ವಿಷಯಕ್ಕೆ ಹೋಗು

ಯೇಸುವಿನ ತಾಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈ ಲೇಖನವನ್ನು ವಿಶ್ವಕೋಶದ ಲೇಖನಕ್ಕೆ ತಕ್ಕ ಶೈಲಿಯಲ್ಲಿ ಬರೆಯಲಾಗಿಲ್ಲ.
ದಯವಿಟ್ಟು ಇದನ್ನು ಉತ್ತಮಗೊಳಿಸಿ, ಅಥವಾ ಚರ್ಚೆ ಪುಟದಲ್ಲಿ ಚರ್ಚಿಸಿ. ಸಲಹೆಗಳಿಗಾಗಿ ವಿಕಿಪೀಡಿಯದ ಉತ್ತಮ ಲೇಖನಗಳನ್ನು ಬರೆಯಲು ಮಾರ್ಗದರ್ಶನ ಲೇಖನವನ್ನು ನೋಡಿ.


ಗಾಬ್ರಿಯೇಲ್ ದೂತನ ಸಂದೇಶ
ಮೇರಿ-ಬಾಲಯೇಸು

ಯೇಸುವಿನ ತಾಯಿ

[ಬದಲಾಯಿಸಿ]

ಕಥೋಲಿಕ ಕ್ರೈಸ್ತ ಧರ್ಮದಲ್ಲಿ ಮಾತೆ ಮೇರಿಯವರು,ಭಕ್ತರ ಮನದಲ್ಲಿ,ಪ್ರಮುಖ ಸ್ಥಳವನ್ನುಗಳಿಸಿದ್ದಾರೆ.ಯೇಸುಕ್ರಿಸ್ತರ ನಂತರ ಮಾತೆ ಮೇರಿಯವರು ಧರ್ಮಸಭೆಯಲ್ಲಿ ಪ್ರಮುಖ ಪಾತ್ರವಹಿಸುತಾರೆ.ಬೈಬಲ್ನಲ್ಲಿ ದೇವಮಾತೆಯನ್ನು ಯೇಸುವಿನ ಬಾಲ್ಯ ಜೀವನದಲ್ಲಿ ,ಕಾನಾಊರಿನ ಮದುವೆಯಲ್ಲಿ,ಯೇಸು ಶಿಲುಬೆಯ ಮೇಲೆ ಮಡಿಯುವಾಗ,ಮತ್ತು ಯೇಸುವಿನ ಪುರುತ್ಥಾನದ ನಂತರ ಶಿಷ್ಯರೊಂದಿಗೆ ಸೇರಿ ಜಪಮಾಡುವುದನ್ನು ನೋಡಬಹುದು. ಸಂತರುಗಳಾದ ಜೋಕಿಮ್ ಮತ್ತು ಅನ್ನಮ್ಮನವರ ಪುತ್ರಿ ಮೇರಿ. ಇವರು ಜನ್ಮಪಾಪವಿಲ್ಲದೆ ಹುಟ್ಟಿ, ಚಿಕ್ಕಂದಿನಿಂದಲೇ ತಮ್ಮ ಪೋಷಕರ ಸಹಾಯದಿಂದ ದೈವಭಕ್ತಿ ಮತ್ತು ದೈವಜ್ಞಾನದಲ್ಲಿ ಬೆಳೆದರು.ಇವರು ದೇವರ ವಾಕ್ಯಗಳನ್ನು ಓದಿ ಮನದಲ್ಲಿ ಧ್ಯಾನಿಸಿ ಅದನ್ನು ತಮ್ಮ ಜೀವನದಲ್ಲಿ ಪಾಲಿಸುತಿದ್ದರು. ಅದಕ್ಕೆ ಯೇಸುಕ್ರಿಸ್ತರು ಮುಂದೆ ತಮ್ಮ ಪ್ರಸಂಗದಲ್ಲಿ ಪರೋಕ್ಷವಾಗಿ ತನ್ನ ತಾಯಿಯ ಬಗ್ಗೆ ಈ ರೀತಿಯಾಗಿ ವಿವರಿಸುತ್ತಾರೆ." ಯಾರು ನನ್ನ ತಾಯಿ?, ಯಾರೂ ನನ್ನ ಸಹೋದರರು? ಯಾರು ದೇವರ ವಾಕ್ಯಗಳನ್ನು ಕೇಳಿ,ಅದರಂತೆ ನಡೆಯುತ್ತಾರೆ, ಅವರೇ ನನ್ನ ತಾಯಿ ಮತ್ತು ಸಹೋದರರು".ಇವರ ಪೋಷಕರು ತಮ್ಮ ಸಂಪ್ರಾದಯದಂತೆ, ಮೊದಲ ಮಗುವನ್ನು ದೇವರಿಗೆ ಕಾಣಿಕೆಯಾಗಿ ದೇವಾಲಯಕ್ಕೆ ಸಮರ್ಪಿಸಿದರು. ಮೇರಿಯವರ ಮುಗ್ಧ ಮನಸ್ಸು ,ದೇವರಲ್ಲಿ ಅಪಾರವಾದ ಭಕ್ತಿ ಮತು ಪ್ರೀತಿ ದೇವರನ್ನು ಅವರ ಕಡೆಗೆ ಸೆಳೆಯಿತ್ತು.

ಗಾಬ್ರಿಯೇಲ್ ದೂತನ ಸಂದೇಶ

[ಬದಲಾಯಿಸಿ]

ದೇವರು ಗಾಬ್ರಿಯೇಲ್ ದೂತನನ್ನು ,ತಮ್ಮ ಸಂದೇಶವನ್ನು ಕನ್ಯೆಯಾಗಿದ್ದ ಮೇರಿಯವರಿಗೆ ತಿಳಿಸಲು ಕಳುಹಿಸಿದರು.ದೇವ ದೂತನು,ಮರಿಯಳಿಗೆ ,"ದೈವಾನುಗ್ರಹ ಭರಿತಳೆ ನಿಮಗೆ ಶುಭವಾಗಲಿ" ಎಂದು ತಿಳಿಸಿದಾಗ,ಇದು ಎಂಥಾ ಶುಭಾಶಯ ಎಂದು ದಿಗ್ಭ್ರಮೆಯಾದಳು ,ಅದಕ್ಕೆ ದೂತನು ,'ಹೆದರಬೇಡ,ನೀನು ಪವಿತ್ರಾತ್ಮರಿಂದ ಗರ್ಭವತಿಯಾಗಿ ದೇವರ ಮಗನಿಗೆ ಜನ್ಮ ನೀಡುವೆ ಹಾಗು ಆ ಮಗುವಿಗೆ "ಯೇಸು" ಎಂದು ಹೆಸರಿಡುವೆ' ಮರುತ್ತರವಾಗಿ ಮರಿಯಳೂ,' ಇದು ಹೇಗೆ ಸಾಧ್ಯ ನನಗೆ ಯಾವ ಗಂಡನ ಸಂಪರ್ಕವೂ ಇಲ್ಲ 'ಎಂದು ಹೇಳಿದಳು. ದೂತನು,'ದೇವರಿಂದ ಅಸಾಧ್ಯವಾದುದು ಯಾವುದೂ ಇಲ್ಲ,'ಎಂದನು.'ಆಗ ಮೇರಿಯವರು ತಮ್ಮ ಹದಿನಾರನೇ ವಯಸ್ಸಿನಲ್ಲಿ ದೇವರ ಚಿತ್ತಕ್ಕೆ ತಲೆಭಾಗಿ "ಇಗೋ ನಿಮ್ಮ ದಾಸಿ,ನಿಮ್ಮ ನುಡಿಯಂತೆ ಆಗಲಿ",ಎಂದು ವಿನಯದಿಂದ ದೇವರ ರಕ್ಷಣಾಕಾರ್ಯಕ್ಕೆ ತಮ್ಮನ್ನೆ ಸಂಪೂರ್ಣವಾಗಿ ಅರ್ಪಿಸಿದರು [ಲೂಕ,೧:೩೮]. ತದನಂತರ, ಯಾವುದೇ ಮನುಷ್ಯನ ಲೈಂಗಿಕ ಸಂಪರ್ಕವಿಲ್ಲದೆ ಪವಿತ್ರಾತ್ಮರಿಂದ ಗರ್ಭಧರಿಸಿ,ಎಲ್ಲಾ ತರಹದ ಅವಮಾನಗಳನ್ನು ಸಹಿಸಿಕೊಂಡು, ಜನ್ಮಕೊಡಲು ಮನೆಗಳಿಲ್ಲದೆ, ಬೆತ್ಲೆಹೇಮ್ ಎಂಬ ಊರಿನಲ್ಲಿ ದನದಕೊಟ್ಟಿಗೆಯಲ್ಲಿ ದೇವರ ಮಗನಿಗೆ ಜನ್ಮಕೊಟ್ಟು, ಗಾಬ್ರಿಯೇಲ್ ದೂತನ ಸಂದೇಶದಂತೆ,ಯೇಸು ಎಂದು ಹೆಸರಿಟ್ಟರು.(ಮತ್ತಾಯ೧:೨೫).ಈ ಕಾರಣಕ್ಕೆ ಇವರನ್ನು 'ಕನ್ಯಾ ಮರಿಯ' ಎಂದು ಕರೆಯುತ್ತಾರೆ.

ಯೇಸುವಿನ ಜೀವನದಲ್ಲಿ ಮಾತೆ ಮೇರಿ

[ಬದಲಾಯಿಸಿ]

ಸಂತ ಜೋಸೆಫರ ಸಹಾಯದಿಂದ ಮಾತೆ ಮೇರಿಯವರು ಬಾಲ ಯೇಸುವನ್ನು ದೈವಭಕ್ತಿಮತ್ತು ದೈವಜ್ಞಾನದಲ್ಲಿ ಬೆಳೆಸಿದರು ಯೇಸುಕ್ರಿಸ್ತರಿಗೆ ಎಲ್ಲಾ ತರಹದ ಸಲಹೆಗಳನ್ನು ನೀಡಿದರು.ಯೇಸು ಕ್ರಿಸ್ತರು ಈ ಭೂಮಿಯಲ್ಲಿ ಮೊದಲ ಪವಾಡವನ್ನು ಅಂದರೆ ನೀರನ್ನು ದ್ರಾಕ್ಷರಸವನ್ನಾಗಿ ಮಾರ್ಪಡಿಸಲು ದೇವತಾಯಿ,ಆ ಕಾನಾ ಮದುವೆಯ ಮನೆಯಲ್ಲಿ ದ್ರಾಕ್ಷರಸದ ಕೊರತೆಯನ್ನು ಕಂಡು ತನ್ನ ಮಗನಿಗೆ ತಿಳಿಸಿ,ಅವರ ಶಿಷ್ಯರಿಗೆ "ಅವರು ಹೇಳುವಂತೆ ಮಾಡಿ "ಎಂದುಹೇಳಿದರು. ತನ್ನ ತಾಯಿಯ ಉತ್ತೇಜನದಿಂದ ಯೇಸು ಕ್ರಿಸ್ತರು ಮೊದಲ ಅದ್ಭುತವನ್ನು ಮಾಡಿದರು.(ಯೋವನ್ನ೨:೧-೧೨). ಯೇಸು ಶಿಲುಬೆ ಮೇಲೆ ಮಡಿಯುವಾಗ,ತನ್ನ ತಾಯಿಯನ್ನು ತಮ್ಮ ಆಪ್ತ ಶಿಷ್ಯನಾದ ಯೋವಾನ್ನರಿಗೆ ,"ಇಗೋ ನಿನ್ನ ತಾಯಿ " ಎಂದು , ತನ್ನ ತಾಯಿಗೆ," ಇಗೋ ನಿನ್ನ ಮಗ" ಎಂದು ಹೇಳುವುದರ ಮೂಲಕ ತನ್ನ ತಾಯಿಯನ್ನು ,ಇಡೀ ಜಗತ್ತಿನ ಕ್ರೈಸ್ತರಿಗೂ ಹಾಗು ಧರ್ಮಸಭೆಗೂ ತಾಯಿಯನ್ನಾಗಿ ನೀಡಿದರು.ಅದೇ ತರಹ ಕ್ರೈಸ್ತರನ್ನು ಮಕ್ಕಳನ್ನಾಗಿ ತನ್ನ ತಾಯಿಗೆ ನೀಡಿದರು.(ಯೋವನ್ನ೧೯:೨೫-೨೭).ಅಂದಿನಿಂದ ಆ ತಾಯಿ ಕ್ರೈಸ್ತರನ್ನು ತಮ್ಮ ಮಗನ ಹಾದಿಯಲ್ಲಿ ನಡೆಸಿಕೊಂಡು ಬರುತ್ತಿದ್ದಾಳೆ.

ಶಿಷ್ಯರೊಡನೆ ದೇವ ಮಾತೆ

[ಬದಲಾಯಿಸಿ]

ಯೇಸುಕ್ರಿಸ್ತರ ಪಾಡು ,ಮರಣ ಹಾಗು ಪುನರುತ್ಥಾನದ ನಂತರ ಸ್ವರ್ಗಕ್ಕೆ ಆರೋಹಣವಾಗುವುಕ್ಕೆ ಮುಂಚೆ ಯೇಸು ತಮ್ಮ ಶಿಷ್ಯರಿಗೆ ಜೆರುಸಲೇಮಿನಲ್ಲೆ ಇರಲು ಆಜ್ಞಾಪಿಸಿ, ಪವಿತ್ರಾತ್ಮರನ್ನು ಕಳುಹಿಸುತ್ತೇನೆ ಎಂದು ವಾಗ್ದಾನ ಮಾಡಿ ಸ್ವರ್ಗರಾಹೋಣವಾದರು.ಶಿಷ್ಯರೆಲ್ಲರು ಭಯ ಭೀತಿಯಿಂದ ರೋಮನ್ ಅಧಿಕಾರಿಗಳಿಗೆ ಹೆದರಿ ಮೇಲ್ಮನೆಯಲ್ಲಿ ಸೇರಿದ್ದರು.ಇವರನ್ನು ಮಾತೆ ಮೇರಿಯವರು ಒಂದು ಗೂಡಿಸಿ,ಅವರೊಂದಿಗೆ ಸೇರಿ ಪವಿತ್ರಾತ್ಮರವರ ವರಕ್ಕಾಗಿ ಪ್ರಾರ್ಥಿಸಿದರು.ಮಾತೆ ಮೇರಿಯವರ ಬಿನ್ನಹಗಳ ಮೂಲಕ ಪೋಷಿತರು ಪವಿತ್ರಾತ್ಮರ ವರಗಳನ್ನು ಪಡೆದು ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡ ತೊಡಗಿದರು. ಅಲ್ಲಿ ಸೇರಿದ್ದ ಪ್ರತಿಯೊಬ್ಬರು ತಮ್ಮ ತಮ್ಮ ಭಾಷೆಗಳಲ್ಲಿ ಅವರು ಮಾತಾಡುವುದನ್ನು ಕೇಳಿ ಆಶ್ಚರ್ಯಗೊಂಡರು. ಅಂದಿನಿಂದ,ಪ್ರೇಷಿತರು ರೋಮನ್ ಅಧಿಕಾರಿಗಳಿಗೆ ಅಂಜದೆ ,ಪ್ರಪಂಚದ ಎಲ್ಲೆಡೆಯಲ್ಲೂ ಯೇಸುವಿನ ನಾಮದಲ್ಲಿ ಭೋಧನೆ ಮಾಡಿ ಅವರ ಹೆಸರಿನಲ್ಲಿ ದೀಕ್ಷಾಸ್ನಾನ ಕೊಟ್ಟು, ಧರ್ಮಸಭೆಯಲ್ಲಿ ಯೇಸುವಿನ ಕಾರ್ಯಗಳನ್ನು ಮುಂದುವರೆಸಿದರು.

ಮಾತೆ ಮೇರಿಯವರು ಅಂದಿನಿಂದ ಇಂದಿನಿವರೆಗೂ ಪ್ರತಿಯೊಬ್ಬಕಥೋಲಿಕ ಕ್ರೈಸ್ತರನ್ನು ಮತ್ತು ವಿಶ್ವಾಸದಿಂದ ಬರುವ ಭಕ್ತರನ್ನು ,ತಾಯಿಯ ಪ್ರೀತಿ ಹಾಗುಕರುಣೆಯಿಂದ ಆದರಿಸುತ್ತಾಳೆ.ಈ ಪ್ರಪಂಚದಲ್ಲಿ ದೇವ ಮಾತೆಯ ಹೆಸರಿನಲ್ಲಿ ಲೆಕ್ಕವಿಲ್ಲದಷ್ಟು ದೇವಾಲಯಗಳು ಇವೆ. ಮಾತೆಯು ವಿವಿಧ ದೇಶಗಳಲ್ಲಿ ವಿವಿಧ ಊರಿನಲ್ಲಿ ಬರೀ ಕ್ರೈಸ್ತರಿಗೆ ಮಾತ್ರವಲ್ಲ, ಅವರಲ್ಲಿ ವಿಶ್ವಾಸವಿಟ್ಟ ಅನ್ಯಧರ್ಮದವರಿಗೂ ಎಣಿಸಲಾದಷ್ಟು ಅದ್ಭುತಗಳನ್ನುಮಾಡಿದ್ದಾರೆ ಮತ್ತು ಪ್ರತ್ಯಕ್ಷವಾಗಿ ಕಾಣಿಸಿಕೊಂಡು ವಿಭಿನ್ನ ಕೋರಿಕೆಗಳಿಗಾಗಿ ಪ್ರಾಥನೆ ಮಾಡಿ ಎಂದೂ,ಮುಖ್ಯವಾಗಿ ಪಾಪಿಗಳ ಮನಪರಿವರ್ತನೆಗಾಗಿ ಪ್ರಾರ್ಥಿಸಿ ಎಂದು ಕೇಳಿ ಕೊಂಡಿದ್ದಾರೆ.ಅವುಗಳಲ್ಲಿ ಮುಖ್ಯವಾದ ಸ್ಥಳಗಳೆಂದರೆ, ಫಾತಿಮ ನಗರ, ಲೂರ್ದುನಗರ, ವೇಳಾಂಗಣ್ಣಿ, ಹರಿಹರ ಮುಂತಾದವು. ಮಾತೆ ಮೇರಿಯವರನ್ನು ,ದೇವ ಮಾತೆ,ಆರೋಗ್ಯ ಮಾತೆ ,ನಿತ್ಯ ಸಹಾಯಮಾತೆ, ಲೂರ್ದುಮಾತೆ,ಫಾತಿಮ ಮಾತೆ,ವೇಳಾಂಗಣ್ಣಿ ಮಾತೆ, ಹರಿಹರ ಮಾತೆ, ಅಮಲೋದ್ಭವ ಮಾತೆ, ಎಂದು ಕರೆಯುತ್ತಾರೆ. ಧರ್ಮಸಭೆಯಲ್ಲಿ ಮಾತೆ ಮೇರಿಯವರಿಗೆ ತುಂಬಾ ಮುಖ್ಯತ್ವವನ್ನು ಕೊಡುತ್ತಾರೆ.ಎಲ್ಲಾ ಸಂತರಿಗಿಂತ ಮಾತೆಯ ಹಬ್ಬಗಳನ್ನು ಹೆಚ್ಚು ಮಾಡುತ್ತಾರೆ. ವರ್ಷದ ಮೊದಲ ದಿನವನ್ನು ಮಾತೆಯ ಆರ್ಶೀವಾದಗಳಿಂದ ಅಂದರೆ ಮೇರಿಯು' ದೇವರ ತಾಯಿ ' ಎಂಬ ಹಬ್ಬದಿಂದ ಆರಂಭ ಮಾಡುತ್ತಾರೆ.

ಮಾತೆಯ ಹಬ್ಬಗಳು

[ಬದಲಾಯಿಸಿ]
  • ಜನವರಿ-೧ ದೇವರ ತಾಯಿ
  • ಫೆಭ್ರವರಿ -೧೧-ಲೂರ್ದು ಮಾತೆ
  • ಮೇ-೨೪-ಕ್ರೈಸ್ತರ ಸಹಾಯ ಮಾತೆ
  • ಮೇ-೩೧-ಮಾತೆ ಎಲಿಜಬೇತಳನ್ನು ಸಂಧಿಸಿದರು
  • ಜುಲೈ-೧೬-ಕಾರ್ಮೆಲ್ ಮಾತೆ
  • ಆಗಸ್ಟ್-೧೫- ಮಾತೆಯ ಸ್ವರ್ಗರಾಹೋಣ
  • ಆಗಸ್ಟ್-೨೨- ಇಹಪರ ರಾಣಿಯಾಗಿ ಕಿರೀಟಧಾರಣೆ
  • ಸೆಪ್ಟಂಬರ್-೮-ಮಾತೆಯ ಜನನ ಉತ್ಸವ
  • ಸೆಪ್ಟಂಬರ್-೧೫-ವ್ಯಾಕುಲ ಮಾತೆ
  • ಸೆಪ್ಟಂಬರ್-೨೪- ಕರುಣೆಯ ಮಾತೆ
  • ಅಕ್ಟೋಬರ್-೭ -ಜಪಮಾಲೆಯ ರಾಣಿ
  • ನವಂಬರ್-೨೧- ದೇವಾಲಯದಲ್ಲಿ ಮಾತೆಯನ್ನು ಕಾಣಿಕೆಯಾಗಿ ಅರ್ಪಿಸಿದರು
  • ಡಿಸೆಂಬರ್-೮-ಅಮಲೋದ್ಭವ ಮಾತೆ