ವಿಷಯಕ್ಕೆ ಹೋಗು

ಬಾಂಬೆ ಟಾಕೀಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಮುಂಬಯಿ ಟಾಕೀಸ್ ಎಂದು ಆಗ ಎಲ್ಲರ ಬಾಯಿನಲ್ಲೂ ಕರೆಯಲ್ಪಡುತ್ತಿದ್ದ , ದ ಮುಂಬಯಿ ಟಾಕೀಸ್ ಲಿಮಿಟೆಡ್ ಸಂಸ್ಥೆ, ಸನ್. ೧೯೩೪ ರಲ್ಲಿ ಸ್ಥಾಪಿಸಲ್ಪಟ್ಟ ಆಗಿನ ಮುಂಬಯಿ ಮಹಾನಗರದ ಪ್ರತಿಶ್ಠಿತ ಚಲನಚಿತ್ರ ನಿರ್ಮಾಣ ಸ್ಟುಡಿಯೋ ಆಗಿತ್ತು. ಈ ಸ್ಟುಡಿಯೋದಲ್ಲಿ ಸುಮಾರು ೧೦೨ ಚಿತ್ರಗಳು ನಿರ್ಮಿಸಲ್ಪಟ್ಟವು. ಆಗಿನ ಮುಂಬಯಿನ ಉಪನಗರವಾಗಿದ್ದ ಮಲಾಡ್ ನಲ್ಲಿ ಹಿಮಾಂಶು ರಾಯ್, ರಾಜ್ನಾರಾಯಣ್ ದುಬೆ, ಮತ್ತು ದೇವಿಕಾ ರಾಣಿ ಎಂಬ ಚಲನಚಿತ್ರ ಕಲಾವಿದರು, ಮತ್ತು ಚಿತ್ರನಿರ್ಮಾಣಕ್ಕೆ ಹಣ ಒದಗಿಸುವ ಧರ್ಯಮಾಡಿ ಮುಂದುವರೆದ ಆಶಾವಾದಿಗಳ ಸಮಾಗಮವಾಗಿತ್ತು. ಆಗ ಚಿತ್ರ ನಿರ್ಮಾಣ ಕಾರ್ಯದಲ್ಲಿ ಹಣ ಒದಗಿಸುವ ಸಾಮರ್ಥ್ಯ, ದುಬೆಯವರಿಗಿತ್ತು.

ಮುಂಬಯಿ ಟಾಕೀಸ್ ಅಸ್ತಿತ್ವಕ್ಕೆ

[ಬದಲಾಯಿಸಿ]

ಮುಂಬಯಿ ಟಾಕೀಸ್, ಮೊದಲ ಪಬ್ಲಿಕ್ ಲಿಮಿಟೆಡ್ ಕಂಪೆನಿಯಾಗಿ 'ಇಂಡಿಯನ್ ಕಂಪೆನಿ ಆಕ್ಟ್ ಅಡಿಯಲ್ಲಿ ನೋಂದಾಯಿಸಲ್ಪಟ್ಟಿತು'. ಹಾಗೆ ಮುಂದುವರೆದು ಅದು 'ಮುಂಬಯಿ ಸ್ಟಾಕ್ ಎಕ್ಸ್ ಛೇಂಜ್' ನಲ್ಲೂ ನೊದಾಯಿಸಲ್ಪಟ್ಟಿತು. ಹೀಗೆ ಮುಂದುವರೆದ ಸಂಸ್ಥೆ, ಹಣಕಾಸು ವಿಷಯದಲ್ಲೂ ಎತ್ತರಕ್ಕೆ ಬೆಳೆದು ಸುವ್ಯವಸ್ಥಿತ ಕಂಪೆನಿಯೆಂಬ ಹೆಸರು ಗಳಿಸಿತು. ಶೇರ್ ಖರೀದಿದಾರರಿಗೆ ಸಕಾಲದಲ್ಲಿ ಕಾಲಕಾಲಕ್ಕೆ ಡಿವಿಡೆಂಡ್ ಬೋನಸ್ ಗಳು ದೊರೆಯುತ್ತಿದ್ದವು. ಹೀಗೆ ಪ್ರವೃದ್ಧಮಾನಕ್ಕೆ ಬಂದ ಸಂಸ್ಥೆಯಲ್ಲಿ ಶೇರ್ ಹಣ ಹೂಡಿಕೆಗೆ ಸಾರ್ವಜನಿಕರು, ಮತ್ತು ಒಳ್ಳೆಯ ಉದ್ಯಮಿಗಳು ಮುಂದೆ ಬಂದರು. ಅಂತಹವರಲ್ಲಿ ಹೆಸರಾಂತ ಉದ್ಯಮಿಗಳಾಗಿದ್ದ, ಎಫ್ ಇ. ದಿನ್ಷಾ,, ಸರ್, ಫಿರೋಜ್ ಸೇತ್ನಾ ಮೊದಲಾದವರು ಮುಖ್ಯರು. ಹೀಗೆ ಮುಂದುವರೆದ ಕಂಪೆನಿ ಫ್ರಾಂಜ್ ಒಸ್ಟನ್, ಮತ್ತು ನಿರಂಜನ್ ಪಾಲ್ ಮುಂತಾದವರ ನೇತೃತ್ವದಲ್ಲಿ 'ಮುಂಬಯಿ ಟಾಕೀಸ್ ಲಾಂಚನ'ದಲ್ಲಿ ಚಲನಚಿತ್ರ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು.