ಬೆಂಗಳೂರಿನ, ತ್ರಿಮುಖಿ ಗಡಿಯಾರ ಗೋಪುರ
This article needs more links to other articles to help integrate it into the encyclopedia. (ಡಿಸೆಂಬರ್ ೨೦೧೫) |
ಸದಾ ವಾಹನಗಳ ಹಾಗೂ ಜನಸಂದಣಿಯ ಅಡ್ಡದಂತಿರುವ 'ಬೆಂಗಳೂರಿನ ಸೌತ್ ಎಂಡ್ ವೃತ್ತ'ದ ಬಳಿ ಪ್ರತಿಗಂಟೆಗೂ ಗಂಟೆ ಬಾರಿಸುವ 'ತ್ರಿಮುಖಿ ಗಡಿಯಾರ ಗೋಪುರ' ವನ್ನು ನಿರ್ಮಿಸಲಾಗಿದೆ. ಇದರ ಶಬ್ಧ, ಶಂಖವಾದ್ಯದ ಹೊಲಿಕೆಯಿದೆ. ೨,೯೩೦ ಅಡಿಯ ಜಾಗವನ್ನು ಹೊಂದಿದ ಒಂದು ಉದ್ಯಾನವನ ಇದರ ಹತ್ತಿರವಿದೆ. ಅಲ್ಲೇ '೬೧ ಅಡಿ ಎತ್ತರದ ಗಡಿಯಾರ ಗೋಪುರ' ಸ್ಥಾಪಿಸಲ್ಪಟ್ಟಿದೆ.ಇದನ್ನು ೨೦೧೩ ರ, ಫೆಬ್ರವರಿ,ಶನಿವಾರದಂದು ಆವರಣಗೊಳಿಸಲಾಯಿತು. 'ಮೂರ್ಮುಖದ ಹಸಿರು ಗ್ರಾನೈಟ್ ಕಲ್ಲಿನ ಗಡಿಯಾರ'ದ ಮುಖದಮೇಲೆ, ಕನ್ನಡ' ಇಂಗ್ಲೀಷ್ ಮತ್ತು ರೋಮನ್ ಅಂಕೆಗಳನ್ನು ಕೆತ್ತಲಾಗಿದೆ. ಗಂಟೆಗೊಮ್ಮೆ ಗಂಟೆ ಹೊಡೆಯುವ ಗಡಿಯಾರದ ಸುಮಧುರ ನಾದ, ಸುಮಾರು ೩ ಕಿ.ಮೀ. ದೂರದವರೆಗೆ ಕೇಳುತ್ತದೆ.
ಸಾರ್ವಜನಿಕರ ಆದ್ಯತೆ
[ಬದಲಾಯಿಸಿ]ಸಾರ್ವಜನಿಕರ ನಿದ್ದೆಗೆ ಅಡ್ಡಬರದಂತೆ ಬೆಳಿಗ್ಯೆ ೬ ರಿಂದ ರಾತ್ರಿ ೧೦ ರವರೆಗೆ ಮಾತ್ರ ಗಂಟೆ ಹೊಡೆಯುತ್ತದೆ. ಗಡಿಯಾರದ ಸುತ್ತಮುತ್ತ ಬೆಳಕಿನ ವ್ಯವಸ್ಥೆಯನ್ನು 'ಬೆಳಕಿನ ಸೂಕ್ಷ ನಿಯಂತ್ರಿತ ತಂತ್ರಜ್ಞಾನ'ವನ್ನು ಅವಲಂಭಿಸಿ ಸಿದ್ಧಪಡಿಸಿದ್ದಾರೆ. ಗಡಿಯಾರದ ಮುಖದಿಂದ ಹೊರಹೊಮ್ಮುವ ದಿನಕ್ಕೊಂದು ಬಣ್ಣದ ಬೆಳಕು, ಬೀದಿಯನ್ನು ಬೆಳಗುತ್ತದೆ. ಬೆಳಕಿನ ವಿಜ್ಞಾನಾಧಾರಿತ ವ್ಯವಸ್ಥೆಯಿಂದ, ರವಿವಾರ-ತಿಳಿಗುಲಾಬಿ, ಸೋಮವಾರ-ಬಿಳಿ,ಮಂಗಳವಾರ-ಕೆಂಪು, ಬುಧವಾರ-ಹಸಿರು, ಬ್ರಿಹಸ್ಪತಿವಾರ-ಹಳದಿ, ಶುಕ್ರವಾರ-ತಿಳಿನೀಲಿ, ಮತ್ತು ಶನಿವಾರ-ಕಡುನೀಲಿ ಬಣ್ಣಗಳಿಂದ ಗಡಿಯಾರದ ಸುತ್ತಮುತ್ತ ಬೆಳಕಿನ ಅಂದ-ಚೆಂದ, ಜನರನ್ನು ದಂಗುಬಡಿಸುತ್ತದೆ. ಗಡಿಯಾರದ ಚಲನೆ ಮತ್ತು ಪರಿಸರದ ಬೆಳಕು 'ಸೌರ ಶಕ್ತಿ'ಯನ್ನು ಅವಲಂಭಿದಿದೆ. ಯೂರೊಪ್ ದೇಶದ 'ಸ್ವೀಡನ್' ದೇಶದಲ್ಲಿ ಇದೇ ಬಗೆಯ '೪೮ ಅಡಿ ಎತ್ತರದ ಗಡಿಯಾರ ಗೋಪುರ' ಇದೆ. 'ಸೌತ್ ಎಂಡ್ ರಸ್ತೆಯ ಹತ್ತಿರ ಶೌಶಾಲಯ ನಿರ್ಮಿಸುವ ಯೋಜನೆ' ಯನ್ನು ಮೊದಲು ಮಹಾನಗರಪಾಲಿಕೆ ಹೊಂದಿತ್ತು. ಈಗ ಈ ಗಡಿಯಾರನಿರ್ಮಾಣದ ಬಳಿಕ, ಪ್ರದೇಶದ ಸೌಂದರ್ಯ ಇಮ್ಮಡಿಯಾಗಿದೆ. ಇದಕ್ಕೆ ತಗುಲಿದ ಖರ್ಚು ೯೯ ಲಕ್ಷ ರೂಪಾಯಿಗಳು.
- Articles with too few wikilinks from ಡಿಸೆಂಬರ್ ೨೦೧೫
- All articles with too few wikilinks
- Articles covered by WikiProject Wikify from ಡಿಸೆಂಬರ್ ೨೦೧೫
- All articles covered by WikiProject Wikify
- Orphaned articles from ಡಿಸೆಂಬರ್ ೨೦೧೫
- All orphaned articles
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- ಬೆಂಗಳೂರಿನ ರಸ್ತೆಗಳು ಮತ್ತು ಬಡಾವಣೆಗಳು