಯ ಆವೃತ್ತಿ ಐಪಿವಿ4 (IPv4) ಇಂದು ಅಂತರಜಾಲ ಪದರದಲ್ಲಿ ವ್ಯಾಪಕ ಬಳಕೆಯಲ್ಲಿರುವ ಪ್ರಬಲ ಅಂತರಜಾಲ ಶಿಷ್ಟಾಚಾರವಾಗಿದೆ. ಇದರಲ್ಲಿ 4ರ ಸಂಖ್ಯೆಯು ಪ್ರತಿಯೊಂದು ಐಪಿ ಮಾಹಿತಿ-ಸಂಪುಟದಲ್ಲಿರುವ ವಿಧ್ಯುಕ್ತ ಶಿಷ್ಟಾಚಾರ ಆವೃತ್ತಿಯ ಸಂಖ್ಯೆಯಾಗಿದೆ. ಐಪಿವಿ4ನ್ನು 1981ರ ಆರ್‌ಎಫ್‌ಸಿ 791ರಲ್ಲಿ ವಿವರಿಸಲಾಗಿದೆ. ಐಪಿವಿ4ರ ನಂತರದ ಆವೃತ್ತಿಯೇ ಐಪಿವಿ6. ವಿಳಾಸ ನಿರ್ಣಯ ವ್ಯವಸ್ಥೆಯಲ್ಲಿ ಬದಲಾವಣೆಯು ಹಿಂದಿನ ಆವೃತ್ತಿ ಮತ್ತು ಹೊಸ ಆವೃತ್ತಿಯ ನಡುವಿನ ಪ್ರಮುಖ ವ್ಯತ್ಯಾಸವಾಗಿದೆ. ಐಪಿವಿ4 32-ಬಿಟ್ ವಿಳಾಸಗಳನ್ನು (c. 4 ಶತಕೋಟಿ, ಅಥವಾ 4.3×109 ವಿಳಾಸಗಳು) ಬಳಸುತ್ತದೆ. ಐಪಿವಿ6 128-ಬಿಟ್ ವಿಳಾಸಗಳನ್ನು (c. 340 undecillion, ಅಥವಾ 3.4×1038 ವಿಳಾಸಗಳು) ಬಳಸುತ್ತದೆ. ಐಪಿವಿ6 ಆವೃತ್ತಿಯ ಆಯ್ದುಕೊಳ್ಳುವಿಕೆ ನಿಧಾನಗತಿಯಲ್ಲಿದ್ದರೂ, ಅದು ಆಗ 2008ರ ಜೂನ್ ತಿಂಗಳಷ್ಟರಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದ ಸರ್ಕಾರಿ ಇಲಾಖೆಗಳಲ್ಲಿನ ಕಂಪ್ಯೂಟರ್ ವ್ಯವಸ್ಥೆಗಳಲ್ಲಿ ಪ್ರಯೋಗ ನಡೆಸಿದ ನಂತರ, (ಕನಿಷ್ಠಮಟ್ಟದಾಗಿದ್ದರೂ) ಐಪಿವಿ6ಕ್ಕಾಗಿ ಮೂಲಭೂತ ಸೌಕರ್ಯಗಳಿವೆ ಎಂಬುದನ್ನು ನಿರ್ಣಯಿಸಲಾಯಿತು.[೪] ಆದಾಗ್ಯೂ 1977ರಿಂದ 1979ರ ವರೆಗೆ ಬಳಸಲಾದ 0ರಿಂದ 3ರ ಆವೃತ್ತಿಗಳು, ಐಪಿವಿ4ರ ಅಭಿವೃದ್ಧಿ ಮತ್ತು ಪ್ರಯೋಗಾತ್ಮಕ ಆವೃತ್ತಿಗಳಾಗಿದ್ದವು. [ಸೂಕ್ತ ಉಲ್ಲೇಖನ ಬೇಕು] ಐದನೆಯ ಆವೃತ್ತಿಯನ್ನು, ಅಂತರಜಾಲ ಪ್ರವಾಹ ಶಿಷ್ಟಾಚಾರ ಹರಿಯುವಿಕೆಯ ಎಂಬ (ಮಾಹಿತಿಯನ್ನು ಸತತ-ಪ್ರವಾಹ ರೀತ್ಯ ರವಾನಿಸುವ) ಪ್ರಾಯೋಗಿಕ ಶಿಷ್ಟಾಚಾರವು ವರ್ಧಿಸುತ್ತಿತ್ತು. ಐಪಿವಿ4ರ ಬದಲು ಬಳಸಬಹುದಾದ ವಿವಿಧ ಶಿಷ್ಟಾಚಾರ ಮಾದರಿಗಳಿಗಾಗಿ, ಆರರಿಂದ ಒಂಬತ್ತನೆಯ ಆವೃತ್ತಿಗಳನ್ನು ಪ್ರಸ್ತಾಪಿಸಲಾಯಿತು: ಎಸ್‌ಐಪಿಪಿ (ಸಿಂಪಲ್ ಇಂಟರ್ನೆಟ್ ಪ್ರೊಟೊಕಾಲ್ ಪ್ಲಸ್ (Simple Internet Protocol Plus) ಇಂದು ಇದನ್ನು ಐಪಿವಿ6 ಎಂದೂ ಕರೆಯಲಾಗಿದೆ), TP/IX (RFC 1475), PIP (RFC 1621) ಮತ್ತು TUBA (ಇನ್ನಷ್ಟು ದೊಡ್ಡ ವಿಳಾಸ,ಸುಧಾರಣೆಗಳೊಂದಿಗೆ TCP ಮತ್ತು UDP, RFC 1347). ಅಂತಿಮವಾಗಿ, ಆರನೆಯ ಆವೃತ್ತಿಯನ್ನು ಅಧಿಕೃತವಾಗಿ ಬಳಸಲಾಯಿತು. ಇದನ್ನು ಐಪಿವಿ6 ಎಂದು ಪ್ರಮಾಣೀಕರಿಸಲಾಯಿತು. ಐಪಿವಿ9 ಶಿಷ್ಟಾಚಾರವನ್ನು ವಿವರ-ಕಥೆಯ ಕೇಂದ್ರಬಿಂದುವನ್ನಾಗಿಸಿದ ಹಾಸ್ಯಭರಿತ ಅಭಿಪ್ರಾಯ ಕೋರಿಕೆ (Request for Comments)ಯನ್ನು ಐಇಟಿಎಫ್ 1994ರ ಏಪ್ರಿಲ್ 1ರಂದು ಪ್ರಕಟಿಸಿತು.[೫] ಇದನ್ನು ಏಪ್ರಿಲ್ ಮೂರ್ಖರ ದಿನ ದ ನಗೆಹನಿಗೆ ಉದ್ದೇಶಿಸಲಾಗಿತ್ತು. ಐಪಿವಿ9 ಮತ್ತು ಐಪಿವಿ8 ಎನ್ನಲಾದ ಇತರೆ ಶಿಷ್ಟಾಚಾರ ಪ್ರಸ್ತಾಪಗಳೂ ಸಹ ಕೆಲ ಕಾಲ ಮೂಡಿಬಂದಿದ್ದವು, ಅದರೆ ಇವು ಉದ್ದಿಮೆ ಕ್ಷೇತ್ರ ಮತ್ತು ಶೈಕ್ಷಣಿಕ ಕ್ಷೇತ್ರಗಳಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯಲಿಲ್ಲ.[೬]
ಉಲ್ಲೇಖನಾ ರೇಖಾಚಿತ್ರಗಳು
[ಬದಲಾಯಿಸಿ]ವಿವಿಧ ಖಂಡನೆ-ಟೀಕೆ ಸಾಧ್ಯತೆಗಳು
[ಬದಲಾಯಿಸಿ]ಅಂತರಜಾಲ ಶಿಷ್ಟಾಚಾರವು ವಿವಿಧ ದಾಳಿಗಳಿಗೆ ತುತ್ತಾಗುವ ಪ್ರಸಂಗವಿದೆ. ಕೂಲಂಕಷವಾದ ಭೇದ್ಯ ಮಾಪನೆ ಹಾಗೂ ಪ್ರಸ್ತಾಪಿತ ಕ್ರಮಗಳನ್ನು 2008ರಲ್ಲಿ ಪ್ರಕಟಿಸಲಾಯಿತು.[೭] ಇದನ್ನು ಐಇಟಿಎಫ್‌ನಲ್ಲಿ ಈಗಲೂ ಈ ವಿಚಾರದ ಬಗೆಗೆ ಇನ್ನೂ ಚರ್ಚೆ ಮಾಡಲಾಗುತ್ತಿದೆ.[೮]
ಇವನ್ನೂ ನೋಡಿ
[ಬದಲಾಯಿಸಿ]- ಅಂತರಜಾಲದ ರೂಪರೇಖೆ
- ಅಂತರಜಾಲ ವಿಷಯಗಳ ಪಟ್ಟಿ
- ಎಲ್ಲಾ ಐಪಿ
- ಎಟಿಎಂ
- ಸಂಪರ್ಕರಹಿತ ಶಿಷ್ಟಾಚಾರ
- ಫ್ಲ್ಯಾಟ್ ಐಪಿ
- ಭೂಸ್ಥಳ-ನಿರ್ಣಯಿಸುವ ತಂತ್ರಾಂಶ
- ಐಎಎನ್‌ಎ
- ಅಂತರಜಾಲ
- ಅಂತರಜಾಲ ಶಿಷ್ಟಾಚಾರ ಸಂಪುಟ
- ಅಂತರಜಾಲ ಪ್ರವಾಹ ಶಿಷ್ಟಾಚಾರ
- ip - C ಪ್ರೊಗ್ರಾಮಿಂಗ್ ಭಾಷೆಗಾಗಿ ಐಪಿ ರಚನೆ
- ಅಂತರಜಾಲ ಶಿಷ್ಟಾಚಾರ ವಿಳಾಸ
- ಐಪಿ ಒಡೆಯುವಿಕೆ
- ಮಾಹಿತಿ-ಕಂತು ರಚನೆ ಸೇರಿದಂತೆ ಐಪಿವಿ4
- ಐಪಿವಿ6 (ಮತ್ತು ಮಾಹಿತಿ-ಕಂತು ರಚನೆ)
- ಮಾಹಿತಿ-ಕಂತು
- ಟಿಸಿಪಿ ಮತ್ತು ಯುಡಿಪಿ ಪೋರ್ಟ್ ಸಂಖ್ಯೆಗಳು
- ಟಿಡಿಎಮ್
- ರವಾನಾ ನಿಯಂತ್ರಣಾ ಶಿಷ್ಟಾಚಾರ
ಉಲ್ಲೇಖಗಳು
[ಬದಲಾಯಿಸಿ]- ↑ ಸಿಯಾನ್, ಕರಣ್‌ಜೀತ್ ಇನ್ಸೈಡ್ TCP/IP , ನ್ಯೂ ರೈಡರ್ಸ್ ಪಬ್ಲಿಷಿಂಗ್, 1997. ಐಎಸ್‌ಬಿಎನ್ 1-55709-471-3
- ↑ "ಮಾಹಿತಿ-ಕಂತೊಂದರ ಪಯಣ". Archived from the original on 2008-10-07. Retrieved 2011-01-25.
- ↑ [5] ^ ವಿಂಟನ್ ಜಿ. ಸರ್ಫ್, ರಾಬರ್ಟ್ ಇ. ಕಹ್ನ್, "ಎ ಪ್ರೋಟೋಕಾಲ್ ಫಾರ್ ಪ್ಯಾಕೆಟ್ ನೆಟ್‌ವರ್ಕ್ ಇಂಟರ್ ಕಮ್ಯುನಿಕೇಷನ್", ಐಇಇಇ ಟ್ರಾನ್ಸಾಕ್ಷನ್ಸ್ ಆನ್ ಕಮ್ಯುನಿಕೇಷನ್ಸ್, ಸಂಪುಟ. 22, ಸಂ. 5, ಮೇ 1974 ಪಿಪಿ. 637-648
- ↑ ಸಿಐಒ ಕೌನ್ಸಿಲ್ ಆಡ್ಸ್ ಟು ಐಪಿವಿ6 ಟ್ರ್ಯಾನ್ಸಿಷನ್ ಪ್ರೈಮರ್ Archived 2006-07-01 ವೇಬ್ಯಾಕ್ ಮೆಷಿನ್ ನಲ್ಲಿ., gcn.com
- ↑ RFC 1606: ಎ ಹಿಸ್ಟಾರಿಕಲ್ ಪರ್ಸಪೆಕ್ಟಿವ್ ಆನ್ ದಿ ಯುಸೇಜ್ ಆಫ್ ಐಪಿ ವರ್ಷನ್ 9. 1 ಏಪ್ರಿಲ್ 1994.
- ↑ Theregister.com
- ↑ ಅಂತರಜಾಲ ಶಿಷ್ಟಾಚಾರದ ಸುರಕ್ಷಾ ಸಂಯೋಜನೆಯ ಮಾಪನೆ (ಐಪಿ)
- ↑ ಅಂತರಜಾಲ ಶಿಷ್ಟಾಚಾರದ ಸುರಕ್ಷಾ ಸಂಯೋಜನೆಯ ಮಾಪನೆ ಆವೃತ್ತಿ 4 (ಐಪಿವಿ4)
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಅಂತರಜಾಲ ಶಿಷ್ಟಾಚಾರ (Internet Protocol) ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- RFC 791
- ಮ್ಯಾನ್ಫ್ರೆಡ್ ಲಿಂಡ್ನರ್ರ ಮಾಹಿತಿ ಸಂವಹನದ ಬಗೆಗಿನ ಭಾಷಣಗಳು - ಪಾರ್ಟ್ ಐಪಿ ಟೆಕ್ನಾಲಜಿ ಬೇಸಿಕ್ಸ್
- ಮ್ಯಾನ್ಫ್ರೆಡ್ ಲಿಂಡ್ನರ್ರ ಮಾಹಿತಿ ಸಂವಹನದ ಬಗೆಗಿನ ಭಾಷಣಗಳು - ಪಾರ್ಟ್ ಐಪಿ ಟೆಕ್ನಾಲಜಿ ಡೀಟೈಲ್ಸ್
- ಮ್ಯಾನ್ಫ್ರೆಡ್ ಲಿಂಡ್ನರ್ರ ಮಾಹಿತಿ ಸಂವಹನದ ಬಗೆಗಿನ ಭಾಷಣಗಳು - ಪಾರ್ಟ್ ಐಪಿವಿ6
- IPv6.com - ಮುಂದಿನ ತಲೆಮಾರಿನ ಅಂತರಜಾಲ ಐಪಿವಿ6ಕ್ಕಾಗಿ ಜ್ಞಾನ ಕೇಂದ್ರ
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Pages using RFC magic links
- Articles with hatnote templates targeting a nonexistent page
- Articles with unsourced statements from July 2009
- Pages using div col with unknown parameters
- Articles with Open Directory Project links
- ಅಂತರಜಾಲ ಶಿಷ್ಟಾಚಾರ
- ಅಂತರಜಾಲ ಪದರ ಶಿಷ್ಟಾಚಾರಗಳು
- ಅಂತರ ಜಾಲ ತಾಣಗಳು