ವಿಷಯಕ್ಕೆ ಹೋಗು

ಅಂಕೀಯ ಏಕಮಸೂರ ಪ್ರತಿಫಲನ ಕ್ಯಾಮರಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಂಕೀಯ ಏಕಮಸೂರ ಪ್ರತಿಫಲನ ಕ್ಯಾಮರಾಗಳು (ಡಿಎಸ್ಎಲ್ಆರ್ ಎಂದೂ ಕರೆಯಲಾದ) ಒಂದು ಏಕಮಸೂರ ಪ್ರತಿಫಲನ ಕ್ಯಾಮರಾದ ದೃಗ್ವಿಜ್ಞಾನ ಹಾಗು ಯಾಂತ್ರಿಕ ವ್ಯವಸ್ಥೆಯನ್ನು ಛಾಯಾಚಿತ್ರ ಕಾಗದದ ಬದಲು ಅಂಕೀಯ ಚಿತ್ರಣ ಸಂವೇದಕದ ಜೊತೆಗೆ ಒಗ್ಗೂಡಿಸುವ ಅಂಕೀಯ ಕ್ಯಾಮರಾಗಳು. ಪ್ರತಿಫಲನ ವಿನ್ಯಾಸ ವಿಧಾನವು ಒಂದು ಡಿಎಸ್ಎಲ್ಆರ್ ಮತ್ತು ಇತರ ಅಂಕೀಯ ಕ್ಯಾಮರಾಗಳ ನಡುವಿನ ಪ್ರಮುಖ ವ್ಯತ್ಯಾಸ. ಪ್ರತಿಫಲನ ವಿನ್ಯಾಸದಲ್ಲಿ, ಬೆಳಕು ಮಸೂರದ ಮೂಲಕ ಚಲಿಸುತ್ತದೆ, ಆಮೇಲೆ ಚಿತ್ರವನ್ನು ಪರ್ಯಾಯವಾಗಿ ನೋಟಸಾಧಕ ಅಥವಾ ಚಿತ್ರ ಸಂವೇದಕಕ್ಕೆ ಕಳಿಸುವ ಒಂದು ಕನ್ನಡಿಗೆ ಚಲಿಸುತ್ತದೆ.