ಮುಂಬೈ ಮಾಫಿಯಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುಂಬಯಿ ಮಾಫಿಯಾ

ದೇಶದ ಆರ್ಥಿಕ ರಾಜಧಾನಿ ಮುಂಬಯಿ, ಈಗಿನ ರೂಪ ಪಡೆದ ಈ ಅದ್ಭುತ ಬೆಳವಣಿಗೆಯ ಹಿಂದೆ ರಕ್ತದ ಓಕುಳಿ ಹರಿದದ್ದನ್ನು ಮರೆಯುವಂತೆಯೇ ಇಲ್ಲ. ಈ ಮಹಾನಗರಿಯ ಕರೆ ಪತ್ತೇದಾರಿ ಕಾದಂಬರಿಯಂತೆ ಕ್ಷಣ ಕ್ಷಣಕ್ಕೂ, ಪುಟ ಪುಟಕ್ಕೂ ರೋಮಾಂಚನ ಹುಟ್ಟಿಸುತ್ತಲೇ ಇದೆ. ದೇಶಕ್ಕೆ ಬ್ರಿಟಿಷರಿಂದ ಮುಕ್ತಿ ದೊರೆತ ನಂತರ ಮುಂಬಯಿ (೧೯೯೫ರ ನಂತರ ಮುಂಬಯಿ) ಭೂಗತ ಜಗತ್ತು ವಿಜೃಂಭಿಸತೊಡಗಿತು. ಚಿನ್ನ, ಬೆಳ್ಳಿ, ಅಕ್ಕಿ ಕಳ್ಳ ಸಾಗಾಣಿಕೆ (ಸ್ಮಗ್ಲಿಂಗ್) ಆ ಕಾಲದ ಪ್ರಮುಖ ಸುದ್ದಿ. ಎಂಬತ್ತರ ದಶಕದ ದಿನಗಳು ಮುಂಬಯಿ ಮಾಫಿಯಾ ಜಗತ್ತಿನಲ್ಲಿ ಅತ್ಯಂತ ಭಯಾನಕವಾಗಿದ್ದವು. ಹಾಜಿ ಮಸ್ತಾನ್, ಕರೀಮ್ ಲಾಲ್, ವರದರಾಜ್ ಮೊದಲಿಯಾರ್ ಮತ್ತು ಯೂಸುಫ್ ಪಟೇಲ್ ಆಗಿನ ಪ್ರಮುಖ ಡಾನ್ಗಳು. ಇವರಲ್ಲಿ ಕರೀಮ್ ಲಾಲ್‍ನ 'ಪಠಾಣ್ ಗ್ಯಾಂಗ್' ಅತ್ಯಂತ ಭಯಾನಕವಾಗಿತ್ತು. ಈ ಲಾಲ್ ಬಡ್ಡಿ ವ್ಯಾಪಾರಿಗಳಿಗೆ ಹಣ ವಸೂಲಿಯ ಕೆಲಸ ಮಾಡಿಕೊಡುತ್ತಿದ್ದ. ಹಾಜಿ ಮಸ್ತಾನ್ ಬಂದರಿನಲ್ಲಿ (ಡಾಕ್) ಕೂಲಿಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಹಾಜೈ ಮುಸ್ಲಿಂ ಕೆಲಸ ಮಾಡುತ್ತ ಮಾಡುತ್ತ ಯೂಸುಫ್ ಪಟೇಲನ ಜೊತೆಗೂಡಿ ಅಕ್ಕಿ, ಚಿನ್ನ, ಬೆಳ್ಳಿ, ಹತ್ತಿ ಸ್ಮಗ್ಲಿಂಗ್‍ಗೆ ಕಾಲಿಟ್ಟ ವರದರಾಜ ಮೊದಲಿಯಾರ್ ಕಳ್ಳ ಭಟ್ಟಿ ಸಾರಾಯಿ ವಿಶೇಷ.