ವಿಷಯಕ್ಕೆ ಹೋಗು

ಶಾರ್ದೂಲವಿಕ್ರೀಡಿತ ವೃತ್ತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಾರ್ದೂಲವಿಕ್ರೀಡಿತ ವೃತ್ತದಲ್ಲಿ ಪ್ರತಿಸಾಲಿನಲ್ಲೂ ೧೯ ಅಕ್ಷರಗಳಿರುತ್ತವೆ. ವಿನ್ಯಾಸದಲ್ಲಿ "ಮಸಜಸತತಗು" ಗಣಗಳಿರುತ್ತವೆ. (ಗು-ಗುರು)
ಇದರ ಸೂತ್ರ ಪದ್ಯ ಹೀಗಿದೆ.
"ಕಣ್ಗೊಪ್ಪಲ್ ಮಸಜಂಸತಂತಗಮುಮಾ ಶಾರ್ದೂಲ ವಿಕ್ರೀಡಿತಂ"
ಇದರ ಪ್ರಸ್ತಾರ ವಿನ್ಯಾಸ ಹೀಗಿದೆ
_ _ _ | U U _ |U _ U| U U _ |_ _ U| _ _ U| _
ಕಣ್ಗೊಪ್ಪಲ್| ಮಸಜಂ| ಸತಂತ |ಗಮುಮಾ| ಶಾರ್ದೂಲ| ವಿಕ್ರೀಡಿ|ತಂ
ಸಂಸ್ಕೃತ ವಾಙ್ಮಯದಲ್ಲಿ ಇದು ಬಹುಸುಪ್ರಸಿದ್ಧವಾದ ಛಂದಸ್ಸು. ಕನ್ನಡದಲ್ಲೂ ಶಾರ್ದೂಲ ವಿಕ್ರೀಡಿತದ ಪದ್ಯಗಳು ವಿಫುಲವಾಗಿ ಸಿಗುತ್ತವೆ.
ಉದಾಹರಣೆ:-
ಮಾಯಾಕಾರ ಜಲೇಶ ಪೋಲಿಕೆಯುಮುಂಟೇಂ ನಿನ್ನ ವಿಸ್ತೀರ್ಣಕಂ
ಕಾಯೈ ಸದ್ಗುಣವಾರ್ಧಿ! ಲೋಪರಹಿತ! ಪ್ರಾಪಂಚಿಕಾಂಬೋಧಿಯಂ|
ಪಾಯಲ್ ದಾರಿಯ ಸೈನ್ಯವಿಷ್ಟು ಪಿಡಿಯಲ್ ನೀನಿತ್ತು ಮೇಣೆನ್ನುತುಂ
ಜಾಯಾಪ್ರಾಪ್ತಿಗೆ ಸಾರ್ದರಾಮನುಲಿದಂ ಭೂಲೋಕಮಾನ್ಯಂಗೆ ತಾಂ||