ವಿಷಯಕ್ಕೆ ಹೋಗು

ಜೆಸಿಂತಾ ಸಲ್ಢಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೆಸಿಂತಾ ಸಲ್ಧಾನ, ಮಂಗಳೂರಿನ 'ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್,' ನಲ್ಲಿ ನರ್ಸಿಂಗ್ ಶಿಕ್ಷಣ ಪಡೆದರು. ವೃತ್ತಿಜೀವನ ಊರಿನಲ್ಲೇ ಆರಂಭಿಸಿದರು. ೧೯೯೩ ರಲ್ಲಿ ಶಿರ್ವದ 'ಬೆನೆಡಿಕ್ಟ್ ಕಾಡೋಜ' ರನ್ನು ಮದುವೆಯಾದರು. ಮುಂದೆ ಮಸ್ಕತ್ ನಲ್ಲಿ ನರ್ಸಿಂಗ್ ವೃತ್ತಿಯನ್ನು ಮುಂದುವರೆಸಿದರು. ಸನ್. ೨೦೦೫ ರಿಂದ ಲಂಡನ್ ನ ಪ್ರತಿಷ್ಠಿತ 'ಕಿಂಗ್ ಎಡ್ವರ್ಡ್ ಆಸ್ಪತ್ರೆ'ಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ೨೦“ ರಲ್ಲಿ ಭಾರತಕ್ಕೆ ಬಂದು ೨೦೧೨ ರ ಜನವರಿ ತಿಂಗಳಿನಲ್ಲಿ ವಾಪಸ್ಸಾಗಿದ್ದರು. ಮೂಲತಃ ಮಂಗಳೂರಿನ ಜೆಸಿಂತಾ, ತಂದೆ ತಾಯಿ ತೀರಿಕೊಂಡ ಮೇಲೆ, ತಮ್ಮ ಮನೆಯನ್ನು ಮಾರಿ, ಪತಿಯ ಶಿರ್ವದ ಮನೆಯೊಂದಿಗೆ ಹೆಚ್ಚಿಗೆ ಸಂಪರ್ಕ ಹೊಂದಿದ್ದರು. ೨ ವರ್ಷಕ್ಕೊಮ್ಮೆ ಬರುತ್ತಿದ್ದು ೧ ತಿಂಗಳು ಇದ್ದು ಮರಳುತ್ತಿದ್ದರು.

ಜೆಸಿಂತಾ ಪರಿವಾರ

[ಬದಲಾಯಿಸಿ]

ಶಿವ್ರ ಗ್ರಾಮದ ಮಂಚಕಲ್ ಸೊರ್ಕಳ್ ನಿವಾಸಿ, ಕಾರ್ಮಿನ್ ಬಬೋಜ ರ ಮಗ, ಬೆನೆಡಿಕ್ಟ್ ಬಬೋಜ, ಲಂಡನ್ ನಲ್ಲಿ ಕಂಪೆನಿಯೊಂದರಲ್ಲಿ ಅಕೌಂಟೆಂಟ್ ಆಗಿ ಕೆಲಸಮಾಡುತ್ತಿದ್ದಾರೆ. ಜೆಸಿಂತಾ ಲಂಡನ್ ನ ಪ್ರತಿಷ್ಠಿತ ೭ನೇ ಕಿಂಗ್ ಎಡ್ವರ್ಡ್ ರುಗ್ಣಾಲಯದಲ್ಲಿ ನರ್ಸ್ ಆಗಿದ್ದರು. ನಿಷ್ಠಾವಂತ ದಾದಿ, ಎಂದು ಹೆಸರುಮಾಡಿದ್ದರು. ಆಸ್ಪತ್ರೆಯ ಆಡಳಿತ ಮಂಡಳಿ ಅವರನ್ನು ಮಹಾರಾಣಿ ೨ ನೇ ಎಲಿಝಬೆತ್ ರವರ ಮೊಮ್ಮಗ, ರಾಜಕುಮಾರ ವಿಲಿಯಂ ರ, ಗರ್ಭಿಣಿ ಪತ್ನಿ ರಾಜಕುಮಾರಿ ಕೇಟ್ ರವರ ಶುಶೃಷೆಗೆ ನೇಮಕಮಾಡಿದ್ದರು. ಡಿಸೆಂಬರ್ ೫ ರ ಬುಧವಾರದ ಮುಂಜಾನೆ ೫-೩೦ಕ್ಕೆ ಆಸ್ಟ್ರೇಲಿಯ ಮೂಲದ 'ರೇಡಿಯೊ ಟುಡೇ ಎಫ್ ಎಂ ವಾಹಿನಿಯ ಆರ್. ಜೆ'. ಗಳು ತಮಾಷೆಗೆ ಅಜ್ಜಿ -ಅಜ್ಜನ ನಕಲಿ ಧ್ವನಿಯಲ್ಲಿ ಸುಳ್ಳುಕರೆಮಾಡಿ ನಾವು 'ರಾಜಕುಮಾರಿ ಕೇಟ್' ಳ ಆರೋಗ್ಯದ ಬಗ್ಗೆ ತಿಳಿಯುವುದಿದೆ ಎಂದು ಕೇಳಿಕೊಂಡಾಗ, ಜೆಸಿಂತಾ ಸುಖವಿಶಯವನ್ನು ತಿಳಿಸಿ, ಕರೆಯನ್ನು ತಮ್ಮ ಸಹೋದ್ಯೋಗಿಗೆ ವರ್ಗಾಯಿಸಿದರು. ಈ ವಿಷಯ ತಿಳಿಯುತ್ತಲೇ ಆಸ್ಟ್ರೇಲಿಯ ವಾಹಿನಿ ಈ ಸುದ್ದಿಯನ್ನು ಪ್ರಸಾರ ಮಾಡಿತ್ತು. ಇಂಗ್ಲೆಂಡ್ ರಾಜಮನೆತನದ ಅತ್ಯಂತ ಗೋಪ್ಯವಾದ ಈಸುದ್ದಿಯನ್ನು ಟುಡೇ ಎಫ್ ಎಂ, ,(2Day FM), ರೇಡಿಯೊ ಜಾಕಿಗಳು ಗುರುವಾರ ರಾಜಕುಮಾರಿ ಕೇಟ್, ಗರ್ಭಿಣಿಯಾದ ವಿಶಯವನ್ನು ಬಹಿರಂಗವಗೊಳಿಸಿ ಬಿತ್ತರಿಸಿದರು. ಇದರಿಂದ ರಾಜಮನೆತನ ತೀವ್ರವಾದ ಮುಜುಗುರ ಹಾಗೂ ವಿವಾದಕ್ಕೆ ಒಳಗಾಗಿತ್ತು. ಪದೇ ಪದೇ ಹಾಸ್ಯಭರಿತ ಮಾತಿನಲ್ಲಿ ವಿವರಣೆನೀಡುತ್ತಿದ್ದ ರೀತಿಯಿಂದ ನೊಂದ ಜೆಸಿಂತಾ ಆಸ್ಪತ್ರೆಯ ಆಡಳಿತ ಮಂಡಳಿ ರಾಜಪರಿವಾರ ಏನಾದರು ಕ್ರಮ ತೆಗೆದುಕೊಳ್ಳಬಹುದೆಂದು ಭಯಭೀತರಾಗಿದ್ದರು. ಈ ಎಲ್ಲಾ ಹಗರಣಕ್ಕೆ ತಾನೇ ಕಾರಣವಾದಳೆಂದು ಮನನೊಂದ ಜೆಸಿಂತಾ, ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿರಬಹುದೆಂದು ಎಲ್ಲರು ಶಂಕಿಸಿದರು. ಆಸ್ಪತ್ರೆಯ ಆಡಳಿತ ವರ್ಗನಂತರ ಆಕೆಯನ್ನು ವಿಚಾರಣೆಗೆ ಒಳಪಡಿಸಿತ್ತು ಸಹಿತ. ಆಸ್ಪತ್ರೆಯಲ್ಲಿ ಕಾರ್ಯನಿರಿತರಾದ್ದ ಜೆಸಿಂತಾ ವಾರಕ್ಕೊಮ್ಮೆ ಮನೆಗೆ ತೆರಳುತ್ತಿದ್ದರು. ಆದರೆ ಬುಧವಾರ ಈ ಘಟನೆ ಸಂಭವಿಸಿದಮೇಲೂ ಮನೆಗೆ ಬರಲಿಲ್ಲ. ಶುಕ್ರವಾರ ಮುಂಜಾನೆ ಬಬೋಜರಿಗೆ, ಜೆಸಿಂತ ಮೃತರಾಗಿರಬಹುದೆಂಬ ಸುದ್ದಿಯನ್ನು ಪೋಲೀಸ್ ಅಸ್ಪಷ್ಟ ರೀತಿಯಲ್ಲಿ ಕೊಟ್ಟರು. ಬಳಿಕ ಪತಿ ಬೆನೆಡಿಕ್ಟ್ , ಈ ಸುದ್ದಿಯನ್ನು ಖಚಿತಪಡಿಸಿಕೊಂಡು ಶುಕ್ರವಾರ ರಾತ್ರಿ ಭಾರತದ ಶಿರ್ವದಲ್ಲಿರುವ ತಮ್ಮ ತಾಯಿ ಮತ್ತು ಸಹೋದರಿಯರಿಗೆ ವಿಶಯ ತಿಳಿಸಿದರು.

'ಜೆಸಿಂತಾ ಸಲ್ಢಾನ,' (೪೬) ತಾವು ವಾಸವಾಗಿದ್ದ ೭ನೇ, ಕೆ.ಇ.ಎಮ್ ಆಸ್ಪತ್ರೆಯ ಹಾಸ್ಟೆಲ್ ನಲ್ಲಿ ಡಿಸೆಂಬರ್, ೭, ಶುಕ್ರವಾರದ ಬೆಳಿಗ್ಯೆ ಆತ್ಮಹತ್ಯೆಮಾಡಿಕೊಂಡರೆಂದು ವರದಿಗಳು ತಿಳಿಸುತ್ತವೆ. ಅವರು ತಮ್ಮ ಪ್ರೀತಿಯ ಪತಿ ಬೆನೆಡಿಕ್ಟ್ ಬಬೋಜ, ಮಗ ಜುನಾಲ್ (೧೬), ಮತ್ತು ಮಗಳು ಲಿಸ (೧೪) ಮತ್ತು ಅತ್ತೆ ಕಾರ್ಮಿನ್ ಕಾಡೋಜರನ್ನು ಅಗಲಿ ಹೋಗಿದ್ದಾರೆ.