ಶ್ರೀ ಕ್ಷೇತ್ರ ಎಲ್ಲೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಉಡುಪಿಯ ರಾಷ್ಟೀಯ ಹೆದ್ದಾರಿ ೧೭- ಉಚ್ಚಿಲದಿಂದ ಪೂರ್ವಕ್ಕೆ ತಿರುವಿ ,ಹಚ್ಚ ಹಸಿರಾಗಿ, ಬಾಗಿ ತಲೆಸವರುವಂತಹ ಗಿಡ ಬಳ್ಳಿಗಳಿಂದ ಕೂಡಿದ ,ಸ್ವಲ್ಪ ಇಕ್ಕಟ್ಟಾದ ಡಾಮರುರಸ್ತೆಯನ್ನು ನಾಲ್ಕು ಕಿಲೋ ಮೀಟರ್ನಷ್ಟು ದೂರ ಕ್ರಮಿಸಿದರೆ ಸಿಗುವ ಪುಟ್ಟ ಊರೇ ನಗು ಮೊಗವ ,ವಿಶಾಲ ಹೃದಯಿಗಳ ಊರು ” ಎಲ್ಲೂರು “

ಕಾಶಿನಾಥ, ಜಗದೊಡೆಯನ ದಿವ್ಯ ಸನ್ನಿಧಿ ಇರುವ ಎಲ್ಲೂರನ್ನು ”ವಿಶ್ವೇಶ್ವರ ಕ್ಷೇತ್ರ ” ಅಂದರೂ ತಪ್ಪೆನಿಲ್ಲಾ .ಈ ಜಗದದೊಡೆಯನು ಎಲ್ಲೂರರಿಗೆ “ಉಂಡಾಯಿ ಉಲ್ಲಾಯೇ ” ಅಂದರೆ “ಸ್ವಯಂ ಉದ್ಭವಿಸಿದ ಒಡೆಯ ” ,ಪ್ರತೀ ಸೋಮವಾರ ಹಾಗೂ ವಿಶೇಷ ದಿನಗಳಲ್ಲಿ ಊರ ಪರವೂರ ಭಕ್ತರಿಂದ ತುಂಬಿ ತುಳುಕುವ ಈ ಪುಣ್ಯ ಸ್ಥಳವು ನಿರ್ಮಾಣಗೊಂಡಿದ್ದು ಸಾವಿರಾರು ವರ್ಷಗಳ ಹಿಂದೆ .

ಪ್ರಾಂತ್ಯರಸುಗಳಾದ ಕುತ್ಯಾರುಅರಸುಗಳಿಂದ ಪೂಜಿಸಲ್ಪಡುತ್ತಿದ್ದ ಒಟ್ಟು ಒಂಬತ್ತು ಮಾಗಣೆಗಳ (ಕುತ್ಯಾರು ,ನಂದಿಕೂರು , ಅಡ್ವೆ,ಉಳ್ಳೂರು ,ಕೊಳಚೂರು ,ಕುಂಜೂರು,ಕಳತ್ತೂರು , ಪಾದೂರು ,ಬೆಳಪು ,) ಎಲ್ಲೂರೊಡೆಯ ಮೂಲತಃ ಒಲಿದದ್ದು ಪರಿಶಿಷ್ಟ ಗುಂಪಿಗೆ ಸೇರಿದ ಮಹಿಳೆಗೆ ,(ಇತಿಹಾಸ ಕುರಿತ ಪುಸ್ತಕ ದೇವಳದಲ್ಲಿ ಲಭ್ಯ )

ಕಳೆದೆರೆಡು ವರುಷದ ಹಿಂದೆ ಸಕಲ ಭಗವದ್ಭಕ್ತರಿಂದ ಜಿರ್ಣೋದ್ದಾರವಾದ ದೇವಳದ ಒಟ್ಟು ರಚನೆಯು ಭಾರತದಾದ್ಯಂತ ಇತಿಹಾಸ ಪ್ರಸಿದ್ದ ಪಡೆದ ಪುರಾತನ ದೇವಳಗಳನ್ನು ಹೋಲುವ ರೀತಿಯಂತದ್ದು,ಮನಮೋಹಕಸೌಂದರ್ಯವನ್ನು ಒಳಗೊಂಡ ಬೇಲೂರ ಹಳೆಬೀಡುವಿನ ತದ್ರೂಪಿಯಂತೆ ಕಾಣಬರುವ ಗುಡಿ ಗೋಪುರಗಳು , ದೇವಳದ ಗರ್ಭಗುಡಿಯ ಸುತ್ತ ಕ್ಷೇತ್ರದ ನೋಟವ ಬೆರಗಾಗಿಸುವಂತಹ ಶಿಲೆ ಹಾಗೂ ಮರದ ಮೇಲೆ ಅದ್ಭುತವಾಗಿ ಕೆತ್ತಿದ ಕ್ಷೇತ್ರದ ಇತಿಹಾಸ ಸಾರುವ ಅಳಿಯದ ಚಿತ್ತಾರಗಳು ,ಪ್ರಾಂಗಣವನ್ನೊಮ್ಮೆ ಸುತ್ತಿ ಬಂದರೆ ಭಕ್ತರಲ್ಲಿ ಅಮೋಘವಾದ ಚೈತನ್ಯವನ್ನು ,ಲವಲವಿಕೆಯನ್ನು ,ಭಕ್ತಿಯನ್ನು ಇಮ್ಮಡಿಗೊಳಿಸುವಂತಹ ಕ್ಷೇತ್ರವಿದು . .ಇದಿಷ್ಟೂ ನನ್ನ ಮನದಲ್ಲಿದ್ದ ದೇವಳದ ಸೌಂದರ್ಯದ ಮೇಲ್ನೋಟಗಳು . ಸಾಧ್ಯವಿದ್ದರೆ ಪ್ರತಿಯೊಬ್ಬನು ಪುಣ್ಯಕ್ಷೇತ್ರವನ್ನು ಈ ದೇವಳನ್ನು ಕಣ್ಣಾರೆ ಕಂಡು ಆನಂದಿಸಿ .ಎಲ್ಲೂರು ಒಡೆಯನ ಉದ್ಭವ ಲಿಂಗವನು ಕಣ್ಣಲಿ ಕಣ್ಣಿಟ್ಟುನೋಡುವ ಪುಣ್ಯವನು ನಿಮ್ಮದಾಗಿಸಿಕೊಳ್ಳಿ

ಈ ಒಡೆಯನ ಪುಣ್ಯ ಸ್ಥಳದಲ್ಲಿ ಅಂಗಡಿಯಿಂದ ಮಾರಲ್ಪಡುವ ಸೀಯಾಳವನ್ನು ಯಾವೂದೇ ವ್ಯಕ್ತಿ ಕುಡಿಯುವಂತಿಲ್ಲ ,ಏನಿದ್ದರೂ ಶಿವನ ಅಭಿಷೇಕಕ್ಕಾಗಿಯೇ ಮೀಸಲು ,ಇದೇ ಇಲ್ಲಿಯ ಜನರಿಂದ ಭಕ್ತಿಯನ್ನೂಳಗೊಂಡ ಆಚಾರ ಹಾಗೂ ಎಲ್ಲರೂ ಜೋಪಾನದಿಂದ ಕಾಪಾಡಿಕೊಂಡು ಬಂದಂತಹ ವಿಶೇಷತೆ

ಮಹತೋಭಾರ ಶ್ರೀ ವಿಶ್ವೇಶ್ವರ ದೇವಸ್ತಾನ
ಎಲ್ಲೂರು ಅಂಚೆ ,ಎಲ್ಲೂರು ಗ್ರಾಮ
ಉಡುಪಿ ತಾಲೂಕು ಮತ್ತು ಜಿಲ್ಲೆ
ದೂರವಾಣಿ :.0820 2550365