ಸದಸ್ಯ:Ashlyj/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಭಿವೃಧ್ಧಿ ಹೊಂದಿದ ದೇಶಗಳು[ಬದಲಾಯಿಸಿ]

     ಜಗತಿನ ಎಲ್ಲ ದೇಶಗಲಳನ್ನು ಅಭಿವ್ರಧ್ಧಿ  ಹೊಂದಿದೆ ಮತ್ತು ಅಭಿವ್ರಧ್ಧಿ ಶೀಲ ದೇಶ ಎಂದು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ಎರಡು ಗುಂಪಿನ ದೇಶಗಳು ವಿವಿಧ
ಮಟ್ಟದ ಅಭಿವ್ರಧ್ಧಿ ಯೊಂದಿಗೆ ವಿವಿಧ  ಗುಣಲಕ್ಷಣಗಳನ್ನು   ಸಾದರಪಡಿಸುತವೆ. ಆದ್ದರಿಂದ, ಈ ಎರಡು ರೀತಿಯ ದೇಶಗಳ ಪ್ರಧಾನ ಲಕ್ಷಣಗಳನ್ನು ವಿವಾರವಾಗಿ ಪರಿಗಣಿಸಿದರೆ 
ಅವುಗಳ ನಡುವಿನ ಗುರುತರವಾದ ವ್ಯತ್ಯಾಸಗಳು ಸುಲಭವಾಗಿ ಅರಿವಿಗೆ ಬರುತ್ತವೆ.

"ಅಭಿವೃದ್ಧಿ ಹೊಂದಿದ ದೇಶಗಳ ಅರ್ಥವಿವರಣ"[ಬದಲಾಯಿಸಿ]

         ಸಾಕಷ್ಟು ಆರ್ಥಿಕ ಪ್ರಗತಿಯನ್ನು ಸಾಧಿಸಿರುವ ಮತ್ತು ಅಧಿಕ ನೈಜ ತಲಾ ಆದಾಯವನ್ನು ಹೊಂದಿರುವ ಆರ್ಥಿಕತೆಯನ್ನು ಅಭಿವೃದ್ಧಿ  ಹೊಂದಿದ ದೇಶ ಎನ್ನಲಾಗುತ್ತಿದೆ.
ಅಂದರೆ, ಜನರ ತಲಾದಾಯ ಮತ್ತು ಒಟ್ಟು ರಾಷ್ಟ್ರೀಯ ಉತ್ಪನ್ನವನ್ನು ಗರಿಷ್ಠಗೊಳಿಸಿರುವ ಗುರಿಯನ್ನು ಸಾಧಿಸಿ ತನ್ನನ್ನು ಸಾಪೇಕ್ಷವಾಗಿ ಅತ್ಯಧಿಕ ಮಟ್ಟದ ಸಮೃದ್ಧಿಯ ಹಂತದಲ್ಲಿ
ಸಂಸ್ಥಾಪಿಸಿಕೊಂಡಿರುವ ದೇಶವು ಅಭಿವ್ರದ್ಧಿ ಹೊಂದಿದ ದೇಶವಾಗುತ್ತದೆ.
         ವಿಶ್ವ ಸಂಸ್ಥೆಯ ಪರಿಣಿತರ ತಂಡವು ೧೯೭೧ರಲ್ಲಿ ೧೦೦೦ ರಿಂದ ೪೦೦೦ ಡಾಲರುಗಳವರೆಗೆ ತಲಾ ನೈಜ ರಾಷ್ಟ್ರೀಯ ಆದಾಯವನ್ನು ಹೊಂದಿದ ದೇಶಗಳನ್ನು 
ಅಭಿವೃದ್ಧಿ  ಹೊಂದಿದ ದೇಶಗಳು ಎಂದು ವರ್ಗೀಕರಿಸತು. ವಿಶ್ವ ಬ್ಯಾಂಕಿನ ೨೦೧೨ರ ವಿಶ್ವ ಅಭಿವೃದ್ಧಿ  ವರದಿಯು ಅಭಿವೃದ್ಧಿ ಹೊಂದಿದ ದೇಶಗಳನ್ನು ೨೦೧೦ರಲ್ಲಿ  ೧೨,೨೭೬
ಡಾಲರುಗಳಿಗಿಂತ ಅಧಿಕ ತಲಾ ಒಟ್ಟು ರಾಷ್ಟ್ರೀಯ ಉತ್ಪನ್ನವನ್ನು ಹೊಂದಿದ್ದ ಅಧಿಕ ತಲಾದಾಯದ ಆರ್ಥಿಕತೆಗಳ ಗುಂಪಿನಲ್ಲಿ ಸೇರ್ಪಡೆಗೊಳಿಸಿತು.
        ಆದ್ದರಿಂದ, ಅಭಿವೃದ್ಧಿ  ದೇಶ ಎಂದರೆ ಆರ್ಥಿಕವಾಗಿ ಮುಂದುವರಿದ ಹಾಗು ಬೃಹತ್ ಕೈಗಾರಿಕಾ ಮತ್ತು ಸೇವಾ ವಲಯಗಳೊಂದಿಗೆ ಅತ್ಯಧಿಕ ಮಟ್ಟ್ದ ತಲಾ ಆದಾಯ
ಹೊಂದಿರುವ ದೇಶವಾಗಿದೆ. ಈದೇಶವು ಎಲ್ಲಾ ರಂಗಗಳಲ್ಲಿ ಅಭಿವೃದ್ಧಿ  ಸಾಧಿಸಿ ಉನ್ನತ ಮಟ್ಟ್ದ ಜೀವನ ನ್ಡೆಸುತ್ತಿರುತ್ತದೆ. ಹೀಗಾಗಿ ಈ ದೇಶಗಳನ್ನು ಮುಂದುವರಿದ ಅಥವಾ ಶ್ರೀಮಂತ 
ದೇಶ ಎಂದು ಕರೆಯಲಾಗಿದೆ. ಇಂತಹ ಅಭಿವೃದ್ಧಿ  ಹೊಂದಿದ ದೇಶಗಳ ಉದಾಹರಣೆಗಳೆಂದರೆ: ಜಪಾನ್, ಅಮೆರಿಕಾ, ಜರ್ಮನಿ, ಫ್ರಾಂಸ್, ಇಂಗ್ಲೆಂಡ್, ಇಟಲಿ, ಕೆನಡ, ಸ್ವೇಡನ್,
ಸ್ವಿಟ್ಜರ್ ಲಾಂಡ್, ಡೆನ್ಮಾರ್ಕ್, ಸ್ಪೇನ್, ಬೆಲ್ಜಿಯಂ, ಆಸ್ಟ್ರೇಲಿಯ, ಆಸ್ಟ್ರಿಯ, ನೆದರ್ ಲಾಂಡ್, ನ್ಯೂಜಿಲಾಂಡ್, ಮುಂತಾದವು..

ಅಭಿವೃದ್ಧಿ ಹೊಂದಿದ ದೇಶಗಳ ಲಕ್ಷಣಗಳು[ಬದಲಾಯಿಸಿ]

       ಅಭಿವೃದ್ಧಿ  ಹೊಂದಿದ ದೇಶಗಳ ಪ್ರಮುಖ ಲಕ್ಷಣಗಳು ಈ ಮುಂದಿನಂತಿರುತ್ತವೆ:-

*ಅತ್ಯಧಿಕ ರಾಷ್ಟ್ರೀಯ ಆದಾಯ ಮತ್ತು ತಲಾದಾಯ[ಬದಲಾಯಿಸಿ]

         ಅತ್ಯಧಿಕ ಮಟ್ಟ್ದ ದ ರಾಷ್ಟ್ರೀಯ ಆದಾಯ ಮತ್ತು ತಲಾದಾಯ ಹೊಂದಿರುವುದು ಅಭಿವೃದ್ಧಿ  ಹೊಂದಿದ ದೇಶಗಳ ಬಹುಮುಖ್ಯ ಲಕ್ಷಣವಾಗಿದೆ. ಇಲ್ಲಿನ ಅಧಿಕ ಬಂಡವಾಳ
ಸಂಚಯನ ದರ ಮತ್ತು ಕಡಿಮೆ ಜನಸಂಕ್ಗ್ಯಾ ಬೆಳವಣಿಗೆ ದರಗಳು ಈ ದೇಶಗಳನ್ನು ಉನ್ನತ ಮಟ್ಟದ ಸಮೃದ್ಧಿಯಲ್ಲಿ ನಿಲ್ಲಿಸಿ ಅಧಿಕ ತಲಾದಾಯವನ್ನು ಕಲ್ಪಿಸಿಕೊಟ್ಟಿವೆ. ೨೦೧೨ರ ವಿಶ್ವ 
ಅಭಿವೃದ್ಧಿ ವರದಿಯ ಪ್ರಕಾರ ೨೦೧೦ರಲ್ಲಿ ಈ ಎಲ್ಲಾ ಶ್ರೀಮಂತ ಮುಂದುವರಿದ ದೇಶಗಳ ಸರಾಸರಿ ತಲಾದಾಯವು ೩೮,೬೫೮ ಡಾಲರುಗಳಾಗಿದ್ದಿತು. ಈ ದೇಶಗಳು ಜಗತ್ತಿನ ಒಟ್ಟು
ಆದಾಯದಲ್ಲಿ ಶೇಕಡ ೭೦ ರ ಪಾಲು ಹೊಂದಿದ್ದವು.

*ಉನ್ನತ ಜೀವನಮಟ್ಟ[ಬದಲಾಯಿಸಿ]

         ಅಭಿವೃದ್ಧಿ  ಹೊಂದಿದ ದೇಶಗಳಲ್ಲಿನ ಜನರು ಉನ್ನತ ಜೀವನಮಟ್ಟವನ್ನು ಅನುಭವಿಸುತ್ತಿದ್ದಾರೆ. ಅವರು ತಮ್ಮ ಅತ್ಯಧಿಕ ತಲಾದಾಯದ ಕಾರಣದಿಂದಾಗಿ ಎಲ್ಲಾ ರೀತಿಯ ಆಧುನಿಕ
ಸರಕು ಮತ್ತು ಸೇವೆಗಳನ್ನು ಅನುಭವಿಸಿ ತಮ್ಮ ದೇಶಗಳ ತ್ವರಿಕ ಆರ್ಧಿಕ ಮತ್ತು ಕೈಗಾರಿಕಾಭಿವೃದ್ಧಿಗೆ ಒಗ್ಗಟ್ಟಾಗಿ ಶ್ರಮಿಸುತ್ತಿದ್ದಾರೆ. ಅವರ ಈ ಉನ್ನತ ಜೀವನಮಟ್ಟವು ಹೆಚ್ಚಿನ ಉತ್ಪಾದನೆ
ಮತ್ತು ಉತ್ಪಾದಕತೆಯಲ್ಲಿ ಫಲಿತಗೊಂಡಿದೆ. ಅವರ ಜೀವನದ ಗುಣಮಟ್ಟ ಮತ್ತು ಜೀವನ ನಿರೀಕ್ಷೆ ಕೂಡ ಉತ್ತಮವಾಗಿದೆ.

*ಉನ್ನತ ಕೈಗಾರಿಕೀಕರಣ ದರ[ಬದಲಾಯಿಸಿ]

          ಹೆಚ್ಚಿನ ಮುಂದುವರಿದ ದೇಶಗಳು ತಮ್ಮ ಕೈಗಾರಿಕಾ ವಲಯದ ಬೆಲವಣಿಗೆಗೆ ಅಧಿಕ ಪ್ರಾಶಸ್ತ್ಯ ನೀಡಿವೆ. ಅವುಗಳು ತಮ್ಮ ರಾಷ್ಟ್ರೀಯ ಆದಾಯವನ್ನು ಗರಿಷ್ಠಗೊಳಿಸಿಕೊಳ್ಳಲು ಮತ್ತು
ಅಧಿಕ ಉದ್ಯೋಗವಕಾಶಗಳನ್ನು ಸೃಷ್ಠಿ ಮಾಡಲು ಬೇಕಿರುವ ಬೃಹತ್ ಪ್ರಮಾಣದ ಸಂಪನ್ಮೂಲ ಬಳಕೆ ಸಾಮರ್ಥ್ಯವನ್ನು ಹೊಂದಿದೆ. ಈ ದೇಶಗಳು ತಮ್ಮ ಹೆಚ್ಚಿನ ಪಾಲಿನ ಆದಾಯವನ್ನು 
ಕೃಷಿಯೆತರ ವಲಯಗಳಿಂದ, ಅದರಲ್ಲೂ ಮುಖ್ಯವಾಗಿ ಕೈಗಾರಿಕಾ ವಲಯದಿಂದ ಪಡಯುತ್ತವೆ. ಈ ವಲಯವೊಂದರಿಂದಲೇ ಶೇಕಡಾ ೫೦ಕಿಂತಲೂ ಅಧಿಕ ಪ್ರಮಾಣದ ಆದಾಯ ಹರಿದು
ಬರಿತ್ತಿದೆ. ಆದ್ದರಿಂದಾಗಿ, ಉನ್ನತ  ದರ್ಜೆಯ ಕೈಗಾರಿಕೀರಣವು ಈ ದೇಶಗಳ ವಿಶೇಷ ಲಕ್ಷಣವಾಗಿದೆ.

*ಅಧಿಕ ದರದ ಬಂಡವಾಳ ಸಂಚಯನ[ಬದಲಾಯಿಸಿ]

         ಮುಂದುವರಿದ ಶ್ರೀಮಂತ ದೇಶಗಳು ಅತ್ಯಧಿಕ ಉಳಿತಾಯ ಮತ್ತು ಹೂಡಿಕೆ ದರಗಳನ್ನು ಹೊಂದಿವೆ. ಈ ದೇಶಗಳಲ್ಲಿನ ಉಳಿತಾಯ ಮತ್ತು ಹೂಡಿಕೆ ದರಗಳು ಅವುಗಳ ರಾಷ್ಟ್ರೀಯ
ಆದಾಯದ ಶೇಕಡ ೩೦ ರಿಂದ ೪೦ ರಷ್ಟಿದೆ. ಇದರಿಂದಾಗಿ ಈದೇಶಗಳಲ್ಲಿ  ಬಂಡವಾಳ  ಸಂಚಯನ ದರ ಅಧಿಕವಿದೆ ಹಾಗೂ ಅವರ ಬಂಡವಾಳ ಸಂಗ್ರಹ ಸಹ ಅಧಿಕವಿದೆ. ಅಭಿವೃದ್ಧಿ ಹೊಂದಿದ
ಬಂಡವಾಳ ಮಾರುಕಟ್ಟೆ , ಅಧಿಕ ಉಳಿತಾಯ ದರ, ವಿಸ್ತಾರ ವ್ಯವಹಾರ ಸಾಧ್ಯತೆಗಳು, ಯೋಗ್ಯ ಉತ್ತಮಶೀಲತ್ವ , ಅತ್ಯುತಮ ಹೂಡಿಕೆ ವಾತಾವರಣ ಮುಂತಾದ ಕಾರಣಗಳಿಂದಾಗಿ ಈ ದೇಶಗಳಲ್ಲಿನ
ಬಂಡವಾಳ ಸಂಚಯನದ ಬೆಳವಣಿಗೆ ದರ ಅಧಿಕವಿರುವುದು ಸಾಧವಾಗಿದೆ.

*ಅತ್ಯಾಧಿನಿಕ ತಂತ್ರಙ್ಞಾನ ಮತ್ತು ಕೌಶಲದ ಬಳಕೆ[ಬದಲಾಯಿಸಿ]

       ಅತ್ಯಂತ ಮುಂದುವರಿದ ಮತ್ತು ಅತ್ಯಾಧುನಿಕ ತಂತ್ರಙ್ಞಾನ, ಯಂತ್ರಗಳು ಮತ್ತು ನೈಪುಣ್ಯದ ಬಳಕೆಯು ಈ ದೇಶಗಳ ಆರ್ಥಿಕ ಅಭಿವೃದ್ಧಿ  ಪ್ರಕ್ರಿಯೆಯ ಬಹುಮುಖ್ಯ ಭಾಗವಾಗಿದೆ.
ಉನ್ನತ ಮಟ್ಟ್ದದ ವೈಙ್ಞಾನಿಕ ಸಂಶೋಧನೆ ಮತ್ತು ಅಭಿವೃದ್ಧಿ , ಶ್ರೇಷ್ಠ ಮಟ್ಟದ ಶಿಕ್ಷಣ ಮತ್ತು ತರಬೇತಿ, ಉದ್ಯಮಶೀಲತೆಯ ಬೆಳವಣಿಗೆ ಮುಂತಾದ ಅಂಶಗಳು ಈ ದೇಶಗಳಲ್ಲಿ ಅತ್ಯಾಧುನಿಕ
ತಂತ್ರಙ್ಞಾನ, ಯಂತ್ರೋಪಕರಣ ಮತ್ತು ಸಲಕರಣೆಗಳ ಸಂಶೋಧನೆಯನ್ನು ಸಾಧ್ಯಗೊಳಿಸಿವೆ. ಇಂತಹ ಅತ್ಯಾಧುನಿಕ ವಿಶ್ವಮಟ್ಟದ ತಂತ್ರಙ್ಞಾನ ಮತ್ತು ಕೌಶಲದ ಬಳಕೆಯಿಂದಾಗಿ ಈ ದೇಶಗಳು
ಅಗಾಧ ಆರ್ಥಿಕ ಬೆಳವಣಿಗೆಯನ್ನು ಸಾಧಿಸಿವೆ. ಮುಂದುವರಿದ ದೇಶಗಳ ಭೌತಿಕ ಮತ್ತು ಮಾನವ ಸಂಪನ್ಮೂಲ ಬಳಕೆಯ ಪ್ರಣಾಮವು ಉನ್ನತ ಆಧರ್ಶ ಮಟ್ಟದಲ್ಲಿರುವುದು ಗಮನಾರ್ಹವಾಗಿದೆ

*ಕಡಿಮೆ ಜನಸಂಖ್ಯಾ ಬೆಳವಣಿಗೆ[ಬದಲಾಯಿಸಿ]

      ಹೆಚ್ಚಿನ ಮುಂದುವರಿದ ದೇಶಗಳಲ್ಲಿ ಜನಸಂಖ್ಯಾ  ಬೆಳೆವಣಿಗೆ ದರ ತುಂಬಾ ಕಡಿಮೆ ಇದೆ. ಅತ್ಯುತಮ ಆರೋಗ್ಯ ಸೌಲಭ್ಯ , ಉತ್ತಮ ಶಿಕ್ಷಣ, ಉನ್ನತ ಅನುಭೋಗ, ಉನ್ನತ ಮಟ್ಟದ ಅರಿವು, 
ಕಡಿಮೆ ಜನನ ಮತ್ತು ಮರಣ ದರ, ಮುಂತಾದ ಕಾರಣಗಳಿಂದಾಗಿ ಈ ದೇಶಗಳಲ್ಲಿ ಜನಸಂಖ್ಯಾ ಅಷ್ತಾಗಿ  ಬೆಳೆಯುತ್ತಿಲ್ಲ . ಇಲ್ಲಿನ ಜನರ ಜೀವನಾಯುಷ್ಯ ಕೂಡ ಅಧಿಕವಿದೆ. ಅತ್ಯಧಿಕ
ಬಂಡವಾಳ ಸಂಚಯನ ದರ ಮತ್ತು ಕಡಿಮೆ ಜನಸಂಖ್ಯಾ  ಬೆಳವಣಿಗೆ ದರದ ಕಾರಣದಿಂದಾಗಿ ಆ ದೇಶಗಳ ತಲಾದಾಯ ಮತ್ತು ಸಮೃದ್ಧಿ ಅತ್ಯಧಿಕ ಮಟ್ಟದಲ್ಲಿವೆ

*ಅನುಕೂಲಕರ ಸಾಮಾಜಿಕ ವಾತಾವರಣ[ಬದಲಾಯಿಸಿ]

       ಅಭಿವೃದ್ಧಿ ದೇಶಗಳಲ್ಲಿರುವ ಸಾಮಾಜಿಕ ವಾತಾವರಣವು ಅತ್ಯಂತ ಪ್ರಗತಿಪರವಾಗಿದೆ ಹಾಗೂ ಅದು ಅಭಿವೃದ್ಧಿಗೆ ಪೂರಕವಾಗಿದೆ. ಸಮಸ್ತ ಸಮಾಜ, ಅದರ ಸಂರಚನೆ ಮತ್ತು ಮೌಲ್ಯಗಳು
ತ್ವರಿತ ಆರ್ಧಿಕ ಮತ್ತು ಕೈಗಾರಿಕೆ ಅಭಿವೃದ್ಧಿ ಸಾಧನೆ ಗುರಿಯ ಈಡೇರಿಕೆಗೆ ಸಮರ್ಪಿಸಿದಂತಿವೆ. ಇಲ್ಲಿನ್ ಜನರ ಆರ್ಧಿಕ ಉದ್ದೇಶ ಮತ್ತು ಅತ್ಯುತ್ತಮ ಸಾಮಾಜಿಕ ಜೀವನವನ್ನು ಸಾಗಿಸಬೇಕೆಂಬ 
ಅವರ ಅತೀವ ಹಂಬಲ ಅವರನ್ನು  ಅಭಿವೃದ್ಧಿ  ಪ್ರಕ್ರಿಯೆಯಲ್ಲಿ  ತೊಡಗುವಂತೆ  ಪ್ರೇರೇಪಿಸುತ್ತದೆ. ಇದರಿಂದಾಗಿ ಉನ್ನತ ಅಭಿವೃದ್ಧಿಯ ಸಾಧನ ಸಾಧ್ಯವಾಗಿದೆ.

*ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳ ಆದರ್ಶ ಬಳಕೆ[ಬದಲಾಯಿಸಿ]

      ಮುಂದುವರಿದ ದೇಶಗಳಲ್ಲಿ ಲಭ್ಯವಿರುವ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳನ್ನು  ಅವುಗಳ ಆದರ್ಶ ಮಟ್ಟದವರೆಗೆ ಬಳಸಿಕೊಳ್ಳಲಾಗಿದೆ. ಈ ಎಲ್ಲಾ ಸಂಪನ್ಮೂಲಗಳ ಬಳಕೆಗೆ
ಅತ್ಯಾಧುನಿಕ ತಂತ್ರಙ್ಞಾನ ಮತ್ತು ಕೌಶಲವನ್ನು ಅಳವಡಿಸಿಕೊಳ್ಳಲಾಗಿದೆ. ಇದರಿಂದಾಗಿ, ಈ ರಾಷ್ಟ್ರಗಳಲ್ಲಿ ಪ್ರತೀ ಸಂಪನ್ಮೂಲ ಘಟಕದಿಂದ ಅಧಿಕ ಸಂಪತ್ತಿನ ಸೃಷ್ಠಿ ಸಾಧ್ಯವಾಗಿದೆ.

*ಆರ್ಥಿಕ ಮತ್ತು ಸಾಮಾಜಿಕ ಮೌಲ್ಯೋತ್ಪಾದಕಗಳ ನಿರ್ಮಾಣ[ಬದಲಾಯಿಸಿ]

     ಎಲ್ಲಾ ರೀತಿಯ ಆರ್ಥಿಕ ಮತ್ತು ಸಾಮಾಜಿಕ ಮೌಲ್ಯೋತ್ಪಾದಕಗಳ ಸೃಷ್ಠಿಯು ಮುಂದುವರಿದ ದೇಶಗಳ ಇನ್ನೊಂದು ಲಕ್ಷಣವಾಗಿದೆ. ಈ ದೇಶಗಳಲ್ಲಿ ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆ
ಅತ್ಯುತ್ತಮವಾಗಿ ಅಭಿವೃದ್ಧಿ ಗೊಂಡಿದೆ.  ಶಿಕ್ಷಣ, ತರಬೇತಿ, ವೈದ್ಯಕೀಯ ಸೌಲಭ್ಯ, ನೈರ್ಮಲ್ಯ, ನೀರಾವರಿ, ಇಂಧನ, ಬ್ಯಾಂಕಿಂಗ್, ವಿಮೆ, ಸಂಶೋಧನೆ ಮತ್ತು ಅಭಿವೃದ್ಧಿ, ಬಂಡವಾಳ ಮಾರುಕಟ್ಟೆ 
ಅಭಿವೃದ್ಧಿ ಮುಂತಾದ ಎಲ್ಲಾ ರೀತಿಯ ಆರ್ಥಿಕ ಮತ್ತು ಸಾಮಾಜಿಕ ಮೂಲ ಸೌಕರ್ಯಗಳನ್ನು ನಿರ್ಮಾಣ ಮಾಡಲಾಗಿದೆ. ಇದು ಅಭಿವೃದ್ಧಿ  ಪ್ರಕ್ರಿಯೆಯ ನಯವಾದ ಹರಿವಿಗೆ ದಾರಿಮಾಡಿಕೊಟ್ಟಿದೆ.

[೧]

ಉಲ್ಲೇಖನ[ಬದಲಾಯಿಸಿ]
  1. ಭಾರತದ ಆರ್ಥಿಕ ಅಭಿವೃದ್ಧಿ - ಎಚ್ಚಾರ್ಕೆ