ವಿಷಯಕ್ಕೆ ಹೋಗು

ಪಾರ್ಸಿ ಕಾಲೋನಿ, ದಾದರ್, ಮುಂಬೈ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:P2130044.JPG
'ಪಾರ್ಸಿ ಕಾಲೋನಿ ಮುಖದ್ವಾರ, ದಾದರ್'

ದಾದರ್ ಪಾರ್ಸಿ ಕಾಲೋನಿ[] ಮುಂಬಯಿನಗರದಲ್ಲಿ ವಾಸಿಸುತ್ತಿರುವ ಪಾರ್ಸಿಕರ ವಸತಿಯ ಕಾಲೋನಿಗಳಲ್ಲಿ 'ದಾದರ್' ನಲ್ಲಿರುವ ಪಾರ್ಸಿ ಕಾಲೋನಿ ವಿಶ್ವದಲ್ಲೇ ಅತಿ ದೊಡ್ಡದು. ಪಾರ್ಸಿಕರಿಗಾಗಿಯೇ ವಾಸ್ತ್ಯವ್ಯಕ್ಕೆ ಮೊದಲು ಯೋಜನೆಯನ್ನು ರೂಪಿಸಿದ್ದಾಗ್ಯೂ ಪಾರ್ಸಿಗಳಲ್ಲದ ಇತರ ಸಮುದಾಯದವರೂ ಇಲ್ಲಿ ನೆಲೆಸಲು ಅರ್ಜಿ ಸಲ್ಲಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಸಲ್ಲಿಸಿದರು. ಹಾಗಾಗಿ ಪಾರ್ಸಿ ಸಮುದಾಯದವರು ತಮ್ಮ ಹಕ್ಕಿಗಾಗಿ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ನಡೆಸಬೇಕಾಯಿತು. ಮುಂಬಯಿನಗರದ ಸುಮಾರು ೪೫ ಸಾವಿರ ಪಾರ್ಸಿಮತಸ್ಥರಲ್ಲಿ ೧೫ ಸಾವಿರ ಜನ ಇಲ್ಲೇವಾಸಿಸುತ್ತಾರೆ. ಇದಲ್ಲದೆ, ಮುಂಬಯಿನ ಇತರ ಉಪನಗರಗಳಾದ, 'ಕೊಲಾಬಾದ ಖುಸ್ರೂಬಾಗ್' ನಲ್ಲಿ, 'ಹ್ಯೂಸ್ ರಸ್ತೆಯ ವಾಡಿಯಾ ಕಟ್ಟಡ'ಗಳಲ್ಲಿ, 'ನೇಪಿಯನ್ ರಸ್ತೆಯ ಗೋದ್ರೆಜ್ ಬಾಗ್', ಮತ್ತು ಬೈಕುಲ್ಲಾ, ಬಾಂದ್ರ, ಅಂಧೇರಿ, ಜೋಗೇಶ್ವರಿ ಮತ್ತು ಇತರ ಜಾಗಗಳಲ್ಲಿ ಪಾರ್ಸಿಕರು ನೆಲೆಸಿದ್ದಾರೆ. 'ಮಂಚೆರ್ಜಿ ಜೋಶಿ ಪಾರ್ಸಿ ಕಾಲೊನಿ' ಎಂದು ಪ್ರಸಿದ್ದವಾಗಿರುವ ಪಾರ್ಸಿಕಾಲೋನಿ ದಾದರ್-ಮಾಟುಂಗಾ ಜಿಲ್ಲೆಯಲ್ಲಿದೆ. ಸಾಮಾನ್ಯವಾಗಿ 'ಬಾಗ್' ಎಂದು ಕರೆಯಲಾಗುವ ಇತರ ಕಾಲೋನಿಗಳಿಗೆ ಬಲವಾದ ಕಾಂಪೌಂಡ್, ವೈರ್ ಫೆನ್ಸ್ ಇದೆ. ಅವುಗಳು ಪಕ್ಕದ ಪರಿಸರದಿಂದ ಸುರಕ್ಷಿತವಾಗಿ ಪ್ರತ್ಯೇಕವಾಗಿವೆ. ಮಾಟುಂಗಾ ಪಾರ್ಸಿಕಾಲೋನಿಯಲ್ಲಿ, ದಾದರ್ ಪಾರ್ಸಿ ಯೂತ್ ಅಸೆಂಬ್ಲಿ ಹೈಸ್ಕೂಲ್ ಇಲ್ಲಿದೆ. ಮಾಟುಂಗಾ, ದಾದರ್ ಅಕ್ಕ-ಪಕ್ಕಗಳಲ್ಲಿವೆ.

ಚಿತ್ರ:P29.JPG
'ಪಾರ್ಸಿಕಾಲೋನಿಯ ಮನೆಗಳು'
'ಪಾಂಚ್ ಗಾರ್ಡನ್'

ಉಪನಗರಗಳ ಕಲ್ಪನೆ

[ಬದಲಾಯಿಸಿ]
ಚಿತ್ರ:P1010020.JPG
'ಪಾರ್ಸಿ ಕಾಲೋನಿಯ ಪಾಂಚ್ ಗಾರ್ಡನ್'

'ಬ್ರಿಟಿಷ್ ಸರಕಾರ' ೧೮೯೯-೧೯೦೦ ರಲ್ಲಿ 'ದಾದರ್-ಮಾಟುಂಗಾ-ವಡಾಲ-ಸಾಯನ್ ಹೌಸಿಂಗ್ ಸ್ಕೀಮ್' ನ ಅಡಿಯಲ್ಲಿ ನಿರ್ಮಿಸಲ್ಪಟ್ಟಿತು. ಇದು ಆಗಿನ ಮುಂಬಯಿನಗರದ ಬಡಾವಣೆಗಳ ಯೋಜನೆಯ ಪ್ರಥಮ ಅಂಗವಾಗಿತ್ತು.೧೮೯೦ ರಲ್ಲಿ 'ಪ್ಲೇಗ್' ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ಸಿಟಿ ಇಂಪ್ರೂವ್ಮೆಂಟ್ ಟ್ರಸ್ಟ್ ನಗರದ ಜನಸಂದಣಿಯನ್ನು ಹದ್ದಿನಲ್ಲಿಟ್ಟು ನಗರವನ್ನು ಬೆಳೆಸಲು, ಒಂದು ಯೋಜನೆಯನ್ನು ರೂಪಿಸಿದರು. ಸರ್ವೇಕ್ಷಣೆಯಂತೆ ಸುಮಾರು ೬೦ ಸಾವಿರ ಸಾರ್ವಜನಿಕರ ವಸತಿಗೃಹಗಳನ್ನು ದಾದರ್-ಮಾಟುಂಗಾದಲ್ಲಿ ಮತ್ತು ಅಷ್ಟೇ ಪ್ರಮಾಣದ ಸಾಯನ್-ಮಾಟುಂಗಾ ಜಿಲ್ಲೆಯಲ್ಲಿ ಸಿವ್ರೀ-ವಡಾಲದಲ್ಲಿ ೮೫ ಸಾವಿರ ಜನ. ವಾಸವಾಗಿದ್ದಾರೆ. ಸಮರ್ಪಕವಾದ ನೈರ್ಮಲ್ಯ ವ್ಯವಸ್ಥೆ ಕಟ್ಟಲು ಯೋಜನೆ ರೂಪಿಸಲಾಯಿತು. ೩ ಅಂತಸ್ತಿಗಿಂತಾ ಎತ್ತರ ಇರದಂತೆ, ಎರಡು ಮಧ್ಯೆ ಸಾಕಷ್ಟು ಅಂತರವಿರುವಂತೆ, ವಾಣಿಜ್ಯ ವಾಸಗೃಹಗಳು, ಶಿಕ್ಷಣ ಸಂಸ್ಥೆ, ಪಾರ್ಕ್ ಗಳು, ಉದ್ಯಾನಗಳು ಮತ್ತು ಪಾದಚಾರಿಗಳು ನಡೆಯಲು ಜಾಗಬಿಟ್ಟು ರಸ್ತೆಯನಿರ್ಮಾಣಕಾರ್ಯವನ್ನು ನಿರ್ಮಿಸಲು ಕಾನೂನನ್ನು ರೂಪಿಸಲಾಯಿತು. ೪೪೦ ಎಕರೆ (೧.೮ ಚ.ಮೀ.) ಜಮೀನನ್ನು ಖರೀದಿಸಿ ಸರಕಾರಕ್ಕೆ ಲೀಸ್ ಮಾಡಲಾಯಿತು. ಮುಂಬಯಿ ಸರಕಾರ ಆ ನಿವೇಶನಗಳನ್ನು ಮಾರಲು ವ್ಯವಸ್ಥೆಯಾಯಿತು. ಮುಂಬಯಿನಲ್ಲಿ ಪ್ರಪ್ರಥಮವಾಗಿ ಸಹಕಾರಿ ವಸತಿ ಗೃಹಗಳ ಸೊಸೈಟಿಗಳನ್ನು ಶುರುಮಾಡಲಾಯಿತು. ಮುಂಬಯಿನಲ್ಲಿ ಪಾರ್ಸಿಗಳಿಗೆ, ಹಿಂದೂಗಳಿಗೆ, ಮತ್ತು ತಮಿಳು ಭಾಷಿಕರಿಗೆ ಅನುಕೂಲವಾಗುವಂತೆ ಕಾಲೋನಿಗಳನ್ನು ಸಂರಚಿಸಲಾಯಿತು.

ಶಿಕ್ಷಣ ಸಂಸ್ಥೆಗಳು, ಸೇತುವೆಗಳ ನಿರ್ಮಾಣ

[ಬದಲಾಯಿಸಿ]
ಚಿತ್ರ:P1110004.JPG
'ಅಘಿಯಾರ್, ಪಾರ್ಸಿ ಕಾಲೋನಿ'

ಆಗಿನ 'ಮುಂಬಯಿನಲ್ಲಿ ಕ್ರಾಫರ್ಡ್ ಮಾರುಕಟ್ಟೆ' ಯಿಂದ ಆಗತಾನೇ ಹೊಸದಾಗಿ ನಿರ್ಮಿಸಿದ 'ಮೊಹಮ್ಮದಾಲಿ ರಸ್ತೆ'ಯ ಮೂಲಕ, ದಾದರ್ ಗೆ ೬ ಮೈಲಿ, (೧೦ ಕಿ.ಮೀ) ಟ್ರಾಮ್ ಮಾರ್ಗ ಹೊಸ ಉಪನಗರಕ್ಕೆ ಜೋಡಿಸಲಾಗಿದೆ. ೧೯೨೫ ರ ಫೆಬ್ರವರಿಯಲ್ಲಿ, ಜಿ.ಐ.ಪಿ.ಸಂಸ್ಥೆ ಒಂದು ಸೇತುವೆಯನ್ನು ನಿರ್ಮಿಸಿ, (ತಿಲಕ್ ಸೇತುವೆ) ಎರಡೂ ಉಪನಗರಗಳ ರೈಲ್ವೇಗಳನ್ನು ಸೇರಿಸುವ, ಕೆಲಸವನ್ನು ಚೆನ್ನಾಗಿ ರೂಪಿಸಿದರು. ಹೊಸ ಉಪನಗರದ ರೈಲು ಮಾರ್ಗಕ್ಕೆ, ಜಿ.ಐ.ಪಿ ವಿದ್ಯುತ್ ವೈರ್ ಗಳನ್ನು ಜೋಡಿಸುವ ಕೆಲಸವನ್ನು ಪ್ರಾರಂಭಿಸಿರು. ಬಿಸಿಐಪಿ ಪ್ರಕಾರ, ವಿದ್ಯಾಪ್ರಸಾರ ಶಿಕ್ಷಣ ಸಂಸ್ಥೆಗಳಾದ ವಿ.ಜೆ.ಟಿ.ಐ ಮತ್ತು ಸಿಡೆನ್ಹಮ್ ಕಾಲೇಜ್ ಆಫ್ ಕಾಮರ್ಸ್ ಕಾಲೇಜ್ ಗಳು, ಮತ್ತು ವಾಡಿಯ ವಾಚಾ ಹೈಸ್ಕೂಲ್ (ಈಗ ಅದನ್ನು ಜೆ.ಬಿ.ವಾಚಾ ಹೈಸ್ಕೂಲ್ ಫಾರ್ ಪಾರ್ಸಿ ಗರ್ಲ್ಸ್), ಎಂದು ಕರೆಯುವ ಸಂಸ್ಥೆಗಳು, ಆರಂಭವಾದವು.

ಪಾಲಂಕೋಟ್ ಹಾಲ್

[ಬದಲಾಯಿಸಿ]

ಪಾರ್ಸಿ ಸಮುದಾಯಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಚರಿಸಲು, ಮತ್ತು ಮದುವೆ, ಮುಂಜಿ, ಮುಂತಾದ ಮನೆಯ ಆಚರಣೆಗಳಿಗಾಗಿ ಈ ಸಭಾಂಗಣವನ್ನು ನಿರ್ಮಿಸಲಾಯಿತು. ಬೇರೆ ಆಟ, ಸ್ಪರ್ಧೆಗಳಲ್ಲಿ ವಿಜೇತರಿಗೆ, ಸಮುದಾಯದ ಶ್ರೇಷ್ಟವ್ಯಕ್ತಿಗಳನ್ನು ಗೌರವಿಸಲೂ, ಮತ್ತು ಶೋಕ ಸಮಾರಂಭಗಳನ್ನು ಆಯೋಜಿಸಲೂ, ಇದನ್ನು ಬಳಸಲಾಗುತ್ತದೆ.

ಅತ್ಯುತ್ತಮ ಲೈಬ್ರರಿ

[ಬದಲಾಯಿಸಿ]

ಪಾರ್ಸಿ ವಸಾಹತಿನ ಮೊದಲ ವಾಸಿಗಳ ಜೀವನಚರಿತ್ರೆ, ಸೂರತ್, ನವಸಾರಿ ಮೊದಲಾದ ಸ್ಥಳಗಳಿಂದ ಪಾರ್ಸಿಕರು ಹೇಗೆ ಮುಂಬಯಿನಗರಕ್ಕೆ ಬಂದು ವಾಸ್ತವ್ಯಹೂಡಿದರು, ಎನ್ನುವ ಬಗ್ಗೆ ವಿಶೇಷ ಮಾಹಿತಿಗಳನ್ನು ಹೊಂದಿದ ಪುಸ್ತಕಗಳು ಇಲ್ಲಿ ಲಭ್ಯವಿವೆ.

ಕಾಲೋನಿ ಪಾರ್ಸಿ ಆಸ್ಪತ್ರೆ

[ಬದಲಾಯಿಸಿ]

ಈ ಆಸ್ಪತ್ರೆ ಪಾರ್ಸಿ ಕಾಲೋನಿಯ ನಿವಾಸಿಗಳಿಗೆ ಸೀಮಿತವಾದ ರುಗ್ಣಾಲಯಗಳು. ಪಾರ್ಸಿಗಳು, ಮುಂಬಯಿನ ನಾಗರಿಕರಿಗೆ ವೈದ್ಯಕೀಯ ಸಹಾಯಕ್ಕಾಗಿ ನಿರ್ಮಿಸಿ, ದಾನವಾಗಿ ನೀಡಿದ ಹಣಸಹಾಯ ಅಪಾರ. ಸರ್.ಜೆ.ಜೆ.ಆಸ್ಪತ್ರೆ, ವಾಡಿಯಾ ಆಸ್ಪತ್ರೆ, ಟಾಟ ಕ್ಯಾನ್ಸರ್ ಆಸ್ಪತ್ರೆ, ಮೊದಲಾದ ಆಸ್ಪತ್ರೆಗಳು ದೇಶದಲ್ಲೇ ಅತ್ಯುತ್ತಮ ಸೌಲಭ್ಯಗಳನ್ನು ಹೊಂದಿದ ಸಾರ್ವಜನಿಕ ವಲಯದ ಆಸ್ಪತ್ರೆಗಳು.

ಉಲ್ಲೇಖಗಳು

[ಬದಲಾಯಿಸಿ]
  1. "Suitcase of Stories, DADAR PARSI COLONY – A PHOTO ESSAY, May 10, 2014". Archived from the original on ಜನವರಿ 4, 2015. Retrieved ಡಿಸೆಂಬರ್ 26, 2014.