ಅಂಕೀಯ ನೀರುಗುರುತು ಮಾಡುವಿಕೆ
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (April 2010) |
ಅಂಕೀಯ ನೀರುಗುರುತು ಮಾಡುವಿಕೆ (ಡಿಜಿಟಲ್ ವಾಟರ್‌ಮಾರ್ಕಿಂಗ್) ಎಂಬುದು ಒಂದು ಅಂಕೀಯ ಸಂಕೇತದೊಳಗೆ ಮಾಹಿತಿಯನ್ನು ಸೇರಿಸುವ ಪ್ರಕ್ರಿಯೆಯಾಗಿದ್ದು, ಇದು ತೆಗೆದುಹಾಕಲು ಕಷ್ಟಕರವಾದ ಒಂದು ಸ್ವರೂಪದಲ್ಲಿರುತ್ತದೆ. ಉದಾಹರಣೆಗೆ, ಹೀಗೆ ಸೇರಿಸಲ್ಪಡುವ ಸಂಕೇತವು ಶ್ರವ್ಯಾಂಶದ ರೂಪದಲ್ಲಿರಬಹುದು, ಚಿತ್ರಗಳು ಅಥವಾ ವಿಡಿಯೋ ಸ್ವರೂಪದಲ್ಲಿರಬಹುದು. ಒಂದು ವೇಳೆ ಸಂಕೇತವು ನಕಲು ಮಾಡಲ್ಪಟ್ಟರೆ, ಆಗ ಮಾಹಿತಿಯೂ ಸಹ ನಕಲಿನಲ್ಲಿ ಸಾಗಿಸಲ್ಪಡುತ್ತದೆ. ಒಂದು ಸಂಕೇತವು ಒಂದೇ ಸಮಯಕ್ಕೆ ಹಲವಾರು ವಿಭಿನ್ನ ನೀರುಗುರುತುಗಳನ್ನು ಹೊತ್ತೊಯ್ಯಬಹುದು. ಗೋಚರಿಸುವ ನೀರುಗುರುತು ಮಾಡುವಿಕೆಯಲ್ಲಿ, ಚಿತ್ರ ಅಥವಾ ವಿಡಿಯೋ ಸ್ವರೂಪದಲ್ಲಿ ಮಾಹಿತಿಯು ಗೋಚರಿಸುತ್ತದೆ. ವಿಶಿಷ್ಟವೆನಿಸುವಂತೆ, ಮಾಹಿತಿಯು ಪಠ್ಯ ಅಥವಾ ಒಂದು ಲಾಂಛನವಾಗಿದ್ದು, ಮಾಧ್ಯಮದ ಮಾಲೀಕನನ್ನು ಅದು ಗುರುತಿಸುತ್ತದೆ. ಬಲಭಾಗದಲ್ಲಿರುವ ಬಿಂಬವು ಒಂದು ಗೋಚರಿಸುವ ನೀರುಗುರುತನ್ನು ಹೊಂದಿದೆ. ಒಂದು ದೂರದರ್ಶನ ಪ್ರಸಾರ ವಾಹಿನಿಯು ಪ್ರಸಾರಮಾಡಲ್ಪಟ್ಟ ವಿಡಿಯೋದ ಮೂಲೆಗೆ ತನ್ನ ಲಾಂಛನವನ್ನು ಸೇರ್ಪಡೆ ಮಾಡಿದಾಗ, ಅದೂ ಸಹ ಒಂದು ಗೋಚರಿಸುವ ನೀರುಗುರುತು ಎನಿಸಿಕೊಳ್ಳುತ್ತದೆ. ಗೋಚರಿಸದ ನೀರುಗುರುತು ಮಾಡುವಿಕೆಯಲ್ಲಿ, ಶ್ರವ್ಯಾಂಶ, ಚಿತ್ರ ಅಥವಾ ವಿಡಿಯೋ ಸ್ವರೂಪಕ್ಕೆ ಮಾಹಿತಿಯನ್ನು ಅಂಕೀಯ ದತ್ತಾಂಶವಾಗಿ ಸೇರಿಸಲಾಗುತ್ತದೆಯಾದರೂ, ಅದನ್ನು ಹಾಗೆ ಸೂಚಿಸದಂತೆ ಗ್ರಹಿಸಲಾಗುವುದಿಲ್ಲ (ಆದರೂ ಒಂದಷ್ಟು ಮಾಹಿತಿಯನ್ನು ಗುಪ್ತವಾಗಿಡಲಾಗಿದೆ ಎಂಬುದನ್ನು ಪತ್ತೆಹಚ್ಚಲು ಸಾಧ್ಯವಾಗಬಹುದು). ನೀರುಗುರುತಿನ ಬಳಕೆಯ ಹಿನ್ನೆಲೆಯಲ್ಲಿ ವ್ಯಾಪಕ ಬಳಕೆಗೆ ಸಂಬಂಧಿಸಿದ ಆಶಯವಿರಬಹುದಾದ್ದರಿಂದ, ಮರುಸಂಪಾದಿಸಲು ಅನುವಾಗುವಂತೆ ಅದು ರೂಪಿಸಲ್ಪಟ್ಟಿರುತ್ತದೆ ಅಥವಾ ಅದು ಒಂದು ರಹಸ್ಯ ಬರಹಗಾರಿಕೆಯ ಸ್ವರೂಪದಲ್ಲಿ ಇರಲು ಸಾಧ್ಯವಿದ್ದು, ಇಲ್ಲಿ ಅಂಕೀಯ ಸಂಕೇತದಲ್ಲಿ ಸೇರಿಸಲ್ಪಟ್ಟಿರುವ ಗುಪ್ತ ಸಂದೇಶವೊಂದನ್ನು ಓರ್ವ ವ್ಯಕ್ತಿಯು ನಿವೇದಿಸುತ್ತಾನೆ. ಎರಡೂ ಸಂದರ್ಭಗಳಲ್ಲಿ, ಗೋಚರಿಸುವ ನೀರುಗುರುತು ಮಾಡುವಿಕೆಯಲ್ಲಿರುವಂತೆ, ತೆಗೆದುಹಾಕಲು ಕಷ್ಟಕರವಾಗಿರುವ ಒಂದು ವಿಧಾನದಲ್ಲಿ ಸ್ವಾಮ್ಯವನ್ನಾಗಲೀ ಅಥವಾ ಇತರ ವಿವರಣಾತ್ಮಕ ಮಾಹಿತಿಯನ್ನಾಗಲೀ ಸಂಕೇತಕ್ಕೆ ಲಗತ್ತಿಸುವುದು ಮುಖ್ಯ ಉದ್ದೇಶವಾಗಿರುತ್ತದೆ. ಸೇರಿಸಲಾದ ಗುಪ್ತ ಮಾಹಿತಿಯನ್ನು ವ್ಯಕ್ತಿಗಳ ನಡುವಿನ ಗುಟ್ಟಿನ ಸಂವಹನದ ಒಂದು ಮಾಧ್ಯಮವಾಗಿ ಬಳಸಲೂ ಸಹ ಸಾಧ್ಯವಿದೆ. ಅಂಕೀಯ ಮಾಧ್ಯಮದ ಅನಧಿಕೃತ ನಕಲು ಮಾಡುವಿಕೆಯನ್ನು ತಡೆಗಟ್ಟುವ ಅಥವಾ ನಿರ್ಬಂಧಿಸುವ ಆಶಯವನ್ನು ಹೊಂದಿರುವ ಕೃತಿಸ್ವಾಮ್ಯ ಸಂರಕ್ಷಣಾ ವ್ಯವಸ್ಥೆಗಳಲ್ಲಿ ನೀರುಗುರುತು ಮಾಡುವಿಕೆಯನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಈ ಬಳಕೆಯಲ್ಲಿ ಒಂದು ನಕಲುಮಾಡುವ ಉಪಕರಣವು ನಕಲು ಮಾಡುವುದಕ್ಕೆ ಮುಂಚಿತವಾಗಿ ಸಂಕೇತದಿಂದ ನೀರುಗುರುತನ್ನು ಮರುಸಂಪಾದಿಸುತ್ತದೆ; ನಕಲು ಮಾಡಲು ಅಥವಾ ನೀರುಗುರುತಿನಲ್ಲಿ ಅಂತರ್ಗತವಾಗಿರುವ ವಿಷಯವನ್ನು ಅವಲಂಬಿಸದಿರಲು ಉಪಕರಣವು ಒಂದು ತೀರ್ಮಾನವನ್ನು ಮಾಡುತ್ತದೆ. ಮೂಲದ ಪತ್ತೆಹಚ್ಚುವಿಕೆಯಲ್ಲಿಯೂ ಇದನ್ನು ಬಳಕೆಮಾಡಿಕೊಳ್ಳಲಾಗುತ್ತದೆ. ವಿತರಣೆಯ ಪ್ರತಿ ಹಂತದಲ್ಲೂ ಒಂದು ಅಂಕೀಯ ಸಂಕೇತದೊಳಗೆ ಒಂದು ನೀರುಗುರುತನ್ನು ಸೇರಿಸಲಾಗುತ್ತದೆ. ಒಂದು ವೇಳೆ ಕೃತಿಯ ಒಂದು ನಕಲು ನಂತರದಲ್ಲಿ ಕಂಡುಬಂದರೆ, ಆಗ ನಕಲಿನಿಂದ ನೀರುಗುರುತನ್ನು ಮರುಸಂಪಾದಿಸಲು ಸಾಧ್ಯವಾಗುತ್ತದೆ ಮತ್ತು ವಿತರಣೆಯ ಮೂಲವು ಗೊತ್ತಾಗುತ್ತದೆ. ಅಕ್ರಮವಾಗಿ ನಕಲು ಮಾಡಲಾದ ಚಲನಚಿತ್ರಗಳ ಮೂಲವನ್ನು ಪತ್ತೆಹಚ್ಚುವಲ್ಲಿ ಈ ಕೌಶಲವನ್ನು ಬಳಸಿಕೊಂಡು ಬರಲಾಗಿದೆ. ವಿವರಣಾತ್ಮಕ ಮಾಹಿತಿಯೊಂದಿಗೆ ಅಂಕೀಯ ಛಾಯಾಚಿತ್ರಗಳ ಟಿಪ್ಪಣಿಯನ್ನು ರಚಿಸುವುದು ಗೋಚರಿಸದ ನೀರುಗುರುತು ಮಾಡುವಿಕೆಯ ಮತ್ತೊಂದು ಬಳಕೆಯಾಗಿದೆ. ಅಂಕೀಯ ಮಾಧ್ಯಮಕ್ಕೆ ಸಂಬಂಧಿಸಿದ ಕೆಲವೊಂದು ಕಡತ ಸ್ವರೂಪಗಳು ಪರ್ಯಾಯ ದತ್ತಾಂಶ ಎಂದು ಕರೆಯಲ್ಪಡುವ ಹೆಚ್ಚುವರಿ ಮಾಹಿತಿಯನ್ನು ಒಳಗೊಂಡಿರುವ ಸಂದರ್ಭದಲ್ಲಿ, ದತ್ತಾಂಶವು ಸ್ವತಃ ಸಂಕೇತದಲ್ಲಿ ಸಾಗಿಸಲ್ಪಡುತ್ತಿದೆ ಎಂಬುದರಲ್ಲಿ ಅಂಕೀಯ ನೀರುಗುರುತು ಮಾಡುವಿಕೆಯು ಸ್ಪಷ್ಟವಾಗಿದೆ. ನೀರುಗುರುತು ಮಾಡುವಿಕೆ ಎಂಬ ಪದದ ಬಳಕೆಯು, ಕಾಗದದ ಮೇಲೆ ಒಂದು ಗೋಚರಿಸುವ ನೀರುಗುರುತನ್ನು ಇಡುವುದು ಎಂಬ ಸಾಕಷ್ಟು ಹಳತಾದ ಎಣಿಕೆಯಿಂದ ಹುಟ್ಟಿಕೊಂಡಿದೆ.
ಅನ್ವಯಿಸುವಿಕೆಗಳು
[ಬದಲಾಯಿಸಿ]ಅಂಕೀಯ ನೀರುಗುರುತು ಮಾಡುವಿಕೆಯನ್ನು ಒಂದು ವ್ಯಾಪಕ ಶ್ರೇಣಿಯ ಅನ್ವಯಿಸುವಿಕೆಗಳಿಗೆ ಸಂಬಂಧಿಸಿದಂತೆ ಬಳಸಿಕೊಳ್ಳಬಹುದು. ಅವುಗಳೆಂದರೆ:
- ಕೃತಿಸ್ವಾಮ್ಯ ಸಂರಕ್ಷಣೆ
- ಮೂಲ ಪತ್ತೆಹಚ್ಚುವಿಕೆ (ವಿಭಿನ್ನ ಗ್ರಾಹಕರು ವಿಭಿನ್ನವಾದ ರೀತಿಯಲ್ಲಿ ನೀರುಗುರುತು ಮಾಡಲ್ಪಟ್ಟ ಅಂತರ್ಗತ ವಿಷಯವನ್ನು ಪಡೆಯುತ್ತಾರೆ)
- ಪ್ರಸಾರ ನಿಯಂತ್ರಣ (ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಪಡೆದ ನೀರುಗುರುತು ಮಾಡಲ್ಪಟ್ಟ ವಿಡಿಯೋವನ್ನು ದೂರದರ್ಶನದ ಸುದ್ದಿಯು ಅನೇಕವೇಳೆ ಹೊಂದಿರುತ್ತದೆ)
- ಗುಟ್ಟಿನ ಸಂವಹನ
ನೀರುಗುರುತು ಮಾಡುವಿಕೆಯ ಅನುಕ್ರಮ ವರಸೆಯ ಹಂತಗಳು
[ಬದಲಾಯಿಸಿ]ಸೇರಿಸಲ್ಪಡಬೇಕಾದ ಮಾಹಿತಿಯನ್ನು ಒಂದು ಅಂಕೀಯ ನೀರುಗುರುತು ಎಂದು ಕರೆಯಲಾಗುತ್ತದೆಯಾದರೂ, ಕೆಲವೊಂದು ಸಂದರ್ಭಗಳಲ್ಲಿ ಅಂಕೀಯ ನೀರುಗುರುತು ಎಂಬ ಪದಗುಚ್ಛವು, ನೀರುಗುರುತು ಮಾಡಲ್ಪಟ್ಟ ಸಂಕೇತ ಹಾಗೂ ಹೊದಿಕೆಯ ಸಂಕೇತದ ನಡುವಿನ ವ್ಯತ್ಯಾಸವನ್ನು ಅರ್ಥೈಸುತ್ತದೆ. ಎಲ್ಲಿ ನೀರುಗುರುತು ಸೇರಿಸಲ್ಪಡಬೇಕಿದೆಯೋ ಆ ಸಂಕೇತವನ್ನು ಆಶ್ರಯದಾತ ಸಂಕೇತ ಎಂದು ಕರೆಯಲಾಗುತ್ತದೆ. ಒಂದು ನೀರುಗುರುತು ಮಾಡುವಿಕೆಯ ವ್ಯವಸ್ಥೆಯು ಮೂರು ಭಿನ್ನವಾದ ಹಂತಗಳಾಗಿ ಸಾಮಾನ್ಯವಾಗಿ ವಿಭಜಿಸಲ್ಪಡುತ್ತದೆ. ಅವುಗಳೆಂದರೆ: ಸೇರಿಸುವಿಕೆ, ದಾಳಿ ಮತ್ತು ಪತ್ತೆಹಚ್ಚುವಿಕೆ. ಸೇರಿಸುವಿಕೆಯಲ್ಲಿ, ಸೇರಿಸಲ್ಪಡಬೇಕಿರುವ ದತ್ತಾಂಶ ಹಾಗೂ ಆಶ್ರಯದಾತ ಅಂಶವನ್ನು ಸ್ವೀಕರಿಸುವ ಒಂದು ಅಂಕಗಣಿತ ಪದ್ಧತಿಯು, ಒಂದು ನೀರುಗುರುತು ಮಾಡಲ್ಪಟ್ಟ ಸಂಕೇತವನ್ನು ರೂಪಿಸುತ್ತದೆ. ನೀರುಗುರುತು ಮಾಡಲ್ಪಟ್ಟ ಸಂಕೇತವು ನಂತರ ರವಾನಿಸಲ್ಪಡುತ್ತದೆ ಅಥವಾ ಶೇಖರಿಸಿಡಲ್ಪಡುತ್ತದೆ, ಸಾಮಾನ್ಯವಾಗಿ ಮತ್ತೋರ್ವ ವ್ಯಕ್ತಿಗೆ ರವಾನಿಸಲ್ಪಡುತ್ತದೆ. ಒಂದು ವೇಳೆ ಈ ವ್ಯಕ್ತಿಯು ಒಂದು ಮಾರ್ಪಾಡನ್ನು ಮಾಡಿದಲ್ಲಿ, ಇದನ್ನು ಒಂದು ದಾಳಿ ಎಂದು ಕರೆಯಲಾಗುತ್ತದೆ. ಸದರಿ ಮಾರ್ಪಾಡು ದುರುದ್ದೇಶದಿಂದ ಕೂಡಿದ ಮಾರ್ಪಾಡು ಆಗಿರದಿದ್ದರೂ ಸಹ, ದಾಳಿ ಎಂಬ ಶಬ್ದವು ಕೃತಿಸ್ವಾಮ್ಯ ಸಂರಕ್ಷಣಾ ಅನ್ವಯಿಸುವಿಕೆಯಿಂದ ಉದ್ಭವವಾಗುತ್ತದೆ; ಮಾರ್ಪಾಡು ಮಾಡುವುದರ ಮೂಲಕ ಅಂಕೀಯ ನೀರುಗುರುತನ್ನು ತೆಗೆದುಹಾಕಲು ಕೃತಿಚೋರರು ಪ್ರಯತ್ನಪಡುವುದು ಇದರಲ್ಲಿ ಸೇರಿರುತ್ತದೆ. ಅಲ್ಲಿ ಅನೇಕ ಬಗೆಯ ಮಾರ್ಪಾಡುಗಳ ಸಾಧ್ಯತೆಯಿರುತ್ತದೆ; ಉದಾಹರಣೆಗೆ, ದತ್ತಾಂಶದ ನಷ್ಟದ ಸಂಕೋಚನ, ಒಂದು ಬಿಂಬ ಅಥವಾ ವಿಡಿಯೋವನ್ನು ಮರೆಮಾಡುವಿಕೆ, ಅಥವಾ ಶಬ್ದವನ್ನು ಉದ್ದೇಶಪೂರ್ವಕವಾಗಿ ಸೇರಿಸುವುದು ಇತ್ಯಾದಿ. ಪತ್ತೆಹಚ್ಚುವಿಕೆಯು (ಇದನ್ನು ಅನೇಕವೇಳೆ ಸಾರತೆಗೆಯುವಿಕೆ ಎಂದು ಕರೆಯಲಾಗುತ್ತದೆ) ಒಂದು ಅಂಕಗಣಿತ ಪದ್ಧತಿಯಾಗಿದ್ದು, ಸಂಕೇತದಿಂದ ನೀರುಗುರುತನ್ನು ಎತ್ತಿ ತೆಗೆಯಲು ಪ್ರಯತ್ನ ಮಾಡುವುದಕ್ಕಾಗಿ ದಾಳಿಗೊಳಗಾದ ಸಂಕೇತಕ್ಕೆ ಅದನ್ನು ಅನ್ವಯಿಸಲಾಗುತ್ತದೆ. ಒಂದು ವೇಳೆ ರವಾನೆಯ ಅವಧಿಯಲ್ಲಿ ಸಂಕೇತವು ಮಾರ್ಪಾಡಿಗೆ ಒಳಗಾಗದೇ ಉಳಿದಿದ್ದಲ್ಲಿ, ಆಗ ನೀರುಗುರುತು ಹಾಗೆಯೇ ಇರುತ್ತದೆ ಮತ್ತು ಅದನ್ನು ಎತ್ತಿತೆಗೆಯಲು ಸಾಧ್ಯವಿರುತ್ತದೆ. ದಿಟ್ಟ ಹಾಗೂ ದೃಢವಾದ ನೀರುಗುರುತಿನ ಅನ್ವಯಿಸುವಿಕೆಗಳಲ್ಲಿ, ಮಾರ್ಪಾಡುಗಳು ಒಂದು ವೇಳೆ ಬಲವಾಗಿದ್ದರೂ ಸಹ ಸಾರತೆಗೆಯುವಿಕೆಯ ಅಂಕಗಣಿತ ಪದ್ಧತಿಯು ನೀರುಗುರುತನ್ನು ಸರಿಯಾಗಿ ರೂಪಿಸುವಷ್ಟು ಸಮರ್ಥವಾಗಿರಬೇಕಾಗುತ್ತದೆ. ದುರ್ಬಲವಾದ ಅಥವಾ ನಾಜೂಕು ರಚನೆಯ ನೀರುಗುರುತು ಮಾಡುವಿಕೆಯಲ್ಲಿ, ಒಂದು ವೇಳೆ ಸಂಕೇತಕ್ಕೆ ಯಾವುದೇ ಬದಲಾವಣೆಯು ಮಾಡಲ್ಪಟ್ಟರೆ ಸಾರತೆಗೆಯುವಿಕೆಯ ಅಂಕಗಣಿತ ಪದ್ಧತಿಯು ವಿಫಲಗೊಳ್ಳಬೇಕಾಗುತ್ತದೆ.
ವರ್ಗೀಕರಣ
[ಬದಲಾಯಿಸಿ]ಒಂದು ವೇಳೆ, ಎಷ್ಟೇ ಸಂಖ್ಯೆಯ ಮಾರ್ಪಾಡುಗಳಿಂದ ಕೆಳಕ್ಕಿಳಿಸಲ್ಪಟ್ಟ ನಂತರವೂ ಸೇರಿಸಲ್ಪಟ್ಟ ಮಾಹಿತಿಯು ಗುರುತು ಮಾಡಲ್ಪಟ್ಟ ಸಂಕೇತದಿಂದ ವಿಶ್ವಸನೀಯವಾಗಿ ಪತ್ತೆಹಚ್ಚಲ್ಪಡಲು ಸಾಧ್ಯವಾದಲ್ಲಿ, ಅಂಥ ಮಾರ್ಪಾಡುಗಳಿಗೆ ಸಂಬಂಧಿಸಿದ ಒಂದು ಅಂಕೀಯ ನೀರುಗುರುತನ್ನು ದೃಢವಾದ ನೀರುಗುರುತು ಎಂದು ಕರೆಯಲಾಗುತ್ತದೆ. JPEG ಸಂಕೋಚನ, ತಿರುಗಿಸುವಿಕೆ, ಮರೆಮಾಡುವಿಕೆ, ಸಂಯೋಜನೀಯ ಶಬ್ದ ಹಾಗೂ ಕ್ವಾಂಟೀಕರಣ ಇವು ವಿಶಿಷ್ಟವಾಗಿರುವ ಬಿಂಬದ ಇಳಿಸುವಿಕೆಗಳಾಗಿರುತ್ತವೆ. ವಿಡಿಯೋ ಅಂತರ್ಗತ ವಿಷಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಅಲ್ಪಕಾಲಿಕ ಮಾರ್ಪಾಡುಗಳು ಹಾಗೂ MPEG ಸಂಕೋಚನವನ್ನು ಈ ಪಟ್ಟಿಗೆ ಅನೇಕಬಾರಿ ಸೇರಿಸಲಾಗುತ್ತದೆ. ಒಂದು ವೇಳೆ, ಒಂದು ಸೂಕ್ತವಾದ ಪ್ರತ್ಯಕ್ಷ ಜ್ಞಾನಾತ್ಮಕ ಅಳತೆಗೆ[clarification needed] ಸಂಬಂಧಿಸಿದಂತೆ ಹೊದಿಕೆಯ ಸಂಕೇತ ಹಾಗೂ ಗುರುತು ಮಾಡಲ್ಪಟ್ಟ ಸಂಕೇತಗಳು ಅಸ್ಪಷ್ಟವಾಗಿದ್ದರೆ, ಅಂಥ ನೀರುಗುರುತನ್ನು ಅಗ್ರಾಹ್ಯ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಅನ್ವಯಿಸುವಂತೆ ಹೇಳುವುದಾದರೆ, ದೃಢವಾದ ನೀರುಗುರುತುಗಳು ಅಥವಾ ಅಗ್ರಾಹ್ಯವಾದ ನೀರುಗುರುತುಗಳನ್ನು ಸೃಷ್ಟಿಸುವುದು ಸುಲಭವಾಗಿದ್ದರೂ, ದೃಢವಾದ ಮತ್ತು ಅಗ್ರಾಹ್ಯವಾದ ನೀರುಗುರುತುಗಳ ಸೃಷ್ಟಿಯು ಸಾಕಷ್ಟು ಸವಾಲೊಡ್ಡುವ ರೀತಿಯಲ್ಲಿರುತ್ತದೆ ಎಂಬುದು ಸಾಬೀತಾಗಿದೆ.[೧] ದೃಢವಾದ ಅಗ್ರಾಹ್ಯ ನೀರುಗುರುತುಗಳು ಅಂಕೀಯ ಅಂತರ್ಗತ ವಿಷಯದ ಸಂರಕ್ಷಣೆಗೆ ಸಂಬಂಧಿಸಿದ ಒಂದು ಸಾಧನವಾಗಿ ಪ್ರಸ್ತಾವಿಸಲ್ಪಟ್ಟಿವೆ; ಉದಾಹರಣೆಗೆ, ವೃತ್ತಿಪರ ವಿಡಿಯೋ ಅಂತರ್ಗತ ವಿಷಯದಲ್ಲಿ ಸೇರಿಸಲ್ಪಟ್ಟ 'ಯಾವುದೇ-ನಕಲಿಗೆ-ಅವಕಾಶವಿಲ್ಲ' ಎಂಬ ಒಂದು ಸೂಚನಾ ಪತಾಕೆಯಂತೆ ಇದನ್ನೂ ಬಳಸಬಹುದು ಎಂದು ಪ್ರಸ್ತಾವಿಸಲಾಗಿದೆ.[೨] ಅಂಕೀಯ ನೀರುಗುರುತು ಮಾಡುವಿಕೆಯ ಕೌಶಲಗಳನ್ನು ಹಲವಾರು ವಿಧದಲ್ಲಿ ವರ್ಗೀಕರಿಸಬಹುದು.
ದೃಢತೆ
[ಬದಲಾಯಿಸಿ]ಒಂದು ನೀರುಗುರುತು, ಕೊಂಚವೇ ಪ್ರಮಾಣದ ಮಾರ್ಪಾಡಿನ ನಂತರವೂ ಪತ್ತೆಹಚ್ಚಲ್ಪಡುವಲ್ಲಿ ವಿಫಲವಾದಲ್ಲಿ, ಅದನ್ನು ದುರ್ಬಲವಾದ ನೀರುಗುರುತು ಎಂದು ಕರೆಯಲಾಗುತ್ತದೆ. ಅಕ್ರಮವಾದ ತಿದ್ದುವಿಕೆಯನ್ನು ಪತ್ತೆಹಚ್ಚುವುದಕ್ಕೆ (ದೃಢತೆಯ ಪುರಾವೆ) ಸಂಬಂಧಿಸಿದಂತೆ ದುರ್ಬಲವಾದ ನೀರುಗುರುತುಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಒಂದು ಮೂಲ ಕೃತಿಗೆ ಮಾಡಲಾದ, ಸ್ಪಷ್ಟವಾಗಿ-ಸುಲಭವಾಗಿ ಕಣ್ಣಿಗೆ ಬೀಳುವ ಮಾರ್ಪಾಡುಗಳನ್ನು ನೀರುಗುರುತುಗಳೆಂದು ಸಾಮಾನ್ಯವಾಗಿ ಉಲ್ಲೇಖಿಸಲಾಗುವುದಿಲ್ಲ, ಆದರೆ ಅವನ್ನು ಪಟ್ಟೆ ಸಂಕೇತಗಳು (ಬಾರ್‌ಕೋಡ್‌ಗಳು) ಎಂದು ಸಾಮಾನ್ಯೀಕರಿಸಲಾಗುತ್ತದೆ. ಒಂದು ವೇಳೆ, ನೀರುಗುರುತೊಂದು ಹಾನಿಯುಂಟುಮಾಡದ ಮಾರ್ಪಾಡುಗಳನ್ನು ಪ್ರತಿರೋಧಿಸಿದರೂ, ಹಾನಿಕಾರಕ ಮಾರ್ಪಾಡುಗಳ ನಂತರ ಪತ್ತೆಹಚ್ಚುವಿಕೆಯನ್ನು ವಿಫಲಗೊಳಿಸಿದಲ್ಲಿ, ಅದನ್ನು ಅರೆ-ದುರ್ಬಲವಾದ ನೀರುಗುರುತು ಎಂದು ಕರೆಯಲಾಗುತ್ತದೆ. ಹಾನಿಕಾರಕ ಮಾರ್ಪಾಡುಗಳನ್ನು ಪತ್ತೆಹಚ್ಚಲು ಅರೆ-ದುರ್ಬಲವಾದ ನೀರುಗುರುತುಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಒಂದು ವೇಳೆ ಮಾರ್ಪಾಡುಗಳ ಒಂದು ಗೊತ್ತುಪಡಿಸಲಾದ ವರ್ಗವನ್ನು ನೀರುಗುರುತೊಂದು ಪ್ರತಿರೋಧಿಸಿದರೆ, ಅದನ್ನು ದೃಢವಾದ ನೀರುಗುರುತು ಎಂದು ಕರೆಯಲಾಗುತ್ತದೆ. ನಕಲು ಹಾಗೂ ಸಂಪರ್ಕ ನಿಯಂತ್ರಣಾ ಮಾಹಿತಿಯನ್ನು ಹೊತ್ತೊಯ್ಯಲು ಇರುವ ನಕಲು ಸಂರಕ್ಷಣಾ ಅನ್ವಯಗಳಲ್ಲಿ, ದೃಢವಾದ ನೀರುಗುರುತುಗಳನ್ನು ಬಳಸಬಹುದು.
ಗ್ರಾಹ್ಯತೆ
[ಬದಲಾಯಿಸಿ]ಒಂದು ವೇಳೆ, ಮೂಲ ಹೊದಿಕೆಯ ಸಂಕೇತ ಹಾಗೂ ಗುರುತು ಮಾಡಲ್ಪಟ್ಟ ಸಂಕೇತಗಳು ಪ್ರತ್ಯಕ್ಷ ಜ್ಞಾನಾತ್ಮಕವಾಗಿ ಅಸ್ಪಷ್ಟವಾಗಿದ್ದರೆ (ಅಥವಾ ಅದಕ್ಕೆ ನಿಕಟವಾಗಿದ್ದರೆ), ಅಂಥ ನೀರುಗುರುತನ್ನು ಅಗ್ರಾಹ್ಯ ಎಂದು ಕರೆಯಲಾಗುತ್ತದೆ. ಒಂದು ವೇಳೆ ಗುರುತು ಮಾಡಲ್ಪಟ್ಟ ಸಂಕೇತದಲ್ಲಿನ ನೀರುಗುರುತಿನ ಇರುವಿಕೆಯು ಸುಲಭವಾಗಿ ಕಣ್ಣಿಗೆ ಬೀಳುವಂಥದ್ದಾಗಿದ್ದರೂ ಬಲವಂತವಾಗಿ ಒಳನುಗ್ಗುವಂಥದ್ದಾಗಿಲ್ಲದಿದ್ದರೆ, ಅದನ್ನು ಗ್ರಾಹ್ಯ ನೀರುಗುರುತು ಎಂದು ಕರೆಯಲಾಗುತ್ತದೆ.
ಸಾಮರ್ಥ್ಯ
[ಬದಲಾಯಿಸಿ]ಸೇರಿಸಲ್ಪಟ್ಟ ಸಂದೇಶದ ಉದ್ದವು, ನೀರುಗುರುತು ಮಾಡುವಿಕೆಯ ಯೋಜನೆಗಳ ಎರಡು ಪ್ರಮುಖ ವಿಭಿನ್ನ ವರ್ಗಗಳನ್ನು ನಿರ್ಣಯಿಸುತ್ತದೆ:
- ಸಂದೇಶವು ಕಲ್ಪನಾತ್ಮಕವಾಗಿ ಶೂನ್ಯ-ಬಿಟ್‌ನಷ್ಟು ಉದ್ದವಾಗಿರುತ್ತದೆ ಮತ್ತು ಗುರುತುಮಾಡಲ್ಪಟ್ಟ ವಸ್ತುವಿನಲ್ಲಿನ ನೀರುಗುರುತಿನ ಹಾಜರಿ ಅಥವಾ ಗೈರುಹಾಜರಿಯನ್ನು ಪತ್ತೆಹಚ್ಚುವ ದೃಷ್ಟಿಯಿಂದ ವ್ಯವಸ್ಥೆಯು ವಿನ್ಯಾಸಗೊಳಿಸಲ್ಪಟ್ಟಿರುತ್ತದೆ. ನೀರುಗುರುತು ಮಾಡುವಿಕೆಯ ಯೋಜನೆಗಳ ಈ ಬಗೆಯನ್ನು ಇಟಾಲಿಕ್ ಶೂನ್ಯ-ಬಿಟ್ ನ ಅಥವಾ ಇಟಾಲಿಕ್ ಹಾಜರಿಯ ನೀರುಗುರುತು ಮಾಡುವಿಕೆಯ ಯೋಜನೆಗಳು ಎಂದು ಸಾಮಾನ್ಯವಾಗಿ ಉಲ್ಲೇಖಿಸಲಾಗುತ್ತದೆ. ಕೆಲವೊಮ್ಮೆ, ಈ ಬಗೆಯ ನೀರುಗುರುತು ಮಾಡುವಿಕೆಯ ಯೋಜನೆಯು 1-ಬಿಟ್ ನೀರುಗುರುತು ಎಂದು ಕರೆಯಲ್ಪಡುತ್ತದೆ; ಏಕೆಂದರೆ, 1 ಎಂಬ ಒಂದು ಅಂಕಿಯು ಒಂದು ನೀರುಗುರುತಿನ ಹಾಜರಿಯನ್ನು (ಮತ್ತು ಒಂದು 0 ಎಂಬುದು ನೀರುಗುರುತಿನ ಗೈರುಹಾಜರಿಯನ್ನು) ಸೂಚಿಸುತ್ತದೆ.
- ಸಂದೇಶವು ಒಂದು ಎನ್-ಬಿಟ್‌ನಷ್ಟು ಉದ್ದದ ಹರಿವು (, ) ಅಥವಾ ನೊಂದಿಗೆ ಆಗಿರುತ್ತದೆ ಮತ್ತು ನೀರುಗುರುತಿನಲ್ಲಿ ಅದು ಸಮನ್ವಯಗೊಳಿಸಲ್ಪಟ್ಟಿರುತ್ತದೆ. ಈ ಬಗೆಯ ಯೋಜನೆಗಳು ಅನೇಕ ಬಿಟ್‌ನ ನೀರುಗುರುತು ಮಾಡುವಿಕೆಯ ಅಥವಾ ಶೂನ್ಯವಲ್ಲದ-ಬಿಟ್‌ನ ನೀರುಗುರುತು ಮಾಡುವಿಕೆಯ ಯೋಜನೆಗಳೆಂದು ಸಾಮಾನ್ಯವಾಗಿ ಉಲ್ಲೇಖಿಸಲ್ಪಡುತ್ತವೆ.
ಸೇರಿಸುವಿಕೆಯ ವಿಧಾನ
[ಬದಲಾಯಿಸಿ]ಒಂದು ವೇಳೆ ಗುರುತುಮಾಡಲ್ಪಟ್ಟ ಸಂಕೇತವನ್ನು ಒಂದು ಸಂಯೋಜನೀಯ ಮಾರ್ಪಾಡಿನಿಂದ ಪಡೆದುಕೊಳ್ಳಲಾಗಿದ್ದರೆ, ಅಂಥ ನೀರುಗುರುತು ಮಾಡುವಿಕೆಯ ವಿಧಾನವನ್ನು ಹರವು-ರೋಹಿತ ವಿಧಾನ ಎಂದು ಉಲ್ಲೇಖಿಸಲಾಗುತ್ತದೆ. ಹರವು-ರೋಹಿತದ ನೀರುಗುರುತುಗಳು ಸಾಧಾರಣವೆಂಬಂತೆ ದೃಢವಾಗಿವೆ ಎಂದು ಹೇಳಲಾಗುತ್ತದೆಯಾದರೂ, ಆಶ್ರಯದಾತ ಮಧ್ಯಪ್ರವೇಶದ ಕಾರಣದಿಂದಾಗಿ ಒಂದು ಕಡಿಮೆ ಮಟ್ಟದ ಮಾಹಿತಿ ಸಾಮರ್ಥ್ಯವನ್ನೂ ಅವು ಹೊಂದಿರುತ್ತವೆ. ಒಂದು ವೇಳೆ ಗುರುತು ಮಾಡಲ್ಪಟ್ಟ ಸಂಕೇತವನ್ನು ಕ್ವಾಂಟೀಕರಣದಿಂದ ಪಡೆಯಲಾಗಿದ್ದರೆ, ಅಂಥ ನೀರುಗುರುತು ಮಾಡುವಿಕೆಯ ವಿಧಾನವು ಕ್ವಾಂಟೀಕರಣದ ಬಗೆಗೆ ಸೇರಿದೆ ಎಂದು ಹೇಳಲಾಗುತ್ತದೆ. ಕ್ವಾಂಟೀಕರಣದ ನೀರುಗುರುತುಗಳು ಕಡಿಮೆ ಮಟ್ಟದ ಸ್ಫುಟತ್ವಕ್ಕೆ ಎಡೆಕೊಡುತ್ತವೆಯಾದರೂ, ಆಶ್ರಯದಾತ ಮಧ್ಯಪ್ರವೇಶದ ತಿರಸ್ಕಾರದ ಕಾರಣದಿಂದಾಗಿ ಒಂದು ಉನ್ನತವಾದ ಮಾಹಿತಿ ಸಾಮರ್ಥ್ಯವನ್ನು ಅವು ಹೊಂದಿರುತ್ತವೆ. ಹರವು-ರೋಹಿತ ವಿಧಾನವನ್ನು ಹೋಲುವಂತಿರುವ ಆದರೆ ದೈಶಿಕ ವರ್ಗದಲ್ಲಿ ನಿರ್ದಿಷ್ಟವಾಗಿ ಸೇರಿಸಲ್ಪಟ್ಟಿರುವ ಒಂದು ಸಂಯೋಜನೀಯ ಮಾರ್ಪಾಡಿನಿಂದ ಗುರುತು ಮಾಡಲ್ಪಟ್ಟ ಸಂಕೇತವು ಒಂದು ವೇಳೆ ಸೇರಿಸಲ್ಪಟ್ಟಿದ್ದರೆ, ಅಂಥ ನೀರುಗುರುತು ಮಾಡುವಿಕೆಯ ವಿಧಾನವು ವ್ಯಾಪಕತೆಯ ಸರಿಹೊಂದಿಸುವಿಕೆ ಎಂದು ಉಲ್ಲೇಖಿಸಲ್ಪಡುತ್ತದೆ.
ಮೌಲ್ಯಮಾಪನ/ಒರೆಗೆ ಹಚ್ಚುವಿಕೆ
[ಬದಲಾಯಿಸಿ]ಅಂಕೀಯ ನೀರುಗುರುತು ಮಾಡುವಿಕೆಯ ಯೋಜನೆಗಳ ಮೌಲ್ಯಮಾಪನವು, ಓರ್ವ ನೀರುಗುರುತು ವಿನ್ಯಾಸಕನಿಗೆ ಅಥವಾ ಆಂತ್ಯಿಕ ಬಳಕೆದಾರರಿಗೆ ಸಂಬಂಧಿಸಿದಂತೆ ವಿಸ್ತೃತವಾದ ಮಾಹಿತಿಯನ್ನು ಒದಗಿಸಬಲ್ಲದು. ಆದ್ದರಿಂದ, ಮೌಲ್ಯಮಾಪನದ ವಿಭಿನ್ನ ಕಾರ್ಯತಂತ್ರಗಳು ಅಸ್ತಿತ್ವದಲ್ಲಿವೆ. ಉದಾಹರಣೆಗೆ ಒಂದು ಸುಧಾರಣೆಯನ್ನು ತೋರಿಸಲು, ಏಕ ಗುಣಲಕ್ಷಣಗಳ ಮೌಲ್ಯಮಾಪನವನ್ನು ಓರ್ವ ನೀರುಗುರುತು ವಿನ್ಯಾಸಕನು ಅನೇಕ ವೇಳೆ ಬಳಸುತ್ತಾನೆ. ಆಂತ್ಯಿಕ ಬಳಕೆದಾರರು ಹೆಚ್ಚಿನಂಶ ವಿಸ್ತೃತವಾದ ಮಾಹಿತಿಯಲ್ಲಿ ಆಸಕ್ತಿಯನ್ನು ಹೊಂದಿರುವುದಿಲ್ಲ. ತಾವು ಹೊಂದಿರುವ ಅನ್ವಯದ ಸಂದರ್ಭಕ್ಕೆ ಸಂಬಂಧಿಸಿದಂತೆ ಒಂದು ನಿರ್ದಿಷ್ಟ ಅಂಕೀಯ ನೀರುಗುರುತು ಮಾಡುವಿಕೆಯ ಅಂಕಗಣಿತ ಪದ್ಧತಿಯನ್ನು ಬಳಸಲು ಸಾಧ್ಯವೇ ಎಂಬುದನ್ನಷ್ಟೇ ಅವರು ತಿಳಿಯಲು ಬಯಸುತ್ತಾರೆ, ಮತ್ತು ಒಂದು ವೇಳೆ ಅದು ಸಾಧ್ಯವಾದಲ್ಲಿ, ಯಾವ ಮಾಪನ ಲಕ್ಷಣವು ಅತ್ಯುತ್ತಮವಾಗಿ ಹೊಂದಿಕೊಳ್ಳುತ್ತದೆ ಎಂಬುದನ್ನು ಅವರು ತಿಳಿಯಲು ಬಯಸುತ್ತಾರೆ.
ಸುಭದ್ರ ಅಂಕೀಯ ಕ್ಯಾಮರಾ
[ಬದಲಾಯಿಸಿ]ಒಂದು ಸುಭದ್ರ ಅಂಕೀಯ ಕ್ಯಾಮರಾವನ್ನು (ಸೆಕ್ಯೂರ್ ಡಿಜಿಟಲ್ ಕ್ಯಾಮರಾ-SDC) ಮೊಹಾಂತಿ ಮತ್ತು ಇತರರು 2003ರಲ್ಲಿ ಪ್ರಸ್ತಾವಿಸಿದರು; ಇದು 2004ರ ಜನವರಿಯಲ್ಲಿ ಪ್ರಕಟಿಸಲ್ಪಟ್ಟಿತು[೩]
ಬ್ಲೈಥ್ ಹಾಗೂ ಫ್ರಿಡ್ರಿಚ್ ಎಂಬಿಬ್ಬರೂ ಸಹ 2004ರಲ್ಲಿ[೪] SDC ಕುರಿತಾಗಿ ಕಾರ್ಯನಿರ್ವಹಿಸಿದ್ದಾರೆ. ಒಂದು ಅಂಕೀಯ ಕ್ಯಾಮರಾಕ್ಕೆ ಸಂಬಂಧಿಸಿದುದಾಗಿರುವ ಇದು, ಒಂದು ಗೂಢಲಿಪಿಶಾಸ್ತ್ರದ ಕಲಬೆರಕೆಯೊಂದಿಗೆ ಒಂದು ಜೀವಸಂಖ್ಯಾಶಾಸ್ತ್ರದ ಗುರುತುಕಾರಕವನ್ನು ಸೇರಿಸಲು ನಷ್ಟರಹಿತ ನೀರುಗುರುತು ಮಾಡುವಿಕೆಯನ್ನು ಬಳಸುತ್ತದೆ.[೫]
ಪೂರ್ವಗಾಮಿ ಕ್ಯಾಮರಾಗಳು
[ಬದಲಾಯಿಸಿ]ಎಪ್ಸನ್ ಮತ್ತು ಕೊಡ್ಯಾಕ್ ಕಂಪನಿಗಳು ಸುರಕ್ಷತಾ ಲಕ್ಷಣಗಳನ್ನು ಒಳಗೊಂಡಿರುವ ಕ್ಯಾಮರಾಗಳನ್ನು ತಯಾರಿಸಿದ್ದು, ಎಪ್ಸನ್ PhotoPC 3000Z ಹಾಗೂ ಕೊಡ್ಯಾಕ್ DC-290 ಕ್ಯಾಮರಾಗಳು ಕ್ರಮವಾಗಿ ಅವಕ್ಕೆ ಉದಾಹರಣೆಯಾಗಿ ನಿಲ್ಲುತ್ತವೆ. ಎರಡೂ ಕ್ಯಾಮರಾಗಳು ತೆಗೆದುಹಾಕಲಾಗದ ಲಕ್ಷಣಗಳನ್ನು ಚಿತ್ರಗಳಿಗೆ ಸೇರಿಸಿದವು; ಅದು ಮೂಲ ಬಿಂಬವನ್ನು ವಿರೂಪಗೊಳಿಸಿದ ಕಾರಣದಿಂದಾಗಿ, ನ್ಯಾಯಾಲಯದಲ್ಲಿನ ವಿಧಿವಿಜ್ಞಾನದ ಸಾಕ್ಷ್ಯದಂಥ ಕೆಲವೊಂದು ಅನ್ವಯಗಳಿಗೆ ಸಂಬಂಧಿಸಿದಂತೆ ಅವನ್ನು ಅಂಗೀಕಾರಾರ್ಹವಲ್ಲದ್ದಾಗಿಸಿತು. ಬ್ಲೈಥ್ ಹಾಗೂ ಫ್ರಿಡ್ರಿಚ್ ಪ್ರಕಾರ, "ಎರಡು ಕ್ಯಾಮರಾಗಳ ಪೈಕಿ ಯಾವುದೂ ಸಹ ಬಿಂಬದ ಮೂಲದ ಒಂದು ವಿವಾದಾಸ್ಪದವಲ್ಲದ ಪುರಾವೆಯನ್ನು ಅಥವಾ ಅದರ ಲೇಖಕನನ್ನು ಒದಗಿಸಲಾರದು".[೪]
ಪೂರ್ವಸ್ಥಿತಿಗೆ ತರಬಲ್ಲ ದತ್ತಾಂಶದ ಮರೆಮಾಡುವಿಕೆ
[ಬದಲಾಯಿಸಿ]ಪೂರ್ವಸ್ಥಿತಿಗೆ ತರಬಲ್ಲ ದತ್ತಾಂಶದ ಮರೆಮಾಡುವಿಕೆಯು ಒಂದು ಕೌಶಲವಾಗಿದ್ದು, ಪ್ರಮಾಣೀಕರಿಸುವಿಕೆಗೆ ಒಳಗಾಗಲು ಬಿಂಬಗಳಿಗೆ ಅದು ಅನುವು ಮಾಡಿಕೊಡುತ್ತದೆ ಮತ್ತು ನಂತರ ನೀರುಗುರುತನ್ನು ತೆಗೆದುಹಾಕುವ ಮೂಲಕ ಅವುಗಳ ಮೂಲಸ್ವರೂಪಕ್ಕೆ ಪುನಃಸ್ಥಾಪಿಸಲು ಮತ್ತು ಅತಿವಿಸ್ತಾರವಾಗಿ ಬರೆಯಲ್ಪಟ್ಟಿದ್ದ ಬಿಂಬದ ದತ್ತಾಂಶವನ್ನು ಬದಲಾಯಿಸಲು ಅದು ಅವಕಾಶ ಮಾಡಿಕೊಡುತ್ತದೆ. ಇದರಿಂದಾಗಿ ಕಾನೂನು ಸಂಬಂಧಿ ಉದ್ದೇಶಗಳಿಗಾಗಿ ಬಿಂಬಗಳು ಸ್ವೀಕಾರಾರ್ಹವಾಗಲು ಸಾಧ್ಯವಾದಂತಾಗುತ್ತದೆ. ಸೈನಿಕನೆಲೆಗಳ ಪತ್ತೇದಾರಿಕೆಯ ಬಿಂಬಗಳ ಪ್ರಮಾಣೀಕರಣಕ್ಕೆ ಸಂಬಂಧಿಸಿದಂತೆ ಈ ಕೌಶಲವನ್ನು ಬಳಸಿಕೊಳ್ಳಲು US ಸೇನೆಯು ಆಸಕ್ತಿಯನ್ನು ತೋರಿಸಿದೆ.[೬]
ಇವನ್ನೂ ನೋಡಿ
[ಬದಲಾಯಿಸಿ]- ಶ್ರವ್ಯಾಂಶ ನೀರುಗುರುತಿನ ಪತ್ತೆಹಚ್ಚುವಿಕೆ
- ನಕಲಿನ ದಾಳಿ
- ನೀರುಗುರುತು (ದತ್ತಾಂಶ ಕಡತ)
- ನೀರು ಗುರುತಿನ ಪತ್ತೆಹಚ್ಚುವಿಕೆ
- ಪ್ಯಾಟರ್ನ್ ರೆಕಗ್ನಿಷನ್ (ಕಾದಂಬರಿ), ಪ್ರಸಿದ್ಧ ಸೈಬರ್ಪಂಕ್ ಲೇಖಕ ವಿಲಿಯಂ ಗಿಬ್ಸನ್ನಿಂದ ಬರೆಯಲ್ಪಟ್ಟ ಅಂಕೀಯ ನೀರುಗುರುತು ಮಾಡುವಿಕೆಯ ವಿಷಯವನ್ನು ಒಳಗೊಂಡಿರುವ ಒಂದು ವೈಜ್ಞಾನಿಕ ರೋಮಾಂಚಕ ಕಾದಂಬರಿ
- ಬ್ಯಾಂಕಿನ ನೋಟುಗಳಲ್ಲಿ ಬಳಸಲಾಗುವ EURion ಸಂಕೇತ ಪುಂಜಗಳ ಮಾದರಿ
- ಚಲನಚಿತ್ರಗಳ ಜಾಡುಹಿಡಿಯಲು ಬಳಸಲಾಗುವ ಕೋಡೆಡ್ ಆಂಟಿ-ಪೈರಸಿ
- ರಹಸ್ಯ ಬರಹಗಾರಿಕೆ
ಹೊರಗಿನ ಕೊಂಡಿಗಳು
[ಬದಲಾಯಿಸಿ]- ಡಿಜಿಟಲ್ ವಾಟರ್‌ಮಾರ್ಕಿಂಗ್ ಅಲಯೆನ್ಸ್ - ಫರ್ದರಿಂಗ್ ದಿ ಅಡಾಪ್ಷನ್ ಆಫ್ ಡಿಜಿಟಲ್ ವಾಟರ್‌ಮಾರ್ಕಿಂಗ್ Archived 2010-07-30 ವೇಬ್ಯಾಕ್ ಮೆಷಿನ್ ನಲ್ಲಿ.
- Forensics.nlನಲ್ಲಿರುವ ಡಿಜಿಟಲ್ ವಾಟರ್‌ಮಾರ್ಕಿಂಗ್ & ಡೇಟಾ ಹೈಡಿಂಗ್ ರಿಸರ್ಚ್ ಪೇಪರ್ಸ್ Archived 2006-10-14 ವೇಬ್ಯಾಕ್ ಮೆಷಿನ್ ನಲ್ಲಿ.
- ಅಂಕೀಯ ನೀರುಗುರುತು ಮಾಡುವಿಕೆ ಮತ್ತು ಅಂಕೀಯ ನೀರುಗುರುತು ಮಾಡುವಿಕೆಯ ಮೌಲ್ಯನಿರ್ಣಯದ ಸಾಧನಗಳ ಕುರಿತಾದ ಪುಸ್ತಕಗಳು, ನಿಯತಕಾಲಿಕಗಳು ಮತ್ತು ಸಮಾವೇಶಗಳ ಮಾರ್ಗದರ್ಶಿಕೆ Archived 2007-01-12 ವೇಬ್ಯಾಕ್ ಮೆಷಿನ್ ನಲ್ಲಿ.
- ಫೇಬಿಯನ್ ಪೆಟಿಟ್ಕೊಲಾಸ್ ರೂಪಿಸಿರುವ ಇನ್ಫರ್ಮೇಷನ್ ಹೈಡಿಂಗ್ ಹೋಮ್ಪೇಜ್
- ನೀರುಗುರುತು ಮಾಡುವಿಕೆಯ ವಿಧಾನಗಳ ಹೋಲಿಕೆ
- ದೃಢವಾದ ಜಾಲದ ನೀರುಗುರುತು ಮಾಡುವಿಕೆ
- ಫೋಟೋವಾಟರ್ಮಾರ್ಕ್ ಟೆಕ್ನಾಲಜಿ: ಹೋಲೋಗ್ರಾಫಿಕ್ ಅಪ್ರೋಚ್ Archived 2010-07-21 ವೇಬ್ಯಾಕ್ ಮೆಷಿನ್ ನಲ್ಲಿ.
- ಅಂಕೀಯ ನೀರುಗುರುತು ಮಾಡುವಿಕೆಯ ವ್ಯವಸ್ಥೆಗಳನ್ನು ಪರೀಕ್ಷಿಸುವುದಕ್ಕಾಗಿರುವ ಮುಕ್ತವೇದಿಕೆ Archived 2010-03-04 ವೇಬ್ಯಾಕ್ ಮೆಷಿನ್ ನಲ್ಲಿ.
ಆಕರಗಳು
[ಬದಲಾಯಿಸಿ]- ↑ ಇಂಗೆಮರ್ J. ಕಾಕ್ಸ್, ಮ್ಯಾಥ್ಯೂ L. ಮಿಲ್ಲರ್, ಜೆಫ್ರೆ A. ಬ್ಲೂಮ್, ಜೆಸ್ಸಿಕಾ ಫ್ರಿಡ್‌ರಿಚ್ ಮತ್ತು ಟಾನ್ ಕಾಲ್ಕರ್, "ಡಿಜಿಟಲ್ ವಾಟರ್‌ಮಾರ್ಕಿಂಗ್ ಅಂಡ್ ಸ್ಟೆಗಾನೋಗ್ರಫಿ" (ಎರಡನೇ ಆವೃತ್ತಿ), ಮೋರ್ಗಾನ್ ಕೌಫ್‌ಮನ್, 2008
- ↑ ಕಾಪಿ ಪ್ರೊಟೆಕ್ಷನ್ ಟೆಕ್ನಿಕಲ್ ವರ್ಕಿಂಗ್ ಗ್ರೂಪ್ (CPTWG)
- ↑ #5.
Saraju P. Mohanty, Nagarajan Ranganathan, and Ravi K. Namballa, VLSI Implementation of Visible Watermarking for a Secure Digital Still Camera Design (PDF), archived from the original (PDF) on 2011-07-20, retrieved 2010-07-13
{{citation}}
: CS1 maint: multiple names: authors list (link) - ↑ ೪.೦ ೪.೧ Paul Blythe and Jessica Fridrich, Secure Digital Camera (PDF)
- ↑ Toshikazu Wada, Fay Huang (2009), Advances in Image and Video Technology, p. 340–341
- ↑
Unretouched by human hand, The Economist, December 12th 2002
{{citation}}
: Check date values in:|date=
(help)
- ECRYPT ವರದಿ: ಶ್ರವ್ಯಾಂಶದ ಒರೆಗೆ ಹಚ್ಚುವಿಕೆಯ ಸಾಧನಗಳು ಹಾಗೂ ರಹಸ್ಯ ಬರಹಗಾರಿಕೆಯ ವಿಶ್ಲೇಷಣೆ
- ECRYPT ವರದಿ: ನೀರುಗುರುತು ಮಾಡುವಿಕೆಯ ಒರೆಗೆ ಹಚ್ಚುವಿಕೆ
- ಜನಾ ಡಿಟ್ಮನ್, ಡೇವಿಡ್ ಮೆಗಿಯಾಸ್, ಆಂಡ್ರಿಯಾಸ್ ಲ್ಯಾಂಗ್, ಜೋರ್ಡಿ ಹೆರ್ರೆರಾ-ಜೋವನ್ಕೊಮಾರ್ಟಿ; ಥಿಯರೆಟಿಕಲ್ ಫ್ರೇಂವರ್ಕ್ ಫಾರ್ ಎ ಪ್ರಾಕ್ಟಿಕಲ್ ಎವ್ಯಾಲ್ಯುಯೇಷನ್ ಅಂಡ್ ಕಂಪ್ಯಾರಿಸನ್ ಆಫ್ ಆಡಿಯೋ ವಾಟರ್‌ಮಾರ್ಕಿಂಗ್ ಸ್ಕೀಮ್ಸ್ ಇನ್ ದಿ ಟ್ರಯಾಂಗಲ್ ಆಫ್ ರೋಬಸ್ಟ್ನೆಸ್, ಟ್ರಾನ್ಸ್ಪರೆನ್ಸಿ ಅಂಡ್ ಕೆಪ್ಯಾಸಿಟಿ ; ಇದರಲ್ಲಿರುವುದು: ಟ್ರಾನ್ಸಾಕ್ಷನ್ ಆನ್ ಡೇಟಾ ಹೈಡಿಂಗ್ ಅಂಡ್ ಮಲ್ಟಿಮೀಡಿಯಾ ಸೆಕ್ಯುರಿಟಿ I; ಸ್ಪ್ರಿಂಗರ್ LNCS 4300; ಸಂಪಾದಕ ಯುನ್ Q. ಷಿ; ಪುಟಗಳು 1-40; ISBN 978-3-540-49071-5,2006 PDF Archived 2008-12-21 ವೇಬ್ಯಾಕ್ ಮೆಷಿನ್ ನಲ್ಲಿ.
- M. V. ಸ್ಮಿರ್ನೋವ್. ಹಾಲೋಗ್ರಫಿಕ್ ಅಪ್ರೋಚ್ ಟು ಎಂಬೆಡಿಂಗ್ ಹಿಡನ್ ವಾಟರ್ಮಾರ್ಕ್ಸ್ ಇನ್ ಎ ಫೋಟೋಗ್ರಫಿಕ್ ಇಮೇಜ್ //ಜರ್ನಲ್ ಆಫ್ ಆಪ್ಟಿಕಲ್ ಟೆಕ್ನಾಲಜಿ, ಸಂಪುಟ 72, ಸಂಚಿಕೆ 6, ಪುಟಗಳು 464-468
- Pages using the JsonConfig extension
- CS1 maint: multiple names: authors list
- CS1 errors: dates
- Articles needing additional references from April 2010
- Articles with invalid date parameter in template
- All articles needing additional references
- Wikipedia articles needing clarification from August 2009
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಪ್ರಮಾಣೀಕರಣ ವಿಧಾನಗಳು
- ನೀರುಗುರುತು ಮಾಡುವಿಕೆ
- ಅಂಕೀಯ ಛಾಯಾಚಿತ್ರಗ್ರಹಣ (ಡಿಜಿಟಲ್ ಫೋಟೋಗ್ರಫಿ)
- ಛಾಯಾಚಿತ್ರೀಕರಣ
- Pages using ISBN magic links