ಹಿಂದೂ ಧರ್ಮದಲ್ಲಿ ದೇವರು ಮತ್ತು ಲಿಂಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ಧರ್ಮದಲ್ಲಿ ದೇವರು ಮತ್ತು ಲಿಂಗದ ಅರಿವಿಗೆ ವೈವಿಧ್ಯಮಯ ದಾರಿಗಳಿವೆ. ಅನೇಕ ಹಿಂದೂಗಳು ವ್ಯಾಕರಣಬದ್ಧವಾಗಿ ನಪುಂಸಕಲಿಂಗದ್ದಾದ ನಿರಾಕಾರ ನಿರುಪಾಧಿಕ ಬ್ರಹ್ಮನ್ ಮೇಲೆ ಕೇಂದ್ರೀಕರಿಸುತ್ತಾರಾದರೂ, ದೇವರನ್ನು ಗಂಡು ಮತ್ತು ಹೆಣ್ಣಾಗಿ ಗ್ರಹಿಸುವ ಪ್ರಖ್ಯಾತ ಹಿಂದೂ ಸಂಪ್ರದಾಯಗಳಿವೆ. ಶಾಕ್ತ ಸಂಪ್ರದಾಯವು ದೇವರ ಪುರುಷ ರೂಪದ ಮೂಲವೆಂದು ಅಭಿಪ್ರಾಯಪಡಲಾಗಿರುವ ಹೆಣ್ಣು ದೇವತೆಯನ್ನು ಭಾವಿಸುತ್ತದೆ.