ವೆಂಡಿ ಡೆಂಗ್ ಮುರ್ಡೋಕ್
ವೆಂಡಿ ಡೆಂಗ್ ಮುರ್ಡೋಕ್ 邓文迪 | |
---|---|
Born | ಡೆಂಗ್ ವೆಂಜ್ ೮ ಡಿಸೆಂಬರ್ ೧೯೬೮[೧] |
Nationality | ಅಮೆರಿಕನ್ |
Occupation | ವ್ಯಾಪಾರಗಾತಿ |
Spouse(s) | Jake Cherry (m. 1990–1993) Rupert Murdoch (m. 1999–present) |
Children | ಗ್ರೇಸ್ ಮುರ್ಡೋಕ್ (b. 2001) Chloe Murdoch (b. 2003) |
ಚೈನ ದೇಶದ ಭಾಷೆಯಲ್ಲಿ, 邓文迪; ಪುರಾತನ ಸಾಂಪ್ರದಾಯಿಕ ಚೀನಾದೇಶದ ಭಾಷೆಯಲ್ಲಿ : 鄧文迪; pinyin: Dèng Wéndí; ಜನನ : ಡಿಸೆಂಬರ್, ೮,೧೯೬೮) ವಿಶ್ವದ ಅತಿ ಹೆಚ್ಚು ಪ್ರತಿಷ್ಠಿತ ವೃತ್ತಪತ್ರಿಕೆಗಳು, ಸುದ್ದಿ ಮೀಡಿಯಗಳು, ಹಾಗೂ ಟೆಲೆವಿಶನ್ ಸಂಸ್ಥೆಗಳ ಒಡೆಯರಾಗಿರುವ ಮುರ್ಡೋಕ್ ರವರ ಮೂರನೆಯ ಪತ್ನಿ. ನ್ಯೂಸ್ ಕಾರ್ಪೊರೇಷನ್ ಸಂಸ್ಥೆಯ ಛೇರ್ಮನ್, ಮತ್ತು ಸಿಇಒ ಆಗಿರುವ ತಮ್ಮ ಪತಿಯ 'ಚೈನೀಸ್ ಮೀಡಿಯ ಇನ್ವೆಸ್ಟ್ ಮೆಂಟ್' ಗಳನ್ನು ಸಂಭಾಳಿಸಿಕೊಂಡು ಹೋಗುತ್ತಿದ್ದಾರೆ.
ಸನ್, ೧೯೮೮ ರಲ್ಲಿ ಅಮೆರಿಕದಲ್ಲಿ ಇನ್ನೂ ವಿದ್ಯಾರ್ಥಿನಿಯಾಗಿದ್ದರು
[ಬದಲಾಯಿಸಿ]ಸನ್,೧೯೮೮ ರಲ್ಲಿ ಅಮೆರಿಕದಲ್ಲಿ ವಿದ್ಯಾಭ್ಯಾಸಮಾಡುವುದಕ್ಕೆ ಅವರಿಗೆ 'ಸ್ಟೂಡೆಂಟ್ ವೀಸಾ' ದೊರೆಕಿಸಿಕೊಡಲು 'ಅಮೆರಿಕನ್ ಪರಿವಾರವೊಂದು' ಮುಂದೆಬಂದು ಪ್ರಾಯೋಜಿಸಿತ್ತು.'ಡೆಂಗ್' ರವರು ಕ್ಯಾಲಿಫೋರ್ನಿಯ ಸ್ಟೇಟ್ ನಾರ್ತ್ ರಿಡ್ಜ್ ನಲ್ಲಿ 'ವಾಣಿಜ್ಯ ಶಾಸ್ತ್ರ'ವನ್ನು ತಮ್ಮ ಅಧ್ಯಯನದ ವಿಶಯವಾಗಿ ಆರಿಸಿಕೊಂಡಿದ್ದರು.'ಯೇಲ್ ವಿಶ್ವ ವಿದ್ಯಾಲಯ'ದ 'ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಪದವಿಯನ್ನು ಗಳಿಸಿದರು. ಈಗ ಅದೇ 'ವಿಶ್ವವಿದ್ಯಾಲಯದ ಸಲಹಾಕಾರರ ಸಮಿತಿ'ಯಲ್ಲಿ ಕೆಲಸಮಾಡುತ್ತಿದ್ದಾರೆ.[೨]
'ವೆಂಡಿ ಡೆಂಗ್'ರ,ಆಕರ್ಶಕ ವ್ಯಕ್ತಿತ್ವಕ್ಕೆ 'ಮುರ್ಡೋಕ್' ಮಾರುಹೋದರು
[ಬದಲಾಯಿಸಿ]'ಫಾಕ್ಸ್ ಟೆಲೆವಿಶನ್' ನಲ್ಲಿ ಸುದ್ದಿಮಾದ್ಯಮದಲ್ಲಿ ಕೆಲಸಮಾಡಿ ಒಳ್ಳೆಯ ಅನುಭವವನ್ನು ಗಳಿಸಿದರು. ಇದರ ನಂತರ ಸ್ಟಾರ್ ಟಿವಿಯ ಹಾಂಕಾಂಗ್ ನಲ್ಲಿ 'ಇಂಟರ್ನ್ ಶಿಪ್' ದೊರೆಯಿತು. ಇದು 'ನ್ಯೂಸ್ ಕಾರ್ಪೊರೇಷನ್' ನ ಒಂದು ಭಾಗವಾಗಿತ್ತು. ಸನ್ ೧೯೯೭ ರಲ್ಲಿ ಆಕರ್ಶಕ ವ್ಯಕ್ತಿತ್ವದ ಮೇಧಾವಿ, ಸೂಕ್ಷ್ಮಮತಿ, ಮತ್ತು ವ್ಯವಹಾರಚತುರೆಯಾದ 'ವೆಂಡಿ ಡೆಂಗ್' ರವರನ್ನು 'ಮುರ್ಡೋಕ್'ಹಾಂಕಾಂಗ್ ನಗರದಲ್ಲಿ ಭೆಟ್ಟಿಯಾದರು. ಆಗ ಅವರಿಗೆ ೨೯ ವರ್ಷಪ್ರಾಯವಾಗಿತ್ತು. 'ರುಪರ್ಟ್ ಮರ್ಡೋಕ್ 'ರವರಿಗೆ ೬೬ ವರ್ಷವಾಗಿತ್ತು. ಆದರೆ ಅವರಿಬ್ಬರಲ್ಲಿ ಒಲವು ಮೂಡಿ ಲಗ್ನವಾದರು.
ಉಲ್ಲೇಖಗಳು
[ಬದಲಾಯಿಸಿ]- ↑ Lewis, Hilary. "Happy Belated Birthday, Wendi Deng!". Business Insider.