ವಿಷಯಕ್ಕೆ ಹೋಗು

ಸಾರ್ವಜನಿಕ ನಿಯಮಿತ ಕಂಪೆನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದು ಬ್ರಿಟಿಷ್ ದ್ವೀಪಗಳ ಪಬ್ಲಿಕ್ ಕಂಪೆನಿಯ ರೂಪವನ್ನು ಒಳಗೊಂಡಿದೆ.

ಒಂದು ಸಾರ್ವಜನಿಕ ನಿಯಮಿತ ಕಂಪೆನಿ (ಕಾನೂನುಬದ್ಧವಾಗಿ plc ಎಂದು ಪೂರ್ಣ ವಿರಾಮದೊಂದಿಗೆ ಅಥವಾ ಇಲ್ಲದೆ ಸಂಕ್ಷಿಪ್ತಗೊಳಿಸಲಾಗಿದೆ) ನಿಯಮಿತ ಬಾಧ್ಯತೆಯ ಕಂಪೆನಿಯಾಗಿದ್ದು ಯುನೈಟೆಟ್ ಕಿಂಗ್ಡಂ ಕಂಪೆನಿ ಕಾನೂನು, ರಿಪಬ್ಲಿಕ್ ಆಫ್ ಐರ್ಲೆಂಡ್ ಮತ್ತು UK ಕಾಮನ್‌ವೆಲ್ತ್ ಅಧಿಕಾರವ್ಯಾಪ್ತಿಗಳಲ್ಲಿ ಸಾರ್ವಜನಿಕರಿಗೆ ಷೇರುಗಳನ್ನು ಮಾರುತ್ತದೆ.

ಇದು ಷೇರು ವಿನಿಮಯ ಕೇಂದ್ರಗಳಲ್ಲಿ ಪಟ್ಟಿಮಾಡಿರದ ಅಥವಾ ಪಟ್ಟಿ ಮಾಡಿದ ಕಂಪೆನಿಯಾಗಿದೆ. ಯುನೈಟೆಡ್ ಕಿಂಗ್ಡಂನಲ್ಲಿ ಸಾರ್ವಜನಿಕ ನಿಯಮಿತ ಕಂಪೆನಿ ಸಾಮಾನ್ಯವಾಗಿ "ಪಬ್ಲಿಕ್ ಲಿಮಿಟೆಡ್ ಕಂಪೆನಿ" ಅಥವಾ ಸಂಕ್ಷಿಪ್ತ ರೂಪ "plc"ಯನ್ನು ಕೊನೆಯಲ್ಲಿ ಕಾನೂನುಬದ್ಧ ಕಂಪೆನಿ ಹೆಸರಾಗಿ ಹೊಂದಿರಬೇಕು. ವೆಲ್ಷ್ ಕಂಪೆನಿಗಳು ಬದಲಿಗೆ ತಮ್ಮ ಹೆಸರುಗಳನ್ನು cwmni cyfyngedig cyhoeddus or c.c.c.ನಿಂದ ಅಂತ್ಯಗೊಳಿಸಲು ಆಯ್ಕೆ ಮಾಡಬಹುದು.[]

ಆದಾಗ್ಯೂ, ವಿಶೇಷ ಶಾಸನದಿಂದ ರಚನೆಯಾದ ಕೆಲವು ಸಾರ್ವಜನಿಕ ನಿಯಮಿತ ಕಂಪೆನಿಗಳು(ಬಹುಮಟ್ಟಿಗೆ ರಾಷ್ಟ್ರೀಕರಣಗೊಂಡ ಸಂಸ್ಥೆಗಳು)ಯಾವುದೇ ಹೋಲಿಕೆಯ ಉತ್ತರ ಪ್ರತ್ಯಯಗಳನ್ನು ಹೊಂದಿರುವುದರಿಂದ ಹೊರತಾಗಿರುತ್ತದೆ. ಫಿನ್ಲೆಂಡ್‌ನ ಕೆಲವು ಕಂಪೆನಿಗಳನ್ನು ಫಿನಿಷ್‌ನಲ್ಲಿ "Osakeyhtiö" ಎಂದು ಉಲ್ಲೇಖಿಸಲಾಗುತ್ತದೆ. ಇವುಗಳನ್ನು ಇಂಗ್ಲೀಷಿನಲ್ಲಿ "plc"ಗಳು ಎಂದು ಕರೆಯಲಾಗುತ್ತದೆ.[]

ನೋಂದಣಿ

[ಬದಲಾಯಿಸಿ]

ಹೊಸ ಕಂಪೆನಿಯು ಇಂಗ್ಲೆಂಡ್ ಮತ್ತು ವೇಲ್ಸ್ ಅಥವಾ ಸ್ಕಾಟ್‌ಲ್ಯಾಂಡ್‌ನಲ್ಲಿ ರಚನೆಯಾದಾಗ ಇದು ಕಂಪೆನೀಸ್ ಹೌಸ್‌ನಲ್ಲಿ ನೋಂದಣಿ ಮಾಡಿಸಬೇಕು. ಕಂಪೆನೀಸ್ ಹೌಸ್ ಡಿಪಾರ್ಟ್‌ಮೆಂಟ್ ಫಾರ್ ಬಿಸಿನೆಸ್, ಇನ್ನೋವೇಷನ್ ಮತ್ತು ಸ್ಕಿಲ್ಸ್‌ನ ಎಕ್ಸಿಕ್ಯೂಟಿವ್ ಏಜನ್ಸಿಯಾಗಿದೆ. ಉತ್ತರ ಐರ್ಲೆಂಡ್ಪ್ರತ್ಯೇಕ ರಿಜಿಸ್ಟ್ರಾರ್ ಆಫ್ ಕಂಪೆನೀಸ್ಒಳಗೊಂಡಿದೆ. ರಿಪಬ್ಲಿಕ್ ಆಫ್ ಐರ್ಲೆಂಡ್‌ನಲ್ಲಿ ಸಮಾನವಾದ ಕಾರ್ಯನಿರ್ವಾಹಕ ಏಜೆನ್ಸಿಯು ಕಂಪೆನೀಸ್ ರಿಜಿಸ್ಟ್ರೇಷನ್ ಆಫೀಸ್, ಐರ್ಲೆಂಡ್. ಮಾಲ್ಟಾ ದಲ್ಲಿ ಸಂಸ್ಥೆಯು ಮಾಲ್ಟಾ ಫೈನಾನ್ಸಿಯಲ್ ಸರ್ವೀಸಸ್ ಅಥೋರಿಟಿ (MFSA)ಯಲ್ಲಿ ನೋಂದಣಿ ಮಾಡುತ್ತದೆ.

ಸಾರ್ವಜನಿಕ ನಿಯಮಿತ ಕಂಪೆನಿ ಸಾರ್ವಜನಿಕರಿಗೆ ತನ್ನ ಷೇರುಗಳನ್ನು ವಿತರಿಸುವುದು ಕಡ್ಡಾಯವಲ್ಲ(ಕೆಲವು ಪಿಎಲ್‌ಸಿಗಳು ಖಾಸಗಿ ಸ್ವಾಮ್ಯದ್ದಾಗಿದ್ದು, ಹೆಚ್ಚುವರಿ ಹಣಕಾಸಿನ ಸ್ಥಾನಮಾನಕ್ಕಾಗಿ "ಪಿಎಲ್‌ಸಿ " ಹೆಸರನ್ನು ನಿರ್ವಹಿಸುತ್ತದೆ) ಅನೇಕ ಕಂಪೆನಿಗಳು ಹಾಗೆ ಮಾಡುತ್ತವೆ, ಅವುಗಳ ಷೇರುಗಳು ಸಾಮಾನ್ಯವಾಗಿ ಲಂಡನ್ ಷೇರು ವಿನಿಮಯ ಕೇಂದ್ರ ಅಥವಾ ಪರ್ಯಾಯ ಬಂಡವಾಳಗಳ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತವೆ. ಐರಿಷ್ ಸಾರ್ವಜನಿಕ ನಿಯಮಿತ ಕಂಪೆನಿಗಳು ಸಾಮಾನ್ಯವಾಗಿ ಐರಿಷ್ ಷೇರು ವಿನಿಮಯ ಕೇಂದ್ರದಲ್ಲಿ ವ್ಯಾಪಾರ ಮಾಡುತ್ತವೆ. ಅನೇಕವು ಲಂಡನ್ ಷೇರು ವಿನಿಮಯ ಕೇಂದ್ರದಲ್ಲಿ ಪಟ್ಟಿಯಾಗಿವೆ. ಹೆಚ್ಚು ಅಪರೂಪವಾಗಿ ಪರ್ಯಾಯ ಬಂಡವಾಳಗಳ ಮಾರುಕಟ್ಟೆಯಲ್ಲಿ ಪಟ್ಟಿಯಾಗಿವೆ.

ಕಂಪೆನಿ ನಿರ್ದೇಶಕರು

[ಬದಲಾಯಿಸಿ]

ಸಾರ್ವಜನಿಕ ನಿಯಮಿತ ಕಂಪೆನಿಯ ರಚನೆಗೆ ಕನಿಷ್ಟ ಇಬ್ಬರು ನಿರ್ದೇಶಕರ ಅಗತ್ಯವಿರುತ್ತದೆ.(ದೇಶದಿಂದ ದೇಶಕ್ಕೆ ವ್ಯತ್ಯಾಸ ಹೊಂದಿದೆ:ಭಾರತದಲ್ಲಿ ಮೂವರು ನಿರ್ದೇಶಕರ ಅಗತ್ಯವಿರುತ್ತದೆ). ಸಾಮಾನ್ಯ ಪದಗಳಲ್ಲಿ ಯಾರು ಬೇಕಾದರೂ ಕಂಪೆನಿ ನಿರ್ದೇಶಕರಾಗಬಹುದು. ಕೆಳಗಿನ ಒಂದು ಕಾರಣದ ಮೇಲೆ ಅವರು ಅನರ್ಹತೆ ಗಳಿಸಿರಬಾರದು:

  • ಪಿಎಲ್‌ಸಿಗಳು ಅಥವಾ ಅವುಗಳ ಸಹಾಯಕ ಸಂಸ್ಥೆಗಳ ಪ್ರಕರಣದಲ್ಲಿ,ಅವರು ವಿಶೇಷ ನೋಟೀಸ್ ನೀಡಿದ ಸಾಮಾನ್ಯ ಸಭೆಯಲ್ಲಿ ಕಂಪೆನಿಯ ನಿರ್ಣಯದಂತೆ ನೇಮಕ ಅಥವಾ ಮರುನೇಮಕ ಹೊಂದಿರುವುದನ್ನು ಹೊರತುಪಡಿಸಿ, ವ್ಯಕ್ತಿಯು ಅಧಿಕಾರದಲ್ಲಿ 70 ವರ್ಷಗಳಿಗಿಂತ ಮೇಲ್ಪಟ್ಟು ಅಥವಾ 70 ವರ್ಷ ವಯಸ್ಸನ್ನು ತಲುಪಿದ ಪ್ರಕರಣ.
  • ನಿರ್ದಿಷ್ಟ ಕಂಪೆನಿ ಅಥವಾ ಕಂಪೆನಿಗಳಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಲು

ಅವಕಾಶ ನೀಡಿರುವುದನ್ನು ಹೊರತುಪಡಿಸಿ,ವ್ಯಕ್ತಿಯು ದಿವಾಳಿಯಾಗಿದ್ದು ಅಥವಾ ನಿರ್ದೇಶಕ ಹುದ್ದೆಯನ್ನು ಹೊಂದಲು ಕೋರ್ಟ್‌ನಿಂದ ಅನರ್ಹತೆ ಪಡೆದ ಸಂದರ್ಭ.

  • ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ(2008 ಅಕ್ಟೋಬರ್‌ನಲ್ಲಿ; ಕಂಪೆನಿಗಳ ಕಾಯ್ದೆ 2006)ಮತ್ತು ಸ್ಕಾಟ್‌ಲ್ಯಾಂಡ್‌ನಲ್ಲಿ (ಏಜ್ ಆಫ್ ಲೀಗಲ್ ಕೆಪಾಸಿಟಿ (ಸ್ಕಾಟ್‌ಲ್ಯಾಂಡ್)ಆಕ್ಟ್ 1991), ವ್ಯಕ್ತಿಯು 16 ವರ್ಷಗಳ ಒಳಗಿರಬೇಕು.

ಬ್ರಿಟಿಷ್ ಅಥವಾ ಐರೋಪ್ಯ ಒಕ್ಕೂಟದ ಪೌರರಲ್ಲದ ಕೆಲವು ಜನರು ಯುಕೆಯಲ್ಲಿ ಯಾವ ಕೆಲಸ ಮಾಡಬೇಕೆಂದು ನಿರ್ಬಂಧಕ್ಕೆ ಒಳಗಾಗಿದ್ದರೆ, ಅವರನ್ನು ನಿರ್ದೇಶಕ ಸ್ಥಾನದಿಂದ ಹೊರತುಪಡಿಸಲಾಗುತ್ತದೆ.

ಕಂಪೆನಿ ಕಾರ್ಯದರ್ಶಿಗಳು

[ಬದಲಾಯಿಸಿ]

ಸಾರ್ವಜನಿಕ ನಿಯಮಿತ ಕಂಪೆನಿಯ ಕಾರ್ಯದರ್ಶಿ (ಅಥವಾ ಪ್ರತಿ ಜಂಟಿ ಕಾರ್ಯದರ್ಶಿ) ಅವಶ್ಯಕ ಜ್ಞಾನ ಮತ್ತು ಕ್ರಿಯೆಗಳನ್ನು ಪೂರ್ಣಗೊಳಿಸುವ ಸಾಮರ್ಥ್ಯ ಹೊಂದಿರುವ ವ್ಯಕ್ತಿಯಂತೆ ನಿರ್ದೇಶಕರಿಗೆ ಕಂಡುಬರುವ ವ್ಯಕ್ತಿಯಾಗಿರಬೇಕು ಮತ್ತು:

  1. 1980 ಡಿಸೆಂಬರ್ 22ರಂದು ಕಾರ್ಯದರ್ಶಿ ಅಥವಾ ಸಹಾಯಕ ಅಥವಾ ಉಪ ಕಾರ್ಯದರ್ಶಿ ಹುದ್ದೆಯನ್ನು ಹೊಂದಿರಬೇಕು ಅಥವಾ
  2. ಅಥವಾ ಅವರ ನೇಮಕಕ್ಕೆ ಮುಂಚಿತವಾಗಿ ಕನಿಷ್ಟ ಮೂರು ಅಥವಾ ಐಧು ವರ್ಷಗಳು ಖಾಸಗಿಯೇತರ ಕಂಪೆನಿಯ ಕಾರ್ಯದರ್ಶಿ ಹುದ್ದೆ ಹೊಂದಿರಬೇಕು ಅಥವಾ
  3. ಯುನೈಟೆಡ್ ಕಿಂಗ್ಡಂ‌ನ ಯಾವುದೇ ಭಾಗದಲ್ಲಿ ಅಂಗೀಕಾರ್ಹತೆ ಪಡೆದಿರುವ ಬ್ಯಾರಿಸ್ಟರ್, ನ್ಯಾಯವಾದಿ ಅಥವಾ ಸಾಲಿಸಿಟರ್ ಆಗಿರಬೇಕು.
  4. ಅವರ ಮುಂಚಿನ ಅನುಭವ ಅಥವಾ ಇನ್ನೊಂದು ಸಂಸ್ಥೆಯ ಸದಸ್ಯತ್ವದ ಗುಣದಿಂದ ಕಾರ್ಯದರ್ಶಿ ಹೊಣೆಗಾರಿಕೆಗಳನ್ನು ನಿರ್ವಹಿಸಲು ಸಮರ್ಥ ಎಂದು ನಿರ್ದೇಶಕರಿಗೆ ಕಂಡುಬರಬೇಕು ಅಥವಾ
  5. ಯಾವುದಾದರೂ ಕೆಳಗಿನ ಸಂಸ್ಥೆಯ ಸದಸ್ಯನಾಗಿರಬೇಕು:
    • ದಿ ಇನ್ಸ್‌ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಇನ್ ಇಂಗ್ಲೆಂಡ್ ಎಂಡ್ ವೇಲ್ಸ್
    • ದಿ ಇನ್ಸ್‌ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಸ್ಕಾಟ್‌ಲ್ಯಾಂಡ್
    • ದಿ ಇನ್ಸ್‌ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಇನ್ ಐರ್ಲೆಂಡ್
    • ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಸೆಕ್ರೇಟರೀಸ್ ಎಂಡ್ ಅಡ್ಮಿನಿಸ್ಟ್ರೇಟರ್ಸ್
    • ದಿ ಅಸೋಸಿಯೇಷನ್ ಆಫ್ ಚಾರ್ಟರ್ಡ್ ಸರ್ಟಿಫೈಡ್ ಅಕೌಂಟೆಂಟ್ಸ್,
    • ದಿ ಚಾರ್ಟರ್ಡ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಕೌಂಟೆಂಟ್ಸ್(ಮುಂಚೆ ಇನ್‌ಸ್ಟಿಟ್ಯೂಟ್ ಆಫ್ ಕಾಸ್ಟ್ ಎಂಡ್ ಮ್ಯಾನೇಜ್‌ಮೆಂಟ್ ಅಕೌಂಟೆಂಟ್ಸ್ ಎಂದು ಪರಿಚಿತವಾಗಿತ್ತು), ಅಥವಾ
    • ದಿ ಚಾರ್ಟರ್ಡ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಎಂಡ್ ಅಕೌಂಟೆನ್ಸಿ

ಷೇರು ಬಂಡವಾಳ

[ಬದಲಾಯಿಸಿ]

ಕಂಪೆನಿಯು ನೋಂದಣಿಯಾದಾಗ ಸದಸ್ಯರು ಕೆಲವು ಅಥವಾ ಎಲ್ಲ ಷೇರುಗಳನ್ನು ಖರೀದಿಸಲು ಒಪ್ಪಿಕೊಳ್ಳಬೇಕು. ಮೆಮೊರೆಂಡಂ ಆಫ್ ಅಸೋಸಿಯೇಷನ್(ಕಂಪೆನಿಯ ಸ್ಮರಣ ಪತ್ರ)ಷೇರುಗಳನ್ನು ಖರೀದಿಸಲು ಒಪ್ಪಿರುವ ವ್ಯಕ್ತಿಗಳ ಹೆಸರುಗಳನ್ನು ಮತ್ತು ಪ್ರತಿಯೊಬ್ಬರೂ ತೆಗೆದುಕೊಳ್ಳುವ ಷೇರುಗಳ ಸಂಖ್ಯೆಯನ್ನು ತೋರಿಸಬೇಕು. ಈ ಜನರನ್ನು ಚಂದಾದಾರರು ಎಂದು ಕರೆಯಲಾಗುತ್ತದೆ.

ಸಾರ್ವಜನಿಕ ನಿಯಮಿತ ಕಂಪೆನಿಗಳಿಗೆ ಕನಿಷ್ಟ ಷೇರು ಬಂಡವಾಳವಿರುತ್ತದೆ, ಅದು ವ್ಯವಹಾರ ಆರಂಭಿಸುವ ಮುಂಚೆ, ಅದಕ್ಕೆ 50,000 ಪೌಂಡ್ ಮೌಲ್ಯದ ಷೇರುಗಳು ಮಂಜೂರಾಗಿರಬೇಕು. ಅವುಗಳಲ್ಲಿ ಕಾಲು ಭಾಗ £12,500,ಪಾವತಿ ಮಾಡಿರಬೇಕು. ಪ್ರತಿಯೊಂದು ಮಂಜೂರಾದ ಷೇರು ಅದರ ಕನಿಷ್ಟ ಮೌಲ್ಯದ ಕಾಲು ಭಾಗದ ಜತೆ ಇಡೀ ಪ್ರೀಮಿಯಂನೊಂದಿಗೆ ಪಾವತಿಯಾಗಿರಬೇಕು.

ಕಂಪೆನಿಯು ಅಧಿಕೃತ ಷೇರು ಬಂಡವಾಳವನ್ನು ಸಾಮಾನ್ಯ ನಿರ್ಣಯವನ್ನು ಅಂಗೀಕರಿಸುವ ಮೂಲಕ ಹೆಚ್ಚಿಸಿಕೊಳ್ಳಬಹುದು(ಅದರ ಲಿಖಿತ ಕಟ್ಟಳೆಗಳಿಗೆ ವಿಶೇಷ ಅಥವಾ ಅಸಾಮಾನ್ಯ ನಿರ್ಣಯ ಅಗತ್ಯವಿರುವುದನ್ನು ಹೊರತುಪಡಿಸಿ) ನಿರ್ಣಯದ ಒಂದು ಪ್ರತಿಯು-ಫಾರಂ 123ನಲ್ಲಿ ಹೆಚ್ಚಳದ ನೋಟಿಸ್-ಅಂಗೀಕಾರವಾದ 15 ದಿನಗಳೊಳಗೆ ಕಂಪೆನೀಸ್ ಹೌಸ್ ತಲುಪಬೇಕು. ಕಂಪೆನೀಸ್ ಹೌಸ್‌‍ಗೆ ಯಾವುದೇ ಶುಲ್ಕವನ್ನು ಪಾವತಿ ಮಾಡಲಾಗುವುದಿಲ್ಲ.

ಕಂಪೆನಿಯು ತನ್ನ ಅಧಿಕೃತ ಷೇರು ಬಂಡವಾಳವನ್ನು ಸಾಮಾನ್ಯ ನಿರ್ಣಯವನ್ನು ಅಂಗೀಕರಿಸಿ, ಷೇರುಗಳನ್ನು ರದ್ದುಮಾಡುವ ಮೂಲಕ ತಗ್ಗಿಸಬಹುದು. ಈ ಷೇರುಗಳನ್ನು ಯಾವುದೇ ವ್ಯಕ್ತಿ ಖರೀದಿಸಿರುವುದಿಲ್ಲ ಅಥವಾ ಖರೀದಿಸಲು ಒಪ್ಪಿರುವುದಿಲ್ಲ. ರದ್ದು ಮಾಡಿದ ನೋಟಿಸ್ ಫಾರಂ 122ರಲ್ಲಿ ಒಂದು ತಿಂಗಳೊಳಗೆ ಕಂಪೆನೀಸ್ ಹೌಸ್‌ನ್ನು ತಲುಪಬೇಕು. ಕಂಪೆನೀಸ್ ಹೌಸ್‌ಗೆ ಯಾವುದೇ ಶುಲ್ಕವನ್ನು ಪಾವತಿಸಲಾಗುವುದಿಲ್ಲ.

ಶೇರು ವಿಧಗಳು

[ಬದಲಾಯಿಸಿ]

ಕಂಪೆನಿಯು ಅದು ಇಷ್ಟಪಡುವಷ್ಟು ಭಿನ್ನ ವಿಧದ ಷೇರುಗಳನ್ನು ಹೊಂದಬಹುದು. ಎಲ್ಲವೂ ಭಿನ್ನ ಷರತ್ತುಗಳಿಂದ ಕೂಡಿರುತ್ತದೆ. ಸಾಮಾನ್ಯವಾಗಿ ಷೇರು ವಿಧಗಳು ಕೆಳಗಿನ ವರ್ಗಗಳಾಗಿ ವಿಭಜನೆಯಾಗಿವೆ:

  • ಧಾರಕ ಷೇರುಗಳು – ಕಾನೂನಿನ ಸಾಧನವಾಗಿದ್ದು,ಕಂಪೆನಿಯ ಮಾಲೀಕತ್ವವನ್ನು ಸಂಕೇತಿಸುತ್ತದೆ. ಸಾಮಾನ್ಯವಾಗಿ ಷೇರು ವಾರಂಟ್‌ಗಳ ರೂಪದಲ್ಲಿರುತ್ತದೆ. ಷೇರು ವಾರಂಟ್ ದಾಖಲೆಯಾಗಿದ್ದು, ವಾರಂಟ್ ಧಾರಕರು ಅದರಲ್ಲಿ ಹೇಳಿರುವ ಷೇರುಗಳಿಗೆ ಅರ್ಹತೆ ಪಡೆದಿರುತ್ತಾರೆ. ಅದರ ಕಟ್ಟಳೆಗಳು ಅಧಿಕಾರ ನೀಡಿದರೆ, ಕಂಪೆನಿಯು ಯಾವುದೇ ಪೂರ್ಣ ಪಾವತಿ ಮಾಡಿದ ಷೇರುಗಳನ್ನು ಷೇರು ವಾರಂಟ್‌ಗಳಾಗಿ ಪರಿವರ್ತಿಸಬಹುದು. ಯಾವುದೇ ವರ್ಗಾವಣೆ ದಾಖಲೆ ಅಗತ್ಯವಿಲ್ಲದೇ ಈ ವಾರಂಟ್‌ಗಳನ್ನು ಸುಲಭವಾಗಿ ವರ್ಗಾವಣೆ ಮಾಡಬಹುದು. ಅಂದರೆ ಅವುಗಳನ್ನು ಸರಳವಾಗಿ ಕೈಯಿಂದ ಕೈಗೆ ಬದಲಾಯಿಸಬಹುದು. ಷೇರು ವಾರಂಟ್‌ಗಳನ್ನು ವಿತರಿಸಿದಾಗ, ಕಂಪೆನಿಯು ಸದಸ್ಯರ ರಿಜಿಸ್ಟರ್‌ನಿಂದ ಷೇರುದಾರರ ಹೆಸರನ್ನು ಹೊಡೆದುಹಾಕಬೇಕು ಮತ್ತು ವಾರಂಟ್ ನೀಡಿದ ದಿನಾಂಕವನ್ನು ಮತ್ತು ಅದಕ್ಕೆ ಸಂಬಂಧಿಸಿದ ಷೇರುಗಳ ಸಂಖ್ಯೆಯನ್ನು ನಮೂದಿಸಬೇಕು. ಲಿಖಿತ ಕಟ್ಟಳೆಗಳಿಗೆ ಅನ್ವಯವಾಗಿ, ಶೇರು ವಾರಂಟನ್ನು ರದ್ದು ಮಾಡಲು ನೀಡಬಹುದು. ಹಾಗೆ ಮಾಡಿದರೆ ಸದಸ್ಯರ ರಿಜಿಸ್ಟರ್‌ನಲ್ಲಿ ಮರುಪ್ರವೇಶಕ್ಕೆ ಷೇರುದಾರರು ಅರ್ಹತೆ ಪಡೆಯುತ್ತಾರೆ. ಷೇರು ವಾರಂಟ್‌ಗಳ ಜತೆ ವೋಚರ್‌ಗಳನ್ನು ವಿತರಿಸಲಾಗುತ್ತದೆ. ಇದರಿಂದ ಯಾವುದೇ ಲಾಭಾಂಶಗಳನ್ನು ಪ್ರತಿಪಾದಿಸಬಹುದು. [ಷೇರು ವಾರಂಟುಗಳ ವಿವರಣೆಯು ಯುಕೆಗೆ ಮಾತ್ರ ಅನ್ವಯವಾಗುತ್ತದೆ. ಏಕೆಂದರೆ ಆಸ್ಟ್ರೇಲಿಯ ಮತ್ತು ಅಮೆರಿಕದ ಆಚರಣೆಗಳಿಗೆ ಅದು ವಿಲಕ್ಷಣವಾಗಿ ಕಾಣುತ್ತದೆ.]
  • ಕುಮ್ಯುಲೇಟಿವ್ ಪ್ರಿಫರೆನ್ಸ್ – ಈ ಷೇರುಗಳ ಲಾಭಾಂಶವನ್ನು ಒಂದು ವರ್ಷದೊಳಗೆ ಪಾವತಿ ಮಾಡದಿದ್ದರೆ, ಇದು ನಂತರದ ವರ್ಷಗಳಿಗೆ ಮುಂದುವರಿಸಬಹುದು ಎಂಬ ಹಕ್ಕನ್ನು ಈ ಷೇರುಗಳು ಹೊಂದಿರುತ್ತವೆ.
  • ಸಾಮಾನ್ಯ – ಹೆಸರೇ ಹೇಳುವಂತೆ ಯಾವುದೇ ವಿಶೇಷ ಹಕ್ಕುಗಳು ಅಥವಾ ನಿರ್ಬಂಧಗಳಿಲ್ಲದೇ ಇವು ಕಂಪೆನಿಯ ಸಾಮಾನ್ಯ ಷೇರುಗಳು. ಅವನ್ನು ಭಿನ್ನ ಮೌಲ್ಯದ ವರ್ಗಗಳಿಗೆ ವಿಭಜಿಸಬಹುದು.
  • ಪ್ರಿಫರೆನ್ಸ್ (ಆದ್ಯತೆ ಷೇರುಗಳು) – ವಿತರಣೆಗೆ ಲಭ್ಯವಾಗುವ ಯಾವುದೇ ವಾರ್ಷಿಕ ಲಾಭಾಂಶಗಳು ಇತರೆ ವರ್ಗಗಳಿಗಿಂತ ಈ ಷೇರುಗಳಿಗೆ ಆದ್ಯತೆ ಮೇಲೆ ಪಾವತಿ ಮಾಡಲಾಗುತ್ತದೆ ಎಂಬ ಹಕ್ಕನ್ನು ಈ ಷೇರುಗಳು ಸಾಮಾನ್ಯವಾಗಿ ಹೊಂದಿರುತ್ತದೆ.
  • ರಿಡೀಮೇಬಲ್ (ಮರುಖರೀದಿ) –ಕಂಪೆನಿಯ ಅಥವಾ ಷೇರುದಾರರ ಆಯ್ಕೆ ಮೇಲೆ ಕೆಲವು ನಿರ್ದಿಷ್ಟ ಅವಧಿಯ ನಂತರ ಅಥವಾ ನಿಗದಿತ ದಿನಾಂಕದಂದು ಕಂಪೆನಿಯು ಮರುಖರೀದಿ ಮಾಡುತ್ತದೆ ಎಂಬ ಒಪ್ಪಂದದೊಂದಿಗೆ ಈ ಷೇರುಗಳನ್ನು ವಿತರಿಸಲಾಗುತ್ತದೆ. ಕಂಪೆನಿಯು ರಿಡೀಮೇಬಲ್ ಷೇರುಗಳನ್ನು ಮಾತ್ರ ಹೊಂದುವಂತಿಲ್ಲ.

ಒಂದು "ಪಿಎಲ್‌ಸಿ" ಬಂಡವಾಳ ಮಾರುಕಟ್ಟೆಗಳಿಗೆ ಅವಕಾಶ ಹೊಂದಿರುತ್ತದೆ ಮತ್ತು ಮಾನ್ಯತೆ ಪಡೆದ ಷೇರು ವಿನಿಮಯ ಕೇಂದ್ರದ ಮೂಲಕ ಸಾರ್ವಜನಿಕರಿಗೆ ಷೇರುಗಳನ್ನು ಮಾರಾಟ ಮಾಡಬಹುದು. ಇದು ಸಾರ್ವಜನಿಕರಿಗೆ ಸಾಲಪತ್ರಗಳನ್ನು ಮಾರಾಟ ಮಾಡುವ ಬಗ್ಗೆ ಜಾಹೀರಾತುಗಳನ್ನು ಕೂಡ ನೀಡಬಹುದು. ಇದಕ್ಕೆ ವಿರುದ್ಧವಾಗಿ, ಖಾಸಗಿ ಕಂಪೆನಿಯು ಸಾರ್ವಜನಿಕರಿಗೆ ಯಾವುದೇ ಷೇರುಗಳನ್ನು ವಿತರಿಸುವ ಪ್ರಸ್ತಾಪ ಮಾಡದಿರಬಹುದು.

ಕಂಪೆನಿಯ ರಚನೆ

[ಬದಲಾಯಿಸಿ]

ಬಹುತೇಕ ಯುಕೆ ಕಂಪೆನಿಗಳು ಈಗ ಕಂಪೆನಿ ರಚನೆ ಏಜಂಟರ ಮೂಲಕ ವಿದ್ಯುನ್ಮಾನವಾಗಿ ರಚನೆಯಾಗಿರುತ್ತವೆ.

ಕಾಗದಪತ್ರ ಪ್ರಕ್ರಿಯೆ

[ಬದಲಾಯಿಸಿ]

ಕಂಪೆನಿಗಳ ರಿಜಿಸ್ಟ್ರಾರ್‌ಗೆ ನೋಂದಣಿ ಶುಲ್ಕದ ಜತೆ ಕೆಳಗಿನ ದಾಖಲೆಗಳನ್ನು ಕಳಿಸಬೇಕು:

  • ಮೆಮೋರೆಂಡಂ ಆಫ್ ಅಸೋಸಿಯೇಷನ್ –ಇದು ಕಂಪೆನಿಯ ಹೆಸರು, ನೋಂದಾಯಿತ ಕಚೇರಿ ವಿಳಾಸ ಮತ್ತು ಕಂಪೆನಿ ವಸ್ತುಗಳನ್ನು ಸಿದ್ಧಪಡಿಸುತ್ತದೆ. ಕಂಪೆನಿಯ ಉದ್ದೇಶವು ಸಾಮಾನ್ಯ ವಾಣಿಜ್ಯ ಕಂಪೆನಿಯಾಗಿ ತನ್ನ ವ್ಯವಹಾರವನ್ನು ನಡೆಸುವುದಾಗಿದೆ. ರಿರಿಸ್ಟ್ರಾರ್‌ಗೆ ರವಾನಿಸುವ ಕಂಪೆನಿಯ ಮೆಮೊರಾಂಡಂಗೆ ಪ್ರತಿಯೊಬ್ಬ ಚಂದಾದಾರ ಸಾಕ್ಷಿದಾರನ ಎದುರು ಸಹಿ ಹಾಕಿರಬೇಕು. ಸಾಕ್ಷಿದಾರ ಅದನ್ನು ದೃಢೀಕರಿಸಬೇಕು. ಇದನ್ನು ಸಾಮಾನ್ಯವಾಗಿ ಕಂಪೆನಿಯ ಸನ್ನದು ಅಥವಾ ಕಂಪೆನಿಯ ಸಂವಿಧಾನ ಎಂದು ಉಲ್ಲೇಖಿಸಲಾಗುತ್ತದೆ. ಮೆಮೊರೆಂಡಂ ಆಫ್ ಅಸೋಸಿಯೇಷನ್ ಸಹಿದಾರರು ಕಂಪೆನಿಯ ಪ್ರಥಮ ನಿರ್ದೇಶಕರಾಗಿರುತ್ತಾರೆ. ಮೆಮೊರೆಂಡಂ ಸದಸ್ಯರ ಸಂಬಂಧವನ್ನು ಜಗತ್ತಿನ ಉಳಿದ ಕಡೆಯೊಂದಿಗೆ ವ್ಯಾಖ್ಯಾನಿಸುತ್ತದೆ.
  • ಲಿಖಿತ ಕಟ್ಟಳೆಗಳು –ಕಂಪೆನಿಯ ಆಂತರಿಕ ವ್ಯವಹಾರಗಳನ್ನು ನಿರ್ವಹಿಸಲು ಈ ದಾಖಲೆಯು ನಿಯಮಗಳನ್ನು ರೂಪಿಸುತ್ತದೆ. ರಿಜಿಸ್ಟ್ರಾರ್‌ಗೆ ರವಾನಿಸುವ ಕಂಪೆನಿಯ ಕಟ್ಟಳೆಗಳಿಗೆ ಪ್ರತಿಯೊಬ್ಬ ಚಂದಾದಾರ ಸಾಕ್ಷಿದಾರನ ಎದುರು ಸಹಿ ಮಾಡಿರಬೇಕು ಮತ್ತು ಅದನ್ನು ಸಾಕ್ಷಿದಾರ ದೃಢೀಕರಿಸಬೇಕು. ಕಟ್ಟಳೆಗಳು ಅಂತರ ವ್ಯವಸ್ಥಾಪನೆ, ಅಂತರ -ಸದಸ್ಯ ಮತ್ತು ಅಂತರ-ನೌಕರ ಸಂಬಂಧವನ್ನು ವ್ಯಾಖ್ಯಾನಿಸುತ್ತದೆ.
  • ಫಾರಂ 10 –ಇದು ಪ್ರಥಮ ನಿರ್ದೇಶಕ(ರು), ಕಾರ್ಯದರ್ಶಿ ಮತ್ತು ನೋಂದಾಯಿತ ವಿಳಾಸದ ಉದ್ದೇಶಿತ ವಿಳಾಸದ ಬಗ್ಗೆ ವಿವರಗಳನ್ನು ನೀಡುತ್ತದೆ. ಹೆಸರುಗಳು ಮತ್ತು ವಿಳಾಸಗಳಲ್ಲದೇ, ಕಂಪೆನಿಯ ನಿರ್ದೇಶಕರು ಅವರ ಹುಟ್ಟಿದ ದಿನಾಂಕ, ಉದ್ಯೋಗ ಮತ್ತು ಕಳೆದ ಐದು ವರ್ಷಗಳಲ್ಲಿ ಹೊಂದಿದ ಇತರೆ ನಿರ್ದೇಶಕ ಹುದ್ದೆಗಳ ಬಗ್ಗೆ ವಿವರಗಳನ್ನು ನೀಡಬೇಕು. ನೇಮಕವಾದ ಪ್ರತಿಯೊಬ್ಬ ಅಧಿಕಾರಿ ಮತ್ತು ಪ್ರತಿಯೊಬ್ಬ ಚಂದಾದಾರ(ಅಥವಾ ಅವರ ಏಜೆಂಟ್) ಅರ್ಜಿಗೆ ಸಹಿ ಮತ್ತು ದಿನಾಂಕವನ್ನು ಬರೆಯಬೇಕು.
  • ಫಾರಂ 12 –ಕಂಪೆನಿಯ ಸ್ಥಾಪನೆಗೆ ಸಂಬಂಧಿಸಿ ಎಲ್ಲ ಕಾನೂನಿನ ಅಗತ್ಯಗಳನ್ನು ಪೂರೈಸಿದ ಶಾಸನಬದ್ಧ ಘೋಷಣೆಯಾಗಿದೆ. ಕಂಪೆನಿಯನ್ನು ರಚಿಸುವ ಸಾಲಿಸಿಟರ್‌ ಇದಕ್ಕೆ ಸಹಿ ಹಾಕಿರಬೇಕು ಅಥವಾ ಫಾರಂ 10ನಲ್ಲಿ ನಿರ್ದೇಶಕ ಅಥವಾ ಕಂಪೆನಿ ಕಾರ್ಯದರ್ಶಿ ಎಂದು ಹೆಸರಿಸಲಾದ ವ್ಯಕ್ತಿ ಸಹಿ ಹಾಕಿರಬೇಕು. ಇದನ್ನು ಕಮಿಷನರ್ ಫಾರ್ ಓತ್ಸ್, ನೋಟರಿ ಪಬ್ಲಿಕ್, ಜಸ್ಟೀಸ್ ಆಫ್ ದಿ ಪೀಸ್ ಅಥವಾ ಸಾಲಿಸಿಟರ್‌ ಉಪಸ್ಥಿತಿಯಲ್ಲಿ ಸಹಿ ಹಾಕಿರಬೇಕು. ಶಾಸನಬದ್ಧ ಘೋಷಣೆಗೆ ಸಾಕ್ಷಿದಾರನಾದ ವ್ಯಕ್ತಿಗೆ 5 ಪೌಂಡ್ ಶುಲ್ಕವನ್ನು ಸಾಮಾನ್ಯವಾಗಿ ಪಾವತಿ ಮಾಡಲಾಗುತ್ತದೆ.

ವಿದ್ಯುನ್ಮಾನ ಪ್ರಕ್ರಿಯೆ

[ಬದಲಾಯಿಸಿ]

ಕಾಗದಪತ್ರ ಪ್ರಕ್ರಿಯೆಯಲ್ಲಿ ಮುಖ್ಯ ವ್ಯತ್ಯಾಸವೇನೆಂದರೆ, ಫಾರಂ 12 ಮತ್ತು ಶಾಸನಬದ್ಧ ಘೋಷಣೆಗೆ ಅಗತ್ಯವು ಇರುವುದಿಲ್ಲ. ಇದು ಗಮನಾರ್ಹವಾಗಿ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ವಿದ್ಯುನ್ಮಾನ ಕಂಪೆನಿ ರಚನೆಗೆ ಕಂಪೆನೀಸ್ ಹೌಸ್ ದಾಖಲೆಯು 100 ವರ್ಷಗಳಾಗಿರುತ್ತವೆ.

ವಿದ್ಯುನ್ಮಾನ ಪ್ರಕ್ರಿಯೆಗೆ ಕಂಪೆನೀಸ್ ಹೌಸ್ ಈಫೈಲಿಂಗ್ ಏಜಂಟ್ ಮೂಲಕ ಕಾರ್ಯನಿರ್ವಹಿಸುವ ಹೊಂದಾಣಿಕೆಯ ತಂತ್ರಾಂಶ ಅಗತ್ಯವಿರುತ್ತದೆ.[] ಕಂಪೆನಿಗಳು ಸಾಮಾನ್ಯವಾಗಿ ಕಂಪೆನಿ ಫಾರ್ಮೇಷನ್ ಏಜೆಂಟ್ ಮೂಲಕ ರಚನೆಯಾಗುತ್ತವೆ.[]

ಕಂಪೆನಿ ಲೆಕ್ಕಗಳು

[ಬದಲಾಯಿಸಿ]

ಕಂಪೆನಿಯ ಪ್ರಥಮ ಲೆಕ್ಕವು ಅದರ ರಚನೆಯಾದ ದಿನದಿಂದ ಆರಂಭವಾಗಬೇಕು. ಪ್ರಥಮ ಹಣಕಾಸು ವರ್ಷವು ಅಕೌಂಟಿಂಗ್ ಉಲ್ಲೇಖದ ದಿನಾಂಕದಂದು ಅಥವಾ ಈ ದಿನಾಂಕದ 7 ದಿನಗಳವರೆಗೆ ಎರಡೂ ಬದಿಯ ದಿನಾಂಕದಂದು ಪೂರ್ಣಗೊಳ್ಳಬೇಕು. ತರುವಾಯದ ಲೆಕ್ಕಗಳು ಮುಂಚಿನ ಲೆಕ್ಕಗಳ ವರ್ಷದ ಕೊನೆಯ ದಿನಾಂಕದ ನಂತರದ ದಿನ ಆರಂಭವಾಗುತ್ತದೆ. ಅವು ಮುಂದಿನ ಅಕೌಂಟಿಂಗ್ ಉಲ್ಲೇಖ ದಿನಾಂಕ ಅಥವಾ 7 ದಿನಗಳವರೆಗೆ ಎರಡೂ ಬದಿಯ ದಿನಾಂಕದಂದು ಪೂರ್ಣಗೊಳ್ಳುತ್ತದೆ.

ಫೈಲಿಂಗ್ ಅಗತ್ಯಗಳನ್ನು ಪೂರೈಸಲು, ಕಂಪೆನೀಸ್ ಹೌಸ್ ಪೂರ್ವ ಮುದ್ರಿತ ಶಟಲ್ ಅರ್ಜಿಯನ್ನು ಸ್ಥಾಪನೆಯಾದ ವಾರ್ಷಿಕದ ಕೆಲವು ವಾರಗಳ ಮುಂಚೆ ನಿಮ್ಮ ನೋಂದಾಯಿತ ಕಚೇರಿಗೆ ಕಳಿಸುತ್ತದೆ. ಇದು ಕಂಪೆನೀಸ್ ಹೌಸ್‌ಗೆ ಈಗಾಗಲೇ ನೀಡಿರುವ ಮಾಹಿತಿಯನ್ನು ತೋರಿಸುತ್ತದೆ. ನಿಮ್ಮ ಲೆಕ್ಕಗಳು ತಡವಾಗಿ ರವಾನೆಯಾದರೆ, ಸ್ವಯಂಚಾಲಿತ ದಂಡವನ್ನು ಕಟ್ಟಬೇಕಾಗುತ್ತದೆ. ಇದು ಪಿಎಲ್‌ಸಿಗೆ £500 and £5,000 ನಡುವೆ ಇರುತ್ತದೆ. ಸಾರ್ವಜನಿಕ ನಿಯಮಿತ ಕಂಪೆನಿ (plc)ಯ ಪ್ರಥಮ ಲೆಕ್ಕಗಳನ್ನು ರವಾನಿಸಬೇಕು:

  • ಅಕೌಂಟಿಕ್ ಉಲ್ಲೇಖ ಅವಧಿಯು 12 ತಿಂಗಳಿಗಿಂತ ಹೆಚ್ಚಿಗಿದ್ದರೆ, ಸ್ಥಾಪನೆಯಾದ ದಿನಾಂಕದಿಂದ 19 ತಿಂಗಳ ಒಳಗಿದ್ದರೆ, ಅಕೌಂಟಿಂಗ್ ಉಲ್ಲೇಖ ಅವಧಿ ಪೂರ್ಣಗೊಂಡು ಮೂರು ತಿಂಗಳಾಗಿದ್ದರೆ, ಯಾವುದು ದೀರ್ಘವಾಗಿರುತ್ತದೋ ಅಥವಾ
  • ಅಕೌಂಟಿಂಗ್ ಉಲ್ಲೇಖ ಅವಧಿ ಪೂರ್ಣಗೊಂಡ 7 ತಿಂಗಳೊಳಗೆ.

ನೀವು ಅಕೌಂಟಿಂಗ್ ಉಲ್ಲೇಖ ದಿನವನ್ನು ರಿಜಿಸ್ಟ್ರಾರ್‌ಗೆ ಫಾರಂ 225 ಕಳಿಸುವ ಮೂಲಕ ಬದಲಿಸಬಹುದು. ನೀವು ಬದಲಾವಣೆಗೆ ಒಳಗಾಗುವ ಅಕೌಂಟಿಂಗ್ ಅವಧಿಯ ಸಂದರ್ಭದಲ್ಲಿ ಇದನ್ನು ಮಾಡಬೇಕು ಅಥವಾ ಕಂಪೆನೀಸ್ ಹೌಸ್‌ಗೆ ಸಂಬಂಧಿತ ಲೆಕ್ಕಗಳನ್ನು ರವಾನಿಸಲು ಅವಕಾಶವಿರುವ ಸಂದರ್ಭದಲ್ಲಿ ಹಾಗೆ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ, ಪುಸ್ತಕ 'ಅಕೌಂಟ್ಸ್ ಎಂಡ್ ಅಕೌಂಟಿಂಗ್ ರೆಫೆರೆನ್ಸ್ ಡೇಟ್ಸ್' ನೋಡಿ.

ವಾರ್ಷಿಕ ಲೆಕ್ಕಪತ್ರ ವಿವರ

[ಬದಲಾಯಿಸಿ]

ಪ್ರತಿಯೊಂದು ಕಂಪೆನಿಯು ಕಂಪೆನೀಸ್ ಹೌಸ್‌ಗೆ ಕನಿಷ್ಟ ಪ್ರತೀ 12 ತಿಂಗಳಲ್ಲಿ ಒಂದು ಬಾರಿ ವಾರ್ಷಿಕ ಲೆಕ್ಕಪತ್ರ ವಿವರವನ್ನು ಸಲ್ಲಿಸಬೇಕು. ವಾರ್ಷಿಕ ಲೆಕ್ಕಪತ್ರ ವಿವರ ಸಲ್ಲಿಸಲು ವಾರ್ಷಿಕ ದಿನದ ನಂತರ 28 ದಿನಗಳ ಕಾಲಾವಕಾಶವಿರುತ್ತದೆ.

ಈ ಫೈಲಿಂಗ್ ಅಗತ್ಯವನ್ನು ಪೂರೈಸಲು ಕಂಪೆನಿಗಳಿಗೆ ನೆರವಾಗುವುದಕ್ಕಾಗಿ, ಕಂಪೆನೀಸ್ ಹೌಸ್ ಪೂರ್ವ ಮುದ್ರಿತ ಶಟಲ್ ಫಾರಂನ್ನು ಕಂಪೆನಿ ಸ್ಥಾಪನೆ ವಾರ್ಷಿಕದ ಕೆಲವು ತಿಂಗಳ ಮುಂಚೆ ಅದರ ನೋಂದಾಯಿತ ಕಚೇರಿಗೆ ಕಳಿಸುತ್ತದೆ.

ಎಲ್ಲ ಕಂಪೆನಿಗಳು ಮಾಡಬೇಕಾದ ಕೆಲಸವೆಂದರೆ:

  • ವಿವರಗಳು ಸರಿಯಾಗಿವೆಯೇ ಎಂದು ಪರೀಕ್ಷಿಸುವುದು
  • ಸರಿಯಾಗಿಲ್ಲದ ವಿವರವನ್ನು ತಿದ್ದುಪಡಿ ಮಾಡುವುದು
  • ಅರ್ಜಿಗೆ ಸಹಿ, ದಿನಾಂಕದೊಂದಿಗೆ ಅರ್ಜಿಯ ಮುಂಭಾಗದಲ್ಲಿ ತೋರಿಸಿರುವಂತೆ ವಾರ್ಷಿಕ ವಿವರದ ದಿನಾಂಕದ 28 ದಿನದೊಳಗೆ ಅರ್ಜಿಯನ್ನು ವಾಪಸು ಕಳಿಸುವುದು.

ವಾರ್ಷಿಕ ದಾಖಲೆ ಪ್ರೋಸೆಸಿಂಗ್ ಶುಲ್ಕ 30 ಪೌಂಡನ್ನು(ವಿದ್ಯುನ್ಮಾನ ಫೈಲಿಂಗ್ ಅಥವಾ ವೆಬ್‌ಫೈಲಿಂಗ್ ಸೇವೆಗಳ ಬಳಕೆದಾರರಿಗೆ 15 ಪೌಂಡ್)ವಾರ್ಷಿಕ ವಿವರದೊಂದಿಗೆ ಕಂಪೆನೀಸ್ ಹೌಸ್‌ಗೆ ಕಳಿಸಬೇಕು.

ಪರಿವರ್ತನೆ

[ಬದಲಾಯಿಸಿ]

ಖಾಸಗಿ ನಿಯಮಿತ ಕಂಪೆನಿಯನ್ನು ಸಾರ್ವಜನಿಕ ನಿಯಮಿತ ಕಂಪೆನಿಯಾಗಿ ಪರಿವರ್ತಿಸುವುದು

[ಬದಲಾಯಿಸಿ]

ಷೇರುಗಳಿಂದ ನಿಯಮಿತವಾದ ಖಾಸಗಿ ಕಂಪೆನಿ ಮತ್ತು ಷೇರು ಬಂಡವಾಳ ಹೊಂದಿರುವ ಅನಿಯಮಿತ ಕಂಪೆನಿಯನ್ನು ಪಿಎಲ್‌ಸಿಯಾಗಿ ಮರು ನೋಂದಣಿ ಮಾಡಬಹುದು. ಆದರೆ ಷೇರು ಬಂಡವಾಳರಹಿತ ಕಂಪೆನಿಯು ಹಾಗೆ ಮಾಡಲು ಸಾಧ್ಯವಿಲ್ಲ.

ಖಾಸಗಿ ಕಂಪೆನಿಯು ಮರುನೋಂದಣಿ ಮಾಡುವ ಬಗ್ಗೆ ವಿಶೇಷ ನಿರ್ಣಯ ಅಂಗೀಕರಿಸಬೇಕು ಮತ್ತು ನಿರ್ಣಯದ ಪ್ರತಿಯನ್ನು ಅರ್ಜಿಯೊಂದಿಗೆ ರಿಜಿಸ್ಟ್ರಾರ್ ಅವರಿಗೆ ರವಾನಿಸಬೇಕು. ನಿರ್ಣಯದಲ್ಲಿ ಇದನ್ನೂ ಮಾಡಬೇಕು:

  • ಕಂಪೆನಿಯ ಮೆಮೋರಾಂಡಂ ಬದಲಿಸಿ ಕಂಪೆನಿಯು ಸಾರ್ವಜನಿಕ ನಿಯಮಿತ ಕಂಪೆನಿ ಎಂದು ಸೂಚಿಸಬೇಕು.
  • ಅದರ ಷೇರು ಬಂಡವಾಳವನ್ನು ಕಾನೂನುಬದ್ಧ ಕನಿಷ್ಠ 50,0000 ಪೌಂಡ್‌ಗೆ ಹೆಚ್ಚಿಸಬೇಕು.
  • ಸಾರ್ವಜನಿಕ ನಿಯಮಿತ ಕಂಪೆನಿ ಅಗತ್ಯಕ್ಕೆ ಅನುಗುಣವಾಗಿ ಮೆಮೋರೆಂಡಂಗೆ ಯಾವುದೇ ಬದಲಾವಣೆಗಳನ್ನು ಮಾಡಬೇಕು.
  • ಕಂಪೆನಿಯ ಲಿಖಿತ ಕಟ್ಟಳೆಗಳಿಗೆ ಅಗತ್ಯ ಬದಲಾವಣೆಗಳನ್ನು ಮಾಡಬೇಕು.

ಖಾಸಗಿ ಕಂಪೆನಿಯು ಸಾಕಷ್ಟು ವಿತರಿಸಿದ ಷೇರು ಬಂಡವಾಳ ಹೊಂದಿಲ್ಲದಿದ್ದರೆ ಕನಿಷ್ಠ ಶೇಕಡ 25 ಭಾಗದ ಪಾವತಿಯೊಂದಿಗೆ 50,000 ಪೌಂಡ್ ಷೇರುಗಳನ್ನು ವಿತರಣೆ ಮಾಡಬೇಕು.

ಸಾರ್ವಜನಿಕ ನಿಯಮಿತ ಕಂಪೆನಿಯನ್ನು ಖಾಸಗಿ ನಿಯಮಿತ ಕಂಪೆನಿಯಾಗಿ ಪರಿವರ್ತಿಸುವುದು

[ಬದಲಾಯಿಸಿ]

ಕೆಲವು ಅಧಿಕಾರವ್ಯಾಪ್ತಿಗಳಲ್ಲಿ ಸಾರ್ವಜನಿಕ ನಿಯಮಿತ ಕಂಪೆನಿಯು ಖಾಸಗಿ ಕಂಪೆನಿಯಾಗಿ ಅಥವಾ ಖಾಸಗಿ ಅನಿಯಮಿತ ಕಂಪೆನಿಯಾಗಿ ಯಾವುದೇ ಸಮಯದಲ್ಲಿ ಕೆಲವು ಶಿಷ್ಟಾಚಾರಗಳೊಂದಿಗೆ ಮರುನೋಂದಣಿಯಾಗಬಹದು.

ಕೋರ್ಟ್ ಸಾರ್ವಜನಿಕ ಕಂಪೆನಿಯನ್ನು ಷೇರು ಬಂಡವಾಳದ ತೀರಾ ಸಣ್ಣ ಇಳಿಕೆಯನ್ನು ಅನುಮೋದಿಸಿ ಖಾಸಗಿಯಾಗಿ ಮರುನೋಂದಣಿಗೆ ಆದೇಶ ನೀಡಬಹುದು. ಇದರ ಫಲವಾಗಿ ವಿತರಿಸಿದ ಷೇರುಬಂಡವಾಳ ಕಾನೂನುಬದ್ಧ ಕನಿಷ್ಠಕ್ಕಿಂತ ಕಡಿಮೆಯಾಗುತ್ತದೆ. ಇಂತಹ ಪ್ರಕರಣದಲ್ಲಿ ಕೋರ್ಟ್ ಕಂಪೆನಿಯ ಮೆಮೊರೆಂಡಂ ಮತ್ತು ಲಿಖಿತ ಕಟ್ಟಳೆಗಳಿಗೆ ಬದಲಾವಣೆಗಳನ್ನು ನಮೂದಿಸುತ್ತದೆ. ಮರುನೋಂದಣಿಗೆ ವಿಶೇಷ ನಿರ್ಣಯದ ಅಗತ್ಯವಿರುವುದಿಲ್ಲ.[ಸೂಕ್ತ ಉಲ್ಲೇಖನ ಬೇಕು]

ಇವನ್ನೂ ಗಮನಿಸಿ‌

[ಬದಲಾಯಿಸಿ]
  • ಸೀಮಿತ ಹೊಣೆಗಾರಿಕೆ ಸಹಭಾಗಿತ್ವ
  • ಖಾಸಗಿ ನಿಯಮಿತ ಕಂಪೆನಿ
  • Societas Europaea
  • ಯುನೈಟೆಡ್ ಕಿಂಗ್ಡಂ ಕಂಪನಿ ಕಾನೂನು
  • ಅನಿಯಮಿತ ಕಂಪನಿ
  • S.A. (ಕಾರ್ಪೊರೇಷನ್)

ಟಿಪ್ಪಣಿಗಳು

[ಬದಲಾಯಿಸಿ]
  1. [೧]58(2) ಕಂಪೆನೀಸ್ ಆಕ್ಟ್ 2006
  2. "ಆರ್ಟಿಕಲ್ಸ್ ಆಫ್ ಅಸೋಸಿಯೇಷನ್." ಫಿನ್ನೈರ್. 20011 ಫೆಬ್ರುವರಿ 18 ರಲ್ಲಿ ಮರುಸಂಪಾದಿಸಲಾಯಿತು. "ಸೆಕ್ಷನ್ 1 ಕಂಪೆನಿಯ ಹೆಸರು ಫಿನ್ನೈರ್ ಓಯಿಜ್,ಮತ್ತು ಅದರ ನೆಲೆಯು ಹೆಲ್ಸಿಂಕಿ. ಸ್ವೀಡಿಷ್‌ನಲ್ಲಿ ಕಂಪೆನಿ ಹೆಸರು ಫಿನ್ನೈರ್ ಎಬಿಪಿ ಮತ್ತು ಇಂಗ್ಲೀಷ್‌ನಲ್ಲಿ ಫಿನ್ನೈರ್ ಪಿಎಲ್‌ಸಿ."
  3. ಕಂಪೆನೀಸ್ ಹೌಸ್ ವೆಬ್‌ಸೈಟ್
  4. ಕಂಪೆನೀಸ್ ಹೌಸ್ ವೆಬ್‌ಸೈಟ್


ಬಾಹ್ಯ ಕೊಂಡಿಗಳು‌‌

[ಬದಲಾಯಿಸಿ]