ಸಿಕ್ಯಾಬ್ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ
ಸಿಕ್ಯಾಬ್ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ವಿಜಯಪುರ | |
---|---|
ಸಿಕ್ಯಾಬ್ | |
ಸ್ಥಾಪನೆ | ೧೯೯೯ |
ಸ್ಥಳ | ವಿಜಯಪುರ, ಕರ್ನಾಟಕ |
ವಿದ್ಯಾರ್ಥಿಗಳ ಸಂಖ್ಯೆ | ೧೦೦೦ |
ಪದವಿ ಶಿಕ್ಷಣ | ೪೦೦ |
ಸ್ನಾತಕೋತ್ತರ ಶಿಕ್ಷಣ | ೧೨೦ |
ಅಂತರಜಾಲ ತಾಣ | http://www.secab.org/siet/index.html |
ಸಿಕ್ಯಾಬ್ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯವು ವಿಜಯಪುರ ನಗರದ ಬಾಗಲಕೋಟ ರಸ್ತೆಯಲ್ಲಿ ಇದೆ. ಇದು ೧೯೯೯ರಲ್ಲಿ ಸ್ಥಾಪಿತವಾಗಿದ್ದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ಬೆಳಗಾವಿ)ದಿಂದ ಮಾನ್ಯತೆ ಪಡೆದಿದೆ.ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ನವದೆಹಲಿ)ಯು ಮಾನ್ಯತೆ ನೀಡಿದೆ .ಹಾಗೂ ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ ಮಾನ್ಯತೆ ಪಡೆದಿದೆ. ಪ್ರಸ್ತುತ ೫ ಪದವಿ ವಿಭಾಗಗಳು ಕಾರ್ಯನಿರ್ವಹಿಸುತ್ತವೆ.
ಚರಿತ್ರೆ
[ಬದಲಾಯಿಸಿ]ಸಿಕ್ಯಾಬ್ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ವಿಜಾಪುರವು ಸಿಕ್ಯಾಬ್ ಸಂಸ್ಠೆಯಿಂದ ೧೯೯೯ರಲ್ಲಿ ಸ್ಥಾಪಿಸಲ್ಪಟ್ಟಿದೆ. ಇದರ ಕೇಂದ್ರ ಕಛೇರಿ ವಿಜಯಪುರ ನಗರದಲ್ಲಿದೆ.
ವಿಭಾಗಗಳು
[ಬದಲಾಯಿಸಿ]ಪದವಿ ವಿಭಾಗಗಳು
- ಸಿವಿಲ್ ಎಂಜಿನಿಯರಿಂಗ್
- ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್
- ಮಾಹಿತಿ ತಂತ್ರಜ್ಞಾನ ಎಂಜಿನಿಯರಿಂಗ್
- ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್
- ಯಾಂತ್ರಿಕ ಎಂಜಿನಿಯರಿಂಗ್
ಆವರಣ
[ಬದಲಾಯಿಸಿ]ಮಹಾವಿದ್ಯಾಲಯವು ೨೦ ಎಕರೆ ವಿಶಾಲವಾದ ಆವರಣ ಹೊಂದಿದೆ. ಆವರಣದಲ್ಲಿ ಕ್ರಿಕೇಟ್, ಟೆನ್ನಿಸ್, ಕಾಲ್ಚಂಡು, ಒಳಾಂಗಣ ಮೈದಾನ ಇದೆ.
ಗ್ರಂಥಾಲಯ
[ಬದಲಾಯಿಸಿ]ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವು ಅತ್ಯುನ್ನತ ಡಿಜಿಟಲ್ ಗ್ರಂಥಾಲಯ ಮತ್ತು ಸಾವಿರಾರು ಎಲ್ಲ ವಿಭಾಗದ ಪುಸ್ತಕಗಳನ್ನು ಹೊಂದಿದೆ. ವೈಜ್ಞಾನಿಕ ಹಾಗೂ ತಾಂತ್ರಿಕ ದೈನಿಕ, ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳು ಉಂಟು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕಗಳು ಸಿಗುತ್ತವೆ.
ಪ್ರವೇಶ
[ಬದಲಾಯಿಸಿ]ದ್ವಿತೀಯ ಪಿಯುಸಿ (೧೦+೨) ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರವೇಶವಿದೆ. ಡಿಪ್ಲೊಮಾ ,ಜಿಟಿಟಿಸಿ, ಸಿಬಿಎಸ್ಸಿ (೧೦+೨) ಮತ್ತು ಐಸಿಎಸ್ಸಿ (೧೦+೨) ವಿದ್ಯಾರ್ಥಿಗಳಿಗೂ ಪ್ರವೇಶವಿದೆ.
ವಿದ್ಯಾರ್ಥಿವೇತನ
[ಬದಲಾಯಿಸಿ]- ಅರ್ಹತೆ ವಿದ್ಯಾರ್ಥಿವೇತನ
- ರಕ್ಷಣಾ ವಿದ್ಯಾರ್ಥಿವೇತನ
- ಎಸ್.ಸಿ/ಎಸ್.ಟಿ ವಿದ್ಯಾರ್ಥಿವೇತನ
ಜೀವನ ಮಾರ್ಗದರ್ಶನ ಕೇಂದ್ರ
[ಬದಲಾಯಿಸಿ]ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಗಳು ಕ್ಯಾಂಪಸ್ ಸಂದರ್ಶನ ನಡುಸುತ್ತವೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]ಸಿಕ್ಯಾಬ್ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ವಿಜಯಪುರ ಅಧಿಕೃತ ಅಂತರಜಾಲ ತಾಣ Archived 2013-01-04 ವೇಬ್ಯಾಕ್ ಮೆಷಿನ್ ನಲ್ಲಿ.