ಶ್ರೀ.ಎನ್.ವರದರಾಜನ್
ಸುಮಾರು ೪ ದಶಕಗಳಿಗಿಂತ ಹೆಚ್ಚಿಗೆ ಸಮಯವನ್ನು 'ರಾಮಕೃಷ್ಣ ಸ್ಟೂಡೆಂಟ್ಸ್ ಹೋಂ' ನ ಒಳಿತಿಗಾಗಿ ಶ್ರಮವಹಿಸಿ ದುಡಿದ ವ್ಯಕ್ತಿಗಳಲ್ಲಿ 'ಶ್ರೀ.ವರದರಾಜನ್' ಒಬ್ಬರು.
ವೃತ್ತಿಜೀವನ
[ಬದಲಾಯಿಸಿ]'ಸಿವಿಲ್ ಇಂಜಿನಿಯರ್' ಆಗಿದ್ದ,ವರದರಾಜನ್, ಮುಂಬಯಿನ 'ರಿಚರ್ಡ್ಸನ್ ಕೃಡಾಸ್' ಎಂಬ ಸಂಸ್ಥೆಯಲ್ಲಿ ಪಾದಾರ್ಪಣೆಮಾಡಿದರು. 'ವಾಸದ ಮನೆ'ಗಳನ್ನು ಕಟ್ಟುವಲ್ಲಿ ಅವರು ಹೆಚ್ಚು ಅನುಭವಿಗಳಾಗಿದ್ದರು. ೧೯೫೦ ರಲ್ಲಿ ಮಂಡಿಸಿದ ತಮ್ಮ ಪ್ರಬಂಧದಲ್ಲಿ 'ಲೋ ಕಾಸ್ಟ್ ಹೌಸಿಂಗ್' ಎಂಬ ಲೇಖನ ಪ್ರಮುಖವಾದದ್ದು. ಬೆಂಗಳೂರಿನ 'ಕಬ್ಬನ್ ಪಾರ್ಕ್' ನಲ್ಲಿ 'ವಿಕ್ಟೊರಿ ಹಾಲ್' ಎಂದು ಪ್ರಸಿದ್ಧವಾದ, 'ಬಾಲಭವನ'ವನ್ನು ಅವರು ನಿರ್ಮಿಸಿದರು. ೧೯೪೫ ರಲ್ಲಿ 'ಸರ್ ಸಿ.ವಿ.ರಾಮನ್ ಇನ್ಸ್ಟಿಟ್ಯೂಟ್' ಎಂಬ ಚಾರಿತ್ರ್ಯಿಕ ಕಟ್ಟಡವನ್ನು 'ವರದರಾಜನ್' ನಿರ್ಮಿಸಿಕೊಟ್ಟರು.
ಸಾಮಾಜಿಕ ಕಾರ್ಯಗಳಲ್ಲಿ ಸದಾ ಆಸಕ್ತರು
[ಬದಲಾಯಿಸಿ]೧೯೬೩ ರಲ್ಲಿ 'ವಿ.ಜಿ'.ಯವರ ದೇಹಾಂತ್ಯದ ಬಳಿಕ ಅವರ ಆಪ್ತ ಶಿಷ್ಯರಾಗಿದ್ದ 'ವರದರಾಜನ್' 'ಹೋಂ' ನ ಎಲ್ಲ ಕೆಲಸಕಾರ್ಯಗಳನ್ನೂ ನಿಷ್ಠೆಯಿಂದ ಮುಂದುವರೆಸಿಕೊಂಡು ಬಂದರು. ತಮ್ಮ ವೃತ್ತಿಜೀವನದ ಕೆಲಸಗಳನ್ನು ಮುಗಿಸಿದ ಬಳಿಕ ಸಾಯಂಕಾಲ ೬ ಗಂಟೆಯಿಂದ ರಾತ್ರಿ ೧೦ ಗಂಟೆಯವರೆಗೆ 'ಹೋಂ'ನ ಕೆಲಸಕಾರ್ಯಗಳಲ್ಲಿ ವ್ಯಸ್ತರಾಗಿರುತ್ತಿದ್ದರು. 'ರಾಮಕೃಷ್ಣ ಸ್ಟೂಡೆಂಟ್ಸ್ ಹೋಂ ನ ಬಂಗಾರದ ಹಬ್ಬ'ದ ಸಮಯದಲ್ಲಿ 'ವಿ.ಜಿ.ಸ್ಮರಣ ಮಂದಿರ'ದ ಕೆಲಸದಲ್ಲಿ ಅತ್ಯಂತ ಶ್ರದ್ಧಾಸಕ್ತಿಗಳಿಂದ ನೆರವೇರಿಸಿಕೊಟ್ಟರು.
- ೧೯೫೫-೬೧-ಸದಸ್ಯರಾಗಿ,
- ೧೯೬೧-೬೨-ಖಜಾಂಚಿಯಾಗಿ,
- ೧೯೬೩-೮೨-ಸಹಾಯಕ ಕಾರ್ಯದರ್ಶಿಯಾಗಿ,
- ೧೯೮೩-೮೬- ಅಧ್ಯಕ್ಷನಾಗಿ,
- ಕನ್ನಡ ಭಾಷೆಯಲ್ಲಿ ಅಷ್ಟೇನೂ ಪ್ರಾವೀಣ್ಯತೆ ಇಲ್ಲದಿದ್ದಾಗ್ಯೂ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೋಶಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
'ಪ್ರಕಾಶ್ ನಗರ'ದಲ್ಲಿ 'ದೇವಸ್ಥಾನದ ನಿರ್ಮಾಣ ಕಾರ್ಯ'
[ಬದಲಾಯಿಸಿ]ಅಹೋಬಲಮಠದ '೪೪ ನೇ ಯತಿವರ್ಯ'ರ ಪರಮ ಶಿಷ್ಯರಾಗಿದ್ದು,ಬೆಂಗಳೂರಿನ 'ಪ್ರಕಾಶ್ ನಗರ'ದಲ್ಲಿ ದೇವಸ್ಥಾನ ಕಟ್ಟಿಸುವಲ್ಲಿ ತಮ್ಮ ಅಮೋಘ ಶ್ರಮದಾನಮಾಡಿದರು. ತಮ್ಮ ೭೦ ನೆಯ ವಯಸ್ಸಿನಲ್ಲೂ 'ನಗರದ ಬಸ್' ನಲ್ಲಿ ಪ್ರಯಾಣಮಾಡುತ್ತಾ ದೇವಸ್ಥಾನಕ್ಕೆ ಬೇಕಾಗಿದ್ದ ಭೂಮಿಯ ಲೆಕ್ಕಪತ್ರಗಳನ್ನು ತಾವೇ ಪರಿಶೀಲಿಸಿ ಅಗತ್ಯವಾದ ಸಲಹೆಗಳನ್ನು ಕೊಡುತ್ತಿದ್ದರು. 'ವರದರಾಜ'ರ ಕಾರ್ಯಶ್ರದ್ಧೆ ಮತ್ತು ಉತ್ಸಾಹಗಳನ್ನು ಅವರ ಸಹವರ್ತಿಗಳಾದ ಶ್ರೀ.ನಾಡಿಗರು ಚೆನ್ನಾಗಿ ವಿವರಣೆ ಕೊಡುತ್ತಾರೆ.
ತಂದೆಯವರ ಬಗ್ಗೆ ಅಪಾರ ಗೌರವ
[ಬದಲಾಯಿಸಿ]ತಮ್ಮ ೧೧ ನೆಯರ್ಷದ ಬಾಲ್ಯದಲ್ಲೇ ತಾಯಿಯವರನ್ನು ಕಳೆದುಕೊಂಡು ಅನಾಥರಾಗಿದ್ದ 'ವರದರಾಜನ್' ತಂದೆಯವರಿಗೆ ಅತಿ ಹತ್ತಿರವಾಗಿದ್ದರು. ತಂದೆಯವರು ಕಾಯಿಲೆಯಿಂದ ಹಾಸಿಗೆ ಹಿಡಿದಾಗ, ತಮ್ಮ ನೌಕರಿಯನ್ನು ಸ್ಥಗಿತಗೊಳಿಸಿ ತಮ್ಮ ಇಡೀದಿನವನ್ನು ತಂದೆಯವರ ಸೇವೆಗಾಗಿ ಮುಡಿಪಾಗಿಟ್ಟಿದ್ದರು.