ವಿಷಯಕ್ಕೆ ಹೋಗು

ಹಟ್ಟಿಅಂಗಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಟ್ಟಿಅಂಗಡಿ
ಹಟ್ಟಿಯಂಗಡಿ
ಹಳ್ಳಿ

ಹಟ್ಟಿಅಂಗಡಿ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಒಂದು ಹಳ್ಳಿ. ಈ ಹಳ್ಳಿಯನ್ನು ಹಟ್ಟಿಯಂಗಡಿ ಎಂದು ಕೂಡ ಕರೆಯುತ್ತಾರೆ. ಇಲ್ಲಿರುವ ಶ್ರೀ ಸಿದ್ದಿ ವಿನಾಯಕ ದೇವಸ್ಥಾನವು ತುಂಬಾ ಪ್ರಸಿದ್ದವಾಗಿರುತ್ತಾದೆ. ಹಟ್ಟಿಅಂಗಡಿಯಲ್ಲಿ ಜೈನ ಬಸದಿ, ಗೋಪಾಲಕೃಷ್ಣ , ಲೋಕನಾಥೇಶ್ವರ, ಮಾರಲದೇವಿ, ಶಂಕರನಾರಾಯಣ, ಶಿವಮುನೀಶ್ವರ, ಏಕನಾಥೇಶ್ವರ ಮತ್ತು ಶ್ಯಕ್ತರ ಬ್ರಹ್ಮ ದೇವಸ್ಥಾನಗಳು ಕೂಡ ನೋಡಲು ಸಿಗುತ್ತವೆ.

ಇತಿಹಾಸ

[ಬದಲಾಯಿಸಿ]

ಹಟ್ಟಿಅಂಗಡಿಯು ಆಳುಪ ರಾಜನ ಆಳ್ವಿಕೆ ಕಾಲದಲ್ಲಿ ತುಳುನಾಡ ರಾಜಧಾನಿಯಾಗಿತ್ತು. ಇಂದು ಇದು ಒಂದು ಹಳ್ಳಿಯಾಗಿ ವರಾಹಿ ನದಿಯ ತೀರದಲ್ಲಿ ತನ್ನ ಆಕರ್ಷಣೆಯನ್ನು ಕಳೆದುಕೊಳ್ಳದೆ ಇದೆ. ವರಾಹಿ ನದಿಯ ತೀರದಲ್ಲಿ ಇರುವ ಅರಮನೆ ಹಾಡಿಯಲ್ಲಿ ಮೊದಲು ಆಳುಪ ರಾಜರ ಅರಮನೆ ಇತ್ತು.

ಇಲ್ಲಿಗೆ ತಲುಪುವುದು ಹೇಗೆ

[ಬದಲಾಯಿಸಿ]
  1. ರಸ್ತೆ ಮಾರ್ಗ: ಕುಂದಾಪುರದಿಂದ ಇಲ್ಲಿಗೆ ಖಾಸಗಿ ಸಾರಿಗೆ ವ್ಯವಸ್ಥೆ ಇರುತ್ತದೆ. ಕುಂದಾಪುರದಿಂದ ೮ ಕಿ.ಮೀ.
  2. ಹತ್ತಿರದ ರೈಲ್ವೆ ನಿಲ್ದಾಣ: ಕುಂದಾಪುರ (ಕೊಂಕಣ ರೈಲ್ವೆ ).
  3. ಹತ್ತಿರದ ವಿಮಾನ ನಿಲ್ದಾಣ: ಬಜಪೆ ವಿಮಾನ ನಿಲ್ದಾಣ, ಮಂಗಳೂರು