ಅಂಜಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಅಂಜಾರ್
ಪಟ್ಟಣ
ದೇಶ ಭಾರತ
ರಾಜ್ಯಗುಜರಾತ್
ಜಿಲ್ಲೆಕಛ್ ಜಿಲ್ಲೆ
Named forಅಜಯ್‍ಪಾಲ್ ಸಿಂಗ್
Elevation
೮೧ m (೨೬೬ ft)
Languages
 • OfficialGujarati, Kutchi, ಹಿಂದಿ
Time zoneUTC+5:30 (IST)
Vehicle registrationGJ 12

ಅಂಜಾರ್ ಗುಜರಾತ್ ರಾಜ್ಯದ ಕಛ್ ಜಿಲ್ಲೆಯ ಒಂದು ತಾಲೂಕು ಕೇಂದ್ರ. ದಕ್ಷಿಣ್ ಕಛ್‍ನಲ್ಲಿ ಕಾಂಡ್ಲ ಬಂದರಿಗೆ ಸಮೀಪ ಇರುವ ಇದು ಒಂದು ಐತಿಹಾಸಿಕ ಪಟ್ಟಣ.

ಇತಿಹಾಸ[ಬದಲಾಯಿಸಿ]

ಈ ಪಟ್ಟಣವನ್ನು ಪ್ರ.ಶ.೯೪೦ರಲ್ಲಿ ಅಜ್ಮೇರ್‍ನ ಚೌಹಾನ್ ವಂಶದ ರಾಜನ ತಮ್ಮನಾದ ಅಜಯ್‍ಪಾಲ್ ಸಿಂಗ್ ಎಂಬವನು ಸ್ಥಾಪಿಸಿದನು.ಇವನು ಪ್ರ.ಶ.೬೮೫ರಲ್ಲಿ ನಿಧನನಾದ ನಂತರ ಹಲವಾರು ವರ್ಷ ಈ ಪಟ್ಟಣ ಚೌಹಾನ್ ವಂಶಸ್ಥರಲ್ಲೇ ಇತ್ತು.ಕಾಲಾನುಕ್ರಮದಲ್ಲಿ ಇದನ್ನು ಸೋಳಂಕಿ, ವಘೇಲಾ ಹಾಗೂ ಚೌಡ ವಂಶಸ್ಥರು ಅಳಿದರು.೧೫೪೫ರ ಸುಮಾರಿಗೆ ಈ ಪಟ್ಟಣವು ಬಲಿಷ್ಠ ವಂಶದವರಾದ ಜಡೇಜ ವಂಶದವರಲ್ಲಿರುವಾಗ ಇಡೀ ಕಛ್ ಪ್ರದೇಶಕ್ಕೇ ರಾಜಧಾನಿಯಾಯಿತು.೧೮೧೬ರಲ್ಲಿ ಈ ಪಟ್ಟಣವೂ ಸೇರಿ ಇಡೀ ಕಛ್ ಪ್ರದೇಶ ಬ್ರಿಟಿಷರ ವಶವಾಯಿತು. ಬ್ರಿಟಿಷರು ಇದನ್ನು ವಾರ್ಷಿಕ ಕಪ್ಪಕ್ಕೆ ಬದಲಾಗಿ ಪುನಃ ಜಡೇಜ ವಂಶಸ್ಥರಿಗೆ ಬಿಟ್ಟುಕೊಟ್ಟರು. ಇದರಿಂದದಾಗಿ ಈ ಪ್ರದೇಶ ಹಾಗೂ ಪಟ್ಟಣವು ಸ್ವಾತಂತ್ರ್ಯ ದೊರೆಯುವವರೆಗೆ ಜಡೇಜ ವಂಶಸ್ಥರಲ್ಲಿದ್ದು, ಸ್ವಾತಂತ್ರ್ಯಾನಂತರ ಕಛ್ ಜಿಲ್ಲೆ ಮತ್ತು ಅಂಜಾರ್ ತಾಲೂಕಾಗಿ ರೂಪುಗೊಂಡಿತು.

"https://kn.wikipedia.org/w/index.php?title=ಅಂಜಾರ್&oldid=1019390" ಇಂದ ಪಡೆಯಲ್ಪಟ್ಟಿದೆ