ವಿಷ್ಣು ಭಟ್ಟ
You must add a |reason=
parameter to this Cleanup template - replace it with {{Cleanup|reason=<Fill reason here>}}
, or remove the Cleanup template.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಹೆಸರು : ವಿಷ್ಣು ಎಲ್ ಭಟ್,ಇಡಗುಂಜಿ,ಹೊನ್ನಾವರ,ತಾಲೂಕು,ಉತ್ತರ ಕನ್ನಡ ಜಿಲ್ಲೆ.
ವಯಸ್ಸು : ೫೪ ವರ್ಷ (೧೧-೦೬-೧೯೫೮)
ತಂದೆ : ಲಕ್ಷ್ಮೀನಾರಾಯಣ ವಿಷ್ಣು ಭಟ್,ಇಡಗುಂಜಿ ಮಹಾಗಣಪತಿ ದೇವರ ಪ್ರಧಾನ ಪರಂಪರಾಗತ ಅರ್ಚಕರು.
ವಿದ್ಯಾಭ್ಯಾಸ ಹಾಗೂ ಅಧ್ಯಯನ
[ಬದಲಾಯಿಸಿ]ತೈತ್ತರೀಯ ಕೃಷ್ಣಯಜುರ್ವೇದ ಕ್ರಮಾಂತ ಅಧ್ಯಯನ ಶ್ರೀ ಮೇಧಾ ದಕ್ಷಿಣಾಮೂರ್ತಿ ಚತುರ್ವೇದ ವೇದಭವನ ಮಹಾವಿದ್ಯಾಲಯ, ಗೋಕರ್ಣದಲ್ಲಿ-೮ವರ್ಷ, ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಆಗಮ ಅಭ್ಯಾಸ ೩ವರ್ಷ, ರಾಷ್ಟ್ರೀಯ ಸಂಸ್ಕೃತ ಸಂಸ್ಥಾನಂ, ಕೇಂದ್ರೀಯ ವಿದ್ಯಾಪೀಠ ತಿರುಪತಿ ಶಿಕ್ಲ್ಷಾಶಾಸ್ತ್ರಿ -೧ವರ್ಷ. ದೆಹಲಿ ಮಹರ್ಷಿ ವೇದ ವಿಜ್ಞಾನ ಮಹಾವಿದ್ಯಾಲಯದಲ್ಲಿ ಧ್ಯಾನ ಅಧ್ಯಯನ ಹಾಗೂ ವಿದ್ಯಾ ಪೀಠದಲ್ಲಿ ವೈದಿಕ ಪಂಡಿತ ಅಧ್ಯಾಪನ-೪ವರ್ಷ .
ಅರ್ಹತೆ
[ಬದಲಾಯಿಸಿ]ವೇದ,ಶಾಸ್ತ್ರ ಪುರಾಣ,ಆಗಮ ಜ್ಯೋತಿಷ್ಯ ಔಪಚಾರಿಕ, ಅನೌಪಚಾರಿಕ ಶಿಕ್ಷಣ ಹಾಗೂ ಅದರ ಆಚರಣೆ ಬಗ್ಗೆ ವಿವರ ಅಲಂಕಾರ,ವ್ಯಾಕರಣ,ಜ್ಯೋತಿಷ್ಯ,ಧರ್ಮಶಾಸ್ತ್ರ,ವೇದಾಂತ ಮುಂತಾದ ಷಡಂಗಗಳ ಅಧ್ಯಯನ.
ಕಾರ್ಯಕ್ರಮಗಳು
[ಬದಲಾಯಿಸಿ]ಇದುವರೆ ನೆಡೆಸಿದ ಸಾಮಾಜಿಕ,ಸಾಂಸ್ಕೃತಿಕ,ಧಾರ್ಮಿಕ ಪ್ರಮುಖ ಕಾರ್ಯಕ್ರಮಗಳು: ಭಗವದ್ಗೀತಾ ಅಭಿಯನ ಸ್ವರ್ಣವಲ್ಲಿ ಸರ್ವಜ್ಞೇಂದ್ರ ಸರಸ್ವತಿ ಸಂಸ್ಥಾನದವರ ಪ್ರಾಯೊಜಕತ್ವದಲ್ಲಿ ಹಾಗೂ ಮಂಗಲಕಾರ್ಯಗಳಾದ ವಿವಾಹ,ಉಪನಯನ,ಸಂಧಿಶಾಂತಿ, ಇತ್ಯಾದಿ ವೈದಿಕ ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆಡೆಸಿ ತನ್ಮೂಲಕ ಸಾವಿರಾರು ಜನರ ಮನದಲ್ಲಿ ನೆಲೆಸಿದ್ದಾರೆ ಹಾಗೂ ಸಾವಿರಾರು ಜನೋಪಯೊಗಿ ಕಾರ್ಯಕ್ರಮಗಳನ್ನು ಮಾಡಿರುವುದು ಶ್ಲಾಘನೀಯ.
ಸಂದ ಪ್ರಶಸ್ತಿ,ಪುರಸ್ಕಾರಗಳು,
- ಶ್ರೀ ಗುರು ಗಂಗೇಶ್ವರಾನಂದ ವೇದ ವೇದಾಂಗ ರಾಷ್ತ್ರೀಯ ಪುರಸ್ಕಾರ ೨೦೦೬ ನಾಸಿಕದ ಪರಶುರಾಮ ನಾಟ್ಯ ಮಂದಿರದಲ್ಲಿ.
- ಮಂತ್ರಾಲಯದ ಶ್ರೀ ರಾಘವೇಂದ್ರ ಗುರುಭಕ್ತಿ ಉತ್ಸವದಲ್ಲಿ ಶ್ರೀ ಸುಯತೀಂದ್ರ ತೀರ್ಥ ಶ್ರೀಪಾದಂಗಳಿಂದ "ಅರ್ಚಕ ಅಭಿನಂದನಾ ಪ್ರಶಸ್ತಿ"೨೦೧೨.
- ಅಖಿಲ ಕರ್ನಾಟಕ ರಾಜ್ಯ ಮಟ್ಟದ ಸ್ಪರ್ಧೆ, ಧರ್ಮಶಾಸ್ತ್ರ ವಿಭಾಗದಲ್ಲಿ ಪ್ರಶಸ್ತಿ ೧೯೮೩.
- ಶ್ರೀ ರಾಮಚಂದ್ರ ಪುರಮಠ,ಸೀಮಾ ಪರಿಶತ್ ವತಿಯಿಂದ ಸನ್ಮಾನ ೨೦೦೮.
- ಮಲೆನಾಡು ಉತ್ಸವ ಕವಿಗೋಷ್ಠಿಯಲ್ಲಿ ಸನ್ಮಾನ ಗೇರುಸೊಪ್ಪ ಹೊನ್ನಾವರ ೨೦೦೮.
- ಹೆಬ್ಬೂರು ಮಠದ ಪುರಸ್ಕಾರ ತಲಗೋಡು ಹೊನ್ನಾವರ ೨೦೦೮.
- ಕರ್ನಾಟಕ ನಾಟಕ ಅಕಾಡಮಿ ಅಧ್ಯಕ್ಷರಿಂದ ಸನ್ಮಾನ ಇಡಗುಂಜಿ ಹೊನ್ನಾವರ ೨೦೦೭.
- ಶ್ರೀ ಅಖಿಲ ಹವ್ಯಕ ಮಹಾಸಭಾ(ರಿ) ಬೆಂಗಳೂರಿನಲ್ಲಿ ಪ್ರತಿಭಾ ಪುರಸ್ಕಾರ ಮತ್ತು ವಿದ್ವತ್ ಸನ್ಮಾನ ೨೦೦೭-೦೮.
ಇನ್ನುಹಲವಾರು ಪ್ರಶಸ್ತಿ ಪುರಸ್ಕಾ ರಗಳು ಲಭಿಸಿವೆ.