ವಿಷಯಕ್ಕೆ ಹೋಗು

ರಘುಚರಣ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಘುಚರಣ್ ತಿಪಟೂರು.

ರಘು ಚರಣ್, ಇವರು ಮೂಲತಃ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹಳೇಪಾಳ್ಯ ಗ್ರಾಮದವರಾಗಿದ್ದು, ಸದ್ಯ ಕನ್ನಡ ಕಿರುತೆರೆಯಲ್ಲಿ ಚಿತ್ರಕಥೆ ಸಂಭಾಷಣಾಕಾರರಾಗಿ ಕ್ರಿಯಾಶೀಲರಾಗಿದ್ದಾರೆ.. ಇದುವರೆವಿಗೂ ಸುಮಾರು ಹತ್ತು ಧಾರಾವಾಹಿಗಳಿಗೆ ಬರಹಗಾರರಾಗಿ ಕೆಲಸ ಮಾಡಿದ್ದು, ಮಳೆ, ಮುತ್ತಿನ ತೋರಣ(ವೈಶಾಲಿ ಕಾಸವರಳ್ಳಿ) ಚುಕ್ಕಿ (ಮಿಲನ ಪ್ರಕಾಶ್) ಅಳಿಗುಳಿ ಮನೆ (ಬಿ.ಸುರೇಶ) ಪಲ್ಲವಿ ಅನುಪಲ್ಲವಿ (ಮಧುಸೂದನ್) ಪ್ರಮುಖ ಧಾರಾವಾಹಿಗಳು. ಸಹಜತೆ ಮತ್ತು ಸರಳತೆ, ಇವರ ಬರವಣಿಗೆಯ ಮುಖ್ಯ ಶೈಲಿ.. ಧಾರಾವಾಹಿ ಅಲ್ಲದೆ, ಚಿತ್ರ ಸಾಹಿತ್ಯದಲ್ಲೂ ಕೈಯಾಡಿಸಿರುವ ಇವರು, ಪ್ರೀತಿಯಲೋಕ, ಆಟ ಚಲನಚಿತ್ರಗಳಿಗೆ ಸಂಭಾಷಣೆಯನ್ನೂ ಬರೆದಿದ್ದಾರೆ.

"https://kn.wikipedia.org/w/index.php?title=ರಘುಚರಣ್&oldid=616540" ಇಂದ ಪಡೆಯಲ್ಪಟ್ಟಿದೆ