ವಿಷಯಕ್ಕೆ ಹೋಗು

ಪಾಟನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಾಟನ್
ನಗರ
ದೇಶ ಭಾರತ
ರಾಜ್ಯಗುಜರಾತ್
ಜಿಲ್ಲೆಪಾಟನ್ ಜಿಲ್ಲೆ
Elevation
೭೬ m (೨೪೯ ft)
Population
 (2010)
 • Total೧,೨೫,೦೨೭
Languages
 • OfficialGujarati, ಹಿಂದಿ
Time zoneUTC+5:30 (IST)
PIN
384265
Vehicle registrationGJ 24c-d

ಪಾಟನ್ (ಅನ್ಹಿಲ್‍ವಾಡ) ಇದು ಗುಜರಾತ್ ರಾಜ್ಯದ ಪಾಟನ್ ಜಿಲ್ಲೆಯ ಮುಖ್ಯ ಕೇಂದ್ರ. ಇದು ಮಧ್ಯಯುಗದಲ್ಲಿ ಗುಜರಾತಿನ ರಾಜಧಾನಿಯಾಗಿತ್ತು. ೧೦೦೦ನೆಯ ಇಸವಿಯ ಸುಮಾರಿಗೆ ಇದು ಜಗತ್ತಿನ ೧೦ನೆಯ ದೊಡ್ಡ ನಗರವಾಗಿತ್ತು ಎಂದು ಊಹಿಸಲಾಗಿದೆ..[]

ಇತಿಹಾಸ

[ಬದಲಾಯಿಸಿ]
Rani-Ki Vav.

ಈ ಪಟ್ಟಣವನ್ನು ಕಿ.ಶ.೭೪೫ರಲ್ಲಿ ಚೌಡ ವಂಶದ ಪ್ರಸಿದ್ಧ ದೊರೆಯಾದ ವನರಾಜ ಚೌಡ ಎಂಬವನು ಸ್ಥಾಪಿಸಿದನು.ಈ ವಂಶಜರು ಸುಮಾರು ೨೦೦ವರ್ಷಗಳ ಕಾಲ ಇದನ್ನು ಆಳಿದರು.ನಂತರ ಇದನ್ನು ಸೋಳಂಕಿ ವಂಶದವರು ಆಳಿದರು.ಇವರಲ್ಲಿ ೯೪೧ ರಿಂದ ೯೯೬ರ ವರೆಗೆ ಆಳಿದ ಮೂಲರಾಜ ಪ್ರಖ್ಯಾತನು.ಇವನು ಕಥಿಯಾವಾಡ,ಕಛ್ ಮತ್ತು ದಕ್ಷಿಣ ಗುಜರಾತ್‍ನವರೆಗೆ ಸಾಮ್ರಾಜ್ಯ ವಿಸ್ತರಿಸಿದನು.ಇವನ ಸಂತತಿಯವರು ಇನ್ನೂರು ವರ್ಷ ರಾಜ್ಯವಾಳಿದರು. ಇವರು ಶೈವರಾಗಿದ್ದು ಸೋಮನಾಥ ಪಾಟನ್ ನಲ್ಲಿರುವ ಸೋಮನಾಥ ದೇವಾಲಯದ ದೇವರ ಆರಾಧಕರಾಗಿದ್ದರು.ಘಜನಿಯ ಮೊಹಮ್ಮದನು ಸೋಮನಾಥ ದೇವಾಲಯವನ್ನು ಹಲವಾರು ಬಾರಿ ಕೊಳ್ಳೆ ಹೊಡದರೂ ಆಗ ರಾಜ್ಯವಾಳುತ್ತಿದ್ದ ಒಂದನೆಯ ಭೀಮನು ಈ ದೇವಾಲಯವನ್ನು ಪುನರ್ನಿಮಿಸಿದನು. ೧೨೪೨ರಲ್ಲಿ ಮೂಲರಾಜ ಸಂತತಿಯವರ ಅವಸಾನವಾಗಿ ದೋಲ್ಕದ ವಾಘೇಲರ ಕೈಗೆ ರಾಜ್ಯ ಹೋದರೂ ೧೨೯೮ರಲ್ಲಿ ಅಲ್ಲಾ ಉದ್ದೀನ್ ಖಿಲ್ಜಿಯ ಸ್ವಾಧೀನವಾಯಿತು[] .ಮುಂದೆ ಇದು ಬರೋಡದ ಮರಾಠಾ ರಾಜರ ಸ್ವಾಧೀನದಲ್ಲಿದ್ದು ಬರೋಡದೊಂದಿಗೆ ಸ್ವತಂತ್ರ ಭಾರತದಲ್ಲಿ ವಿಲೀನವಾಯಿತು.

ಉಲ್ಲೇಖಗಳು

[ಬದಲಾಯಿಸಿ]
  1. "Top 10 Cities of the World in the year 1000". Archived from the original on 2013-06-05. Retrieved 2013-08-25.
  2. anhilvada


೧.^http://geography.about.com/library/weekly/aa011201c.htm Archived 2013-06-05 ವೇಬ್ಯಾಕ್ ಮೆಷಿನ್ ನಲ್ಲಿ. Top 10 Cities of the World in the year 1000
೨.^https://dsal.uchicago.edu/reference/gazetteer/pager.html?objectid=DS405.1.I34_V05_390.gif

"https://kn.wikipedia.org/w/index.php?title=ಪಾಟನ್&oldid=1125463" ಇಂದ ಪಡೆಯಲ್ಪಟ್ಟಿದೆ