ಸದಸ್ಯ:Wikiyogitha/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇತ್ತೀಚೆಗೆ ಆಂಜನೇಯನನ್ನು ಕುರಿತು ಕನ್ನಡದಲ್ಲಿ ಒಂದು ಸ್ವತ೦ತ್ರ ಕಾವ್ಯವೇ ರಚನೆಯಾಗಿದೆ. ಇದುವರೆಗೆ ರಾಮಾಯಣದ ಕಥೆಯಲ್ಲಿ ಬರುವ ಹನುಮ೦ತಹ ಮಹತ್ವವನ್ನು ಹೇಳಿದರೆ ಇಲ್ಲಿ ಹನುಮ೦ತನ ಕದೆಯೇ'ವತಾಲ್ಯಾಲಿಂಗನ' ಎಂಬ ಕಾವ್ಯದಲ್ಲಿ ಮುಖ್ಯವಾಗಿದೆ. ಈ ಗದ್ಯ ಕಾವ್ಯವನ್ನು ಡಾ||ಎ.ಎಸ್.ವೇಣುಗೋಪಾಲರವರು ಬರೆದಿದ್ದಾರೆ. ರಾಮಾಯಣದ ಕಥೆಗೆ ವಿರಾಮವೇ ಇಲ್ಲ. ಕಾಲಕಾಲಕ್ಕೆ ಈ ಕಥೆ ಅನೇಕ ಕವಿಗಳಿಂದ ಪುನಃ ಸೃಷ್ಟಿಯಾಗುತ್ತಲೇ ಇದೆ. 'ಮೌಲ್ಯಾಲಿ೦ಗನ' ಕಾವ್ಯದಲ್ಲಿ ರಾಮಾಯಣದ ಆಂಜನೇಯನ ಪಾತ್ರವನ್ನು ಮುಖ್ಯವಾಗಿ ಚಿತ್ರಿಸಿದ್ದಾರೆ. ಈ ಕಾವ್ಯದಲ್ಲಿ ರಾಮಾಯಣದ ಕಿಷ್ಯಂಭಾ ಕಾಂಡದ ಕಥೆಯನ್ನು ಮಾರ್ಪಾಡು ಮಾತಿಕೊ೦ಡು ಬರೆದಿದ್ದಾರೆ. ಈ ಕಾವ್ಯದ ಕಥೆ ವಿಶೆಷ್ವವಾಗಿದೆ. ಇದು ಪ್ರಾರ೦ಭವಾಗುವುದು ಅಂಜನಾದೇವಿಯ ಗರ್ಭವತರಣದಿಂದ. ಜನನಿಯೇ ಮಗುವಿಗೆ ಮೊದಲ ಗುರುವಾಗುತ್ತಳೆ. ಆ ಮಗು ಅದೆಷ್ಟು ಚುರುಕಾಗಿತ್ತೆಂದರೆ ಅದರ ಪ್ರಾಢಿನಮೆಗೆ ಎಲ್ಲಿರೂ ಬೆರಗಾಗುತ್ತಾರೆ. ಕಿಷ್ಯ೦ಧೆಯ ನಿಸರ್ಗದ ಜೊತೆಯಲ್ಲೇ ಅವನ ಬಾಲಲೀಲೆ. ಸೊರೋಯಪಾಸನೆ ದಿನನಿತ್ಯದ ಅಭ್ಯಾಸ. ಒಂದು ರಾತ್ರಿಯ೦ತೂ ವಾಯುದೇವನೇ ಬ೦ದು ಆಂಜನೇಯನಿಗೆ ಸೃಷ್ಟಿಯ ರಹಸ್ಯ ಬೋಧಿಸುತ್ತಾನೆ. ಸೂರ್ಯದೇವನೂ ಅನೇಕ ವಿದ್ಯೆಹನ್ನು ಬೋಧಿಸುತ್ತಾನೆ.

ಬಾಲ್ಯದಲ್ಲೇ ಪ್ರಾಬುದ್ಧನಾದ ಆ೦ಜನೇಯ ಉತ್ತರ ದೇಶದಿ೦ದ ದಕ್ಷಿಣ ಕಡೆಗೆ ಬರುವ ಅಗಸ್ತ್ಯಮನಿಯನ್ನು ನೋಡುತ್ತಾನೆ. ಆದರೆ ಆಂಜನೇಯನ ತೇಜಸ್ವನ್ನು ಕ೦ಡಾಗ ಅಗಸ್ತ್ಯರಿಗೇ ಆಚರ್ಯವಾಗುತ್ತದೆ. ಅವನೊಎದು ಬರಡನೆ ಮಾತನಾಡತ್ತಾರೆ. ಆ೦ಜನೇಯ ಕೇಳುತ್ತಾನೆ,'ಪುಣ್ಯಭೂಮಿಯೆ೦ದು ಹೆಸರಾದ ಉತ್ತರ ಭಾರತವನ್ನು ತೊರೆದು ಬರಲು ಕಾರಣವೇನು' ಎಂದು. ಅದಕೇ ಅವರು"ದಕ್ಷಿಣದ ಭಾಷೆಗಳ ಸತ್ಯ ಸೌಂದರ್ಯಗಳ ಹೃದಯವನ ಪಿಡಿದಾಡುವ ಹುಚ್ಚು ಹಂಬಲ ನನ್ನನಿತ್ತಲು ಸೆಳೆಯಿತು" ಎಂದು ಹೇಳುತ್ತರೆ. ಅಗಸ್ತ್ಯರಂತಹ ಖುಷಿಗಳು ಈ ನಾಡಿನ ಭಾಷೆ, ಸಂಸೃತಿಗಳನ್ನು ತಿಳಿಯಬೇಕೆಂದು ಹೇಳುವಲ್ಲಿ ಈ ನಾಡಿನ ಹಿರಿಮೆ ಎನ್ನುವರು ವ್ಯಕ್ತವಾಗುತ್ತದೆ.

ಈ ಕಾವ್ಯದಲ್ಲಿ ಬೇರೆ ರಾಮಾಯಣಗಳಲ್ಲಿ ನಿಗದಿರುವ ಅಪುರ್ವವಾದ ಒಂದು ದೃಶ್ಯವಿದೆ. ಲಂಕೆಯ ಯುದ್ಧ ಮುಗಿಯುತ್ತಿದಂತೆ ಸೀತಾ ರಾಮ ಲಕ್ಷ್ಮಣರು ಭರತನಿಹೆ ನೀಡಿದ್ದ ವಾಗ್ದಾನ ಈಡೇರಿಸಲು(೧೪ ವರ್ಷಗಳ ನಂತರ ಮರಳಿ ಅಯೋಧ್ಯೆಗೆ ಬರುವುದಾಗಿ) ನಂದಿಗ್ರಾಮಕ್ಕೆ ಬರುತ್ತಿದಾರೆ. ಆದರೆ ಬರುವಾಗ ಅವರು ತಮಗಾಗಿ ಸೇವೆ ಮಾಡಿದ ವಾನರವೀರರಿಗೆ ತಮ್ಮಕೃತಜ್ನತೆಯನ್ನು ಸಲ್ಲಿಸಬೇಕಾದುದು ಅವನ ಕರ್ತವ್ಯವಾಗಿತ್ತು. ಕಾರಣಾಂತರದಿಂದ ಅದು ಸಾಧ್ಯವಾಗಲಿಲ್ಲ. 'ಲೋಕದಲ್ಲಿ ಮಾನವರಿಗೆ ಕೃತಜ್ನತೆ ಎಂಬುದೇ ಪರಮ ಮೌಲ್ಯ'. ಎಂದು ಭಾವಿಸಿದ ರಾಮ. ಅಯೋಧ್ಯೆಯಲ್ಲಿ ರಾಮನ ಪಟ್ಟಭಿಷೇಕ ಮುಗಿದ ಮೇಲೆ ಸೀತಾ ಲಕ್ಷ್ಮಣರ ಸಮೇತ ಕಿಷ್ಯಂಧೆಗೆ ಬರುತ್ತಾನೆ. ಅಲ್ಲಿ ಸೀತಾ ರಾಮ ಲಕ್ಶ್ಮಣರಿಗೆ ಸಂಭ್ರಮದ ಸ್ವಾಗತವಿತ್ತು. ಆದರೆ ಸುಗ್ರೀದ ಸಹ ಅಧಿಕಾರ ಬಂದೊಡನೆ ಸಾನಮತ್ತನಾಗಿ,ಕಾಮಿನೀಲೋಲನಾಗಿ ಮೆರೆಯುತ್ತಿದ. ಇದನ್ನು ಕಂಡ ಲಕ್ಶ್ಮಣನಿಗೆ ದುಃಖವಾಗುತ್ತದೆ.ಆದರೆ ಆಂಜನೇಯ ಬ್ರಹ್ಮಚಾರಿಯಾಗಿ ಗುಣಗಳನ್ನೆ ಮೆರೆದವನು. ಕಿಷ್ಯಂಭೆಯ ಅರಮನೆಯ ವಿಲಾಸ ವಿಕೃತಿಗಳನ್ನು ಮನ್ನಿಸುವಂತೆ ಕೇಳಿಕೋಳುತ್ತಾನೆ. ಎಲ್ಲ ದೇಶದಲ್ಲೂ ಹೀಗೆಯೇ ಅಲ್ಲವೆ. ಇಡೀ ಭರತ ಖಂಡದ ದೃಶ್ಯವೇ ಇಂದಿಗೂ ಹೀಗೆಯೇ ಆಗಿದೆ ಎನ್ನುತ್ತಾರೆ ಕವಿ.

ಈ ಕಾವ್ಯದಲ್ಲಿ ಬಹಳ ವಿಶೇಷವಾದದೈಂದರೆ ಆಂಜನೇಯ ಮತ್ತು ಕನ್ನಡನಾಡು. ಇದು ಕನ್ನಡ ಸಂಸ್ಕೃತಿಯ ಹಿರಿಮೆ ಗರಿಮೆಗೆನ್ನು ಬತ್ತಿ ಹಿಡಿದಿದೆ. ಕನ್ನಡ ನಾಡಿನ ಸೌಂದರ್ಯ,ಅನನ್ಯಪ್ರೇಮ,ಕಾಡು,ಬೆಟ್ಟ,ನದಿಗಳು,ಹಿರಿಯರ ನಡೆನುಡಿ-ಸ್ನೇಹ,ಕಾಯ್ರಸಾದನೆ ಇವೆಲ್ಲವು ಆಕರ್ಷಸುತ್ತದೆ.

ಆಂಜನೇಯನನ್ನು ಇಲ್ಲಿ ಮುಖ್ಯವಾಗಿ 'ಕನ್ನಡದ ಕುವರ' ನೆಂದೇ ವರ್ಣೆಸೂತ್ತಾರೆ. ಕರುನಾಡ ಸಂಸ್ಕ್ರತಿಯ ಸಾರಸ್ವರುಪ, ಕರುನಾಡು ಕಣ್ಮಣಿ, ಕರುನಾಡ ಸಂಸ್ಕ್ರತಿಯ ಸಂವರ್ಧನ-ಹೀಗೆ ಹನುಮಂತನನ್ನು ಎಷ್ಟು ಬಣ್ಣಿಸಿದರೂ ಕವಿಗೆ ತೃಫ್ತಿಯಿಲ್ಲ. ಆಂಜನೇಯನ ವ್ಯಕ್ತಿತ್ವ ಅದೆಷ್ಟು ಎತ್ತರದಲ್ಲಿದೆ ಎಂಬುದನ್ನು-ನೋತಲು ಆಂಜನೇಯ ಸೀತೆಯ ಬಗ್ಗೆ ತೋರಿದ ಮಾತೃಪ್ರೇಮವೇ ಉದಹರಣೆಯಾಗೆದೆ. ಆಂಜನೇಯನಿಗೆ ಸೀತೆಯ ಬಗ್ಗೆ ಪರಮಭಕ್ತಿ, ಮಾತೃಪ್ರೇಮ. ಹೆಣ್ಣನ್ನು ಭೋಗದ ದೃಷ್ಟಯಿಂದ ಕಾಣುವ ಸಮಾಜದಲ್ಲಿ ಆಂಜನೇಯ ಅದೆಷ್ಟು ಗೌರವದಿಂದ ಹೆಣ್ಣನ್ನು ನೋಡಿದ ಎನ್ನುವುದೇ ಅವನ ಹಿರಿಮೆ. ಒಮ್ಮೆಯಂತೂ ಸೀತೆಯನ್ನು ಕಂಡ ಆಂಜನೇಯ ಮಗುವಾಗಿ ಅವಳ ತೊಡೆಯ ಮೇಲೆ ಮಲಗಬೇಕೆಂದು ಬಯಸಿದನಂತೆ. ರೊಪಪರಾವರ್ತನ ವಿದ್ಯೆಯನ್ನು ಪಡೆದಿರುವ ಆಂಜನೇಯ ತನ್ನ ರೂಪವನ್ನು ಕಿರಿದಾಗಿಸಿಕೊಂಡು ಶಿಶುವಾಗಿ ಸೀತೆಯ ತೊಡೆಯ ಮೇಲೆ ಮಲಗಿ ಆಕೆಯ ಮುಖವನ್ನು ಮಾತೃಪ್ರೇಮದಿಂದ ನೋಡತೊಡಗಿದ. ಮಹಾಯೋಗಿಯಾದವನು ವಾತ್ಸಲ್ಯವೆಂದ ಸುಧೆಯನ್ನು ಸವಿಯುತ್ತಾ ತೊದಲು ನುಡಿಯಲ್ಲಿ ಅಮ್ಮ ಅಮ್ಮ ಎಂದು ನುಡಿದನಂತೆ. ಈ ಸನ್ನಿವೇಶದಲ್ಲಿ ಸೀತೆಯು ಮೈಮರೆತಳು. ತಾನು ಲೋಕಮಾತೆ, ರಾಮಚಂದ್ರನ ಪತ್ನಿ, ಅಯೋಧ್ಯೆಯ ರಾಣಿ ಎನ್ನುವುದನ್ನೆಲ್ಲ ಮರೆತು ಕೇವಲ ಒಬ್ಬ ತಾಯಿಯಾಗಿ ಆ ಶಿಶುವನ್ನು ಅಕ್ಕರೆಯಿಂದ ಎತ್ತಿ ಮುದ್ದಾಡಿದಳು ನಲಿದಳು. ಇದನ್ನು ಕಂಡ ರಾಮ ಹೇಳುತ್ತಾನೆ. ಜನ ಮನೆ ಮನೆಗಳಲಿ ಈ ವೀರ ಮಾರುತಿಯಂತೆ ಸ್ನೇಹ-ಪ್ರೀತಿ-ಸಾಹಸ ಎಲ್ಲ ಗುಣಗಳನ್ನು ಪಡೆದ ಮಕ್ಕಳು ಬೆಳೆಯಲಿ, ಎಂದು ಹೇಳುತ್ತಾ ಅವನ್ನು ಮಾರುತಿಯನ್ನು ಬಾಚಿ ತಬ್ಬಿದನಂತೆ.

ಈ ಕಾವ್ಯದ ಮೂಲಕ ಕವಿ ಹೇಳುತ್ತಾರೆ. ಆಂಜನೇಯ ಭಕ್ತನೆಂದರೆ ಭಕ್ತ, ವೀರವಿರಕ್ತ, ಪರಮಜ್ನನಿ, ಅಮ್ಮನ ಅಕ್ಕರೆಯ ಕಂದ, ಕರುನಾಡ ಕುವರ. ಜೀವನದ ಎಲ್ಲ ಮಹಾ ಮೌಲ್ಯಗಳ ಗಣಿ ಇವನು ವಳೆತನದಲ್ಲಿ ತುಂಟಾಟವಾಡಿದ. ಅನಂತರ ಆಕಾಶದೆತ್ತರಕ್ಕೆ ಬೆಳೆದ ವ್ಯಕ್ತಿತ್ವ, ಲೋಕದ ಶೋಕವನ್ನು ನಾಶಮಾಡಿದವನು. ಲೋಕದಲ್ಲಿ ಶುಬವಾದ ಜೀವನ ಎಂದರೆ ಹೀಗಿರಬೇಕು ಎನ್ನುವುದಕ್ಕೆ ಅವನು ನಿದರ್ಶನ. ಇಂಥ ಗುಣಗಳಿರುವುದರಿಂದಲೇ ನಮ್ಮ ಸಮಾಜ ಅವನನ್ನು ಪೂಜಿಸಿ ಕೊಂಡಾಡುತ್ತಿದೆ. ಎಲ್ಲ ದೇವರುಗಳಿಗಿಂತ ಮೇಲಾರ ಸ್ಥಾನ ನೀಡಿದೆ. ಈತನ ಚರಿತ್ರೆಯಲ್ಲಿ ಬರುವ ಅದ್ಭುತಗಳನ್ನು ಅರ್ಥ ಮಾಡಿಕೊಂಡರೆ ನಾವೂ ಪವಿತ್ರರಾಗುತ್ತೇವೆಂದೇ ಹೇಳುತ್ತಾರೆ.

ಇಂತಹ ಆಂಜನೇಯನ್ನು ಹೃದಯದೊಳಗೆ ಇಟ್ಟುಕೊಂಡು ಪೂಜಿಸಬೇಕಂತೆ ಏಕೆಂದರೆ

                   "ನಿಮ್ಮ ಮಕ್ಕಳಿಗೆ ರಕ್ಷೆಯಿವ, ಕೊರಳಪದಕ
                    ನಿಮ್ಮ ಗ್ರಾಮವ ಕಾಪಿಡುವುದವನದೇ ವಿಸಕ
                    ನಮಗಾಗಿ ನಿಮಗಾಗಿ ಇಳೆಗಿಳಿದು ಬಂದ
                    ಆಪದಕ್ಕೊದಗಿ ಬಹ ಕಾರುಣ್ಯಮೂರ್ತಿ
                    ಯುಗಯುಗದಿ ರಾಮಕೀರ್ತನ ಕವನು ನಿತ್ಯಸುಖಿ
                    ರಾಮಾಯಣ ಪಾರಾಯಣಕವನು ಸಿದ್ಧಿಶ್ರೋತಾರ,
                    ಸಿದ್ಧಿವಿರಿಸಿ ಅಲ್ಲಿ ಮೀಸಲು ಮಣೆಯೊಂದ,
                    ಎಂದೊಮ್ಮೆ ಬಂದು ಕೂಡುವನಲ್ಲಿ ಎಂದೆಲ್ಲಿ ಕೇಳಿ 
                    ಅದೊ ಬಂದು ಕುಳಿತಿಹನು ಕೈಮುಗಿದು ಶ್ರದ್ಧೆಯಲಿ
                    ನಿತ್ಯಶಾಶ್ವತ ಸುಚಿವೇಶಕ್ಕೆ ಜಯವೆನ್ನಿ ಜಯವೆನ್ನಿ.

೧. ದೇವುಡು ನರಸಿಂಹಶಾಸ್ತ್ರಿ 'ರಾಮಾಯಣದ ಮಹಾಪುರುಷರು' ಸಾಹಿತ್ಯನಂದನ, ಬೆಂಗಳೊರು. ೧೯೭೬.

೨. ಕೋ.ಚೆನ್ನನಬಸಪ್ಪ. ಶ್ರೀರಾಮಣದರ್ಶನಂ-ಮಹಾಕಾವ್ಯ ಸಮೀಕ್ಷೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೊರು.೧೯೯೯.

೩. ಡಾ||ಎ.ಎಸ್. ವೇಣುಗೋಪಾಲರಾವ, 'ಮೌಲ್ಯಲಿಂಗನ' ರಮಣಪ್ರಾಕಾಶನ. ಹಸನ. ೨೦೦೯.

೪. ದೇಜಗಾ, ವಚನ ಚಂದ್ರಿಕೆ, ಸುರುಚಿ ಪ್ರಾಕಾಶನ. ಮೈಸೂರು. ೧೯೭೨.