ಎವಾಂಜಲಿಸ್ಟ ಟೊರಿಚೆಲ್ಲಿ
ಗೋಚರ
ಜೀವನ
[ಬದಲಾಯಿಸಿ]ಎವಾಂಜಲಿಸ್ಟ ಟೊರಿಚೆಲ್ಲಿ ಇಟಲಿಯ ಪ್ರಖ್ಯಾತ ಭೌತವಿಜ್ಞಾನಿ. ಇವರು ಕ್ರಿ.ಶ. ೧೬೦೮ರ ಅಕ್ಟೋಬರ್ ೧೫ರಂದು ರೋಮ್ ನಲ್ಲಿ ಜನಿಸಿದರು. ಇವರು ಪಾದರಸದ ವಾಯುಭಾರ ಮಾಪಕವನ್ನು ಕಂಡುಹಿಡಿದರು.ಇವರು ಯಾವುದೇ ವಿಶ್ವವಿದ್ಯಾಲಯದಲ್ಲಿ ಸೇರಿ ಪದವಿ ಪಡೆದರೆಂಬ ಪುರಾವೆಗಳಿಲ್ಲಿವರ ಗುರುಗಳು ಕಾಸ್ಟೆಲ್ಲಿ.೧೬೪೭ರ ಅಕ್ಟೋಬರ್ ೨೫ ರಂದು ಫ್ಲೊರೆನ್ಸ್ ನಲ್ಲಿ ನಿಧನರಾದರು.
ಸಾಧನೆ
[ಬದಲಾಯಿಸಿ]ಇವರ ಪ್ರಮುಖ ಸಾಧನೆಯೆಂದರೆ, ಕ್ರಿ.ಶ. ೧೬೪೦ ರಲ್ಲೇ ಅನೇಕ ಪ್ರಯೋಗಗಳನ್ನು ಮಾಡಿದರು. ಅಷ್ಟೇ ಅಲ್ಲದೆ ಇವರು ಆಕಾಶದಿಂದ ಬೀಳುವ ಕಾಯಗಳನ್ನು ಅನುಸರಿಸುವ ನಿಯಮಗಳಿಗೆ ಪ್ರಾಯೋಗಿಕ ದಾಖಲೆಗಳನ್ನು ನೀಡಿದರು.. [೧]
ಪ್ರಖ್ಯಾತ ಖಗೋಳ ವಿಜ್ಞಾನಿ ಗೆಲಿಲಿಯೋರವರು ಪ್ರತಿಪಾದಿಸಿದ ನಿಯಮಗಳನ್ನು ಎವಾಂಜಲಿಸ್ಟ ಟೊರಿಚೆಲ್ಲಿ ದ್ರವಗಳಿಗೂ ಅನ್ವಯಿಸಿದರು. ಮೊದಲ ಬಾರಿಗೆ ನಿರ್ವಾತ ಸಂಶೋಧನೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಗಣಿತದಲ್ಲೂ ಪಾಂಡಿತ್ಯ ಪಡೆದ ಇವರು, ಗಣಿತಶಾಸ್ತ್ರದಲ್ಲಿ ಹಲವು ಪ್ರಬಂಧಗಳನ್ನು ಪ್ರತಿಪಾದಿಸಿದ್ದಾರೆ. [೨]