ಸುಜ್ಜಲೂರಿನ ಮಾರಮ್ಮದೇವಾಸ್ಥನ
ಸುಜ್ಜಲೂರು ಗ್ರಾಮವು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿದೆ.ತಾಲೂಕು ಕೇಂದ್ರದಿಂದ ಮೈಸೂರು ಮಾರ್ಗವಾಗಿ ೮ ಕಿ.ಲೋ.ಮೀಟರ್ ನೇಣೂರುಗೇಟ್ ಯಿಂದ ಪುರಿಗಾಲಿ ರಸ್ತೆಕಡೆಗೆ ೩ ಕಿ,ಲೋ.ಅಂತರದಲ್ಲಿದೆ. ಸುಜ್ಜಲೂರು ಗ್ರಾಮಕ್ಕೆ ಪ್ರವೇಶವಾಗುತಿದ್ದಂತೆ ಪ್ರಾಚೀನ ಕಾಲದ ಆಲದಮರ ಒಂದು ಸ್ವಾಗತಿಸುತ್ತದೆ.ಆಗೆ ಎಡಗಡೆ ನೋಡಿದ್ರೆ ಗಂಗರ ಕಾಲದ ಏರಿ ಲಿಂಗಸ್ವಾಮಿದೇವಸ್ಥಾನ ಕಾಣಿಸುತ್ತದೆ.ಈ ದೇವಸ್ಥಾನವು ಸುಜ್ಜಲೂರಿನ ಚಿಕ್ಕಕೆರೆಯ ಏರಿ ಮೇಲಿದೆ,ಆದ್ದರಿಂದ ಇದು ಏರಿಲಿಂಗಸ್ವಾಮಿಯಾಗಿ ಪ್ರಸಿದ್ದಿ ಪಡೆದಿದೆ.ಆಗೆ ಮುಂದೆ ಸಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದಎಡಕ್ಕೆ ನೋಡಿದರೆ ಒಂದು ದೊಡ್ಡ ಅರಳಿ ಮರ ವಿದೆ, ಆ ಮರದ ಕೆಳಗೆ ಸೋಮೇಶ್ವರಲಿಂಗವಿದೆ ಈ ಲಿಂಗವು ಪೂರ್ವ ದಿಕ್ಕಿನಡೆಗೆ ಮುಖ ಮಾಡಿದೆ,ಈ ಲಿಂಗವು ಸ್ವಯಂ ಪ್ರೇರಿತವಾಗಿ ಮೂಡಿದೆ, ಗ್ರಾಮದೊಳ್ಗೆ ಪ್ರವೇಶ ಪಡೆದರೆ,ಸುಜ್ಜಲೂರಿನ ಗ್ರಾಮ ದೇವ್ತೆಯಾದ ಶ್ರೀ ಸುಜ್ಜಲೂರುಮಾರಮ್ಮನ ದೇವಸ್ಥಾನವಿದೆ, ಈ ದೇವಸ್ಥಾನದ ವಿಶೇಸವೆಂದರೆ ಇಲ್ಲಿ ಜಾತ್ರೆ ನಡೆಯುವುದು ಮಾರ್ಚ್ ತಿಂಗಳಲ್ಲಿ,ಮಳವಳ್ಳಿಯ ದಂಡಿನ ಮಾರಮ್ಮನ ಹಬ್ಬ ಆದ ನಂತರ ಇಲ್ಲಿ ಸುಜ್ಜಲೂರುಮಾರಮ್ಮನಜಾತ್ರೇ ನಡೆಯುವುದು.ಈ ಹಬ್ಬವು ಪ್ರತಿ ವರ್ಷವು ಮಂಗಳವಾರ ಹಾಗೂ ಬುಧವಾರದಂದೆ ನಡೆಯುವುದು.ಇದು ನಾಲ್ಕು ಗ್ರಾಮಗಳ ಸಹಯೋಗದೊಂದಿಗೆ ಜರುಗುತ್ತದೆ.ಈ ಹಬ್ಬ ಆದ ಮೇಲೆ ಎಲ್ಲಾ ಕಡೆ ಮಾರಿ ಹಬ್ಬಗಳಾಗುವುದು[ಈ ಹಬ್ಬದ ವಿವರಣೆಯನ್ನು ಬೇರೆ ವಿಕಿಪೀಡಿಯದಲ್ಲಿ ಅಳವಡಿಸಲಾಗಿದೆ]. ಆಗೆ ಮುಂದೆ ಸಾಗಿದರೆ ಕೆ ಎನ್ ನಾಗೇಗೌಡರು ಭಾರಿ ನೀರಾವರಿ ಸಚಿವರಾಗಿದ್ದಾಗ ಈ ಗ್ರಾಮದ ದೊಡ್ಡಕೆರೆಯ ಅಭಿವೃದ್ದಿ ಮಾಡಿದರು.ಕೆರೆಯ ನೀರನ್ನು ಕೆರೆಯಲ್ಲಿ ಉಳಿಸಲು,ಕೆರೆಗೆ ೧೦೦ ಅಡಿ ಎತ್ತರದ ಕೋಡಿಕಟ್ಟಿಲಾಯಿತು, ಮಳೆಗಾಲದಲ್ಲಿ ಕೆರೆ ತುಂಬಿದಾಗ ಕೆರೆಯ ಕೋಡಿಯ ಮೇಲೆ ನೀರು ಬೀಳುವಾಗಜಲಪಾತದಂತೆ ಆರ್ಭಟಿಸುತ್ತ ಬೀಳುತ್ತದೆ,ನೋಡಲು ಜಲಪಾತದಂತೆ ಕಾಣುತ್ತದೆ.ಬಹುಶಃ ಯಾವ ಕೆರೆಗು ಈ ರೀತಿ ಕಟ್ಟಿಲ್ಲ.ಈ ಕೆರೆಯು ೧೦೦೦ ಎಕರೆವರೆಗು ನೀರುಣಿಸುತ್ತಿದೆ.