ಮೊದಲನೆಯ ಭಾಸ್ಕರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೀವನ[ಬದಲಾಯಿಸಿ]

ಮೊದಲನೆಯ ಭಾಸ್ಕರ ಒಬ್ಬ ಪ್ರಖ್ಯಾತ ಗಣಿತ ಪಂಡಿತ. ಏಳನೇ ಶತಮಾನದಲ್ಲಿ ಭಾರತ ಕಂಡ ಪ್ರಸಿದ್ಧ ಗಣಿತ ವಿಜ್ಞಾನಿ ಈತ. ಈತನ ಕಾಲದಲ್ಲಿ ಜನರು ತೆರಿಗೆ, ಸಾಲ, ಬಡ್ಡಿ, ಮೊದಲಾದ ಗಣಿತ ಸಮಸ್ಯೆಗಳನ್ನ ಬಿಡಿಸಲು ಬಹಳ ಕಷ್ಟ ಪಡುತ್ತಿದ್ದರು. ಹೀಗಾಗಿ ಹೊಸ ಮಾದರಿಯ ಲೆಕ್ಕಾಚಾರದ ಆವಿಷ್ಕಾರದ ಅಗತ್ಯವಿತ್ತು. ಅಂತಹ ಕಠಿಣ ಪರಿಸ್ಥಿತಿಯಲ್ಲಿ ಜಗತ್ತಿಗೇ ಹೊಸ ಗಣಿತ ಪದ್ದತಿ ನೀಡಿದ ಕೀರ್ತಿ ಮೊದಲನೇ ಭಾಸ್ಕರನಿಗೆ ಸಲ್ಲುತ್ತದೆ. ಈತ ಗಣಿತವನ್ನ ಸರಳಗೊಳಿಸಿದ ಎಂದು ತಿಳಿದು ಬರುತ್ತದೆ. [೧]

ಸಾಧನೆ[ಬದಲಾಯಿಸಿ]

ಈತ ಬರೆದ ಹಲವು ಗಣಿತ ಪುಸ್ತಕಗಳು ಮುಂದೆ ಹಲವು ಗಣಿತ ಪಂಡಿತರಿಗೆ ಉಪಯೋಗವಾಯಿತು. ಎಂಟನೇ ಶತಮಾನದಲ್ಲಿ ಈತ ರಚಿಸಿದ ಪುಸ್ತಕಗಳು ಬಹು ಬೇಡಿಕೆಯನ್ನ ಪಡೆದುವು. ಆಗಿನ ಕಾಲದಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆಂದು ಬಾಗ್ದಾದ್ ತೆರಳುತ್ತಿದ್ದ ಭಾರತೀಯ ಗಣಿತ ವಿಜ್ಞಾನಿಗಳೆಲ್ಲ ಮೊದಲನೇ ಭಾಸ್ಕರ ರಚಿಸಿದ ಪುಸ್ತಕಗಳನ್ನೆಲ್ಲ ತಮ್ಮೊಂದಿಗೆ ಕೊಂಡೊಯ್ಯುತ್ತಿದ್ದರು ಎಂದು ತಿಳಿದುಬಂದಿದೆ.[೨]

ಮೊದಲನೆಯ ಭಾಸ್ಕರನಿಗೆ ಗೌರವ ಸೂಚಕವಾಗಿ ಭಾರತ ಸರ್ಕಾರ ೧೯೭೯ ಜೂನ್ ೭ ರಂದು ಉಡಾಯಿಸಿದ ಎರಡನೇ ಕೃತಕ ಭೂ ಉಪಗ್ರಹಕ್ಕೆ ಈತನ ಹೆಸರಿಟ್ಟು ಗೌರವ ಸೂಚಿಸಿದೆ.

ಉಲ್ಲೇಖಗಳು[ಬದಲಾಯಿಸಿ]

  1. http://www.britannica.com/EBchecked/topic/853503/Bhaskara-I
  2. http://www.mapsofindia.com/who-is-who/science-technology/bhaskara-i.html